ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಗೆ 712 ಕೋಟಿ ಬಿಡುಗಡೆ: ಯದುವೀರ್‌

ಮೈಸೂರು: ಸಾಂಸ್ಕೃತಿಕ ರಾಜಧಾನಿಗೆ ಪ್ರಮುಖ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್‌ ವೇ ನಲ್ಲಿ ಸುಧಾರಣೆ ಕೈಗೊಳ್ಳಲು ಕೇಂದ್ರ ಸರ್ಕಾರ 712 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಈ ಬಗ್ಗೆ ತಿಳಿಸಿರುವ ಯದುವೀರ್‌ ಅವರು,ಈ ಅನುದಾನದಿಂದ ಹಲವಾರು ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದಿದ್ದಾರೆ.

ದಶಪಥದಲ್ಲಿ ಹೊಸದಾಗಿ ಎಂಟ್ರಿ-ಎಕ್ಸಿಟ್‌, ರೈಲ್ವೆ ಸೇತುವೆ, ಅಂಡರ್‌ಪಾಸ್‌, ಓವರ್‌ಪಾಸ್‌, ಸರ್ವೀಸ್‌ ರಸ್ತೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ಅನೇಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ದಶಪಥ ಕೊನೆಗೊಳ್ಳುವ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಫ್ಲೈ ಓವರ್‌ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ದೂರು ಸಲ್ಲಿಸಿದ್ದರು. ಅದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ,
ಈ ದಶಪಥ ಜನರಿಗೆ ಇನ್ನಷ್ಟು ಉಪಯುಕ್ತವಾಗಬೇಕು ಎಂಬುದನ್ನು ಮನಗಂಡು ಕೇಂದ್ರ ಸರ್ಕಾರ ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಯದುವೀರ್ ತಿಳಿಸಿದ್ದಾರೆ.

ಎಕ್ಸ್‌ಪ್ರೆಸ್‌ ವೇನಲ್ಲಿ ಯೋಜನೆಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಅವರಿಗೆ ಸಮಸ್ತ ಜನರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಗೆ 712 ಕೋಟಿ ಬಿಡುಗಡೆ: ಯದುವೀರ್‌ Read More

ದೇಶದ ಜನತೆಗೆ ಡಬಲ್ ಶಾಕ್ ನೀಡಿದ ಕೇಂದ್ರ ಸರ್ಕಾರ

ನವದೆಹಲಿ,ಏ.7: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದೇಶದ ಜನತೆಗೆ ಡಬಲ್ ಶಾಕ್ ನೀಡಿದೆ. ಪೆಟ್ರೋಲ್ ದರ ಹೆಚ್ಚಿಸಿದ ಕೆಲವೇ ಕ್ಷಣಗಳಲ್ಲಿ ಸಿಲೆಂಡರ್ ದರವನ್ನೂ ಹೆಚ್ಚಿಸಿದೆ.

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಗೆ 2 ರೂಪಾಯಿ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದೆ.

ಪೆಟ್ರೋಲ್, ಡೀಸೆಲ್ ಸುಂಕ ಹೆಚ್ಚಳ ಮಾಡಿದ ಬೆನ್ನಲ್ಲೇ ಅಡುಗೆ ಅನಿಲ ದರವನ್ನು ಹೆಚ್ಚಳ ಮಾಡಿದೆ. ಮಾತ್ರವಲ್ಲ ಉಜ್ವಲ ಯೋಜನೆ ಅಡಿ ಸಿಗುವ ಸಿಲಿಂಡರ್ ದರದಲ್ಲಿಯೂ ಏರಿಕೆಯಾಗಿದೆ.

ಅಡುಗೆ ಅನಿಲ ದರ 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಉಜ್ವಲ ಯೋಜನೆ ಸಿಲಿಂಡರ್ ದರವನ್ನು ಕೂಡ 50 ರೂಪಾಯಿ ಹೆಚ್ಚಿಸಲಾಗಿದೆ. ಈ ಮೂಲಕ ಉಜ್ವಲ ಯೋಜನೆ ಅಡಿಯ ಸಿಲಿಂಡರ್ ದರ ಇನ್ಮುಂದೆ 550 ರೂಪಾಯಿ ಆಗಲಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿತ್ತು. ಇದರ ವಿರುದ್ಧ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ಇದೇ ಸಂದರ್ಭದಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಸಿಲೆಂಡರ್ ದರವನ್ನೂ ಹೆಚ್ಚಳ ಮಾಡಿದೆ.

ಇದರಿಂದಾಗಿ ರಾಜ್ಯ ಸರಕಾರದ ಬೆಲೆ ಏರಿಕೆ ವಿರುದ್ಧ ಈಗಷ್ಟೇ ಜನಾಕ್ರೋಶ ಯಾತ್ರೆ ಆರಂಭಿಸಿದ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.
ಮುಂದೆ ಏನು ಮಾಡುವರೊ ಕಾದು ನೋಡಬೇಕಿದೆ.

ರಾಜ್ಯ ಬಿಜೆಪಿಗರಿಗೆ ಎರಡೇ‌ ದಾರಿ ಇರೋದು.ಒಂದೋ ಕೇಂದ್ರ ಸರ್ಕಾರದ ಬಳಿ ಹೋಗಿ ಒತ್ತಡ ತಂದು ಬೆಲೆ ಇಳಿಕೆ ಮಾಡಿಸಬೇಕು ಇಲ್ಲಾ ಹೋರಾಟ ಹಿಂಪಡೆಯಬೇಕು.ಮುಂದೆ ಏನು ಮಾಡುವರೊ ಕಾದು ನೋಡಬೇಕಿದೆ.

ದೇಶದ ಜನತೆಗೆ ಡಬಲ್ ಶಾಕ್ ನೀಡಿದ ಕೇಂದ್ರ ಸರ್ಕಾರ Read More

ಒಂದು ದೇಶ, ಒಂದು ಚುನಾವಣೆ ಸಮರ್ಥ ನಿರ್ಧಾರ: ಹೇಮಾ ನಂದೀಶ್

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಒಂದು ದೇಶ, ಒಂದು ಚುನಾವಣೆ ನಿರ್ಣಯ ಸಮರ್ಥ ನಿರ್ಧಾರವಾಗಿದೆ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಶ್ಲಾಘಿಸಿದ್ದಾರೆ.

ಕೇಂದ್ರದ ಈ ನಿರ್ಣಯ ಚುನಾವಣೆ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಮತ್ತು ಈ ಸಾರ್ವತ್ರಿಕ ಚುನಾವಣೆ ನಡೆದ 100 ದಿನಗಳ ಒಳಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಪುರಸಭೆ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಉದ್ದೇಶವಿರುವುದರಿಂದ ಒಂದೇ ಮತದಾರರ ಪಟ್ಟಿ ಎಲ್ಲಾ ಚುನಾವಣೆಗೂ ಬಳಕೆಗೆ ಅವಕಾಶವಿದೆ,ಹಾಗಾಗಿ‌ ಸಮಯದ ಜತೆಗೆ ಹಣ ಉಳಿತಾಯವಾಗಲಿದೆ ಎಂದು ಹೇಮಾನಂದೀಶ್ ತಿಳಿಸಿದ್ದಾರೆ.

ಒಂದು ದೇಶ, ಒಂದು ಚುನಾವಣೆ ಸಮರ್ಥ ನಿರ್ಧಾರ: ಹೇಮಾ ನಂದೀಶ್ Read More