ಮೈಸೂರು: ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಮುಳುಗುತ್ತಿದ್ದ ಮೇಟಗಳ್ಳಿ ಸ್ಮಶಾನಕ್ಕೆ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು,ಪುಂಡು ಪೋಕರಿಗಳ ಆಟಗಳಿಗೆ ಬ್ರೇಕ್ ಬಿದ್ದಂತಾಗಿದೆ.
ಸ್ಮಶಾನದ ಸುತ್ತ ಅಳವಡಿಸಲಾಗಿದ್ದ ಹೈಮಾಸ್ಕ್ ದೀಪಗಳನ್ನ ದುರಸ್ಥಿ ಮಾಡಲಾಗಿದೆ.
ಕಳೆದ 5 ವರ್ಷಗಳಿಂದ ನಿರ್ಜೀವವಾಗಿದ್ದ ಹೈಮಾಸ್ಕ್ ದೀಪಗಳಿಗೆ ಮರುಜೀವ ದೊರೆತಂತಾಗಿದೆ.
ಮೈಸೂರು ಮಹಾನಗರ ಪಾಲಿಕೆ, ಕೆಇಬಿ ಇಂಜಿನಿಯರ್ ಗೋವಿಂದ ನಾಯಕ್ ಮತ್ತು ಸಿಬ್ಬಂದಿ ದೀಪಗಳನ್ನ ಅಳವಡಿಸಿ ಸ್ಮಶಾನಕ್ಕೆ ಬೆಳಕಿನ ಭಾಗ್ಯ ನೀಡಿದ್ದಾರೆ.
ಮೇಟಗಳ್ಳಿ ಇನ್ಸ್ಪೆಕ್ಟರ್ ಅರುಣ್ ಅವರು ಬೀದಿ ದೀಪಗಳನ್ನ ಸರಿಪಡಿಸುವಂತೆ ಪಾಲಿಕೆಗೆ ಮಾಡಿದ್ದ ಮನವಿಗೂ ಸ್ಪಂದನೆ ದೊರೆತಂತಾಗಿದೆ.
5 ಹೈ ಮಾಸ್ಕ್ ವಿದ್ಯುತ್ ಕಂಬಗಳಿಗೆ ಮರುಜೀವ ಬಂದಿದೆ
ಕತ್ತಲಾದರೆ ಮೇಟಗಳ್ಳಿ ಸ್ಮಶಾನ ಗಾಂಜಾ ವ್ಯಸನಿಗಳ ತಾಣವಾಗುತ್ತಿತ್ತು. ಸ್ಥಳೀಯರಿಗಂತೂ ಕಿರಿಕಿರಿ ಆಗುತ್ತಿತ್ತು.ಕೆಲವು ದಿನಗಳ ಹಿಂದೆ ಇನ್ಸ್ಪೆಕ್ಟರ್ ಅರುಣ್ ಅ ವರು ಧಢೀರ್ ದಾಳಿ ನಡೆಸಿ ಗಾಂಜಾ ವ್ಯಸನಿಗಳಿಗೆ ಎಚ್ಚರಿಕೆ ನೀಡಿದ್ದರು.
ಕತ್ತಲು ಇರುವ ಕಾರಣ ವ್ಯಸನಿಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದರು.ಬೀದಿ ದೀಪಗಳನ್ನ ಸರಿಪಡಿಸುವಂತೆ ಸಾಕಷ್ಟು ಮನವಿಗಳನ್ನು ಸಲ್ಲಿಸಲಾಗಿತ್ತು.
ಕಡೆಗೂ ಎಚ್ಚೆತ್ತ ಅಧಿಕಾರಿಗಳು ಹೈಮಾಸ್ಕ್ ದೀಪಗಳಿಗೆ ಬಲ್ಪ್ ಗಳನ್ನ ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಾರೆ.ಇದರಿಂದಾಗಿ ಗಾಂಜಾ ವ್ಯಸನಿಗಳ ಕಾಟ ಪುಂಡು ಪೋಕರಿಗಳ ಆಟ ತಪ್ಪಿದಂತಾಗಿದೆ.
ಹುಣಸೂರು: ಸ್ಮಶಾನ ಜಾಗಕ್ಕಾಗಿ ಏಳು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಹುಣಸೂರು ತಾಲ್ಲೂಕು, ಕಸಬಾ ಹೋಬಳಿ,ಹೊನ್ನಿಕುಪ್ಪೆ ಗ್ರಾಮದ ಜನತೆಗೆ ಕಡೆಗೂ ಜಯ ಸಿಕ್ಕಿದೆ.
ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಿರುವ 1 ಎಕರೆ ಜಮೀನನ್ನು ಅಳತೆ ಮಾಡಿ, ಹದ್ದುಬಸ್ತು ಗುರುತಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಇದೇ ಜಮೀನಿನಲ್ಲಿ ಎರಡು ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ಮೀಸಲಿಡುವಂತೆಯೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಪ್ರಜಾಪಾರ್ಟಿ ರೈತ ಪರ್ವ, ಹೊನ್ನಿಕುಪ್ಪೆ ಗ್ರಾಮ, ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಅವರು 17-8-2024 ರಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ಆ ಮನವಿ ಪತ್ರದಲ್ಲಿ ಹುಣಸೂರು ತಾಲ್ಲೂಕು, ಕಸಬಾ ಹೋಬಳಿ, ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಿರುವ 1 ಎಕರೆ ಜಮೀನನ್ನು ಅಳತೆ ಮಾಡಿ, ಹದ್ದುಬಸ್ತು ಗುರುತಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಕೊಡುವಂತೆ ಚಲುವರಾಜು ಕೋರಿದ್ದರು.
ಇದೇ ವಿಷಯಕ್ಕೆ ಸಂಬಂದಿಸಿದಂತೆ ಸುಮಾರು 70 ವರ್ಷಗಳಿಂದ ಗ್ರಾಮದ ಹಲವಾರು ಮುಖಂಡರು ಹೋರಾಟ ಮಾಡಿದ್ದರು.ಅವರಲ್ಲಿ ಈಗಾಗಲೇ ನಾಲ್ವರು ಮೃತಪಟ್ಟಿದ್ದಾರೆ.
ಇತ್ತೀಚೆಗೆ ಚಲುವರಾಜು ಅವರು ತಮ್ಮ ಗ್ರಾಮಕ್ಕೆ ಸ್ಮಶಾನ ಬೇಕೇಬೇಕೆಂದು ಪಟ್ಟುಹಿಡಿದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಚಲುವರಾಜು ಅವರು ಸಲ್ಲಿಸಿದ ಮನವಿ ಪತ್ರದ ಬಗ್ಗೆ ಪರಿಶೀಲಿಸಿದ ಮೈಸೂರು ಜಿಲ್ಲಾಧಿಕಾರಿಗಳು, ಕಸಬಾ ಹೋಬಳಿ, ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ 1 ಎಕರೆ ಜಮೀನನ್ನು ಹೊನ್ನಿಕುಪ್ಪೆ ಗ್ರಾಮದ ಎಲ್ಲಾ ಜನಾಂಗದವರ ಸ್ಮಶಾನ ಉದ್ದೇಶಕ್ಕಾಗಿ ಕಾಯ್ದಿರಿಸುವಂತೆ ಆದೇಶಿಸಿದ್ದಾರೆ.
ಅದರಂತೆ ಸಂಬಂಧಪಟ್ಟ ಹೋಬಳಿಯ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ತಾಲ್ಲೂಕು ಭೂಮಾಪಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉದ್ದೂರು ಕಾವಲ್ ಗ್ರಾಮದ ಸ.ನಂ. 729 ರಲ್ಲಿ 1 ಎಕರೆ ಜಮೀನಿನ ಸ್ಥಳ ತನಿಖೆ ನಡೆಸಿ,ಆ ಜಮೀನನ್ನು ಅಳತೆ ಮಾಡಿ, ಸ್ಮಶಾನ ಜಮೀನನ್ನು ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಚಲುವರಾಜು ಅವರ ಸಮ್ಮುಖದಲ್ಲಿ ಸ್ಮಶಾನ ಜಾಗದ ಬೋರ್ಡ್ ಅಳವಡಿಸಲಾಗಿದೆ.
ಮೈಸೂರು: ಸ್ಮಶಾನದಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸದಸ್ಯರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಮೈಸೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಯಿತು.
ಮೈಸೂರು ಬಡಾವಣೆಯ ನಾಗರೀಕರಿಗೆ ಮೂಲಭೂತ ಸೌಲಭ್ಯ ಜೊತೆಯಲ್ಲೆ ಜನನ ಮತ್ತು ಮರಣ ಸಂಧರ್ಭದಲ್ಲಿ ಅವಶ್ಯಕ ವ್ಯವಸ್ಥೆಯನ್ನ ಒದಗಿಸುವುದು ತೆರಿಗೆ ಸಂಗ್ರಹಿಸಿಸುವ ಮೈಸೂರು ಮಹಾನಗರಪಾಲಿಕೆ ಕರ್ತವ್ಯವಾಗಿದೆ.
ಈಗಾಗಲೇ ಪ್ರತಿ ಮನೆಯಿಂದ ವಾರ್ಷಿಕ ತೆರಿಗೆಯಲ್ಲಿ 150ರೂ ಸೆಸ್ ಸ್ಮಶಾನ ನಿರ್ವಹಣೆಗೆಂದು ಸಂದಾಯ ಮಾಡಿಕೊಳ್ಳಲಾಗುತ್ತಿದೆ,ಆದರೆ ಸ್ಮಶಾನದಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್ ದೀಪ ಮತ್ತು ಸ್ವಚ್ಛತೆ ಇಲ್ಲ ಎಂದು ಮನವಿಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಪಡೆದು ಅಭಿವೃದ್ಧಿ ಕೆಲಸಗಳು ಮಾಡುತ್ತಿಲ್ಲ ಎಂದು ಜನಸಾಮನ್ಯರು ಶಾಪ ಹಾಕುತ್ತಿದ್ದಾರೆ.
ಸ್ಮಶಾನ ಅಭಿವೃದ್ಧಿ ಬಗ್ಗೆ ಚಿಂತಿಸದ ನಗರಪಾಲಿಕೆ ಜನನ ಮರಣ ವಿಭಾಗ ಚಿತೆಯಲ್ಲಿ ಕಂತೆ ಕಂತೆ ಹಣ ಹೇಗೆ ಕಿತ್ತುಕೊಳ್ಳಬಹುದು ಎಂದು ಪ್ರಶ್ನಿಸಿದ್ದಾರೆ.
ಸುಡುವ ಸ್ಮಶಾನಗಳಲ್ಲಿ ಮಾತ್ರವೇ ಅಂತ್ಯ ಸಂಸ್ಕಾರ ಮಾಡಲು 500 ರೂಗಳನ್ನ ನಿಗಧಿಪಡಿಸಿರುವುದು ಮೈಸೂರಿಗರಿಗೆ ಆಗುತ್ತಿರುವ ಅನ್ಯಾಯ, ಜನಪ್ರತಿನಿಧಿಗಳು ಇಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರು ಹೆಚ್ಚಾಗಿದೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
500 ರೂ ವಿಧಿಸಿರುವುದು ಬಡ ಸಾಮಾನ್ಯ ಕುಟುಂಬದ ಮೇಲೆ ಬರೆ ಹಾಕುವಂತಾಗಿದೆ, ಸಾವಿನಲ್ಲೂ ಸಂಪನ್ಮೂಲ ತೆಗೆದುಕೊಳ್ಳುತ್ತಿರುವುದು ನಗರಪಾಲಿಕೆಯ ಹೀನ ಮತ್ತು ದುರಾಡಳಿತ ಭ್ರಷ್ಟಾಚಾರಕ್ಕೆ ಕೈಗನ್ನಡಿಯಾಗಿದೆ.
ಕೂಡಲೇ ಮೈಸೂರು ಮಹಾನಗರಪಾಲಿಕೆಯ ಆಯುಕ್ತರು, ಜನನ ಮರಣ ವಿಭಾಗದ ಅಧಿಕಾರಿಗಳು ಇದರ ಬಗ್ಗೆ ಪರಿಶೀಲಿಸಿ ಜನರ ಹಿತಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ಪಂಚಾಯತ್ ಮೈಸೂರು ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ್,ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ನಿರೂಪಕ ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ರವಿಚಂದ್ರ, ಶ್ರೀಧರ್ ಮತ್ತಿತರರು ಹಾಜರಿದ್ದರು.

ಮೈಸೂರು: ಜನನ, ಮರಣ ಪತ್ರ ಪಡೆಯಲು ಸಾರ್ವಜನಿಕರು ಅಲೆಯುವುದನ್ನು ತಪ್ಪಿಸಲು ಸ್ಮಶಾನಗಳಲ್ಲಿ ಮರಣ ನೊಂದಣಿ ವಿವರವನ್ನ ಗಣಕೀಕೃತ ಮಾಡುವಂತೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಆಗ್ರಹಿಸಿದೆ.
ಪ್ರತಿದಿನ ದುಬಾರಿ ಶುಲ್ಕ ಪಾವತಿ ಮಾಡಿ ಜನನ, ಮರಣ ಪತ್ರ ಪಡೆಯಲು ಸಾರ್ವಜನಿಕರು ಅಲೆಯುತ್ತಿದ್ದಾರೆ ಹಾಗಾಗಿ ಇದನ್ನು ತಪ್ಪಿಸಲು ಮೈಸೂರಿನ ಸ್ಮಶಾನಗಳಲ್ಲಿ ಮರಣ ನೊಂದಣಿ ವಿವರವನ್ನ ಗಣಕೀಕೃತ ಮಾಡುವಂತೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಮೈಸೂರು ಮಹಾನಗರಪಾಲಿಕೆ ಹೆಚ್ಚುವರಿ ಆಯುಕ್ತರಾದ ಎಸ್. ಕುಸುಮ ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮೈಸೂರು ನಗರದಲ್ಲಿ ಸ್ಮಾಶನ ಅಭಿವೃದ್ದಿ ಪಡಿಸಿ ಸರಿಯಾದ ಮೂಲಭೂತ ವ್ಯವಸ್ಥೆಯನ್ನ ನಾಗರೀಕರಿಗೆ ಕಲ್ಪಿಸುವುದು ಪ್ರತಿ ಮನೆಯಿಂದ ವಾರ್ಷಿಕ ತೆರಿಗೆ ಸಂಗ್ರಹ ಮಾಡುವ ಮೈಸೂರು ಮಹಾ ನಗರಪಾಲಿಕೆ ಆಗ್ರ ಕರ್ತವ್ಯವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಜನನ, ಮರಣ ಪತ್ರ ಪಡೆಯುವ ಪ್ರತಿಯ ಶುಲ್ಕವನ್ನ 5ರೂಗಳಿಂದ 50ರೂಗಳಿಗೆ ಏಕಾಏಕಿ ಹೆಚ್ಚಿಸಿದ್ದು ಆರ್ಥಿಕ ನೀತಿಗೆ ವಿರೋಧ ಹಾಗೂ ಅವೈಜ್ಞಾನಿಕ ಕ್ರಮವಾಗಿದೆ ಇದರಿಂದ ಮೈಸೂರಿನ ನಾಗರೀಕರು ಪರದಾಡುವಂತಾಗಿದೆ ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ದರವನ್ನ ಎಂದಿನಂತೆ ಮಾರ್ಪಾಡುಗೊಳಿಸಬೇಕೆಂದು ಕೋರಲಾಗಿದೆ.
ಮೈಸೂರಿನ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ನಡೆಯುವ ಸಂಧರ್ಭದಲ್ಲಿ ಸತ್ತ ವ್ಯಕ್ತಿಗಳ ಮಾಹಿತಿಯನ್ನ ನಮೂದಿಸುವ ಬಿಜಿಆರ್ ರಿಪೋರ್ಟ್ ಹೆಸರು, ಆಧಾರ್ ಕಾರ್ಡ್ ಸಂಖ್ಯೆ, ಮನೆ ವಿಳಾಸ, ಅಂತ್ಯಸಂಸ್ಕಾರ ಮಾಡುವ ವ್ಯಕ್ತಿಯ ಮಾಹಿತಿ ಸಮಯ ಜಿಪಿಎಸ್ ಫೋಟೊ ಏಕಕಾಲದಲ್ಲೆ ನಮೂದಿಸುವಂತೆ ಗಣಕೀಕೃತ ಮಾಡಿದರೆ ಪ್ರತಿದಿನ ಮೈಸೂರಿನ ಸ್ಮಶಾನದ ಅಂತ್ಯಸಂಸ್ಕಾರಗಳ ಮಾಹಿತಿ ಸ್ಥಳೀಯ ಸ್ಮಶಾನಗಳಲ್ಲಿ, ನಗರಪಾಲಿಕೆಯ ಸಂಭಂಧಪಟ್ಟ ಜನನಮರಣ ವಿಭಾಗ ಅಧಿಕಾರಿಯ ಬಳಿ ಸಕಾಲಕ್ಕೆ ಮಾಹಿತಿ ರವಾನೆಯಾಗುತ್ತದೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಸ್ಥಳೀಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದರೂ ಸಹ ಪುಸ್ತಕದಲ್ಲಿ ನೊಂದಣಿ ಮಾಡಲು ಎರಡು ಮೂರು ದಿನಗಳು ಕಾಯಬೇಕಾದ ಪರಿಸ್ಥಿತಿಯಿದೆ, ಅದಲ್ಲದೇ ಆ ಪುಸ್ತಕ ನಗರಪಾಲಿಕೆಗೆ ತಲುಪಿ ಸರಿಯಾಗಿ ನಮೂದಿಸಿದ್ದರೂ ಸಹ ಅದನ್ನ ಕಂಪ್ಯೂಟರ್ ಆಪರೇಟರ್ ಗಳು ಒಂದು ವೇಳೆ ತಪ್ಪಾಗಿ ಹೆಸರು ನಮೂದಿಸಿದರೆ ಅದನ್ನ ಕೋರ್ಟ್ನಲ್ಲಿ ದಾಖಲೆ ನೀಡಿ ಪಡೆಯಬೇಕಾದ ಪರಿಸ್ಥಿತಿಯಿದೆ.
ಸತ್ತ ವ್ಯಕ್ತಿಯ ವಿಳಾಸ ನಗರಸಭೆ,ಪಟ್ಟಣ ಪಂಚಾಯತಿಗೆ ಒಳಪಟ್ಟಿದರೆ ಅದನ್ನ ಬಿಜಿಆರ್ ಎಕ್ಸ್ಟ್ರಕ್ಟ್ ಕಾಪಿ ಪಡೆದು ಅದನ್ನ ಒಂದು ಕಚೇರಿಯಿಂದ ಒನ್ನೊಂದು ಕಚೇರಿಗೆ ಸ್ವತಃ ಸಾರ್ವಜನಿಕರೇ ಕೈಯಲ್ಲಿ ಹಿಡಿದು ಅಲೆಯಬೇಕಾಗುತ್ತದೆ, ಪಡಿತರ ಚೀಟಿ ಇಲ್ಲದಿದ್ದರೆ ಅದಕ್ಕೂ ಸಹ ಮತ್ತೊಮ್ಮೆ ತಾಲ್ಲೂಕು ಕಚೇರಿ ಆಹಾರ ವಿಭಾಗದಿಂದ ಎನ್ ಒ ಸಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ.
ಹಾಗಾಗಿ ಇವೆಲ್ಲವನ್ನು ಗಣಕೀಕೃತ ಮಾಡಿ ಆಧಾರ್ ಕಾರ್ಡ್ ಆಧಾರದ ಮೇರೆಗೆ ಗಣಕೀಕೃತ ಜಿಪಿಎಸ್ ಎಂಟ್ರಿ ನೋಂದಣಿ ಮಾಡಿದರೆ ಅಧಿಕಾರಿಗಳ ಕೆಲಸದ ಒತ್ತಡವು ಸುಲಲಿತವಾಗುತ್ತದೆ ಸಾರ್ವಜನಿಕರ ಅಲೆದಾಟವು ನಿಲ್ಲುತ್ತದೆ, ಇದರ ಬಗ್ಗೆ ಮೈಸೂರು ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಹೆಚ್ಚುವರಿ ಆಯುಕ್ತರಿಗೆ ಮನವಿ ಮೂಲಕ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ನಿರೂಪಕ ಅಜಯ್ ಶಾಸ್ತ್ರಿ, ಮಹಾನ್ ಶ್ರೇಯಸ್ ಮುಂತಾದವರು ಹಾಜರಿದ್ದರು.