ಮುಡಾ;ತನಿಖೆ ಮುಂದುವರಿಸಿಅಂತಿಮ ವರದಿ ಸಲ್ಲಿಸಲು ಕೋರ್ಟ್ ಆದೇಶ:ಸಿಎಂ ಗೆ ನಿರಾಸೆ

ಬೆಂಗಳೂರು: ಮುಡಾ ಹಗರಣದಲ್ಲಿ ಬಿಗ್ ರಿಲೀಫ್ ನಿರೀಕ್ಷೆಯಲ್ಲಿದ್ದ ಸಿಎಂ ಸಿದ್ದರಾಮಯ್ಯಗೆ ಬಹಳ ನಿರಾಸೆಯಾಗಿದೆ.

ತನಿಖೆ ಮುಂದುವರಿಸಿ, ಅಂತಿಮ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಸಿಎಂ ವಿರುದ್ಧದ ಬಿ ರಿಪೋರ್ಟ್ ವಿರೋಧಿಸಿ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಇಡಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಅಂತಿಮ ವರದಿ ಬಳಿಕ ಬಿ ರಿಪೋರ್ಟ್ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದೆ.

ತನಿಖೆ ಮುಂದುವರಿಸಲು ಅನುಮತಿ ನೀಡುವಂತೆ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಪುರಸ್ಕರಿಸಿದ್ದಾರೆ.

ಆದೇಶದ ಬಳಿಕ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಅವರು, ಲೋಕಾ ಅಧಿಕಾರಿಗಳು ಸಿಎಂ ಕುಟುಂಬವನ್ನ ರಕ್ಷಣೆ ಮಾಡುವುದಕ್ಕೆ ತನಿಖೆ ಪೂರ್ಣಗೊಳಿಸದೇ ವರದಿ ಸಲ್ಲಿಕೆ ಮಾಡಿದ್ದರು. ಹಾಗಾಗಿ ಕೋರ್ಟ್ ಅಂತಿಮ ವರದಿಯನ್ನ ಸಲ್ಲಿಸಲು ಸೂಚಿಸಿದೆ ಎಂದಿದ್ದಾರೆ.

ತನಿಖಾಧಿಕಾರಿಗಳಿಗೆ ತನಿಖೆಯ ಬಗ್ಗೆ ತಿಳಿದಿಲ್ಲ, ನ್ಯಾಯಾಲಯದ ಇಂದಿನ ಆದೇಶದಲ್ಲಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸಿಎಂ ಅಧಿಕಾರ ದುರುಪಯೋಗ ಪಡಿಸಿಕೊಂಡು ಕೇಸ್ ಮುಚ್ಚಿ ಹಾಕುವ ಪ್ರಯತ್ನಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.

ಮುಡಾ;ತನಿಖೆ ಮುಂದುವರಿಸಿಅಂತಿಮ ವರದಿ ಸಲ್ಲಿಸಲು ಕೋರ್ಟ್ ಆದೇಶ:ಸಿಎಂ ಗೆ ನಿರಾಸೆ Read More

ಲೈಂಗಿಕ ದೌರ್ಜನ್ಯ ಸಾಬೀತು:ವ್ಯಕ್ತಿಗೆ ಜೈಲು ಶಿಕ್ಷೆ

ಚಾಮರಾಜನಗರ,ಮಾ.6: ಪ್ರೀತಿ ಮಾಡುವುದಾಗಿ ನಂಬಿಸಿ ಮದುವೆ ಆಗುವ ಉದ್ದೇಶದಿಂದ ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಕೃತ್ಯ ಸಾಬೀತಾದ ಕಾರಣ ವ್ಯಕ್ತಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ
ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ 1 ವಿಶೇಷ ಪೋಕ್ಸೊ ನ್ಯಾಯಾಧೀಶರು ಆದೇಶಿಸಿದ್ದಾರೆ.

ಕೊಳ್ಳೆಗಾಲ ತಾಲ್ಲೋಕು,ಚಿಕ್ಕಮಾಲಾಪುರ ಗ್ರಾಮದ ಆರೋಪಿ ಟ್ರಾಕ್ಟರ್ ಚಾಲಕ
ಮನೋಜ್ @ ಮನೋಜ್ ಕುಮಾರ್ (22) ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಚಾಮರಾಜನಗರ ‌‌ಅಧಿಕ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ವಿಶೇಷ ಪೋಕ್ಸೊ ನ್ಯಾಯಾಧೀಶರಾದ
ಎಸ್. ಜೆ ಕೃಷ್ಣ ಅವರು ಈ ಕೆಳಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಿದ್ದಾರೆ.

ಆರೋಪಿಯು ನೊಂದ ಬಾಲಕಿಯು ಅಪ್ರಾಪ್ತೆ ಆಗಿರುವಾಗ ಪ್ರೀತಿ ಮಾಡುವುದಾಗಿ ಪುಸಲಾಯಿಸಿ. ಅವಳನ್ನು ಮದುವೆ ಆಗುವ ಉದ್ದೇಶದಿಂದ ಅಪಹರಿಸಿ ಲೈಂಗಿಕವಾಗಿ ಪೀಡಿಸಿದ ಕೃತ್ಯ ಸಾಬೀತಾದ ಕಾರಣ ಅಪಹರಿಸಿದಕ್ಕೆ 3 ವರ್ಷ ಶಿಕ್ಷೆ ಮತ್ತು 15 ಸಾವಿರ ದಂಡ ಹಾಗೂ ಲೈಂಗಿಕವಾಗಿ ಪೀಡಿಸಿದಕ್ಕೆ 1 ವರ್ಷ ಶಿಕ್ಷೆ, 5 ಸಾವಿರ ದಂಡ ವಿಧಿಸಿದ್ದು ಹಾಗೂ ನೊಂದ ಬಾಲಕಿಗೆ 15 ಸಾವಿರ ರೂ ಪರಿಹಾರ ನೀಡಿ ಆರೋಪಿತನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಈತನ ಮೇಲೆ ಕೊಳ್ಳೆಗಾಲ ಪಟ್ಟಣ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿಗಳಾದ ಕೊಳ್ಳೆಗಾಲ ವೃತ್ತ ನಿರೀಕ್ಷಕ ಶ್ರೀಕಾಂತ್.ಆರ್ ತನಿಖೆ ಪೂರೈಸಿ ಆರೋಪಿತನ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಕೆ.ಯೋಗೇಶ್ ಅವರು ಸರ್ಕಾರದ ಪರವಾಗಿ ಆರೋಪಿತನ ವಿರುದ್ಧ ವಿಚಾರಣೆ ನಡೆಸಿ ವಾದವನ್ನು ಮಂಡಿಸಿದರು.

ಲೈಂಗಿಕ ದೌರ್ಜನ್ಯ ಸಾಬೀತು:ವ್ಯಕ್ತಿಗೆ ಜೈಲು ಶಿಕ್ಷೆ Read More

ರೇಣುಕಾಸ್ವಾಮಿ ಕೊಲೆ ಪ್ರಕರಣ:2 ದಿನದಲ್ಲಿ ಚಾರ್ಜ್‌ ಶೀಟ್‌‌ ಸಲ್ಲಿಕೆ-ದಯಾನಂದ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೆರಡು ದಿನದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಕೆಯಾಗಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ,ಇನ್ನೂ ಕೆಲವು ಎಫ್ ಎಸ್ ಎಲ್ ವರದಿಗಳು ಬರಬೇಕಿದೆ ಎಂದು ಹೇಳಿದರು.

ರಾಜ್ಯ ಎಫ್ ಎಸ್ ಎಲ್ ನಿಂದ ವರದಿಗಳು ಬಂದಿವೆ. ಎಲ್ಲಾ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಿದ್ಧವಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಚಾರ್ಜ್‌ಶೀಟ್ ನೀಡಿ ಅವರಿಂದ ಸಲಹೆಗಳನ್ನು ಕೂಡ ಪಡೆಯಲಾಗಿದೆ. ಚಾರ್ಜ್‌ಶೀಟ್ ನೋಡಿರುವ ಅವರು ಕೆಲವು ಬದಲಾವಣೆ ಮಾಡುವಂತೆ ಸಲಹೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಕೈ ಸೇರಿವೆ. ಹೈದರಾಬಾದ್​ನ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಇನ್ನೂ ಹಲವು ವರದಿಗಳು ಇನ್ನೂ ಬರಬೇಕಿದೆ,ಹಾಗಾಗಿ ಇನ್ನೆರಡು ದಿನದಲ್ಲಿ ನ್ಯಾಯಾಲಯಕ್ಕೆ
ಚಾರ್ಜ್‌ಶೀಟ್‌ ಸಲ್ಲಿಸಲಾಗುವುದು ಎಂದು ದಯಾನಂದ್ ತಿಳಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣ:2 ದಿನದಲ್ಲಿ ಚಾರ್ಜ್‌ ಶೀಟ್‌‌ ಸಲ್ಲಿಕೆ-ದಯಾನಂದ್ Read More