ಸಂದೀಪ್ ಸ್ನೇಹ ಬಳಗದಿಂದ ದೀಪ ಬೆಳಗಿ‌ಅಪ್ಪು ಸ್ಮರಣೆ

ಮೈಸೂರು: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರು ವಿಧಿವಶರಾಗಿ ಇಂದಿಗೆ‌ ನಾಲ್ಕು ವರ್ಷಗಳು ಕಳೆದಿವೆ,ಆದರೆ‌ ಅವರು‌ ಅಜರಾಮರ ಎಂದು ಅಭಿಮಾನಿಗಳು ನಂಬಿದ್ದಾರೆ.ಅದಕ್ಕಾಗಿ ಅವರನ್ನು ಒಂದೊಂದು ರೀತಿಯಲ್ಲಿ ಸ್ಮರಿಸುತ್ತಾರೆ.

ಅದೇ ರೀತಿ ‌ಮೈಸೂರಿನ‌
ಚಾಮುಂಡಿಪುರಂ ವೃತ್ತದಲ್ಲಿ ಸಂದೀಪ್ ಸ್ನೇಹ ಬಳಗದ ವತಿಯಿಂದ ಡಾ|| ಪುನೀತ್ ರಾಜಕುಮಾರ್ ರವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.

ಈ ವೇಳೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಮೇಣದ ಬತ್ತಿ ಮುಖಾಂತರ ದೀಪ ಬೆಳಗಿಸಿ ಗೌರವ ನಮನ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳಾದ ಸಿ ಸಂದೀಪ್, ಅಂಬಳೆ ಶಿವಣ್ಣ, ಮಹೇಶ್, ಮರಿಸ್ವಾಮಿ, ಬಸವಣ್ಣ, ಪುರುಷೋತ್ತಮ್, ಬಸವರಾಜ್, ಲಕ್ಷ್ಮಣ್, ಮಹದೇವಪ್ಪ,ನಿರಂಜನ್, ವಿವೇಕ್, ಮಧು , ನಾಗರಾಜ್, ರಾಜೇಂದ್ರ, ಸುರೇಶ್, ಸಂತೋಷ್, ನಾರಾಯಪ್ಪ , ಧನುಷ್, ಸುರೇಂದರ್, ಮಂಜು, ಮಹೇಶ್, ಹವನ್, ಪ್ರಣವ್, ಅಭಿನವ್ ಅವರುಗಳು ಅಪ್ಪುವಿಗೆ‌‌ ನಮನ ಸಲ್ಲಿಸಿ ಅವರನ್ನು ಸ್ಮರಿಸಿದರು.

ಸಂದೀಪ್ ಸ್ನೇಹ ಬಳಗದಿಂದ ದೀಪ ಬೆಳಗಿ‌ಅಪ್ಪು ಸ್ಮರಣೆ Read More

ವಿಮಾನ ಪತನದಲ್ಲಿ ಮೃತಪಟ್ಟ ಪ್ರಯಾಣಿಕರಿಗೆ ಮೈಸೂರಲ್ಲಿ ಸಂತಾಪ

ಮೈಸೂರು: ಏರ್ ಇಂಡಿಯಾ ವಿಮಾನ ಪತನದಲ್ಲಿ ಸಾವಗಿಡಾದ ಪ್ರಯಾಣಿಕರಿಗೆ ಮೈಸೂರಿನಲ್ಲಿ ಮೇಣದಬತ್ತಿ ಬೆಳಗಿಸಿ ಸಂತಾಪ ಸಲ್ಲಿಸಲಾಯಿತು.

ನಗರದ ಡಿ ದೇವರಾಜ ಅರಸು ರಸ್ತೆಯಲ್ಲಿ ಕರ್ನಾಟಕ ಹಿತರಕ್ಷಣ ವೇದಿಕೆ ವತಿಯಿಂದ‌
ಅಹಮದಾಬಾದ್‌ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ
ದುರಂತದಲ್ಲಿ ಸಾವಿಗಿಡಾದ ಪ್ರಯಾಣಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್,
ಈ ದುರಂತ ತೀವ್ರ ಆಘಾತ ಹಾಗೂ ದಿಗ್ಭ್ರಮೆಯನ್ನು ಉಂಟು ಮಾಡಿದೆ ಎಂದು ಹೇಳಿದರು.

ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ, ಮೃತರ ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ಈ ವಿಮಾನ ಪತನದ ಬಗ್ಗೆ ಶೀಘ್ರ ತನಿಖೆಯಾಗಲಿ ಎಂದು ಅವರು ಹೇಳಿದರು.

ವಿನಯ್ ಅವರೊಂದಿಗೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ,ಮಂಜುನಾಥ್,ಎಸ್ ಎನ್ ರಾಜೇಶ್, ರವಿಚಂದ್ರ, ನೀತು, ನಂಜುಂಡಿ, ಸಂತೋಷ್, ರಾಕೇಶ್, ಕಣ್ಣನ್, ರವಿ, ಉಮೇಶ್, ಸತೀಶ್, ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ ಮತ್ತಿತರರು ಮೇಣದ ಬತ್ತಿ ಬೆಳಗಿಸಿ ಸಂತಾಪ ಸಲ್ಲಿಸಿದರು.

ವಿಮಾನ ಪತನದಲ್ಲಿ ಮೃತಪಟ್ಟ ಪ್ರಯಾಣಿಕರಿಗೆ ಮೈಸೂರಲ್ಲಿ ಸಂತಾಪ Read More