ನಾಳೆ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ವಿಶ್ವ ಧ್ಯಾನದ ದಿನ

ಮೈಸೂರು: ‌ಇಂದಿನ ಧಾವಂತ ಮತ್ತು ಒತ್ತಡದ ಜೀವನದಿಂದಾಗಿ ಜನರ ಮನಸ್ಸಿನ ಮೇಲೆ‌ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮೈಸೂರು ಉಪವಲಯ ಮುಖ್ಯ ಸಂಚಾಲಕರಾದ
ಬಿ.ಕೆ.ಲಕ್ಷ್ಮಿ ಅವರು ತಿಳಿಸಿದರು.

ಒತ್ತಡದ ಜೀವನದಿಂದಾಗಿ
ಆನ್ನೋನ್ಯತೆಯ ಕೊರತೆ, ಮನಸ್ತಾಪಗಳು, ಕೋಪ, ಆವೇಶ ಹೆಚ್ಚಾಗುತ್ತಿದ್ದು ಇವುಗಳಿಂದಾಗಿ ಶಾರೀರಿಕ ರೋಗಗಳೂ ಕಾಣಿಸಿಕೊಳ್ಳುತ್ತಿವೆ‌ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಇದೆಲ್ಲದಕ್ಕೂ ಕಾರಣ ನಮ್ಮ ಮನಸ್ಥಿತಿಯನ್ನು ಕಡೆಗಣಿಸಿರುವುದು ಮತ್ತು ಸದಾ ಬಾಹ್ಯಮುಖಯಾಗಿರಲು ಬಯಸುವುದು. ಏಕಾಂತದಲ್ಲಿ ಕುಳಿತು ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಸಮಯವೂ ನಮಗಿಲ್ಲ ಅಥವಾ ಸಮಯವಿದ್ದರೂ ಹೀಗೆ ಮಾಡಬೇಕು ಎಂಬ ಆಯ್ಕೆಯ ಅರಿವೂ ಬಹುಶಃ ನಮ್ಮಲ್ಲಿ ಇಲ್ಲದಿರುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದರು.

ಮನಸ್ಸಿನ ಶಾಂತಿಗಾಗಿ ಡಿಸೆಂಬರ್ 21ವಿಶ್ವ ದ್ಯಾನದ ಧ್ಯಾನದ ದಿನವನ್ನಾಗಿ ಆಚರಿಸಲು ಮತ್ತು ಧ್ಯಾನವನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಲು ಇಚ್ಚಿಸಿದ್ದೇವೆ ಎಂದು ಲಕ್ಷ್ಮಿ ಅವರು ತಿಳಿಸಿದರು.

ಮೈಸೂರಿನ ನಾಗರಿಕರಿಗೆ ಧ್ಯಾನದ ಬಗ್ಗೆ ಅರಿವು ಮೂಡಿಸಲು ಮತ್ತು ಅದರ ಪ್ರಾಯೋಗಿಕ ಅಭ್ಯಾಸವನ್ನು ಮಾಡಿಸಲು ನಾಳೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ವಿಶ್ವದ್ಯಾನ ದಿನ ಹಮ್ಮಿಕೊಳ್ಳಲಾಗಿದೆ.

ಆಯುಶ್ ಇಲಾಖೆ ಮತ್ತು ನಗರದ ಯೋಗ ಸಂಘಟನೆಗಳ ಸಹಯೋಗದೊಂದಿಗೆ ಬೆಳಗ್ಗೆ 6 ಗಂಟೆಯಿಂದ 8.30 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ ನಗರದ ಜನತೆ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಪ್ರವೇಶ ಉಚಿತ.

ನಾಳೆ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ವಿಶ್ವ ಧ್ಯಾನದ ದಿನ Read More