ರಾಮಕೃಷ್ಣನಗರದಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ಚುನಾವಣೆ
ಮೈಸೂರು: ಬಿಜೆಪಿ ಸಂಘಟನಾ ಪರ್ವದ ಪ್ರಯುಕ್ತ ಚಾಮುಂಡೇಶ್ವರಿ ಕ್ಷೇತ್ರದ ರಾಮಕೃಷ್ಣನಗರದಲ್ಲಿ ಬೂತ್ ಅಧ್ಯಕ್ಷರ ಚುನಾವಣೆ ನಡೆಯಿತು.
50ಕ್ಕೂ ಹೆಚ್ಚು ಜನರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ನೋಂದಾಯಿಸಿ, ಸಕ್ರಿಯ ಕಾರ್ಯಕರ್ತರನ್ನು ಅವರ ಮತಗಟ್ಟೆ ವ್ಯಾಪ್ತಿಯಲ್ಲಿ ಗುರುತಿಸಿ, ಅವರ ಹೆಸರನ್ನು ಒಬ್ಬರು ಸೂಚಿಸಿದರು.
ಮಿಕ್ಕವರು ಅನುಮೋದಿಸಿದ ನಂತರ ಬೂತ್ ಅಧ್ಯಕ್ಷರನ್ನು ಘೋಷಣೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ಬಿಜೆಪಿಯ ಹಿರಿಯ ಮುಖಂಡ, ಮೈಸೂರು ನಗರದ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ ಆಗಮಿಸಿ ಚುನಾವಣೆ ನಡೆಸಿಕೊಟ್ಟರು.
ಆಯ್ಕೆಯಾದ ಬೂತ್ ಅಧ್ಯಕ್ಷರನ್ನು ಜಯಘೋಷಗಳೊಂದಿಗೆ ಮೆರವಣಿಗೆ ಮೂಲಕ ಅವರ ಮನೆಗಳಿಗೆ ಕರೆದೊಯ್ಯಲಾಯಿತು.
ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ಲ ಮೈಸೂರು ನಗರದ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು, ಮುಖಂಡರಾದ ಆರ್. ಸೋಮಶೇಖರ್, ಹೆಚ್.ಜಿ ರಾಜಮಣಿ, ವಿಜಯ ಮಂಜುನಾಥ್, ಮಂಜುಳಾ, ಶುಭಶ್ರೀ, ಶ್ರೀನಿವಾಸ್ ಪ್ರಸಾದ್, ಸುಬ್ರಹ್ಮಣ್ಯ, ರಾಘವೇಂದ್ರ, ಶಶಿಕಾಂತ್, ತ್ಯಾಗರಾಜ್, ಮಧು ಸೋಮಶೇಖರ್, ಚಂದನ್ ಗೌಡ, ಸಾಗರ್ ಸಿಂಗ್, ಸೂರ್ಯಪ್ರಕಾಶ್, ಸಂಜಯ್, ಕಾಂತರಾಜ ಅರಸು, ವಿನುತಾ, ತುಳಸಿ, ನಾಗರಾಜ್ ಜನ್ನು, ರಾಜೀವ್ ಮತ್ತಿತರ ಸ್ಥಳೀಯ ಬೂತ್ ಮುಖಂಡರು ಚುನಾವಣೆಯಲ್ಲಿ ಭಾಗವಹಿಸಿದ್ದರು.
ರಾಮಕೃಷ್ಣನಗರದಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ಚುನಾವಣೆ Read More