Tag: Blood Donate
ರಕ್ತದಾನಿಗಳಿಗೆ ಜೀವಧಾರ ರಕ್ತ ನಿಧಿ ಕೇಂದ್ರದಿಂದ ಸತ್ಕಾರ
ಮೈಸೂರು: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜೀವಧಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ 15 ಬಾರಿ ಮೇಲ್ಪಟ್ಟು ಸ್ವಯಂ ಪ್ರೇರಿತ ರಕ್ತದಾನ ಮಾಡಿದ ರಕ್ತದಾನಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ಬ್ಲಡ್ ಆನ್ ಕಾಲ್ ಕ್ಲಬ್ ಸಹಯೋಗದೊಂದಿಗೆ 15 ಬಾರಿ ಮೇಲ್ಪಟ್ಟು ಸ್ವಯಂ ಪ್ರೇರಿತ ರಕ್ತದಾನ ಮಾಡಿದ
ನವೀನ್, ಕಾಂತಿಲಾಲ್ ಸಂದೇಶ, ಮಂಜುನಾಥ್ ವೈ ಎಸ್, ಯಶ್ವಂತ್, ರಶ್ಮಿ ಶರ್ಮಾ,ಪರಾಶ್ರಮ ಬೋರನ, ರಾಹುಲ್ ಕೊಠಾರಿ,ಮೀನಾಕ್ಷಿ ಕೊಠಾರಿ,ಮನೀಶ್ ಜೈನ್, ವನಿತಾ ಡಕ್, ಮುಕೇಶ್ ಅವರುಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ದೇವೇಂದ್ರ ಪರಿಹಾರಿಯ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,
ರಕ್ತದಾನದಿಂದ ಶರೀರದಲ್ಲಿ ಚೈತನ್ಯ ಶಕ್ತಿಯು ಹೆಚ್ಚಾಗಿ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಕಾಣಬಹುದು ಎಂದು ಹೇಳಿದರು.
ರಕ್ತದಾನದ ಬಗ್ಗೆ ಪರಿಚಯದರಿಗೂ ತಿಳಿಸಿ ಅವರನ್ನೂ ಇಂತಹ ಉತ್ತಮ ಕಾರ್ಯಗಳಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ರಕ್ತದಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು.ಅವಶ್ಯಕವಾದಾಗ ಹುಡುಕುವುದಕ್ಕಿಂತ ಮುಂಚೆಯೇ ಸಾಕಷ್ಟು ರಕ್ತವನ್ನು ಸಂಗ್ರಹಿಸಿಟ್ಟುಕೊಳ್ಳಲು ಕ್ರಮ ವಹಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ರಕ್ತದ ಕೊರತೆಯು ಹೆಚ್ಚಾಗಿರುವುದರಿಂದ ರಕ್ತದಾನದ ಅವಶ್ಯಕತೆಯಿದೆ. ದಾನಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ರಕ್ತದ ಕೊರತೆಯನ್ನು ಸಾಧ್ಯವಾದ ಮಟ್ಟಿಗೆ ನಿಭಾಯಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರಿನ ದೇವೇಂದ್ರ ಪರಿಹಾರಿಯ, ಆನಂದ್ ಮಾಂದೋಟ್, ಮಹಾವೀರ ಜೈನ, ಸಪ್ನ, ಮಮತಾ, ಸದಾಶಿವ್ ಮತ್ತಿತರರು ಹಾಜರಿದ್ದರು.
ರಕ್ತದಾನಿಗಳಿಗೆ ಜೀವಧಾರ ರಕ್ತ ನಿಧಿ ಕೇಂದ್ರದಿಂದ ಸತ್ಕಾರ Read Moreರಕ್ತದಾನ ಮಾಡಿ ಜೀವ ಉಳಿಸಿ ಮಾದರಿಯಾದ ದಿನೇಶ್
ಮೈಸೂರು, ಏ.4: ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ತುರ್ತು ರಕ್ತದ ಅವಶ್ಯಕತೆ ಇದ್ದ ಕಾರಣ ದಿನೇಶ್ ಅವರು ರಕ್ತದಾನ ಮಾಡಿ ಜೀವ ಉಳಿಸಿ ಮಾದರಿಯಾಗಿದ್ದಾರೆ.
ಇದು ಸೇರಿ 57 ನೆ ಬಾರಿ ರಕ್ತದಾನ ಮಾಡಿದ ದಿನೇಶ್ ಅವರಿಗೆ ಒಂದು ಹೆಜ್ಜೆ ರಕ್ತದಾನಿ ಬಳಗದ ವತಿಯಿಂದ ಅಧ್ಯಕ್ಷ ರಕ್ತದಾನಿ ಮಂಜು ಅಭಿನಂದನೆ ಸಲ್ಲಿಸಿದ್ದಾರೆ.
ಇಂತಹ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಬಹಳ ಪುಣ್ಯದ ಕೆಲಸ,ಇದೇ ರೀತಿ ಪ್ರತಿಯೊಬ್ಬರೂ ಕೂಡ ಒಂದು ಹೆಜ್ಜೆ ಮುಂದೆ ಬಂದು ರಕ್ತದಾನ ಮಾಡಿ ಜೀವ ಉಳಿಸಿ ನಮ್ಮ ಜೊತೆ ಕೈಜೋಡಿಸಿ ಎಂದು ರಕ್ತದಾನಿ ಮಂಜು ಮನವಿ ಮಾಡಿದ್ದಾರೆ.
ರಕ್ತದಾನ ಮಾಡಿ ಜೀವ ಉಳಿಸಿ ಮಾದರಿಯಾದ ದಿನೇಶ್ Read More
ರಕ್ತದಾನ ಮಾಡಿ ಜೀವ ಉಳಿಸಿ-ರಕ್ತದಾನಿ ನೀಮಾ ಲೋಬೊ ಕರೆ
ಉಡುಪಿ: 18ರಿಂದ 55 ವಯಸ್ಸಿನ ಎಲ್ಲರೂ ರಕ್ತದಾನ ಮಾಡಬಹುದು, ರಕ್ತದಾನ ಮಾಡುವುದರಲ್ಲಿ ಗಂಡು ಹೆಣ್ಣು ಎಂಬ ಭೇದ ಇಲ್ಲ ಎಂದು ಒಂದು ಹೆಜ್ಜೆ ರಕ್ತದಾನಿಗಳ ಬಳಗ ಉಡುಪಿ ಜಿಲ್ಲಾ ಅಧ್ಯಕ್ಷೆ ರಕ್ತದಾನಿ ನೀಮಾ ಲೋಬೊ ತಿಳಿಸಿದ್ದಾರೆ.
ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನಿಗೆ ಅನೇಕ ಕಾಯಿಲೆಗಳು ಬಾಧಿಸುತ್ತವೆ,ಆ ಸಂದರ್ಭದಲ್ಲಿ ಸರ್ಜರಿ ಮಾಡುವುದು ಅನಿವಾರ್ಯವಾದರೆ ದೇಹದಿಂದ ರಕ್ತ ಲಾಸ್ ಆಗುವುದು ಸಾಮಾನ್ಯ, ಅಲ್ಲದೆ ಅಘಾತವಾದಾಗ ರಕ್ತಸ್ರಾವ ಆಗುತ್ತದೆ ಹಾಗಾಗಿ ಈ ಎರಡೂ ಸಂದರ್ಭದಲ್ಲಿ ತುರ್ತು ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭಗಳು ಪ್ರತಿ ಮನೆಯಲ್ಲಿ ಸಂಭವಿಸಬಹುದು ನಮಗೇನು ಆಗುವುದಿಲ್ಲ ಎನ್ನುವುದು ಮೂರ್ಖತನ ಆದುದರಿಂದ 18ರಿಂದ 55 ವಯಸ್ಸಿನ ಎಲ್ಲರೂ ರಕ್ತದಾನ ಮಾಡಬಹುದು ಎಂದು ಹೇಳಿದ್ದಾರೆ.

ರಕ್ತದಾನ ಮಾಡುವವರು ಆರೋಗ್ಯವಂತರಾಗಿರಬೇಕು, ಗಂಡಸರು ಮೂರು ತಿಂಗಳಿಗೊಮ್ಮೆ ಹಾಗೂ ಹೆಂಗಸರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
ರಕ್ತದಾನ ಮಾಡುವಾಗ ವೈದ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರೆ ರಕ್ತದಾನ ಮಾಡಬಹುದಾ ಅಥವಾ ಮಾಡಬಾರದಾ ಎಂಬಯದನ್ನು ತಿಳಿಸುತ್ತಾರೆ.
ಯಾವುದೇ ಸಂದರ್ಭಗಳಲ್ಲಿ ಯಾರಾದರೂ ತುರ್ತಾಗಿ ರಕ್ತದ ಅವಶ್ಯಕತೆ ಇದೆ ಎಂದು ಹೇಳಿದರೆ ದಯವಿಟ್ಟು ರಕ್ತದಾನ ಮಾಡಿ ಎಂದು ನೀಮಾ ಮನವಿ ಮಾಡಿದ್ದಾರೆ.
ಭಾರತದಲ್ಲಿ ಹೆರಿಗೆ ಸಮಯದಲ್ಲಿ ಹೆಚ್ಚಿನ ಸಾವುಗಳು ಸಂಭವಿಸುತ್ತವೆ. ಅಂತಹ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಯಾವುದೇ ಆಗಲಿ ರಕ್ತದ ಅವಶ್ಯಕತೆ ಇದೆ ಎಂದು ಕೇಳಿದಾಗ ದಯವಿಟ್ಟು ರಕ್ತದಾನ ಮಾಡಿ ಜೀವ ಉಳಿಸಿ ಎಂದು ಸಲಹೆ ನೀಡಿದ್ದಾರೆ.
ಸತತವಾಗಿ 4 ವರ್ಷಗಳಿಂದ ಮೈಸೂರಿನಲ್ಲಿ ಅಧ್ಯಕ್ಷರಾದ ರಕ್ತದಾನಿ ಮಂಜು ಅವರು ಒಂದು ಹೆಜ್ಜೆ ರಕ್ತದಾನಿ ಬಳಗ ಕಟ್ಟಿ ರಕ್ತದಾನ ಮಾಡಿಸುತ್ತಾ ಮತ್ತು ಸ್ವತಃ ರಕ್ತದಾನ ಮಾಡುತ್ತಾ ಬಂದಿದ್ದಾರೆ.

ಇದೀಗ ಉಡುಪಿ ಜಿಲ್ಲೆಯಲ್ಲಿ ಒಂದು ಹೆಜ್ಜೆ ರಕ್ತದಾನ ಬಳಗವನ್ನ ಕಟ್ಟಿ ಬಳಗಕ್ಕೆ ನೀಮಾ ಲೋಬೊ ಅವರನ್ನು ಅಧ್ಯಕ್ಷರಾಗಿ ಮಾಡಿದ್ದಾರೆ.ಆಕೆ ಕೂಡ ಸತತವಾಗಿ 7 ಬಾರಿ ರಕ್ತದಾನ ಮಾಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಈ ಜವಾಬ್ದಾರಿಯನ್ನು ತೆಗೆದುಕೊಂಡು ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡಿಸುತ್ತಾ,ನಾನೂ ಸಹಾ ರಕ್ತದಾನ ಮಾಡುತ್ತಾ ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ರಕ್ತದಾನ ಮಾಡಲು ಬಯಸುವವರು ಒಂದು ಹೆಜ್ಜೆ ರಕ್ತದಾನಿಗಳ ಬಳಗ ಉಡುಪಿ ಜಿಲ್ಲಾ ಅಧ್ಯಕ್ಷೆ ರಕ್ತದಾನಿ ನೀಮಾ ಲೋಬೊ ಫೋನ್ ನಂ — 99021 75996 ಇದಕ್ಕೆ ಕರೆ ಮಾಡಬಹುದು
ಈ ನಂಬರಿಗೆ ಕರೆ ಮಾಡಿ ಹೆಸರು ಮತ್ತು ರಕ್ತದ ಗುಂಪನ್ನು ತಿಳಿಸಿ ನಮ್ಮ ಬಳಗಕ್ಕೆ ಸೇರಬಹುದು ಎಂದು, ರಕ್ತದ ಅವಶ್ಯಕತೆ ಇರುವವರು ಕೂಡಾ ಇದೇ ನಂಬರಿಗೆ ಕರೆ ಮಾಡಬಹುದು ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತೇವೆ, ರಕ್ತದಾನ ಮಾಡಿ ಜೀವ ಉಳಿಸಿ ನಮ್ಮ ಜೊತೆ ಕೈಜೋಡಿಸಿ ಎಂದು
ರಕ್ತದಾನಿ ನೀಮಾ ಲೋಬೊ ಕೋರಿದ್ದಾರೆ.
ನಿಸ್ವಾರ್ಥ ಸೇವೆಯೇ ನಿಜವಾದ ಸಮಾಜ ಸೇವೆ: ನಾರಾಯಣಗೌಡ
ಮೈಸೂರು: ನಿಸ್ವಾರ್ಥ ಸೇವೆಯೇ ನಿಜವಾದ ಸಮಾಜ ಸೇವೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದರು.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರ ಆವರಣದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಅರಿವು ಸಂಸ್ಥೆ ಹಮ್ಮಿಕೊಂಡಿದ್ದ
ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ 20 ವರ್ಷ ನಿರಂತರ ಸಾಮಾಜಿಕ ಸೇವೆ ಹಾಗೂ ಸಂಘಟನೆಯಿಂದ ಸೇವೆ ಸಲ್ಲಿಸುತ್ತಿರುವ ಎಸ್ ಇ ಗಿರೀಶ್ ರವರಿಗೆ
ಜೀವರಕ್ಷಕ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸೇವೆಯನ್ನು ಆತ್ಮ ತೃಪ್ತಿ ಮತ್ತು ಮನಃಸಂತೋಷಕ್ಕಾಗಿ ಮಾಡುತ್ತೇವೆ ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಅವರು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸೇವೆಯ ಜೊತೆಗೆ ಬಡ ವಿದ್ಯಾರ್ಥಿ ಹಾಗೂ ರೋಗಿಗಳಿಗೆ ಸಹಾಯ ಮಾಡುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಾ ನಿಜವಾದ ಸಮಾಜ ಸೇವೆ ಅವರದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಸ್ವಾರ್ಥ ಸೇವಾಕಾರ್ಯಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿ ಗಿರೀಶ್ ಅವರ ಸದೀರ್ಘಕಾಲದ ಸೇವೆ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಲಿಂಗರಾಜು ಅವರು ಮಾತನಾಡಿ,
ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಅಪಘಾತ ಮತ್ತಿತರ ಘಟನೆ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ರೋಗಿಗಳಿಗೆ ರಕ್ತದಾನ ಮಾಡುವವರೇ ಎರಡನೇ ದೇವರಾಗುತ್ತಾರೆ ಅಂತಹ ಕೆಲಸದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರ 20 ವರ್ಷದಿಂದ ನಿರಂತರವಾಗಿ ಸೇವೆ ಮಾಡುತಗತಾ ಬಂದಿದೆ,
ಜೀವದಾರ ರಕ್ತ ನಿಧಿ ಕೇಂದ್ರವು ಮೈಸೂರು ನಗರದ ಅತ್ಯುತ್ತಮ ರಕ್ತ ನಿಧಿ ಕೇಂದ್ರ ಎಂಬ ಸರ್ಕಾರದ ಪ್ರಶಂಸೆಗೆ ಪಾತ್ರವಾಗಿದೆ
ಎಂಬುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ 30 ಯೂನಿಟ್ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಅರಿವು ಸಂಸ್ಥೆಯ ಪದಾಧಿಕಾರಿಗಳು, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಾ ರಾಜ್, ಜೆಡಿಎಸ್ ಕಾರ್ಯದಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಜಿ ರಾಘವೇಂದ್ರ, ಆನಂದ್, ಮುತ್ತಣ್ಣ,ಎಂ.ಗಂಟಯ್ಯ (ಕೃಷ್ಣಪ್ಪ), ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಕೇಬಲ್ ವಿಜಿ, ಸೂರಜ್, ಸದಾಶಿವ್, ವಿನಯ್ ಕಣಗಾಲ್, ರಾಕೇಶ್, ಕೆಂಪಣ್ಣ ,ನಂದೀಶ್, ರಾಘವೇಂದ್ರ ಮತ್ತಿತರರು ಹಾಜರಿದ್ದರು.
ನಿಸ್ವಾರ್ಥ ಸೇವೆಯೇ ನಿಜವಾದ ಸಮಾಜ ಸೇವೆ: ನಾರಾಯಣಗೌಡ Read More
ಜ 23 ರಂದು ನೇತಾಜಿ ಜಯಂತಿ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಮೈಸೂರು: ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೆಎಂಪಿ ಕೆ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರ ಆವರಣದಲ್ಲಿ ಜ 23 ರಂದು ಬೆಳಗ್ಗೆ 11 ಗಂಟೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ತಿಳಿಸಿದ್ದಾರೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಟಿ ಎಸ್ ಶ್ರೀವತ್ಸ,
ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್ ಆರ್ ಮಾದೇಸ್ವಾಮಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರ ನಾರಾಯಣಗೌಡ, ಮಂಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ನಾಗೇಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮತ್ತಿತರರು ಭಾಗವಹಿಸಲಿದ್ದಾರೆ.