ರಾಮಕೃಷ್ಣನಗರದಲ್ಲಿ ಎರಡು ದಿನಗಳ ಉದ್ಯಾನವನ ಸ್ವಚ್ಛತಾ ಅಭಿಯಾನ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ವತಿಯಿಂದ ದೇಶದಾದ್ಯಂತ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅದೇ ರೀತಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ರಾಮಕೃಷ್ಣನಗರದ ಹೆಚ್ ಬ್ಲಾಕ್ ನಲ್ಲಿ ಉದ್ಯಾನವನವನ್ನು ಸ್ವಚ್ಛಗೊಳಿಸುವ ಎರಡು ದಿನದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಬುಧವಾರ ಮುಂಜಾನೆ ಒಟ್ಟಾಗಿ ಸೇರಿ ಬಿಜೆಪಿ ಕಾರ್ಯಕರ್ತರು ಉದ್ಯಾನವನದಲ್ಲಿ ಬೆಳೆದಿದ್ದ ಗಿಡ-ಗಂಟಿಗಳು, ನಡೆದಾಡುವ ಪಥದಲ್ಲಿ ಬೆಳೆದಿದ್ದ ಕಳೆ ಸೇರಿದಂತೆ ಕಸ,ಕಡ್ಡಿ ತೆಗೆದು ಸ್ವಚ್ಛ ಮಾಡಿ ಶ್ರಮದಾನ ಮಾಡಿದರು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ಸ್ವಚ್ಛತಾ ಕಾರ್ಯಕ್ರಮದ ಸಂಚಾಲಕರಾದ ಚಂದ್ರಶೇಖರ ಸ್ವಾಮಿ, ಸಹ-ಸಂಚಾಲಕರಾದ ವಿಜಯ ಮಂಜುನಾಥ್, ಮಂಡಲದ ಉಪಾಧ್ಯಕ್ಷರಾದ ಬಿ.ಸಿ. ಶಶಿಕಾಂತ್, ಶಿವು ಪಟೇಲ್, ಎಸ್. ಟಿ ಮೋರ್ಚಾ ನಗರ ಉಪಾಧ್ಯಕ್ಷರಾದ ಎಸ್. ತ್ಯಾಗರಾಜ್, ಮುಖಂಡರಾದ ರವಿ ನಾಯಕಂಡ, ದೇವರಾಜ್, ರಾಘವೇಂದ್ರ, ಸೋಮಣ್ಣ, ರಾಮಕೃಷ್ಣಪ್ಪ, ಚಂದನ್ ಗೌಡ, ಸೂರ್ಯ, ಪ್ರಜ್ವಲ್ ಗೌಡ, ಪುಟ್ಟಮಣ್ಣಿ, ಮಂಜುಳಾ, ವಸುಮತಿ, ರಾಜನಾಯಕ್, ಲೋಕೇಶ್ ನಾಯಕ್, ಲೋಕೇಶ್ ರೆಡ್ಡಿ ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.

ರಾಮಕೃಷ್ಣನಗರದಲ್ಲಿ ಎರಡು ದಿನಗಳ ಉದ್ಯಾನವನ ಸ್ವಚ್ಛತಾ ಅಭಿಯಾನ Read More

ಮೋದಿ‌ಜಿ ಹುಟ್ಟುಹಬ್ಬ:ಆರೋಗ್ಯಾಧಿಕಾರಿ,ಪೌರ‌ ಕಾರ್ಮಿಕರಿಗೆ ಅಭಿನಂದನೆ

ಮೈಸೂರು: ಭಾರತ ಕಂಡ ಶ್ರೇಷ್ಠ ನಾಯಕ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಮುಖಂಡರಾದ ಸಂದೀಪ್ ಸಿ ಅವರ ನೇತೃತ್ವದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಮತ್ತು ಪೌರಕಾರ್ಮಿಕರನ್ನು ಗೌರವಿಸಲಾಯಿತು.

ಮೈಸೂರಿನ ಚಾಮುಂಡಿಪುರಂ ವೃತದಲ್ಲಿ ಮೋದಿಯವರ ಕನಸಿನ ಆಶಯದಂತೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಸಹಕಾರ ನೀಡಿ ಯಶಸ್ವಿಯಾಗಿ ಕಸ ವಿಲೇವಾರಿ ನಿರ್ವಹಣೆ ಮಾಡುತ್ತಾ ಬಂದಿರುವ ಮೈಸೂರು ಮಹಾನಗರ ಪಾಲಿಕೆ ವಲಯ 1ರಲ್ಲಿನ ಆರೋಗ್ಯ ಅಧಿಕಾರಿಯಾದ ಹೆಚ್.ಎಂ. ಶಿವಪ್ರಸಾದ್ ಹಾಗೂ ಚಾಮುಂಡಿಪುರಂನ ಪೌರಕಾರ್ಮಿಕರಾದ ನವೀಂದ್ರ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಇದೇ ವೇಳೆ ಮೋದಿಯವರ ಜನುಮದಿನಕ್ಕಾಗಿ ಸಾರ್ವಜನಿಕರಿಗೆ ಕಜ್ಜಾಯ ಮತ್ತು ಟೀ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಸಕರಾದ ಟಿ ಎಸ್ ಶ್ರೀವತ್ಸ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಪ್ರಧಾನ ಕಾರ್ಯದರ್ಶಿ ಮಹೇಶ್, ಕೆ ಆರ್ ಕ್ಷೇತ್ರದ ಅಧ್ಯಕ್ಷ ರಘು ಅರಸ್, ಮುಖಂಡರಾದ ಚಂದ್ರಣ್ಣ, ಜಯರಾಮ್, ವಿದ್ಯಾ ಅರಸ್, ಚಂದ್ರಕಲಾ, ಪುರುಷೋತ್ತಮ್, ಶಿವಪ್ಪ, ಮುರಳಿಧರ್ , ಮಂಜುಳ, ಲತಾ, ಕಿಶೋರ್ ಜೈನ್, ಮುರಳಿ, ಪ್ರದೀಪ್ ಕುಮಾರ್, ಮಹೇಶ್, ಅಡಿಗೆ ಕಂಟ್ರಾಕ್ಟ್ ಕುಮಾರ್ , ಕಿರಣ್, ಅಂಬಳೆ ಶಿವಣ್ಣ, ವಿಜಯಾ, ಸಿಂಧೆ, ಧನುಷ್, ವಿನಯ್ ಸಾಗರ್, ಪವನ್, ಚೇತನ್ , ಹೇಮಂತ್, ಬಸವರಾಜು, ನಿಶಾಂತ್, ಭಾನು ಕುಮಾರ್, ಅಜ್ಗರ್, ರಮೇಶ್, ಸಂದೇಶ್ , ಪಾರ್ವತಿ, ದ್ರಾಕ್ಷಾಯಿಣಿ, ರಾಜೇಂದ್ರ, ಮೋಹನ್, ಕಿಟ್ಟಿ, ಗೋವಿಂದ್ , ಸೋಮು, ಸುರೇಶ್, ದೀಪಕ್, ವಿನಯ್, ಟಿಪೇಶ್, ಶಿವರಾಜ್, ನಂಜುಂಡಸ್ವಾಮಿ , ದೇವೇಂದ್ರ ಸ್ವಾಮಿ, ಗಾಯತ್ರಿ , ಸುಶೀಲಾ , ಮಧುರ, ರಿಂಕು, ರಾಮಸ್ವಾಮಿ ಮತ್ತಿತರರು ಹಾಜರಿದ್ದರು.

ಮೋದಿ‌ಜಿ ಹುಟ್ಟುಹಬ್ಬ:ಆರೋಗ್ಯಾಧಿಕಾರಿ,ಪೌರ‌ ಕಾರ್ಮಿಕರಿಗೆ ಅಭಿನಂದನೆ Read More

ಕಾಂಗ್ರೆಸ್‌ನ ಮತಬ್ಯಾಂಕ್‌ ರಾಜಕಾರಣದಿಂದ ಮಿನಿ ಪಾಕಿಸ್ತಾನ ಸೃಷ್ಟಿ-ಅಶೋಕ್

ಮದ್ದೂರು: ಕಾಂಗ್ರೆಸ್‌ನ ಮತಬ್ಯಾಂಕ್‌ ರಾಜಕಾರಣದಿಂದಾಗಿ ರಾಜ್ಯದಲ್ಲಿ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.

ಮದ್ದೂರಿಗೆ ಬಿಜೆಪಿ ನಿಯೋಗ ಭೇಟಿ ನೀಡಿದ ವೇಳೆ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಲ್ಲಿ ಯಾರು ಸತ್ತರೂ ತಮಟೆ ಹೊಡೆದುಕೊಂಡು ಹೋಗುವಂತಿಲ್ಲ. ಮಸೀದಿ ಮುಂದೆ ಮಾತ್ರ ಮೌನವಾಗಿ ಸಾಗಬೇಕಾಗುತ್ತದೆ. ಸಿಎಂ ಸಿದ್ದರಾಮಯ್ಯನವರಿಂದಾಗಿ ನಮ್ಮನ್ನು ಏನೂ ಮಾಡಲ್ಲ ಎಂಬ ಭಾವನೆ ಮುಸ್ಲಿಮರಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಂಜಾನ್‌ ಸಮಯದಲ್ಲಿ ದೇವಾಲಯದ ಮುಂಭಾಗ ಮುಸ್ಲಿಮರು ಮೆರವಣಿಗೆ ಹೋಗಬಹುದು. ಆದರೆ ಹಿಂದೂಗಳು ಮಸೀದಿ ಮುಂಭಾಗ ಮೌನವಾಗಿ ಇರಬೇಕು ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಮದ್ದೂರಿನಲ್ಲಿ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಜನರು ಬಂದಿದ್ದಾರೆ. ಈಗ ಕಲ್ಲು ಹೊಡೆದಿರುವವರು ಮುಂದೆ ಬಾಂಬ್‌ ಹಾಕುತ್ತಾರೆ. ಕಾಂಗ್ರೆಸ್‌ ನಾಯಕರು ಇವರು ನಮ್ಮ ಬ್ರದರ್‌ಗಳು ಎಂದು ಹೇಳುತ್ತಾರೆ. ಇಲ್ಲಿನ ಕಾಂಗ್ರೆಸ್‌ ಶಾಸಕರು ಕೂಡ ಅದನ್ನೇ ಹೇಳುತ್ತಾರೆ. ಆ ಬೆಂಬಲದಿಂದಲೇ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗಿವೆ. ಈ ತಾಲಿಬಾನ್‌ ಸರ್ಕಾರ ಮುಸ್ಲಿಮರಿಗೆ ಬೆಂಬಲ ನೀಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ಮೆರವಣಿಗೆ ಸಮಯದಲ್ಲೇ ಹೆಚ್ಚು ಪೊಲೀಸರನ್ನು ನಿಯೋಜಿಸಬೇಕಿತ್ತು. ಅದನ್ನು ಸರ್ಕಾರ ಮಾಡಲೇ ಇಲ್ಲ. ಮಾಡಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿರುವುದರಿಂದ ಇಡೀ ದೇಶ ಇತ್ತ ಕಡೆ ನೋಡುತ್ತಿದೆ ಇದು‌ ನಾಚಿಕೆ ವಿಚಾರ ಎಂದು ವ್ಯಂಗ್ಯವಾಡಿದರು.

ಕಲ್ಲು ಹೊಡೆದಿರುವವರು ಇಲ್ಲಿಯವರು ಅಲ್ಲ ಎಂದಾದರೆ ಅವರೇನು ಪಾಕಿಸ್ತಾನದಿಂದ ಬಂದಿದ್ದಾರಾ, ಇದು ಪೂರ್ವ ನಿಯೋಜಿತ ಕೃತ್ಯ,ಗುಪ್ತಚರ ಇಲಾಖೆ ಇದನ್ನು ಪತ್ತೆ ಮಾಡಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಹಿಂದೂ ಎಂದು ಹೇಳಿಕೊಳ್ಳುತ್ತಾರೆಯೇ ಹೊರತು, ಅವರಿಗೆ ಯಾವ ಅಭಿಮಾನವೂ ಇಲ್ಲ ಅವರು ನಿರಾಶರಾಗಿದ್ದಾರೆ ಎಂದು ಅಶೋಕ್ ಟಾಂಗ್ ನೀಡಿದರು.

ಕಾಂಗ್ರೆಸ್‌ನ ಮತಬ್ಯಾಂಕ್‌ ರಾಜಕಾರಣದಿಂದ ಮಿನಿ ಪಾಕಿಸ್ತಾನ ಸೃಷ್ಟಿ-ಅಶೋಕ್ Read More

ಸಮಾಜದಲ್ಲಿ ಶಾಂತಿ ಕದಡುವುದೇ ಬಿಜೆಪಿ ಉದ್ದೇಶ:ಸಿದ್ದರಾಮಯ್ಯ

ಬೆಂಗಳೂರು: ಮದ್ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಜನರನ್ನು ಬಂಧಿಸಿದ್ದು, ಯಾವುದೇ ಜಾತಿ ಧರ್ಮಗಳನ್ನು ಸರ್ಕಾರ ಪರಿಗಣಿಸದೇ, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಿದೆ ಎಂದು
ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಸಿಎಂ,ಮದ್ದೂರು ಗಲಭೆ ಗೆ ಸಂಬಂಧಪಟ್ಟಂತೆ ಬಿಜೆಪಿಯವರು ಮದ್ದೂರಿಗೆ ಪಾದಯಾತ್ರೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ಸಮಾಜದಲ್ಲಿ ಶಾಂತಿ ಕದಡುವುದೇ ಬಿಜೆಪಿಯ ಉದ್ದೆಶವಾಗಿದೆ ಎಂದು ಗರಂ ಆಗಿ ನುಡಿದರು.

ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ಚಲೋ ಎಂಬ ಕಾರ್ಯಕ್ರಮ ಮಾಡಿದರು. ಆರ್ ಎಸ್ ಎಸ್ ಸಂಘಟನೆಯವರು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರದವರು ಇದರಲ್ಲಿ ಪಾಲ್ಗೊಂಡು, ಶಾಂತಿ ಕದಡುವ ಕೆಲಸವನ್ನು ಮಾಡುತ್ತಾರೆಂಬ ಕಾರಣಕ್ಕೆ ಪೊಲೀಸರು ಚಾಮುಂಡಿ ಬೆಟ್ಟ ಚಲೋ ಗೆ ಅನುಮತಿ ನೀಡಲಿಲ್ಲ. ಮದ್ದೂರು ಬಂದ್ ಮಾಡಲು ಕರೆ ನೀಡಿದ್ದರು. ಗಲಭೆಯಲ್ಲಿ ನಿರತರಾಗಿದ್ದ ಯಾವುದೇ ಪಕ್ಷ, ಸಮುದಾಯವರೇ ಆಗಿದ್ದರೂ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಜೆಪಿಯವರು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದಾಗಿ ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಪ್ರತಿಕ್ರಿಯಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಕೇಂದ್ರದಲ್ಲಿ ರೈತ ಚಳವಳಿಯಲ್ಲಿ ಅನೇಕ ರೈತರು ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ಬಿಜೆಪಿಯವರು ಎಲ್ಲಿದ್ದರು, ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಯಾವುದೇ ಬಿಜೆಪಿಯವರು ಧ್ವನಿ ಎತ್ತಲಿಲ್ಲ ಏಕೆ ಎಂದು ಸಿಎಂ ಪ್ರಶ್ನಿಸಿದರಲ್ಲದೆ ಮಣಿಪುರದಲ್ಲಿ ಹಿಂಸಾಚಾರ ನಡೆದರೂ, ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಲೇ ಇಲ್ಲ ಎಂದು ದೂರಿದರು.

ಇವತ್ತು ಆಡಳಿತ ಪಕ್ಷದ ವಿಧಾನಪರಿಷತ್ತಿನ ಸದಸ್ಯರೊಂದಿಗೆ ಸಭೆ ನಡೆಸಲಾಗಿದೆ. .ಈ ಹಿಂದೆ ಜಿಲ್ಲಾ ಶಾಸಕರೊಂದಿಗೆ ಸಭೆ ನಡೆಸಿದಂತೆ, ನಾಳೆ ಬೆಂಗಳೂರು ನಗರದ ಶಾಸಕರೊಂದಿಗೆ ಸಭೆ ನಡೆಸಲಾಗುವುದು. ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆಯವ್ಯಯದಲ್ಲಿ 8000 ಕೋಟಿ ರೂ ಮೀಸಲಿರಿಸಲಾಗಿದೆ. ಶಾಸಕರಿಗೆ ನೀಡಿದಂತೆ ಎಂಎಲ್ ಸಿ ಗಳಿಗೂ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಮೀಸಲಿರಿಸಿರುವ 8000 ಕೋಟಿ ರೂ.ಗಳಲ್ಲಿ ಎಂಎಲ್ ಸಿ ಗಳಿಗೂ ಅನುದಾನ ನೀಡಲು ಪರಿಶೀಲಿಸುವ ಭರವಸೆ ನೀಡಿದ್ದೇನೆ ಎಂದು ಸಿದ್ದರಾನಯ್ಯ ತಿಳಿಸಿದರು.

ಸಮಾಜದಲ್ಲಿ ಶಾಂತಿ ಕದಡುವುದೇ ಬಿಜೆಪಿ ಉದ್ದೇಶ:ಸಿದ್ದರಾಮಯ್ಯ Read More

ನಮ್ಮ ಪೊಲೀಸ್ ಮೇಲೆ ನಂಬಿಕೆ ಇಲ್ಲವೆ:ಬಿಜೆಪಿಗೆ ಸಿಎಂ ಪ್ರಶ್ನೆ

ಮೈಸೂರು: ಧರ್ಮಸ್ಥಳ ಪ್ರಕರಣ ಕುರಿತು
ಎಸ್ಐಟಿ ತನಿಖೆ‌ ನಡೆಯುತ್ತಿದೆ ನಮ್ಮ ಪೊಲೀಸ್ ಮೇಲೆ ನಂಬಿಕೆ ಇಲ್ಲವೆ ಎಂದು ಮುಖ್ಯ ಮಂತ್ರಿ‌ ಸಿದ್ದರಾಮಯ್ಯ ಕಾರವಾಗಿ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಸಿಎಂ,ಬಿಜೆಪಿಯವರು ಧರ್ಮಯಾತ್ರೆ ಮಾಡಲಿ,ಅವರಿಗೆ
ನಮ್ಮ ಪೊಲೀಸ್ ಮೇಲೆ ನಂಬಿಕೆ ಇಲ್ವಾ ಎಂದು ಪ್ರಶ್ನಿಸಿದರು.

ಆರಂಭದಲ್ಲಿ ತನಿಖೆ ಮಾಡಿ ಎಂದು ಹೇಳಲೇ ಇಲ್ಲ,ಶವಗಳು ಸಿಗದಿದ್ದಾಗ ತನಿಖೆ ಮಾಡಿ ಎಂದು ಹೇಳಿದರು.ವೀರೇಂದ್ರ ಹೆಗೆಡೆ ಅವರೇ ತನಿಖೆಯನ್ನ ಸ್ವಾಗತ ಮಾಡಿದ್ದಾರೆ.

ಸತ್ಯ ಹೊರಬರಬೇಕು, ಎಲ್ಲವೂ ಜನರಿಗೆ ಗೊತ್ತಾಗಬೇಕೆಂದು ಹೆಗೆಡೆಯವರೇ ಎಸ್ಐಟಿ ತನಿಖೆಯನ್ನ ಸ್ವಾಗತ ಮಾಡಿದ್ದಾರೆ ಎಂದು ಸಿಎಂ ಹೇಳಿದರು.

ನಾವು ಯಾರೂ ಕುಯಡಾ ತನಿಖೆ ಬಗ್ಗೆ ಮಧ್ಯಪ್ರವೇಶ ಮಾಡುತ್ತಿಲ್ಲ ಸಂಪೂರ್ಣವಾಗಿ ಸ್ವತಂತ್ರವಾಗಿ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ವಿದೇಶಿ ಹಣ ಬಳಕೆ ಆಗುತ್ತಿದೆ ಎಂಬ ಆರೋಪವಿದೆಯಲ್ಲಾ ಎಂಬ ವರದಿಗಾರರ ಪ್ರಶ್ನೆಗೆ,ಬಿಜೆಪಿಗೆ ಹಣ ಬಂದಿದೆ.

ಇಷ್ಟೆಲ್ಲಾ ಮಾಡಬೇಕಾದರೆ ಬಿಜೆಪಿಗೆ ಹಣ ಎಲ್ಲಿಂದ ಬರಬೇಕು,ಯಾರು ಹಣ ಕೊಡುತ್ತಿದ್ದಾರೆ ಇವರಿಗೆ ಎಂದು ಸಿದ್ದರಾಮಯ್ಯ‌ ವಾಗ್ದಾಳಿ ನಡೆಸಿದರು ‌

ಎಲ್ಲಾ ವಿಚಾರಗಳನ್ನ ರಾಜಕೀಯವಾಗಿ ಬಳಸಿಕೊಳ್ಳಬಾರದು,ವಿಪಕ್ಷಗಳ ಆರೋಪದಲ್ಲಿ ಸತ್ಯ ಇಲ್ಲ ಎಂದು ಹೇಳಿದರು.

ಸೌಜನ್ಯ ಕೇಸ್ ಮರು ತನಿಖೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ,
ಸಿಬಿಐ ಯಾರ ಅಧೀನದಲ್ಲಿದೆ,
ಕೇಂದ್ರದವರೇ ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ.ಈಗ ಸುಪ್ರೀಂ ಕೋರ್ಟ್ ಗೆ ಹೋಗಿ ಅಂತ ಹೇಳುತ್ತಿರುವುದು ಯಾರು
ಸೌಜನ್ಯ ಕೇಸ್ ನಲ್ಲಿ ಯಾರ ಮೇಲೆ ಆರೋಪ ಬಂದಿದೆ,ಹಾಗಾದ್ರೆ ಬಿಜೆಪಿ ಯಾರ ಪರ?
ಒಂದು ಕಡೆ ವಿರೇಂದ್ರ ಹೆಗೆಡೆ ಪರ ಅನ್ನುತ್ತಾರೆ ಮತ್ತೊಂದು ಕಡೆ ಸೌಜನ್ಯ ಪರ ಅಂತಾರೆ
ಹಾಗಾದ್ರೆ ಯಾರ ಪರ ಇದ್ದಾರೆ ಬಿಜೆಪಿಗರು ಎಂದು ಸಿದ್ದರಾಮಯ್ಯ ಕಾರವಾಗಿ ಪ್ರಶ್ನಿಸಿದರು.

ಸೌಜನ್ಯ ಅಪಹರಣವನ್ನ ನೋಡಿದ್ದೇನೆ ಎಂದು ಎಸ್ಐಟಿಗೆ ಮಹಿಳೆ ದೂರು ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,
ಕೋರ್ಟ್ ನಲ್ಲಿ ಆ ಮಹಿಳೆ ಯಾಕೆ ಸಾಕ್ಷಿ ಹೇಳಲಿಲ್ಲ.ಸಿಬಿಐ ತನಿಖೆ ನಡೆದಾಗ ಯಾಕೆ ಹೇಳಿಲ್ಲ,ಸಾಕ್ಷಿಯನ್ನ ಬಚ್ಚಿಡುವುದು ಸಹ ಒಂದು ಅಫೆನ್ಸ್, ಸತ್ಯ ಗೊತ್ತಿರುವುದನ್ನ ಬಚ್ಚಿಡುವುದು ಸಹ ಅಫೆನ್ಸ್ ಎಂದು ತಿಳಿಸಿದರು.

ದಸರಾ ಉದ್ಘಾಟಕರ ಆಯ್ಕೆ ವಿರೋಧಿಸಿ‌ ಬಿಜೆಪಿಗರು ಚಾಮುಂಡಿ ಚಲೋ ಹಮ್ಮಿಕೊಂಡಿದ್ದಾರಲ್ಲಾ ಎಂಬ ಇನ್ನೊಂದು ಪ್ರಶ್ನೆಗೆ,ಮಿರ್ಜಾ ಇಸ್ಮಾಯಿಲ್ ಅವರನ್ನು ಮಹರಾಜರು ಅಂಬಾರಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದಾರೆ.
ಆಗ ಆರ್ ಎಸ್ ಎಸ್ ನವರು ಎಲ್ಲಿಗೆ ಹೋಗಿದ್ದರು ಪ್ರಶ್ನಿಸಿದರು‌

ಕನ್ನಡಾಂಬೆ ಕುಂಕುಮದ ಬಗ್ಗೆ ಬಾನು ಮುಷ್ತಾಕ್ ಮಾತನಾಡಿರುವ ಬಗ್ಗೆ ನನಗೆ ಗೊತ್ತಿಲ್ಲ,ಆಕೆ ಕನ್ನಡದ ಬರಹಗಾರ್ತಿ.
ಕನ್ನಡದ ಪ್ರೀತಿ ಅಭಿಮಾನ ಇಲ್ಲದಿದ್ದರೆ ಪುಸ್ತಕಗಳನ್ನ ಬರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕುಂಕುಮ ಹಾಕುವುದು ಅವರ ಧರ್ಮದಲ್ಲಿ ಇದ್ಯಾ,ಮತ್ತೊಂದು ಧರ್ಮದವರನ್ನ ಉದ್ಘಾಟನೆಗೆ ಕರೆದು ಕುಂಕುಮ ಹಾಕಿಕೊಳ್ಳಿ ಎಂದು ಹೇಳಲು ಸಾಧ್ಯನಾ,
ಫತ್ವಾ ಹೊರಡಿಸಿರುವುದು ಸುಳ್ಳು ಈ ಬಗ್ಗೆ ಮುಸ್ಮಿಂ ಧರ್ಮಗುರುಗಳು ಸ್ಪಷ್ಟಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಪೊಲೀಸ್ ಮೇಲೆ ನಂಬಿಕೆ ಇಲ್ಲವೆ:ಬಿಜೆಪಿಗೆ ಸಿಎಂ ಪ್ರಶ್ನೆ Read More

ದಸರಾ ಸಾಂಸ್ಕೃತಿಕ;ಧರ್ಮಾತೀತವಾದ ಹಬ್ಬ:ಧರ್ಮದ ಲೇಪನ ಸರಿಯಲ್ಲ-ಸಿಎಂ ಟಾಂಗ್

ಮೈಸೂರು: ದಸರಾ ಸಾಂಸ್ಕೃತಿಕ ಹಬ್ಬ, ಧರ್ಮಾತೀತವಾದ ಹಬ್ಬ.
ಇದು ಎಲ್ಲಾ ಜಾತಿ ಧರ್ಮಕ್ಕೆ ಸೇರಿದ್ದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಿಜೆಪಿ ಗೆ ಟಾಂಗ್ ನೀಡಿದರು.

ಮೈಸೂರು ಜಿಲ್ಲಾ‌ ಪ್ರವಾಸ ಕೈಗೊಂಡಿರುವ ಸಿಎಂ,ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕವಿ ನಿಸಾರ್ ಅಹಮದ್ ಕೂಡ ದಸರಾ ಉದ್ಘಾಟನೆ ಮಾಡಿದ್ದಾರೆ,
ಟಿಪ್ಪು ,ಹೈದಾರಲಿ ಕೂಡ ದಸರಾ ನಡೆಸಿದ್ದಾರೆ,ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ನಡೆಸಿದ್ದಾರೆ.
ಇದಕ್ಕೆ ಧರ್ಮದ ಲೇಪನ ಬಳಿಯುವುದು ಸರಿಯಲ್ಲಾ ಎಂದು ತಿರುಗೇಟು ನೀಡಿದರು.

ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ನೀಡಿರುವ ಹಳೇ ಹೇಳಿಕೆಗೂ ದಸರಾ ಉದ್ಘಾಟನೆ‌ ವಿಷಯಕ್ಕೂ ಏನು ಸಂಬಂಧ,
ಬೆಜೆಪಿಯವರು ಕುಂಟ ನೆಪ ಹುಡುಕುತ್ತಿದ್ದಾರೆ ಅಷ್ಟೇ.ಯಾವತ್ತು ಏನೋ ಹೇಳಿದ್ದಾರೆ ಎಂದು ಅದನ್ನ ಇಲ್ಲಿದೆ ಲಿಂಕ್ ಮಾಡುವುದು ಎಷ್ಟು ಸರಿ ಎಂದು ಸಿಎಂ ಪ್ರಶ್ನಿಸಿದರು.

ಬೆರಳಣಿಕೆ ಮಂದಿಗೆ ಮಾತ್ರ ಬೂಕರ್ ಪ್ರಶಸ್ತಿ ಬಂದಿದೆ,ನಾನೇ ಅವರ ಹೆಸರನ್ನ ಆಯ್ಕೆ ಮಾಡಿದ್ದೇನೆ,ಧರ್ಮಾಂದರು ಮಾತ್ರ ಬಾನು ಮುಷ್ತಾಕ್ ಹೆಸರನ್ನ ವಿರೋಧಿಸುತ್ತಾರೆ ಎಂದು ಅಸಮಾಧಾನದಿಂದ ಸಿದ್ದು ನುಡಿದರು.

ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ ಐ ಟಿ ತನಿಖೆ ನಡೆಯುತ್ತಿದೆ,ಸ್ವತಃ ‌ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಇದನ್ನು‌ ಸ್ವಾಗತಿಸಿದ್ದಾರೆ.ಬಿಜೆಪಿ ಯವರು ಕೂಡಾ ಎಸ್ಐಟಿ‌ ತನಿಖೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ,ತನಿಖೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ದಸರಾ ಸಾಂಸ್ಕೃತಿಕ;ಧರ್ಮಾತೀತವಾದ ಹಬ್ಬ:ಧರ್ಮದ ಲೇಪನ ಸರಿಯಲ್ಲ-ಸಿಎಂ ಟಾಂಗ್ Read More

ಲೇಖಕಿಗೆ ಅಪಮಾನ ಬಿಜೆಪಿಗರ ವಿರುದ್ಧ ಕ್ರಮ ಆಗಲಿ: ಸೀತಾರಾಮ್ ಗುಂಡಪ್ಪ

ಮೈಸೂರು: ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಸರ್ಕಾರದಿಂದ ಆಹ್ವಾನ ನೀಡಿರುವ ಕನ್ನಡದ ಹೆಸರಾಂತ ಲೇಖಕಿ ಹಾಗೂ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಭಾನು ಮುಷ್ತಾಕ್ ಅವರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ಅಪಮಾನ ‌ಆಗುವ ರೀತಿ ಹಾಗೂ ಸಮಾಜದಲ್ಲಿ ಅಶಾಂತಿ, ಶಾಂತಿಭಂಗ ಆಗಲು ಪ್ರಚೋದನೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.

ಭಾನು ಮುಷ್ತಾಕ್ ಅವರ ರಾಷ್ಟ್ರಪ್ರೇಮ ಹಾಗೂ ಕನ್ನಡ ಪ್ರೀತಿಯನ್ನೇ ಕೇವಲ ಧರ್ಮದ ಆಧಾರದಲ್ಲಿ ಪ್ರಶ್ನಿಸುತ್ತಿರುವ ಬಿಜೆಪಿಗರ ನಡೆ ಅವರ ಹೀನ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಸ್ತ ಆರೂವರೆ ಕೋಟಿ ಕನ್ನಡಿಗರೆಲ್ಲರು ಎಂದಿಗೂ ಸಹ ಭಾನು ಮುಷ್ತಾಕ್ ಅವರನ್ನು ಧರ್ಮದ ಆಧಾರದಲ್ಲಿ ನೋಡಿಲ್ಲ, ಮೈಸೂರಿನ ದಸರಾ ಹಬ್ಬದ ಉದ್ಘಾಟನೆಯನ್ನು ಭಾನು ಮುಷ್ತಾಕರಿಂದ ಮಾಡಿಸುತ್ತಿರುವುದು ಎಲ್ಲ ಕನ್ನಡಿಗರಿಗೂ ಹೆಮ್ಮೆಯ ವಿಷಯ ಹಾಗೂ ನಾವು ನೀಡುತ್ತಿರುವ ಗೌರವ ಎಂದು ತಿಳಿಸಿದ್ದಾರೆ.

ಬಾನು ಅವರು ತಮ್ಮ ಕನ್ನಡದ ಬರಹಗಳಿಂದ ಭಾಷೆಗೆ ಹಿರಿಮೆ ಮತ್ತು ಗರಿಮೆಯನ್ನು ತಂದು ಕೊಟ್ಟಿರುವಂತಹ ಶ್ರೇಯಸ್ಸು ಅವರಿಗಿದೆ. ಕೆಲ ಬಿಜೆಪಿಯ ಡೋಂಗಿ ನಾಯಕರ ಈ ರೀತಿಯ ಹೇಳಿಕೆಗಳು ಎಲ್ಲ ಕನ್ನಡಿಗರಿಗೂ ಮಾಡುತ್ತಿರುವ ಅಪಮಾನ. ಕೆಲಸ ಕಾರ್ಯವಿಲ್ಲದ ಕೋಮುವಾದಿ ನಾಯಕರುಗಳು ಕೂಡಲೇ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.

ಲೇಖಕಿಗೆ ಅಪಮಾನ ಬಿಜೆಪಿಗರ ವಿರುದ್ಧ ಕ್ರಮ ಆಗಲಿ: ಸೀತಾರಾಮ್ ಗುಂಡಪ್ಪ Read More

ಬಿ.ಎಲ್. ಸಂತೋಷ್ ವಿರುದ್ಧದ ಹೇಳಿಕೆ ಖಂಡನೀಯ: ಹೇಮಾ ನಂದೀಶ್

ಮೈಸೂರು: ಧರ್ಮಸ್ಥಳ ಕ್ಷೇತ್ರದ ಪರವಾಗಿ ನಿಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ’ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮನಂದೀಶ್ ಕಿಡಿ ಕಾರಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಪರವಾಗಿ ನಿಲ್ಲುವ ವ್ಯಕ್ತಿಗಳನ್ನು ವ್ಯವಸ್ಥಿತವಾಗಿ ತೇಜೋವಧೆ ಮಾಡುವ ಪಿತೂರಿಯ ಮುಂದುವರಿದ ಭಾಗವಾಗಿ ಸಂತೋಷ್ ಅವರ ವಿರುದ್ಧ ಹೇಳಿಕೆ ನೀಡಲಾಗಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂತಹ ಹೇಳಿಕೆಗಳ ಮೂಲಕ ಬಿ.ಎಲ್. ಸಂತೋಷ್ ಅವರ ಧರ್ಮಪರ ಹೋರಾಟ ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಮತ ಕಳ್ಳತನದ ಮೂಲಕ ಬಿಜೆಪಿ ಅಧಿಕಾರಕ್ಕೆ ಏರಿದೆ ಎಂದು ದೇಶಾದ್ಯಂತ ರಾಹುಲ್ ಗಾಂಧಿ ಪ್ರತಿಪಕ್ಷಗಳು ಕೇಂದ್ರ ಚುನಾವಣೆ ಆಯೋಗ ಹಾಗೂ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಕೇಂದ್ರ ಚುನಾವಣೆ ಆಯೋಗ ಸ್ಪಷ್ಟ ಉತ್ತರ ನೀಡಿದೆ ಎಂದು ಹೇಮಾ ನಂದೀಶ್ ತಿರುಗೇಟು ನೀಡಿದ್ದಾರೆ.

ಆರೋಪ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕೇಂದ್ರ ಚುನಾವಣೆ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.

ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕರಾಗಿ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಚುನಾವಣೆ ಆಯೋಗ ತಿಳಿಸಿದಂತೆ ರಾಹು ಲ್ ಗಾಂಧಿ ಅಫಿಡವಿಟ್‌ಗೆ ಸಹಿ ಮಾಡ ಬೇಕು ಅಥವಾ ದೇಶದ ಜನರ ಮುಂದೆ ತಪ್ಪು ಒಪ್ಪಿಕೊಂಡು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಹೇಮಾ ಒತ್ತಾಯಿಸಿದ್ದಾರೆ.

ಬಿ.ಎಲ್. ಸಂತೋಷ್ ವಿರುದ್ಧದ ಹೇಳಿಕೆ ಖಂಡನೀಯ: ಹೇಮಾ ನಂದೀಶ್ Read More

ರಾಷ್ಟ್ರೀಯ ಕೈಮಗ್ಗ ದಿನಾಚರಣೆ:ಮಗ್ಗದ ಪ್ರಾತ್ಯಕ್ಷಿಕೆ, ತರಬೇತಿ ಕಾರ್ಯಾಗಾರ

ಮೈಸೂರು: ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಮಹಿಳಾ ಮೋರ್ಚಾ ವತಿಯಿಂದ ಮಗ್ಗ ಯಂತ್ರದ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ರಾಮಕೃಷ್ಣನಗರದ ರಾಮಕೃಷ್ಣ ಸಾಂಸ್ಕೃತಿಕ ಹಾಗೂ ಕ್ರೀಡಾ ಪ್ರತಿಷ್ಠಾನದ ಆವರಣದಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದಲ್ಲಿ ಹತ್ತಿ ನೂಲನ್ನು ಮಗ್ಗದ ಯಂತ್ರದ ಮೂಲಕ ಸುಲಭವಾಗಿ ತಯಾರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಯಿತು.

ಕಾರ್ಯಗಾರವನ್ನು ಉದ್ಘಾಟಿಸಿದ ಉದ್ಯಮಿ ಹಾಗೂ ಪತಕರ್ತರಾದ ಕೆ. ಮಧುಸೂದನ್ ಅವರು ಮಾತನಾಡಿ ಮನೆಯಲ್ಲಿಯೇ ಸ್ವಾವಲಂಬನೆಯಿಂದ ಮಗ್ಗದ ಕೆಲಸ ಮಾಡಬಹುದು, ತಿಂಗಳಿಗೆ 10,000 ಸಂಪಾದಿಸಬಹುದು, ಬಟ್ಟೆಗಳನ್ನು ಉತ್ಪಾದಿಸಿ ಉದ್ಯಮಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಹೆಚ್ಚಿನ ಅಭಿವೃದ್ಧಿಯಾಗಬಹುದು ಎಂದು ತಿಳಿಸಿದರು.

ಚಾಮುಂಡೇಶ್ವರಿ ನಗರ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷರಾದ ಜಿ. ಲಕ್ಷ್ಮೀ ಮಾತನಾಡಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಮಹಿಳೆಯರ ಸ್ವಾವಲಂಬನೆಗಾಗಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಮಗ್ಗದ ಉದ್ಯಮದಿಂದ ಗ್ರಾಮೀಣ ಜನರು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

ರಾಮಕೃಷ್ಣ ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರತಿಷ್ಠಾನದ ಅಧ್ಯಕ್ಷ ಬಸವಲಿಂಗಪ್ಪ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ ರಘು, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ರಾಕೇಶ್ ಭಟ್, ಪಾಲಿಕೆ ಮಾಜಿ ಸದಸ್ಯೆ ಹೇಮಾ ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಈರೇಗೌಡ , ಉಪಾಧ್ಯಕ್ಷರಾದ ಹೆಚ್.ಜಿ ರಾಜಮಣಿ, ಶಶಿಕಾಂತ, ಹಿರಿಯಣ್ಣ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಮಂಜುಳಾ, ಪುಟಮ್ಮಣ್ಣಿ, ಉಪಾಧ್ಯಕ್ಷರಾದ ರಮಾಬಾಯಿ, ಹೇಮಲತಾ, ರಾಧಾ ಮುತಾಲಿಕ್, ಸುಮಿತ್ರ, ಕಾರ್ಯದರ್ಶಿಗಳಾದ ಪದ್ಮ, ಸುಮಾ, ಚಂದ್ರಿಕಾ ಅಜಯ್ ಹಿರೇಮಠ್, ವಾರ್ಡ್ ಅಧ್ಯಕ್ಷರಾದ ಬಸವಣ್ಣ, ರವಿ ಉತ್ತಪ್ಪ, ಯುವ ಮೋರ್ಚಾದ ಚಂದನ್ ಗೌಡ, ಸಾಗರ್ ಸಿಂಗ್, ಸಿ. ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಕೈಮಗ್ಗ ದಿನಾಚರಣೆ:ಮಗ್ಗದ ಪ್ರಾತ್ಯಕ್ಷಿಕೆ, ತರಬೇತಿ ಕಾರ್ಯಾಗಾರ Read More

ಸಿಂಗರಿ‌ಶೆಟ್ಟಿ ಕೊಳ ಕಲ್ಯಾಣಿ ಪುನರುಜ್ಜೀವನ ಮಾಡಲು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಮೈಸೂರು: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಧರ್ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸಿಂಗರಿ‌ಶೆಟ್ಟಿ ಕೊಳ ಕಲ್ಯಾಣಿ ಪುನರುಜ್ಜೀವನ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದರು.

ನಗರದ ರಾಜೇಂದ್ರ ನಗರ ಮುಖ್ಯ ರಸ್ತೆಯಲ್ಲಿರುವ ಶತಮಾನದ ಇತಿಹಾಸ ಇರುವ ಮಂಟಪ ಮತ್ತು ಕಲ್ಯಾಣಿ ಇರುವ ಬಗ್ಗೆ ಮಾಹಿತಿ ಇದ್ದು ದೇವಸ್ಥಾನ ಮತ್ತು ಕಲ್ಯಾಣಿಯನ್ನು ಸ್ವಚ್ಚತೆ ಮಾಡಬೇಕೆಂದು ಆಗ್ರಹಿಸಿದರು.

ಈ ಸಂಬಂಧ ನಗರಪಾಲಿಕೆ ಮತ್ತು ಮೂಡ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಈ ಸ್ಥಳದಲ್ಲಿ ಅನಧಿಕೃತವಾಗಿ ಶಡ್ ಮಾದರಿ ಅಂಗಡಿಗಳು ನಿರ್ಮಾಣ ಆಗಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಇದೇ‌ ವೇಳೆ ಸ್ಥಳ ವೀಕ್ಷಣೆ ಮಾಡಿ ಗಿರಿಧರ್ ಅವರು ಮಾತನಾಡಿ,
ಫೌಂಟನ್ ವೃತ್ತದಿಂದ ರಾಜೇಂದ್ರ ನಗರಕ್ಕೆ ಹೋಗುವ ರಸ್ತೆಯಲ್ಲಿ ಒಂದು ಪಶು ಆಸ್ಪತ್ರೆ ಇದ್ದು. ಅದರ ಎದುರು ಪುರಾತನವಾದ ಮಂಟಪವಿದೆ,ಅದರ ಜೊತೆಯಲ್ಲಿ ಒಂದು ಕಲ್ಯಾಣಿಯೂ ಇದ್ದು ಅದನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.

ಆ ಕಲ್ಯಾಣಿಯನ್ನ ಸಿಂಗರ ಶೆಟ್ಟಿ ಕೊಳ ಎಂದು ಕರೆಯಲ್ಪಡುತಿತ್ತು. ಇಲ್ಲಿಂದ ದೇವರ ಪೂಜೆಗೆಂದು ಶಿವಾಜಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು.

ಈಗ ಕೊಳವನ್ನು ಮುಚ್ಚಿ ಮಂಟಪದ ಸುತ್ತ ಮುತ್ತ ಮೀನು ಮತ್ತು ಮಾಂಸದ ಅಂಗಡಿಗಳನ್ನು ಅನಧಿಕೃತವಾಗಿ ಇಟ್ಟು ಅದನ್ನು ಅಪವಿತ್ರಗೊಳಿಸಲಾಗುತ್ತಿದೆ ಎಂದು ಗಿರಿಧರ್ ಗಂಭೀರ ಆರೋಪ ಮಾಡಿದರು.

ಆ ಮಂಟಪದ ಸುತ್ತ ಮುತ್ತ ಇರುವ ಅಂಗಡಿಗಳನ್ನು ಖಾಲಿ ಮಾಡಿಸಿ. ಹಿಂದುಗಳ ಪವಿತ್ರವಾಗಿರುವ ಮಂಟಪವನ್ನು ಸ್ವಚ್ಚಗೋಳಿಸಬೇಕು ಇಲ್ಲದಿದ್ದರೆ ಮುಂದಿನ ವಾರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಈಗಾಗಲೇ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ ಆದ್ದರಿಂದ ಸದರಿ ಸ್ಥಳವನ್ನು ಪರಿಶೀಲನೆ ಮಾಡಲು ಬಂದಿದ್ದೆವು ಆದರೆ ಸ್ಥಳೀಯ ಜನರು ವಿರೋಧ ಮಾಡಿದ್ದಾರೆ. ಇದು ನಮ್ಮ ಅಸ್ಮಿತೆ, ಈ ಜಾಗವನ್ನು ಪುನರುಜ್ಜೀವನ ಮಾಡಿ ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಎನ್ ಆರ್ ಮೊಹಲ್ಲಾ ಸಿಂಗ್ರಿ ಶೆಟ್ಟಿ ಕಲ್ಯಾಣಿ ಹಾಗೂ ಮಂಟಪ ಉಳಿವಿಗಾಗಿ ಪರಿಶೀಲನೆಗೆ ಹೋದಾಗ ಚಕಮಕಿ ಕೂಡಾ ನಡೆದಿದೆ.

ಪ್ರತಿಭಟನೆ ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್ ನೇತೃತ್ವದಲ್ಲಿ ನಡೆಯಿತು.

ನರಸಿಂಹರಾಜ ಕ್ಷೇತ್ರದ ಅಧ್ಯಕ್ಷರಾದ ಮಂಜುನಾಥ್ , ಮುಖಂಡರಾದ ಮುರುಳಿ , ಕಾರ್ತಿಕ್ ಮರಿಯಪ್ಪ, ಪುನೀತ್,ಲಕ್ಷ್ಮಣ್ ,ಮಣಿರತ್ನಂ, ಕೃಷ್ಣಮೂರ್ತಿ ರಾವತ್,ಜಗದೀಶ್ ,ಶಾಂತರಾಜ್,ತಂಬಿ,ಮಹದೇವು,ವೇಲು,ನಾಗರಾಜ್ ,ಜಗದೀಶ್ ,ನವೀನ್ ಶೆಟ್ಟಿ ಹಾಗೂ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಿಂಗರಿ‌ಶೆಟ್ಟಿ ಕೊಳ ಕಲ್ಯಾಣಿ ಪುನರುಜ್ಜೀವನ ಮಾಡಲು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ Read More