ಬೀರೂರಿನಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ದೇವರ ಪಂಡರಿ ಸಾಂಪ್ರದಾಯಿಕ ದಿಂಡಿ ಉತ್ಸವ
ಬೀರೂರು: ಬೀರೂರಿನಲ್ಲಿ ಭಾವಸಾರ ಕ್ಷತ್ರಿಯ ಮಂಡಳಿ ವತಿಯಿಂದ 83ನೇ ವರ್ಷದ ಶ್ರೀ ವಿಠ್ಠಲ ರುಕ್ಮಿಣಿ ದೇವರ ಪಂಡರಿ ಸಾಂಪ್ರದಾಯಿಕ ದಿಂಡಿ ಉತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಈ ಸೇವೆಯಲ್ಲಿ ಪೋತಿಸ್ಥಾಪನೆ, ನಾಮ ಜಪ, ಪ್ರವಚನ ಹಾಗೂ ಕೀರ್ತನೆಯಲ್ಲಿ ಪುರುಷ ಹಾಗೂ ಮಹಿಳಾ ಭಜನಾ ಮಂಡಳಿಯ ಸಹಕಾರದೊಂದಿಗೆ ಆರ್ ಹನುಮಂತ ರಾವ್ ಅವರಿಂದ ನಡೆದ ಕೀರ್ತನೆ ಅಮೋಘವಾಗಿತ್ತು.

ಪಂಚಪದಿ ಪಾವುಲ್ ಭಜನೆ ನಂತರ ಮೇಘ ಗದಗ್ ಅವರಿಂದ ಸಂತ ವಾಣಿ ಸಂಗೀತ ಭಜನೆ ಹಾಗೂ ಪಾಳಿ ಭಜನೆ ಕಾಕಡಾರತಿ ಭಜನೆ ಯೊಂದಿಗೆ ರಾಜಭೀದಿ ಉತ್ಸವ ಎಲ್ಲರ ಗಮನ ಸೆಳೆಯಿತು.
ಸಂತ ಪೂಜಾ ನಂತರ ಸ್ಥಳೀಯ ಮಹಿಳಾ ಭಜನಾ ಮಂಡಳಿಯವರು ಭಜನೆ ಮತ್ತು ಬಾ ರೋಡನ್ನು ಎರಡು ವರ್ಷಗಳಿಂದ ಕಲಿತು ಪ್ರದರ್ಶಿಸಿದರು.
ನಂತರ ಮಹಾಮಂಗಳಾರತಿ ಕಾಲ ಪ್ರಸಾದ ಮಹಾಪ್ರಸಾದ ವಿತರಿಸಲಾಯಿತು. ಈ ಸೇವೆಯಲ್ಲಿ ಸರ್ವರೂ ನಿಷ್ಕಾಮ ಸೇವೆ ಯಿಂದ ಭಾಗವಹಿಸಿದ್ದರು.
ಈ ಕಾರ್ಯಕ್ಕೆ ಶಿವಮೊಗ್ಗ, ಹರಿಹರ, ಹೊಳೆ ಹೊನ್ನೂರು, ಬೆಳಗುತ್ತಿ, ಬೆಂಗಳೂರು, ಕಡೂರು, ಹಳೇಬೀಡು, ಬಾರಂದೂರು, ದಾವಣಗೆರೆ, ಚಿಕ್ಕಮಗಳೂರು, ತರೀಕೆರೆ ಮತ್ತಿತರ ನಗರಗಳಿಂದ ಸಾವಿರಾರು ಭಕ್ತರು ಬಂದು ಸೇವೆ ಸಲ್ಲಿಸಿದರು.
ಬೀರೂರಿನಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ದೇವರ ಪಂಡರಿ ಸಾಂಪ್ರದಾಯಿಕ ದಿಂಡಿ ಉತ್ಸವ Read More