ಸೇವಾಶ್ರಮ ಮಕ್ಕಳ ಜೊತೆವಸಿಷ್ಠ ಸಿಂಹ ಜನ್ಮದಿನ ಆಚರಣೆ

ಮೈಸೂರು: ವಸಿಷ್ಠ ಸಿಂಹ ಸ್ನೇಹ ಬಳಗದ ವತಿಯಿಂದ ಮೈಸೂರಿನ ವಿಜಯನಗರದ
ಸವಿ ನೆನಪು ಫೌಂಡೇಶನ್ ಸೇವಾಶ್ರಮ ದಲ್ಲಿ ಕಂಚಿನ ಕಂಠದ ನಾಯಕ ನಟ ವಸಿಷ್ಟ ಸಿಂಹ ಅವರ ಜನ್ಮ ದಿನದ ವಿಶೇಷವಾಗಿ ಆಚರಿಸಲಾಯಿತು.

ಸೇವಾ ಶ್ರಮ ಮಕ್ಕಳ ಜೊತೆ ವಸಿಷ್ಠ ಸಿಂಹ ಸ್ನೇಹ ಬಳಗದ ಸದಸ್ಯರು ಕೇಕ್ ಕಟ್ ಮಾಡಿ ನಂತರ ಮಕ್ಕಳಿಗೆ ಉಪಹಾರ ನೀಡಿ ನೆಚ್ಚಿನ ನಟ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು

ಈ ವೇಳೆ ಮಾತನಾಡಿದ ವಸಿಷ್ಠ ಸಿಂಹ ಸ್ನೇಹ ಬಳಗದ ಅಧ್ಯಕ್ಷ ಬೈರತಿ ಲಿಂಗರಾಜು
ಮೈಸೂರು ಕಲಾವಿದರ ತವರೂರು, ಕಂಚಿನ ಕಂಠದ ನಾಯಕ ವಶಿಷ್ಟ ಸಿಂಹ ಮೈಸೂರಿನವರು ಎಂಬುದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.

ವಸಿಷ್ಟ ಸಿಂಹ ಅವರು ಮಹಾಮಾರಿ ಕರೋನ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕಲಾವಿದರ ಕುಟುಂಬಗಳು, ಆಟೋ ಚಾಲಕರು, ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ ಎಂದು ತಿಳಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸೇವಾ ಶ್ರಮ ಮಕ್ಕಳ ಜೊತೆ ಸ್ನೇಹಿತರಲ್ಲಿ ಆಚರಿಸಿದ್ದೇವೆ ಎಂದು ಹೇಳಿದರು

ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಆರ್ ವಿನೋದ್ ಮಾತನಾಡಿ
ವಶಿಷ್ಟ ಸಿಂಹ ಅವರ ಹುಟ್ಟು ಹಬ್ಬವನ್ನು
ಯಾವುದೇ ಆಡಂಬರವಿಲ್ಲದೆ ಇಂತಹ ಮಕ್ಕಳ ಜೊತೆ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೆಯ ಎಂದು ತಿಳಿಸಿದರು.

ಚಿತ್ರನಟರ ಅಭಿಮಾನಿಗಳು ದುಂದುವೆಚ್ಚ ಮಾಡಿ ಜನ್ಮ ದಿನಾಚರಣೆ ಆಚರಿಸುವ ಬದಲು ಸೇವಾ ಮನೋಭಾವ ಇಟ್ಟುಕೊಂಡು ಸೇವೆಯನ್ನೇ ಗುರಿ ಮಾಡಿಕೊಂಡು ಕೆಲಸ ಮಾಡಿದರೆ ನಿಜಕ್ಕೂ ಆ ನಟರಿಗೂ ಮತ್ತು ಅವರ ಅಭಿಮಾನಿಗಳಿಗೂ ಕೀರ್ತಿ ತಂದುಕೊಡುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮಾನವ ಹಕ್ಕುಗಳ ರಕ್ಷಣೆ ಹಾಗೂ ಬ್ರಷ್ಟಾಚಾರ ನಿರ್ಮೂಲ ಸೇವಾ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಆರ್ ಯಶೋಧ, ಚೆಲುವರಾಜ್ ನಾಯಕ್, ಮಹಾನ್ ಶ್ರೇಯಸ್, ಮೋಹನ್ ಕುಮಾರ್, ಮೋಹನ್, ರಕ್ಷು ಆಚಾರ್, ವಿಶಾಲ್, ಸಾಯಿ ಕೃಷ್ಣ, ಕೌಶಿಕ್ ಮತ್ತು ಸ್ನೇಹಿತರು, ಅಭಿಮಾನಿಗಳು ಈ ವೇಳೆ ಹಾಜರಿದ್ದರು.

ಸೇವಾಶ್ರಮ ಮಕ್ಕಳ ಜೊತೆವಸಿಷ್ಠ ಸಿಂಹ ಜನ್ಮದಿನ ಆಚರಣೆ Read More

ಸೆ. 21 ರಂದು ಡಾ. ವಿಷ್ಣುವರ್ಧನ್ ಚಿತ್ರಗಳ ಕರೋಕೆ ಗಾಯನ ಕಾರ್ಯಕ್ರಮ

ಮೈಸೂರು: ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ವತಿಯಿಂದ ಸಾಹಸಸಿಂಹ ವಿಷ್ಣುವರ್ಧನ್ 74 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕರೋಕೆ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಾಕ್ಟರ್ ವಿಷ್ಣುವರ್ಧನ್ ಅಭಿನಯಿಸಿರುವ‌ ಚಿತ್ರಗಳ ಗೀತೆಗಳ ಕರೋಕೆ ಗಾಯನ ಕಾರ್ಯಕ್ರಮವನ್ನು ಎ ಕಾಂತರಾಜು ರವರ ಸಾರಥ್ಯದಲ್ಲಿ ಮೈಸೂರು ಪುರ ಭವನದಲ್ಲಿ ಸೆಪ್ಟೆಂಬರ್ 21ರ ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ಸಂಸ್ಥಾಪಕ ಕಾಂತರಾಜು ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮೇಲುಕೋಟೆ ವೆಂಗಿ ಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ವಹಿಸುವರು.

ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ರೇಖಾ ಅರುಣ್, ಹೃದಯ ತಜ್ಞ ಡಾ. ಮಂಜುನಾಥ್, ಮನೋಶಾಸ್ತ್ರಜ್ಞೆ ಡಾ|| ರೇಖಾ ಮನಃಶಾಂತಿ, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸೆ. 21 ರಂದು ಡಾ. ವಿಷ್ಣುವರ್ಧನ್ ಚಿತ್ರಗಳ ಕರೋಕೆ ಗಾಯನ ಕಾರ್ಯಕ್ರಮ Read More

ಪ್ರಧಾನಿ ಹುಟ್ಟುಹಬ್ಬ: ಶ್ರೀ ಕೋದಂಡರಾಮ ದೇವಸ್ಥಾನ ಸ್ವಚ್ಚತೆ

ಮೈಸೂರು: ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನುಮದಿನದ ಸಂಭ್ರಮ.

ಅವರ 74 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮೈಸೂರಿನಲ್ಲಿ ಬಿಜೆಪಿ ಸದಸ್ಯರು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರ ನೇತೃತ್ವದಲ್ಲಿ ವಿವಿಧ ಸೇವಾ ಕಾರ್ಯ ಹಮ್ಮಿಕೊಳ್ಳಲಾಯಿತು.

ಸೇವಾ ಪಾಕ್ಷಿಕ ಅಡಿಯಲ್ಲಿ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಕೋದಂಡರಾಮ ದೇವಸ್ಥಾನವನ್ನು ಸ್ವಚ್ಚತಾ ಮಾಡುವ ಮೂಲಕ ಮೋದಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸ್ವತಃ ಶ್ರೀವತ್ಸ ಪೊರಕೆ ಹಿಡಿದು ಸ್ವಚ್ಚತಾ ಕಾರ್ಯ ಮಾಡಿ ಇತರರಿಗೆ ಮಾದರಿಯಾದರು.ಈ ವೇಳೆ ಮುಖಂಡರಾದ ಜೋಗಿ ಮಂಜು,ಮಹಿಳಾ ಸದಸ್ಯರು ಮತ್ತಿತರರು ಸಾತ್ ನೀಡಿದರು.

ಪ್ರಧಾನಿ ಹುಟ್ಟುಹಬ್ಬ: ಶ್ರೀ ಕೋದಂಡರಾಮ ದೇವಸ್ಥಾನ ಸ್ವಚ್ಚತೆ Read More

ತಾತಯ್ಯ,ರಾಧಾಕೃಷ್ಣನ್ ಜನ್ಮ ದಿನ ಆಚರಿಸಿದ ಅನಾಥಾಲಯದ ಹಳೆಯ ವಿದ್ಯಾರ್ಥಿಗಳು

ಮೈಸೂರು: ಪೂಜ್ಯ ತಾತಯ್ಯನವರ 180ನೇ ಜನ್ಮದಿನ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಅನಾಥಾಲಯದ ಹಳೆಯ ವಿದ್ಯಾರ್ಥಿಗಳ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಮುಡ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್,ಈ ಇಬ್ಬರು ಮಹನೀಯರು ಸಮಾಜ ಸುಧಾರಣೆ ಯಂತಹ ಸೇವೆಯನ್ನ ಮಾಡಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ ಎಂದು ಬಣ್ಣಿಸಿದರು.

ಅದರಲ್ಲೂ ರಾಜಕೀಯ, ಧಾರ್ಮಿಕ, ಶಿಕ್ಷಣ ಕ್ಷೇತ್ರ, ಪತ್ರಿಕಾರಂಗ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಾತಯ್ಯ ಅವರು ತಮ್ಮದೇ ಆದ ಚಾಪನ್ನು ಮೂಡಿಸಿರುವುದು ವಿಶೇಷ ಎಂದು ತಿಳಿಸಿದರು.

ಮರಿಮಲ್ಲಪ್ಪ, ಸದ್ವಿದ್ಯಾ, ಶಾರದಾ ವಿಲಾಸ, ಮಹಾರಾಣಿ ಕಾಲೇಜ್ ಹೀಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ತಾತಯ್ಯ ಅವರು ಪ್ರಾಣಿಗಳಗೋಸ್ಕರ ಪಿಂಜರಫೋಲನ್ನು ಸ್ಥಾಪನೆ ಮಾಡಿದರು ಎಂದು ಹೇಳಿದರು.

ರಾಜ ಗುರುಗಳಾಗಿ, ರಾಜ ನೀತಿಜ್ಞರಾಗಿ ಪ್ರಜಾಪ್ರತಿನಿಧಿ ಸಭೆಯಲ್ಲಿ ಸದಸ್ಯರಾಗಿ ನ್ಯಾಯವಿದಾಯಕ ಸಭೆಯಲ್ಲಿ ಹಾಗೂ ಪುರಸಭೆ ಸದಸ್ಯರಾಗಿ ಸಾರ್ವಜನಿಕರ ಕುಂದು ಕೊರತೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ರಾಜೀವ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರೊಫೆಸರ್ ಸುಂದರೇಶ್, ವಿಪ್ರ ಮುಖಂಡರಾದ ಕೆ ರಘುರಾಮ್ ವಾಜಪೇಯಿ, ಮಂಜುನಾಥ್ ಹೆಗಡೆ, ಶ್ರೀಧರ್, ರವೀಂದ್ರ, ಎಸ್ ರಂಗನಾಥ, ಪ್ರಶಾಂತ್ ಭರದ್ವಾಜ್, ವಿಕ್ರಮ ಅಯ್ಯಂಗಾರ್, ವೀಣಾ, ಲಕ್ಷ್ಮಿ, ಕುಸುಮಲತಾ ಮುಂತಾದವರು ಹಾಜರಿದ್ದರು.

ತಾತಯ್ಯ,ರಾಧಾಕೃಷ್ಣನ್ ಜನ್ಮ ದಿನ ಆಚರಿಸಿದ ಅನಾಥಾಲಯದ ಹಳೆಯ ವಿದ್ಯಾರ್ಥಿಗಳು Read More

ಕಿಚ್ಚ ಸುದೀಪ್ ಹುಟ್ಟುಹಬ್ಬ:ಹಣ್ಣು,ದಿನಸಿ ಸಾಮಗ್ರಿ ವಿತರಣೆ

ಮೈಸೂರು: ಖ್ಯಾತ ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬದ ಅಂಗವಾಗಿ ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಜೆ.ಎಸ್.ಎಸ್. ಸಂಸ್ಥೆಯ ವಿಕಲಚೇತನ ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ನಿಲಯದವರಿಗೆ ಹಣ್ಣು, ದಿನಸಿ ಸಾಮಗ್ರಿ ವಿತರಿಸಲಾಯಿತು.

ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು, ದಿನಸಿ ಸಾಮಗ್ರಿ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಾದಕ್ಷ ಪ್ರಕಾಶ್ ಪ್ರಿಯದರ್ಶನ್
ಸ್ಯಾಂಡಲ್‌ ವುಡ್ ಅಷ್ಟೇ ಅಲ್ಲದೇ ಬಾಲಿವುಡ್‌ ಸಿನಿಮಾಗಳಲ್ಲೂ ತಮ್ಮ ಅಮೋಘ ಅಭಿನಯದ ಮೂಲಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸುತ್ತಿರುವ ಕಿಚ್ಚ ಸುದೀಪ್ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಈ ವೇಳೆ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ,ಸುಬ್ರಮಣ್ಯ, ಛಾಯಾ, ಯಶವಂತ್ ಕುಮಾರ್, ವೀರಭದ್ರ ಸ್ವಾಮಿ, ಚಂದ್ರಶೇಖರ್ , ಮಹೇಶ್, ಮಹದೇವ್,ಎಸ್‌.ಪಿ. ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಿಚ್ಚ ಸುದೀಪ್ ಹುಟ್ಟುಹಬ್ಬ:ಹಣ್ಣು,ದಿನಸಿ ಸಾಮಗ್ರಿ ವಿತರಣೆ Read More