ಕೆಂಪೇಗೌಡರು ದಕ್ಷ,ದೂರದೃಷ್ಟಿಯಿದ್ದ ಆಡಳಿತಗಾರರು- ಸಿದ್ದರಾಮಯ್ಯ

ಬೆಂಗಳೂರು: ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ, ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಬೆಂಗಳೂರಿನ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸಿಎಂ ಮಾತನಾಡಿದರು.

ಕೆಂಪೇಗೌಡರ 516ನೇ ಜಯಂತಿಯನ್ನು ಸರ್ಕಾರ, ಕಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಆಚರಿಸಲಾಗುತ್ತಿದೆ. 2013-18 ರ ಅವಧಿಯಲ್ಲಿ ನಮ್ಮ ಸರ್ಕಾರ ನಿರ್ಮಲಾನಂದ ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ಜನ್ಮದಿನಾಂಕವನ್ನು ತಿಳಿದು, ಅಂದಿನಿಂದ ನಿರಂತರವಾಗಿ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರೆ ಅದಕ್ಕೆ ಅಡಿಪಾಯ ಹಾಕಿದ್ದು ಕೆಂಪೇಗೌಡರು ಎಂದು ತಿಳಿಸಿದರು.

ಕೆಂಪೇಗೌಡರನ್ನು ಸ್ಮರಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಬೆಂಗಳೂರಿನ ನಾಲ್ಕು ಭಾಗದಲ್ಲಿ ಗೋಪುರಗಳನ್ನು ಕಟ್ಟಿಸಿದ ಕೆಂಪೇಗೌಡರು ಅಂದೇ ಬೆಂಗಳೂರಿನ ಆಡಳಿತ ಹೇಗಿರಬೇಕೆಂದು ಅರಿತು ವೃತ್ತಿ ಆಧಾರಿತವಾಗಿ ನಗರತ್ ಪೇಟೆ, ಚಿಕ್ಕಪೇಟೆ, ಬಳೆಪೇಟೆ ಸೇರಿದಂತೆ ಅನೇಕ ಪೇಟೆಗಳನ್ನು ನಿರ್ಮಿಸಿದ್ದರು ಅವರ ಆಡಳಿತ ನಮಗೆಲ್ಲರಿಗೂ ಮಾದರಿ ಎಂದು ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಮಾಡುವ ಕನಸನ್ನು ನನಸು ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಸುಮನಹಳ್ಳಿಯ ಜಗಜೀವನ್ ರಾಮ್ ನಗರದಲ್ಲಿ ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಮಾನನಿಲ್ದಾಣದ ಬಳಿ ಇರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ ಎಂದು ತಿಳಿಸಿದರು.

ಹುಲಿಗಳ ಸಾವು: ತನಿಖಾ ವರದಿಯ ನಂತರ ಕ್ರಮ
ಚಾಮರಾಜನಗರದಲ್ಲಿ ಐದು ಹುಲಿಗಳು ಸಾವಿಗೀಡಾಗಿದ್ದು ಈ ಬಗ್ಗೆ ತನಿಖೆ ಕೈಗೊಳ್ಳಲು ಆದೇಶಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ‌ ವೇಳೆ ಸಿದ್ದರಾಮಯ್ಯ ತಿಳಿಸಿದರು.

.

ಕೆಂಪೇಗೌಡರು ದಕ್ಷ,ದೂರದೃಷ್ಟಿಯಿದ್ದ ಆಡಳಿತಗಾರರು- ಸಿದ್ದರಾಮಯ್ಯ Read More

ಗಾಯಕಿ ಮಂಗ್ಲಿ ಬರ್ತ್​​ಡೇ ಪಾರ್ಟಿಯಲ್ಲಿ ಡ್ರಗ್ಸ್ ಕಮಟು!

ಹೈದರಾಬಾದ್: ಬಹು ಭಾಷೆಗಳ ಚಿತ್ರಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಖ್ಯಾತ ಹಿನ್ನೆಲೆ ಮಂಗ್ಲಿಗೆ ಸಂಕಷ್ಟ ಎದುರಾಗಿದೆ.

ಅದೂ ಮಂಗ್ಲಿಯ ಬರ್ತ್​ಡೇ ಪಾರ್ಟಿಯಂದೇ ಸಂಕಷ್ಟ ಎದುರಾಗಿರುವುದು ದುರ್ದೈವವೇ ಸರಿ.

ಮಂಗ್ಲಿಯ‌ ಬರ್ತಡೆ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಪಾರ್ಟಿಯಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದೆ.

ಹೈದರಾಬಾದ್ ಪೊಲೀಸರು ಮಂಗ್ಲಿ ಮತ್ತು ಪಾರ್ಟಿಯಲ್ಲಿದ್ದ ಇತರೆ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಂಗ್ಲಿಯ ಹುಟ್ಟುಹಬ್ಬ‌ ನಿನ್ನೆ ತಡರಾತ್ರಿವರೆಗೂ ಸಾಗಿತ್ತು, ಪಾರ್ಟಿಯ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದ್ದು, ಪಾರ್ಟಿಯಲ್ಲಿ ಮಾದಕ ವಸ್ತುಗಳ ಸೇವನೆ ಪತ್ತೆಯಾಗಿದೆ.

ಹೈದರಾಬಾದ್​ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಗಾಯಕಿ ಮಂಗ್ಲಿಯ ಬರ್ತ್​ಡೇ ಪಾರ್ಟಿ ಬಲು ಜೋರಾಗಿ ನಡೆದಿತ್ತು. ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ರಕ್ತದ ಮಾದರಿಗಳನ್ನು ಪಡೆದು, ಪರೀಕ್ಷೆ ನಡೆಸಿದ್ದು, ಮಾದಕ ವಸ್ತು ಸೇವಿಸಿರುವುದು ಖಚಿತ ವಾಗಿರುವುದರಿಂದ ಪ್ರಕರಣ ದಾಖಲಿಸಿದ್ದಾರೆ.

ಹೈದರಾಬಾದ್ ಪೊಲೀಸರ ಮಾದಕ ವಸ್ತು ನಿಗ್ರಹ ದಳದ ಸದಸ್ಯರು ದಾಳಿ ನಡೆಸಿದ್ದು, ಈ ವೇಳೆ ಪಾರ್ಟಿಯಲ್ಲಿ ಹಾಜರಿದ್ದವರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು,ಆ ಪೈಕಿ ಒಂಬತ್ತು ಮಂದಿ ಮಾದಕ ವಸ್ತು ಸೇವಿಸಿರುವುದು ಖಚಿತವಾಗಿದೆ.ಅವರೆಲ್ಲ ಗಾಂಜಾ ಸೇವನೆ ಮಾಡಿದ್ದರು.

ಮಂಗ್ಲಿಯ ಪಾರ್ಟಿಯಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಕೆಲ ವಿದೇಶಿ ಮದ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗ್ಲಿ ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಪೊಲೀಸರಿಗೇ ಧಮ್ಕಿ ಹಾಕಿದ್ದಾರೆ.

ಗಾಯಕಿ ಮಂಗ್ಲಿ ಬರ್ತ್​​ಡೇ ಪಾರ್ಟಿಯಲ್ಲಿ ಡ್ರಗ್ಸ್ ಕಮಟು! Read More

ಶ್ರೀ ಗಣಪತಿ ಶ್ರೀಗಳ ಹುಟ್ಟು ಹಬ್ಬ:ಗೋ ಸೇವೆ

ಮೈಸೂರು: ಅರಿವು ಸಂಸ್ಥೆ ಹಾಗೂ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಭಕ್ತವೃಂದದ ವತಿಯಿಂದ ಸ್ವಾಮಿಗಳ 83ನೇ ಹುಟ್ಟು ಹಬ್ಬದ ಅಂಗವಾಗಿ ಗೋಪೂಜೆ ನೆರವೇರಿಸಲಾಯಿತು.

ಮೈಸೂರಿನ ನಂಜುಮಳಿಗೆ ಯಲ್ಲಿ ಗೋಪೂಜೆ ಸಲ್ಲಿಸಿ ನಂತರ ಗೋವುಗಳಿಗೆ ಮೇವು ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ನಮ್ಮ ಮೈಸೂರಿನ ಹೆಮ್ಮೆಯ ಧಾರ್ಮಿಕ ಆಸ್ತಿ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳರವರು ಎಂದು ಬಣ್ಣಿಸಿದರು.

ಇಂದು ಅವರ 83 ನೇ ಜನ್ಮದಿನವನ್ನು ಅವರ ಭಕ್ತರಾದ ನಾವುಗಳು ಗೋ ಸೇವೆ ಮೂಲಕ ಆಚರಿಸುತ್ತಿದ್ದೇವೆ,ಈ ಹಿಂದೆ ರಾಜ ಮಹಾರಾಜರುಗಳು ಚಾಮುಂಡಿ ಬೆಟ್ಟ, ಮೈಸೂರು ಸಂಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ಶ್ರದ್ಧ ಕೇಂದ್ರಗಳನ್ನು ತೆರೆದಿದ್ದರು, ಸ್ವಾತಂತ್ರ್ಯ ನಂತರ ಆಸ್ಥಾನವನ್ನು ತುಂಬಿದವರು ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳು ರವರು ಎಂದು ಹೇಳಿದರು.

ನಾಡಿನ ಜನತೆಗೆ ಧಾರ್ಮಿಕ ಹಾಗೂ ಧರ್ಮ ಜಾಗೃತಿ ಉಂಟು ಮಾಡುತ್ತಿರುವ ಪೂಜ್ಯರು ನೂರು ಕಾಲ ಹೀಗೆ ಮಾರ್ಗದರ್ಶನ ನೀಡುತ್ತಿರಲಿ ಎಂದು ಆಶಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್,ನಮ್ಮ ಧಾರ್ಮಿಕ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಕೊಂಡಾಡಿದರು.

ಗಣಪತಿ ಶ್ರೀಗಳು ಸಂಗೀತದ ಮೂಲಕ ಜನರ ಮನಃಕ್ಲೇಶ ಹಾಗೂ ಅನಾರೋಗ್ಯ ಗುಣಪಡಿಸುವ ವಿಶೇಷತೆಯನ್ನು ಅಳವಡಿಸಿ ಕೊಂಡಿದ್ದಾರೆ ಎಂದು ಬಣ್ಣಿಸಿದರು.

ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ,ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಶ್ಯಪ್, ಗೌರಿಶಂಕರ ನಗರ ಶಿವು,
ಮಲ್ಲೇಶ್, ಚಕ್ರಪಾಣಿ,ಜತ್ತಿಪ್ರಸಾದ್, ಚಂದ್ರು, ಮಹದೇವಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ಶ್ರೀ ಗಣಪತಿ ಶ್ರೀಗಳ ಹುಟ್ಟು ಹಬ್ಬ:ಗೋ ಸೇವೆ Read More

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗಿಡಗಳನ್ನು ನೆಟ್ಟು ಯದುವೀರ್ ಹುಟ್ಟುಹಬ್ಬ ಆಚರಣೆ

ಮೈಸೂರು: ಸಂಸದ ಯದುವೀರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದಿಂದ ರಾಮಕೃಷ್ಣ ನಗರದ ಹೆಚ್ ಬ್ಲ್ಯಾಕಿನ ಅರೋಗ್ಯ ನಗರದ ಉದ್ಯಾನವನದಲ್ಲಿ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಯದುವೀರ್ ಒಡೆಯರ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿ ಸಂಭ್ರಮಿಸಲಾಯಿತು.

ಈ ವೇಳೆ ನಗರ ಪ್ರಧಾನ ಕಾರ್ಯದರ್ಶಿ ಬಿ. ಎಂ ರಘು, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್, ಉಪಾಧ್ಯಕ್ಷರಾದ ಬಿ. ಸಿ. ಶಶಿಕಾಂತ್, ಶಿವಕುಮಾರ್, ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್, ಸೋಮಣ್ಣ, ಮಹಿಳಾ ಮೋರ್ಚಾ ನಗರ ಕಾರ್ಯದರ್ಶಿ ವಿಜಯ ಮಂಜುನಾಥ್,
ಎಸ್ ಟಿ ಮೋರ್ಚಾ ನಗರ ಉಪಾಧ್ಯಕ್ಷರಾದ ತ್ಯಾಗರಾಜ್, ಮಂಡಲದ ರೈತ ಮೋರ್ಚಾ ಅಧ್ಯಕ್ಷರಾದ ಚಂದ್ರಶೇಖರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ರಾಘವೇಂದ್ರ, ಯುವ ಮೋರ್ಚಾ ಉಪಾಧ್ಯಕ್ಷರಾದ ರಾಘವೇಂದ್ರ, ಸಂಜಯ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುಟ್ಟಮ್ಮಣ್ಣಿ, ಮಂಜುಳಾ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ರಂಗೇಶ್ ಹಾಗೂ ಸ್ಥಳೀಯ ನಾಗರೀಕರು ಹಾಜರಿದ್ದು ಗಿಡಗಳನ್ನು ನೆಟ್ಟು ನೀರು ಹಾಕಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗಿಡಗಳನ್ನು ನೆಟ್ಟು ಯದುವೀರ್ ಹುಟ್ಟುಹಬ್ಬ ಆಚರಣೆ Read More

ಬಿ ಎಸ್ ವೈ ಜನ್ಮದಿನ:ವಿವಿಧ ಸವಲತ್ತುಗಳ ವಿತರಣೆ

ಮೈಸೂರು: ವಿವಿಧ ಸವಲತ್ತುಗಳನ್ನು ವಿತರಣೆ ಮಾಡುವ ಮೂಲಕ
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಮೈಸೂರಿನ ಚಾಮುಂಡಿಪುರಂನ ಆರಾಧ್ಯ ಮಹಾಸಭಾದಲ್ಲಿ ವಾರ್ಡ್ ನಂಬರ್ 55ರ ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್ ನೇತೃತ್ವದಲ್ಲಿ ಬಿಜೆಪಿ ನೇತಾರರು ಮಹಿಳೆಯರಿಗೆ ಉಚಿತವಾಗಿ ಹೋಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ವಿಶೇಷ ಚೇತನ ಮಕ್ಕಳಿಗೆ ಔಷಧಿಗಳನ್ನು ನೀಡುವ ಮೂಲಕ ಬಿಎಸ್ ವೈ ಜನ್ಮ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕೆ ಆರ್ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಅವರು
ಮಾಜಿ ಮುಖ್ಯಮಂತ್ರಿಗಳು ಭಾರತೀಯ ಜನತಾ ಪಾರ್ಟಿಯನ್ನು ಪ್ರಾರಂಭದಿಂದಲೂ ಸಂಘಟಿಸಿ ರೈತರ ಪರವಾದ ಹೋರಾಟಗಳನ್ನು ಮಾಡಿ ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಲು ಮೂಲ ಕಾರಣಕರ್ತರಾದವರು ಎಂದು ತಿಳಿಸಿದರು.

ಬಿ ಎಸ್ ವೈ ಅವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಭಾಗ್ಯಲಕ್ಷ್ಮಿ ಯೋಜನೆ, ರೈತರಿಗೆ ವಿದ್ಯುತ್ ಉಚಿತವಾಗಿ ನೀಡಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ ರಾಜ ಅರಸ್, ನಗರಪಾಲಿಕೆ ಮಾಜಿ ಸದಸ್ಯರಾದ ಮಾವಿ ರಾಮಪ್ರಸಾದ, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್, ಉಮಾಶಂಕರ್, ವಿದ್ಯಾ ಅರಸ್, ಪುರುಷೋತ್ತಮ್, ಮಂಜುನಾಥ್, ಸೋಮೇಶ್, ಮಂಜುಳಾ, ವಿಕ್ರಮ ಅಯ್ಯಂಗಾರ್, ಅರವಿಂದ್ ಸೇರಿದಂತೆ 500ಕ್ಕೂ ಹೆಚ್ಚು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

ಬಿ ಎಸ್ ವೈ ಜನ್ಮದಿನ:ವಿವಿಧ ಸವಲತ್ತುಗಳ ವಿತರಣೆ Read More

ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಬಳಗದಿಂದ ‌ಹೆಚ್ ಡಿ ಕೆ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ

ಮೈಸೂರು: ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಿಸಲಾಯಿತು.

ಮೈಸೂರಿನ ಶ್ರೀ ಬಸವೇಶ್ವರ ನವ ಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ಹಣ್ಣುಗಳನ್ನು ಹಂಚಿ ಉಪಹಾರದ ವ್ಯವಸ್ಥೆ ಮಾಡಿ ಅರ್ಥಪೂರ್ಣವಾಗಿ ಹೆಚ್.ಡಿ ಕುಮಾರಸ್ವಾಮಿಯವರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

ಬಳಗದ ಅಧ್ಯಕ್ಷ ಪ್ರದೀಪ್ ಕೃಷ್ಣೇಗೌಡ, ವರುಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಬಾಲಕೃಷ್ಣ ಎಂ, ಮಹೇಶ್, ಸಿದ್ದರಾಮನಹುಂಡಿ ಕುಮಾರ್, ಬೀಡನಹಳ್ಳಿ ಚಂದ್ರಶೇಖರ್,ನಾಗರಾಜು ಮತ್ತಿತರರು ಹಾಜರಿದ್ದರು.

ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಬಳಗದಿಂದ ‌ಹೆಚ್ ಡಿ ಕೆ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ Read More

ಎಚ್. ಡಿ. ಕುಮಾರಸ್ವಾಮಿ ಹುಟ್ಟುಹಬ್ಬ: ಅರ್ಥಪೂರ್ಣ ಆಚರಣೆ

ಮೈಸೂರು: ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು
ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಅರ್ಥಪೂರ್ಣವಾಗಿ ‌ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ನಗರದ ಶ್ರೀರಾಂಪುರದಲ್ಲಿರುವ ಮರ್ಸಿ ಕಾನ್ವೆಂಟ್ ಶ್ರವಣದೋಷವುಳ್ಳ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು, ಹಂಪಲು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರ ಜನುಮದಿನ‌ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಮೈಸೂರು ನಗರ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಎಚ್ ಡಿ ಕುಮಾರಸ್ವಾಮಿಯವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು
ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುವಂತೆ ಮಾಡಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಕೆ ಎಮ್ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಮೈಸೂರು ನಗರ ಜೆ.ಡಿ.ಎಸ್. ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಪಿ.ಎಸ್. ರಾಜಶೇಖರ ಮೂರ್ತಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್ ,ವೀರಭದ್ರ ಸ್ವಾಮಿ, ಸುಬ್ರಮಣಿ,ಮಹದೇವ್,ಯಶ್ವಂತ್ ಕುಮಾರ್, ಸಿದ್ದಲಿಂಗ ಸ್ವಾಮಿ,ಶ್ರೀಧರ್, ಮಹೇಶ್, ಎಸ್ ಪಿ ಅಕ್ಷಯಪ್ರಿಯದರ್ಶನ, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ಎಚ್. ಡಿ. ಕುಮಾರಸ್ವಾಮಿ ಹುಟ್ಟುಹಬ್ಬ: ಅರ್ಥಪೂರ್ಣ ಆಚರಣೆ Read More

ಅರ್ಥಪೂರ್ಣ ಪುಟ್ಟಣ್ಣ ಕಣಗಾಲ್ ನೆನಪಿನಂಗಳ ಕಾರ್ಯಕ್ರಮ

ಮೈಸೂರು: ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ರಾಷ್ಟ್ರೀಯ ಪ್ರಶಸ್ತಿಗಳ ವಿಜೇತ ಪುಟ್ಟಣ್ಣ ಕಣಗಾಲ್ ಅವರ 91ನೇ ಜನ್ಮದಿನೋತ್ಸವದ ಅಂಗವಾಗಿ ಪರಿವರ್ತನಂ ಟ್ರಸ್ಟ್ ಹಮ್ಮಿಕೊಂಡಿದ್ದ ಪುಟ್ಟಣ್ಣ ಕಣಗಾಲ್ ನೆನಪಿನಂಗಳ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರು ಪುಟ್ಟಣ್ಣ ಕಣಗಾಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು,

ಈ‌ ವೇಳೆ ಮಡ್ಡಿಕೆರೆ ಗೋಪಾಲ್ ಅವರು ಮಾತನಾಡಿ, ಪುಟ್ಟಣ್ಣ ಕಣಗಾಲರ ಚಿತ್ರಗಳು ಕುಟುಂಬ ಪ್ರಧಾನವಾದವು, ಸಮಾಜಿಕ ಸಂದೇಶದ ಜೊತೆಯಲ್ಲೆ ಅವರ ನಿರ್ದೇಶನದಲ್ಲಿ ಮಹಿಳಾ ಪ್ರಧಾನಚಿತ್ರಗಳು, ಮೈಸೂರು ದಸರಾ, ಕೊಡಗಿನ ಕಾವೇರಿ, ಕನ್ಯಾಕುಮಾರಿ, ಮಾನಸ ಸರೋವರ, ಚಿತ್ರದುರ್ಗದ ಕಲ್ಲಿನ ಕೋಟೆ, ಸೇರಿದಂತೆ ಹಲಾವರು ಇತಿಹಾಸ ಬಿಂಬಿಸುವ ಸ್ಥಳಗಳನ್ನ ಜನರಿಗೆ ಪ್ರಚಾರಪಡಿಸುತ್ತಿದ್ದರು ಎಂದು ಹೇಳಿದರು.

ಸಮಾಜಸೇವಕ ಕೆ. ರಘುರಂ ವಾಜಪೇಯಿ ಅವರು ಮಾತನಾಡಿ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಬಿ.ಆರ್ ಪಂತಲು ಅವರೊಂದಿಗೆ ಚಿತ್ರನಿರ್ದೇಶನದಲ್ಲಿ ಕೆಲಸ ಮಾಡಿದ ಕಣಗಾಲ್ ಗ್ರಾಮದ ಎಸ್.ಆರ್ ಪುಟ್ಟಣ್ಣ ಕಣಗಾಲ್ ಕಾದಂಬರಿ ಆಧಾರಿತ ಚಿತ್ರವನ್ನು ಹೆಚ್ಚಾಗಿ ನಿರ್ದೇಶಿಸಿದರು ಎಂದು ತಿಳಿಸಿದರು.

ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಕಲ್ಪನಾ, ಆರತಿ, ವಜ್ರಮುನಿ, ಶ್ರೀನಾಥ್ ಸೇರಿದಂತೆ ಹೊಸಮುಖದ ಕಲಾವಿದರನ್ನ ಮುಖ್ಯವಾಹಿನಿಗೆ ಪುಟ್ಟಣ್ಣ ತಂದರು. ನಾಗರಹಾವು ಚಿತ್ರದ ಸಮಾಜದಲ್ಲಿ ಸಂಸ್ಕಾರ ತೋರಿಸುವ ಗುರು ಶಿಷ್ಯರ ಪಾತ್ರ ಇಂದಿಗೂ ಜನಮನದಲ್ಲಿದೆ,ಪುಟ್ಟಣ್ಣ ಅವರ ಕ್ರಿಯಾಶೀಲತೆಯಿಂದ ಚಿತ್ರ ನಿರ್ದೇಶಕರಿಗೆ ಮನ್ನಣೆ ಲಭಿಸಿತು ಎಂದು ತಿಳಿಸಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಅವರು ಮಾತನಾಡಿ ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಕನ್ನಡಚಿತ್ರರಂಗ ಅತ್ಯುತ್ತಮ ಚಿತ್ರ ನಿರ್ದೇಶಕ ಎಂದು ಪ್ರತಿವರ್ಷ ಪ್ರಶಸ್ತಿ ನೀಡುತ್ತಾರೆ, ಅದರ ಜೊತೆಯಲ್ಲೆ ಚಿತ್ರನಿರ್ದೇಶಕರ ಕಲಿಕಾ ಸಂಶೋಧನಾ ಘಟಕವನ್ನ ನಿರ್ಮಿಸಿದರೆ ಸಾಕಷ್ಟು ಯುವಕಲಾವಿದರಿಗೆ ಸ್ಪೂರ್ತಿ ದೊರೆಯುತ್ತದೆ ಎಂದು ಅಭಿಪ್ರಾಯ ಪಟ್ಟರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ, ಜಿ ರಾಘವೇಂದ್ರ, ನಿರೂಪಕ ಅಜಯ್ ಶಾಸ್ತ್ರಿ, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್ ,ಆಲನಹಳ್ಳಿ
ಎಂ ಎನ್ ಚೇತನ್ ಗೌಡ,
ಮತ್ತಿತರರು ಪಾಲ್ಗೊಂಡಿದ್ದರು.

ಅರ್ಥಪೂರ್ಣ ಪುಟ್ಟಣ್ಣ ಕಣಗಾಲ್ ನೆನಪಿನಂಗಳ ಕಾರ್ಯಕ್ರಮ Read More

ವಿಶ್ವವೇ ಇಂಡಿಯಾ ಗುರುತಿಸುವಂತೆ ಆಳಿದ ಇಂದಿರಾ ಗಾಂಧಿ-ನಜರ್ಬಾದ್ ನಟರಾಜ್

ಮೈಸೂರು: ಮಾಜಿ ಪ್ರಧಾನಿ ದಿವಂಗತ
ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಪ್ರಯುಕ್ತ ಇಂದಿರಾ ಕ್ಯಾಂಟೀನ್ ನಲ್ಲಿ ಮೈಸೂರು ಪಾಕ್ ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ‌ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಅವರು,
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ವಿಶ್ವದಲ್ಲಿ ಇಂಡಿಯಾವನ್ನು ಗುರುತಿಸುವಂತೆ ಆಡಳಿತ ನಡೆಸಿದವರು ಎಂದು ತಿಳಿಸಿದರು.

ಹೊಯ್ಸಳ ಟ್ರಸ್ಟ್ ವತಿಯಿಂದ ಗನ್ ಹೌಸ್ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸಿ ಅವರು ಮಾತನಾಡಿದರು.

1965ರ ಭಾರತ-ಪಾಕಿಸ್ತಾನ ಯುದ್ಧ ನಡೆಯುತ್ತಿದ್ದಾಗ, ಇಂದಿರಾ
ಶ್ರೀನಗರದ ಗಡಿ ಪ್ರದೇಶದಲ್ಲಿ ವಿಹಾರ ನಡೆಸಿದ್ದರು, ಪಾಕಿಸ್ತಾನಿ
ದಂಗೆಕೋರರು ನಗರದ ಹತ್ತಿರ ನುಸುಳಿ ಬಂದಿದ್ದಾರೆ ಎಂದು
ಸೇನೆ ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೆ ಅಲ್ಲೇ ಓಡಾಡಿದ್ದರು ಎಂದು ಹೇಳಿದರು.

ಜಮ್ಮು ಅಥವಾ ದೆಹಲಿಗೆ ವಾಸ್ತವ್ಯ ಸ್ಥಳಾಂತರಿಸಲು ನಿರಾಕರಿಸಿ ಪಾಕಿಸ್ತಾನದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ದಿಟ್ಟ ಮಹಿಳೆ ಇಂದಿರಾ ಬಡವರ ಪರ ಇದ್ದರು ಎಂಬುದಕ್ಕೆ ಅವರು ರೂಪಿಸಿದ ಅನೇಕ ಕಾರ್ಯಕ್ರಮಗಳೇ ಸಾಕ್ಷಿ ಎಂದು ತಿಳಿಸಿದರು.

ಈ ದೇಶದ ಪ್ರತಿಯೊಬ್ಬರಿಗೂ ಅನ್ನ ಆಶ್ರಯ ಬಟ್ಟೆ ದೊರೆಯಲಿ ಎಂದು ಕಾರ್ಯಕ್ರಮಗಳನ್ನು ರೂಪಿಸಿದ್ದರಿಂದ ಇಂದಿಗೂ ಆ ಯೋಜನೆಗಳು ಬಡವರಿಗೆ ಅನುಕೂಲವಾಗಿದೆ, ಇಂದಿರಾಗಾಂಧಿ ಆಡಳಿತ ಸುವರ್ಣ ಯುಗ ಎಂದು ನಜರ್ಬಾದ್ ನಟರಾಜ್ ಬಣ್ಣಿಸಿದರು.

ಈ ಸಂದರ್ಭದಲ್ಲಿ ಹೊಯ್ಸಳ ಟ್ರಸ್ಟ್ ಅಧ್ಯಕ್ಷ ರಾಜೇಶ ಪಳನಿ, ಎಸ್ ಎನ್ ರಾಜೇಶ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು, ಎಸ್ ಎನ್ ರಾಜೇಶ್, ಲೋಕೇಶ್,ಆಲನಹಳ್ಳಿ
ಎಂ ಎನ್ ಚೇತನ್ ಗೌಡ, ಸುನೀಲ್, ಕಡಕೋಳ ಶಿವು ಮತ್ತಿತರರು ಹಾಜರಿದ್ದರು.

ವಿಶ್ವವೇ ಇಂಡಿಯಾ ಗುರುತಿಸುವಂತೆ ಆಳಿದ ಇಂದಿರಾ ಗಾಂಧಿ-ನಜರ್ಬಾದ್ ನಟರಾಜ್ Read More

ಶ್ರೀವತ್ಸ ಜನುಮ ದಿನ:ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೈಸೂರು: ಕೆ. ಆರ್. ಕ್ಷೇತ್ರದ. ಶಾಸಕರಾದ ಟಿ ಎಸ್ ಶ್ರೀವತ್ಸ ಅವರಿಗೆ ಜನುಮ ದಿನದ ಸಂಭ್ರಮ.

ಅವರ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಬೆಳಿಗ್ಗೆ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿಲಾಯಿತು.

ಶಾಸಕರಿಗೆ ಆರೋಗ್ಯ, ಆಯಸ್ಸು ಕೊಟ್ಟು ಇನ್ನೂ ಹೆಚ್ಚಾಗಿ ಜನಸೇವೆ ಮಾಡಲು ಶಕ್ತಿ ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದರು.ಇದೇ ವೇಳೆ ಅನ್ನ ಪ್ರಸಾದ ಕೂಡಾ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಕೆ.ಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲ್ ರಾಜೇ ಆರಸ್, ಮಾಜಿ ಮೇಯರ್ ಶಿವಕುಮಾರ್. ರೂಪ, ಸೌಮ್ಯಾ, ಉಮೇಶ್, ಪ್ರದೀಪ್ ಕುಮಾರ್, ಪ್ರಸಾದ್, ಪಚ್ಚು,ಗಿರಿ,ವಿಶ್ವ,ಜೋಗಿಮಂಜು, ಬಿಲ್ಲಯ್ಯ,ಗೋಕುಲ್,ರಾಜೇಶ,ಹರಿಶ್, ಮನೋಜ್,ವಿನಯ್,ಕಿಶೋರ್,ಕೀರ್ತಿಸಂದೀಪ,ಬಾಲಕೃಷ್ಣ,ಚಂದ್ರು,ಜಗದೀಶ್,ಮದು, ಮಹಿಳಾ ಕಾರ್ಯಕರ್ತರಾದ ಹೇಮಾ, ಕಾವೇರಿ,ನಂದಾ ಸಿಂಗ್,ರೇಖಾ, ಅನ್ನಪೂರ್ಣ, ಲತಾ, ನಾಗಶ್ರೀ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಶ್ರೀವತ್ಸ ಜನುಮ ದಿನ:ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ Read More