ವಿಶ್ವವೇ ಭಾರತ ಗುರುತಿಸುವಂತೆ ಆಳಿದ ಇಂದಿರಾ-ನಜರ್ಬಾದ್ ನಟರಾಜ್

ಮೈಸೂರು: ಮಾಜಿ ಪ್ರಧಾನಿ ಇಂದಿರಾಗಾಂಧಿ ಯವರು ವಿಶ್ವದಲ್ಲಿ ಇಂಡಿಯಾವನ್ನು ಗುರುತಿಸುವಂತೆ ಆಡಳಿತ ನಡೆಸಿದವರು ಎಂದು ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ ತಿಳಿಸಿದರು.

ನಜರ್ಬಾದ್ ನಟರಾಜ್ ನೇತೃತ್ವದಲ್ಲಿ ಗನ್ ಹೌಸ್ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಮೈಸೂರು ಪಾಕ್ ಊಟ ವಿತರಿಸಿ ಅವರು ಮಾತನಾಡಿದರು.

1965ರ ಭಾರತ-ಪಾಕಿಸ್ತಾನ ಯುದ್ಧ ನಡೆಯುತ್ತಿದ್ದಾಗ, ಇಂದಿರಾ ಅವರು,
ಶ್ರೀನಗರದ ಗಡಿ ಪ್ರದೇಶದಲ್ಲಿ ವಿಹಾರ ನಡೆಸಿದ್ದರು. ಪಾಕಿಸ್ತಾನಿ
ದಂಗೆಕೋರರು ನಗರದ ಹತ್ತಿರಕ್ಕೆ ನುಸುಳಿ ಬಂದಿದ್ದಾರೆ ಎಂದು
ಸೇನೆಯು ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದ ಅವರು, ಜಮ್ಮು ಅಥವಾ ದೆಹಲಿಗೆ ವಾಸ್ತವ್ಯ ಸ್ಥಳಾಂತರಿಸಲು ನಿರಾಕರಿಸಿ ಪಾಕಿಸ್ತಾನದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ದಿಟ್ಟ ಮಹಿಳೆ ಎಂದು ಬಣ್ಣಿಸಿದರು.

ಇಂದಿರಾ ಬಡವರ ಪರ ಇದ್ದರು ಎಂಬುದಕ್ಕೆ ಅವರು ರೂಪಿಸಿದ ಅನೇಕ ಕಾರ್ಯಕ್ರಮಗಳೇ ಸಾಕ್ಷಿ ಎಂದು ತಿಳಿಸಿದರು.

ಈ ದೇಶದ ಪ್ರತಿಯೊಬ್ಬರಿಗೂ ಅನ್ನ ಆಶ್ರಯ ಬಟ್ಟೆ ದೊರೆಯಲಿ ಎಂದು ಕಾರ್ಯಕ್ರಮಗಳನ್ನು ರೂಪಿಸಿದ್ದರಿಂದ ಇಂದಿಗೂ ಆ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ, ಇಂದಿರಾಗಾಂಧಿ ಯವರ ಆಡಳಿತ ಸುವರ್ಣ ಯುಗ ಎಂದು ನಜರ್ಬಾದ್ ನಟರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಬ್ರಿಗೇಡ್ ರಾಜ್ಯಾಧ್ಯಕ್ಷರಾದ ಉದಯ್, ಲೋಕೇಶ್, ಕೃಷ್ಣಪ್ಪ (ಗಂಟಯ್ಯ ), ಡೈರಿ ವೆಂಕಟೇಶ್, ಎಸ್ ಎನ್ ರಾಜೇಶ್, ದಿನೇಶ್, ರಮೇಶ್, ರವಿಚಂದ್ರ, ರಾಕೇಶ್ ಮತ್ತಿತರರು ಹಾಜರಿದ್ದರು.

ವಿಶ್ವವೇ ಭಾರತ ಗುರುತಿಸುವಂತೆ ಆಳಿದ ಇಂದಿರಾ-ನಜರ್ಬಾದ್ ನಟರಾಜ್ Read More

ನಟ ವಸಿಷ್ಟ ಸಿಂಹ ಹುಟ್ಟು ಹಬ್ಬ: ದೀಪ, ಲೇಖನಿ ಸಾಮಗ್ರಿ, ಹಣ್ಣು ವಿತರಣೆ

ಮೈಸೂರು: ಕಂಚಿನ ಕಂಠ ನಾಯಕ ನಟ ವಸಿಷ್ಠ ಸಿಂಹ ಅವರ ಹುಟ್ಟುಹಬ್ಬ ಪ್ರಯುಕ್ತ
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ನೆಲೆ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದವರಿಗೆ ಹಣತೆ, ಲೇಖನಿ ಸಾಮಗ್ರಿ, ಹಣ್ಣು ವಿತರಣೆ ಮಾಡಲಾಯಿತು.

ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ಹಾಗೂ ಕಂಚಿನ ಕಂಠ ನಾಯಕ ನಟ ವಸಿಷ್ಠ ಸಿಂಹ ಅಭಿಮಾನಿ ಬಳಗದ ವತಿಯಿಂದ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಣ್ಣಿನ ದೀಪವನ್ನು ನೀಡಿ ದೀಪ ಬೆಳಗುವ ರೀತಿಯಲ್ಲಿ ಎಲ್ಲಾ ಹೆಣ್ಣುಮಕ್ಕಳ ಭವಿಷ್ಯ ಬೆಳಗಲಿ ಎಂದು ಶುಭ ಹಾರೈಸಿ, ಮಾನವೀಯ ಮೌಲ್ಯವನ್ನು ಸಾರುವ ಮೂಲಕ ವಸಿಷ್ಟ ಸಿಂಹ ಜನ್ಮದಿನವನ್ನು ವಿಶೇಷವಾಗಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ ಹೋಮದೇವ್, ಕೆಆರ್ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಬೈರತಿ ಲಿಂಗರಾಜು, ನಗರ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಕೊಳಸಂದಿ ಕುಮಾರ್,ಹಿರಿಯ ಕ್ರೀಡಾಪಟು ಮಹದೇವ್, ನಿಲಯ ಪಾಲಕಿ ರೇವತಿ,ಛಾಯಾ, ಗಾಯಕ ಯಶವಂತ್ ಕುಮಾರ್, ರಾಜೇಶ್ ಕುಮಾರ್,ಮಹೇಶ, ಶ್ರೀಧರ್, ಅಶ್ರೀತ್ ವಸಿಷ್ಠ,ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ವಸಿಷ್ಠ ಸಿಂಹ ಅಭಿಮಾನಿಗಳಾದ ಚೆಲುವ,ವಿಮಲ್, ನಿತಿನ್, ಅಶ್ರೀತ್ ಆಶಿಶ್, ಪ್ರಶಾಂತ್ ಮತ್ತಿತರರು ಹಾಜರಿದ್ದರು.

ನಟ ವಸಿಷ್ಟ ಸಿಂಹ ಹುಟ್ಟು ಹಬ್ಬ: ದೀಪ, ಲೇಖನಿ ಸಾಮಗ್ರಿ, ಹಣ್ಣು ವಿತರಣೆ Read More

ರಕ್ತದಾನದ ಮೂಲಕ ವಿಷ್ಣು ಅವರ ಜನ್ಮದಿನ ಅರ್ಥಪೂರ್ಣ ಆಚರಣೆ

ಮೈಸೂರು: ಉದ್ಬೂರ್ ಗೆಟ್ ಬಳಿ ಇರುವ ಡಾ.ವಿಷ್ಣುವರ್ಧನ್ ಸ್ಮಾರಕದಲ್ಲಿ
ವಿಷ್ಣುವರ್ಧನ್ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ನೆಚ್ಚಿನ ನಟ ವಿಷ್ಣುವರ್ಧನ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ರಕ್ತದಾನ ಶಿಬಿರವು ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ನಡೆಯಿತು.

ಶಿಬಿರಕ್ಕೂ ಮೊದಲು ಬೆಳಿಗ್ಗೆ ಭಾರತಿ ವಿಷ್ಣುವರ್ಧನ್‌ ಹಾಗೂ ಅನಿರುಧ್ ಮತ್ತು ‌ವಿಷ್ಣು ಪುತ್ರಿ ವಿಷ್ಣುವರ್ಧನ್ ಅವರ ಪ್ರತಿಮೆಗೆ ಪೂಜೆ ಸಲ್ಲಿಸಿದರು.

ಸಾಹಸಸಿಂಹ, ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ 75ಕ್ಕೂ ಹೆಚ್ಚು ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಡಾಕ್ಟರ್ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು ಮಾತನಾಡಿ, ಅಪ್ಪಾಜಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಬಂದಿರುವುದು ಅಭಿಮಾನಿಗಳ ಆಶೀರ್ವಾದದಿಂದ, ಪ್ರತಿ ವರ್ಷ ಅವರ ಜನ್ಮದಿನವನ್ನು ಸಾಹಸಸಿಂಹ ವಿಷ್ಣುವರ್ಧನ್ ರವರ ಅಭಿಮಾನಿಗಳು ಅರ್ಥಪೂರ್ಣವಾಗಿ ವಿಶೇಷವಾಗಿ ಆಚರಿಸ್ತಾ ಬಂದಿದ್ದಾರೆ,ಅದಕ್ಕಾಗಿ ನಮ್ಮ ಕುಟುಂಬದ ವತಿಯಿಂದ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಇಂದು 5,000 ಜನರಿಗೆ ಹೋಳಿಗೆ ಊಟ, ಹಾಗೂ ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ಉಂಟುಮಾಡುತ್ತಿದೆ ಎಂದು ಖುಷಿಯಿಂದ ತಿಳಿಸಿದರು.

ರಕ್ತಕ್ಕೆ ಜಾತಿ, ಧರ್ಮದ ಭೇದವಿಲ್ಲ, ಅಪಘಾತ ಸಹಿತ ತುರ್ತು ಅವಘಡದಲ್ಲಿ ಸಿಲುಕಿದವರಿಗೆ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ, ದಾನಿಗಳ ಮೂಲಕವೇ ಅವಶ್ಯ ವಿದ್ದವರಿಗೆ ಪೂರೈಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅರ್ಹ ದಾನಿಗಳು ರಕ್ತದಾನ ಮಾಡು ವುದರ ಮೂಲಕ ಇತರರ ಜೀವ ಉಳಿಸಲು ಸಹಕರಿಸಬೇಕೆಂದು ಕೋರಿದರು.

ಜೀವ ರಕ್ಷಣೆ ಕಾರಣವಾಗುವ ಮಹತ್ವದ ಕಾರ್ಯದಲ್ಲಿ ಭಾಗಿಯಾಗುವ ಕೆಲಸವನ್ನು ಯುವಜನತೆ ಮಾಡಬೇಕು, ಪ್ರಸ್ತುತ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಒಳ್ಳೆಯತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಅನಿರುಧ್ ಸಲಹೆ ನೀಡಿದರು

ಇದೇ ವೇಳೆ ಬೆಂಗಳೂರಿನ ಕಲಾವಿದ ವಿಜಯ್ ಅವರು ಅಭಿಮಾನಿಗಳ
ಕೆನ್ನೆಗೆ ಹಾಗೂ ಕೈಗೆ ಕರ್ನಾಟಕ ರತ್ನ ವಿಷ್ಣು, ಹಾಗೂ ಅವರು ನಟಿಸಿದ ಚಿತ್ರಗಳ ಹೆಸರಿನ ಟ್ಯಾಟೋಗಳನ್ನು ಉಚಿತವಾಗಿ ಹಾಕುವ ಮೂಲಕ ಅಭಿಮಾನ ಮೆರೆದರು.

ವಿಷ್ಣುವರ್ಧನ್ ಮೊಮ್ಮಗ ಶ್ರೇಷ್ಠವರ್ಧನ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ ಪಾರ್ಥಸಾರಥಿ, ಜಿ ರಾಘವೇಂದ್ರ, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್,
ರೇಖಾ ಶ್ರೀನಿವಾಸ್, ಇನ್ನರ್ ವ್ಹೀಲ್ ಕ್ಲಬ್ ನ ಸಂಧ್ಯಾ, ಟಿ ಎಸ್ ಅರುಣ್, ಜ್ಯೋತಿ, ಮತ್ತಿತರರು ಹಾಜರಿದ್ದರು.

ರಕ್ತದಾನದ ಮೂಲಕ ವಿಷ್ಣು ಅವರ ಜನ್ಮದಿನ ಅರ್ಥಪೂರ್ಣ ಆಚರಣೆ Read More

ಸೆ18 ರಂದು‌ ವಿಷ್ಣು ಜನುಮದಿನ:ಹೋಳಿಗೆ ಊಟ,ರಸಮಂಜರಿ

ಮೈಸೂರು: ಸೆ18 ರಂದು ಕರ್ನಾಟಕ ರತ್ನ ಸಾಹಸಸಿಂಹ ಡಾ ವಿಷ್ಣುವರ್ಧನ್ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಹೋಳಿಗೆ ಊಟ ಹಮ್ಮಿಕೊಳ್ಳಲಾಗಿದೆ.

ಪತ್ರಕರ್ತರ ಭವನದಲ್ಲಿ ಮೈಸೂರು ರತ್ನ ಡಾಕ್ಟರ ವಿಷ್ಣುವರ್ಧನ್ ಸ್ಮಾರಕ ಅಭಿಮಾನಿಗಳ ಒಕ್ಕೂಟ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ‌ ಸಂಘದ ಗೌರವಾಧ್ಯಕ್ಷ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ ಈ ವಿಷಯ ತಿಳಿಸಿದರು.

ಸೆ. 18ರಂದು ಬೆಳಗ್ಗೆ 10 ಗಂಟೆಗೆ ಊದ್ಬೂರು ಗೇಟ್ ಬಳಿ ಇರುವ ಡಾಕ್ಟರ್ ವಿಷ್ಣುವರ್ಧನ್ ಸ್ಮಾರಕದಲ್ಲಿ
ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ ಮತ್ತು ಕೀರ್ತಿ ಅನಿರುದ್ಧ ಮತ್ತು ಕುಟುಂಬ ವರ್ಗ ವಿಷ್ಣು ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ನಂತರ 11 ಗಂಟೆಗೆ ಅಭಿಮಾನಿಗಳು ವಿಷ್ಣು ಗ್ರೂಪ್ ತಂಡದಿಂದ ವಿಷ್ಣುವರ್ಧನ್ ನಟಿಸಿರುವ ಚಿತ್ರಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ12 ಗಂಟೆಗೆ 5000 ಅಭಿಮಾನಿಗಳಿಗೆ ಬಾಳೆ ಎಲೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ ಟಿ ದೇವೇಗೌಡ,ಟಿ ಎಸ್ ಶ್ರೀವತ್ಸ, ಹರೀಶ್ ಗೌಡ, ಮಾಜಿ ಶಾಸಕ ಎಂ ಕೆ ಸೋಮಶೇಖರ್, ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್ ಮತ್ತಿತರ ಮುಖಂಡರುಗಳು ಭಾಗವಹಿಸಲಿದ್ದಾರೆ.

ಕಲಾ ರಸಿಕರು, ಕಲಾ ಪ್ರೇಮಿಗಳು, ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಂ ಡಿ ಪಾರ್ಥಸಾರಥಿ ಮನವಿ ಮಾಡಿದರು

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಟಿ ವಿ ಸುರೇಶ್, ಅಧ್ಯಕ್ಷರು ಸಿದ್ದಪ್ಪ, ಉಪಾಧ್ಯಕ್ಷರಾದ ಸಂತೋಷ್ ಪಾನಿಪುರಿ, ಖಜಾಂಜಿ ರಾಜು ಎಸ್ ಆರ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್ ರಾಜೇಶ್
ಮತ್ತಿತರರು ಉಪಸ್ಥಿತರಿದ್ದರು.

ಸೆ18 ರಂದು‌ ವಿಷ್ಣು ಜನುಮದಿನ:ಹೋಳಿಗೆ ಊಟ,ರಸಮಂಜರಿ Read More

ಮಾತೆ ಮೇರಿ ಜನ್ಮದಿನ: ಶ್ರವಣ ದೋಷ ವಿದ್ಯಾರ್ಥಿಗಳಿಗೆ ಲೇಖನಿ,ಹಣ್ಣು ವಿತರಣೆ

ಮೈಸೂರು: ನಗರದ ಶ್ರೀರಾಂಪುರ 2ನೇ ಹಂತದಲ್ಲಿನ ಮರ್ಸಿ ಕಾನ್ವೆಂಟ್ ನಲ್ಲಿ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಲೇಖನಿ, ಹಣ್ಣು ಹಂಪಲು ವಿತರಿಸುವ ಮೂಲಕ ಮಾತೆ ಮೇರಿ ಜನ್ಮದಿನವನ್ನು ಸ್ಮರಿಸಲಾಯಿತು.

ಸಂತ ಮೇರಿ ಪ್ರಭು ಏಸುಕ್ರಿಸ್ತನ ತಾಯಿ. ತಾಯಿಯಾಗಲು ದೇವರಿಂದ ಕರೆ ಹೊಂದಿದ ಮಾತೆ ಮೇರಿ ಮನುಕುಲದ ತಾಯಿಯಾ ಗಿರುವುದರಿಂದ ಇವರ ಜನ್ಮದಿನವನ್ನು ಸ್ಮರಿಸಿ ಒಳ್ಳೆಯ ಕಾರ್ಯ ಮಾಡಲಾಗುತ್ತಿದೆ ಎಂದು
ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ಈ‌ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಪತ್ರಿಕಾ ವಿತರ ಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ಜ್ಯೋತಿ ಸಾನ್ವಿಕ,ಮಹೇಶ್, ರಾಜೇಶ್ ಕುಮಾರ್, ಎಲ್.ಐ.ಸಿ. ವೆಂಕಟೇಶ್, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್,ದತ್ತ, ಸಿದ್ದಾರ್ಥ್ ಮತ್ತಿತರರು ಹಾಜರಿದ್ದರು.

ಮಾತೆ ಮೇರಿ ಜನ್ಮದಿನ: ಶ್ರವಣ ದೋಷ ವಿದ್ಯಾರ್ಥಿಗಳಿಗೆ ಲೇಖನಿ,ಹಣ್ಣು ವಿತರಣೆ Read More

ವಿದೇಶದಲ್ಲೂ ಮೈಸೂರಿಗೆ ಕೀರ್ತಿ ತಂದತಾತಯ್ಯ ಅನಾಥಾಲಯದ ವಿದ್ಯಾರ್ಥಿಗಳು-ಶ್ರೀವತ್ಸ

ಮೈಸೂರು: ತಾತಯ್ಯ ಅನಾಥಾಲಯದ ಪ್ರತಿಭಾವಂತ ವಿದ್ಯಾರ್ಥಿಗಳು ದೇಶ ವಿದೇಶದಲ್ಲೂ ಮೈಸೂರಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶಾಸಕ ಟಿಎಸ್. ಶ್ರೀವತ್ಸ ನುಡಿದರು.

ಮೈಸೂರು ಸಂಸ್ಥಾನದಲ್ಲಿ ಸಂಸ್ಕಾರ ಸಂಸ್ಕೃತಿ ಹೆಚ್ಚಾಗಲು ತಾತಯ್ಯ ಅವರ ಶೈಕ್ಷಣಿಕ ಯೋಜನೆ ಮುನ್ನುಡಿ ಬರೆಯಿತು ಹೇಳಿದರು.

ವೃದ್ಧಪಿತಾಮಹ ದಯಾಸಾಗರ ಮೈಸೂರು ಸಂಸ್ಥಾನದ ರಾಜಗುರು ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯ ಅವರ181ನೇ ಜಯಂತಿಯನ್ನು ಅನಾಥಾಲಯ ಹಳೇ ವಿದ್ಯಾರ್ಥಿಗಳ ಬಳಗದ ವತಿಯಿಂದ ನಗರದ ಬಸ್ ನಿಲ್ದಾಣದ ಎದುರಿನ ತಾತಯ್ಯ ಉದ್ಯಾನವನದಲ್ಲಿ ಆಚರಿಸಿದ ವೇಳೆ ಶ್ರೀವತ್ಸ ಅವರು ತಾತಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರು ಮೈಸೂರಿಗೆ ಬಂದಾಗ the old man of mysore empire ಎಂದು ಬಣ್ಣಿಸಿದ್ದರು, ದಯಾಸಾಗರ ತಾತಯ್ಯನವರು ಸ್ವತಃ ಶಿಕ್ಷಕರಾಗಿದ್ದರು ಅವರ ಅನಾಥಾಲಯದಲ್ಲಿ ಶಿಕ್ಷಣ ಪಡೆದ ಬಹುತೇಖ ಮಂದಿ ಇಂದು ದೇಶ ವಿದೇಶದಲ್ಲಿ ಅನೇಕ ಕಡೆ ಉನ್ನತ ಸ್ಥಾನದಲ್ಲಿರುವುದು ನಮ್ಮ ಮೈಸೂರಿನ ಹೆಮ್ಮೆ ಎಂದು ಹೇಳಿದರು.

ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ. ರಾಂಪ್ರಸಾದ್ ಅವರು ಮಾತನಾಡಿ ಶಿಕ್ಷಣ ಕಾಶಿ ಮೈಸೂರು ವಿಶ್ವವಿದ್ಯಾನಿಲಯ ಮುಂದೆ ತರಲು ಯೋಜನೆ ರೂಪಿಸಿದ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಮಾರ್ಗದರ್ಶನ, ಸ್ಪೂರ್ಥಿ ನೀಡಿದವರೇ ತಾತಯ್ಯನವರು ಎಂದು ತಿಳಿಸಿದರು.

ಮೈಸೂರಿನಲ್ಲಿ ಶತಮಾನಗಳ ಹಿಂದೆ ಸ್ಥಾಪಿತವಾದ ಶಿಕ್ಷಣ ಸಂಸ್ಥೆಗಳು, ಸಹಕಾರಿ ರಂಗ, ವೈದ್ಯಕೀಯ ಕ್ಷೇತ್ರ, ಕಾರ್ಖಾನೆಗಳು ಸೇವಾಕ್ಷೇತ್ರವಾಗಿತ್ತು ಬಡವರ ಬದುಕು ಕಟ್ಟಿಕೊಳ್ಳಲು ಆಸರೆಯಗಿತ್ತು ಆದರೆ ಇಂದು ವ್ಯಾಪಾರಿವಲಯವಾಗಿ ಸೇವಾ ಕ್ಷೇತ್ರಗಳು ಬಣ್ಣಬದಲಾಯಿಸಿವೆ ಅಂತವರು ತಾಯತ್ಯ ನವರ ಜೀವನಚರಿತ್ರೆ, ಆದರ್ಶಗಳನ್ನು ಪಾಲಿಸಿ ಸೇವಾಮನೋಭವಾದೊಂದಿಗೆ ಮಾದರಿಯಾಗಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ನಂತರ ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ ಅವರು ಮತನಾಡಿ ಸಾಧಾರಣ ಶಿಕ್ಷಕರಾಗಿದ್ದ ತಾತಯ್ಯನವರಿಗೆ ಸರ್ಕಾರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಿದೆ, ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ನಗರ ಪಾಲಿಕೆ ಮತ್ತು ಅನಾಥಾಲಯ ಹಳೆಯ ವಿದ್ಯಾರ್ಥಿ ಸಂಘದವರು ತಾತಯ್ಯ ಜನ್ಮ ದಿನಾಚರಣೆ ಆಚರಿಸುತ್ತಾ ಬಂದಿದ್ದಾರೆ, ತಾತಯ್ಯನವರಿಗೆ ದಕ್ಷಿಣದ ಬಾಲಗಂಗಾಧರ ತಿಲಕ್ ಹಾಗೂ ಕನ್ನಡ ಪತ್ರಿಕೋದ್ಯಮದ ಭೀಷ್ಮ ಪಿತಾಮಹ ಎಂದೇ
ಕರೆಯಲಾಗಿದೆ ಎಂದು ಬಣ್ಣಿಸಿದರು.

ಮಹಾತ್ಮರಾದ ತಾತಯ್ಯ ಅವರ ಜಯಂತಿಯನ್ನು ಮುಂದಿನ ವರ್ಷದಿಂದ ಪುರಭವನದಲ್ಲಿ ಆಚರಿಸಲು ನಗರಪಾಲಿಕೆ ಮತ್ತು ಜಿಲ್ಲಾಡಳಿತ ಮುಂದಾಗಬೇಕು ಹಾಗೂ ಸಮಾಜದಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಸರ್ಕಾರ ಗುರುತಿಸಿ “ತಾತಯ್ಯ ಪ್ರಶಸ್ತಿ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ತಾತಯ್ಯ ಹಳೇವಿದ್ಯಾರ್ಥಿಗಳ ಸಂಘದ ಸಂಚಾಲಕ ಸುಂದರೇಶ್ ಅವರು ಮಾತನಾಡಿ ಹಳೇ ಮೈಸೂರು ಸಂಸ್ಥಾನದಲ್ಲಿ ಮಾಧ್ಯಮ ಸಂಪರ್ಕವಿಲ್ಲದ ಕಾಲದಲ್ಲಿ ದುಡಿಮೆ ಮತ್ತು ಶಿಕ್ಷಣ ಬಹಳ ಕಷ್ಟಕರವಾಗಿತ್ತು ಕನ್ನಡದ ಸಣ್ಣ ಪುಟ್ಟ ಪತ್ರಿಕೆಗಳನ್ನು ಪ್ರಾರಂಭಿಸಿದ ತಾತಯ್ಯ ಅವರು ‘ಹಿತಬೋಧಿನಿ ‘ಸಾಧ್ವಿ’ ಸೇರಿದಂತೆ ಇನ್ನಿತರ ಪತ್ರಿಕೆಗಳನ್ನು ಹೊರ ತರುವುದರೊಂದಿಗೆ ಸಾಮನ್ಯವ್ಯಕ್ತಿಯ ಬದುಕಿಗೆ ಸ್ಪೂರ್ಥಿಯಾದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಬಿಜೆಪಿ ಮುಖಂಡರಾದ ಜೋಗಿ ಮಂಜು, ಚೇತನ್, ಪ್ರದೀಪ್, ಸುಚೀಂದ್ರ, ಚಕ್ರಪಾಣಿ, ಸಚಿನ್ ನಾಯಕ ಮುಂತಾದವರು ಪಾಲ್ಗೊಂಡಿದ್ದರು.

ವಿದೇಶದಲ್ಲೂ ಮೈಸೂರಿಗೆ ಕೀರ್ತಿ ತಂದತಾತಯ್ಯ ಅನಾಥಾಲಯದ ವಿದ್ಯಾರ್ಥಿಗಳು-ಶ್ರೀವತ್ಸ Read More

ಕಾಂಗ್ರೆಸ್ ನಾಯಕ‌ ರಾಜೀವ್ ಹುಟ್ಟುಹಬ್ಬ:ಆಸ್ಟ್ರಿಚ್ ಪಕ್ಷಿ ದತ್ತು

ಮೈಸೂರು: ಕಾಂಗ್ರೆಸ್ ಹಿರಿಯ ನಾಯಕ ಎಚ್.ವಿ. ರಾಜೀವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಎಚ್.ವಿ. ರಾಜೀವ್ ಸ್ನೇಹಬಳಗದ ಸದಸ್ಯ ಆರ್. ಹುಡ್ಕೊ ಕುಮಾರ್ ಒಂದು ಆಸ್ಟ್ರಿಚ್ ಪಕ್ಷಿಯನ್ನು ದತ್ತು ಪಡೆದು ಮಾದರಿಯಾಗಿದ್ದಾರೆ.

ಮೈಸೂರಿನ ಝೂನಲ್ಲಿ ಹುಡ್ಕೊ ಕುಮಾರ್ ಒಂದು ಆಸ್ಟ್ರಿಚ್ ಹಕ್ಕಿಯನ್ನು ದತ್ತು ಪಡೆದುಕೊಂಡರು.

ಈ ವಿಶೇಷ ಕಾರ್ಯಕ್ರಮದಲ್ಲಿ ಹೆಚ್.ವಿ. ರಾಜೀವ್ ಅವರ ಪತ್ನಿ ಲಕ್ಷ್ಮೀ,ನವ್ಯ ರಾಜೀವ್, ಮಾಜಿ ಮೇಯರ್ ಭೈರಪ್ಪ, ಮಾಜಿ ಕಾರ್ಪೊರೇಟರ್ ಕೆ.ವಿ. ಮಲ್ಲೇಶ್, ನಾಗೇಶ್ ರಂಗನಾಥ್ ಮತ್ತಿತರರು ಹಾಜರಿದ್ದರು.

ಈ ವೇಳೆ ಮಾತನಾಡಿದ ಲಕ್ಷ್ಮಿ ರಾಜೀವ್ ಅವರು, ರಾಜೀವ್ ಅವರ ಜೀವನ ಸದಾ ಸಮಾಜಮುಖಿ ಕಾರ್ಯಗಳತ್ತ ಕೇಂದ್ರೀಕೃತವಾಗಿದೆ. ಅವರ ಹುಟ್ಟುಹಬ್ಬವನ್ನು ಹೀಗೆ ಅರ್ಥಪೂರ್ಣ ಕಾರ್ಯದ ಮೂಲಕ ಆಚರಿಸಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.

ಮಾಜಿ ಮೇಯರ್ ಭೈರಪ್ಪ ಅವರು ಮಾತನಾಡಿ, ಎಚ್.ವಿ. ರಾಜೀವ್ ಮೈಸೂರಿನ ಅಭಿವೃದ್ಧಿ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ನೀಡಿದ ಕೊಡುಗೆ ದೊಡ್ಡದು. ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತಹ ಕಾರ್ಯಕ್ರಮ ಸಾರ್ವಜನಿಕರಲ್ಲಿ ಸಂರಕ್ಷಣೆಯ ಅರಿವು ಮೂಡಿಸುತ್ತವೆ ಎಂದು ಹೇಳಿದರು.

ಆರ್. ಹುಡ್ಕೋ ಕುಮಾರ್ ಮಾತನಾಡಿ,ರಾಜೀವ್ ಅವರ ಹುಟ್ಟುಹಬ್ಬದಂದು ಒಂದು ಉತ್ತಮ ಕೆಲಸ ಮಾಡುವ ಆಸೆ ನನಗಿತ್ತು. ಆಸ್ಟ್ರಿಚ್ ದತ್ತು ಪಡೆಯುವ ಮೂಲಕ ಪ್ರಕೃತಿ ಮತ್ತು ಪ್ರಾಣಿಗಳ ಸಂರಕ್ಷಣೆಗೆ ನಮ್ಮ ಬದ್ಧತೆಯನ್ನು ತೋರಿಸಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ನೇಹಬಳಗ ಸದಸ್ಯರು ರಾಜೀವ್ ಅವರ ಸೇವಾ ಚಟುವಟಿಕೆಗಳನ್ನು ಮುಂದುವರಿಸುವ ಪ್ರತಿಜ್ಞೆ ಕೈಗೊಂಡರು.

ಕಾಂಗ್ರೆಸ್ ನಾಯಕ‌ ರಾಜೀವ್ ಹುಟ್ಟುಹಬ್ಬ:ಆಸ್ಟ್ರಿಚ್ ಪಕ್ಷಿ ದತ್ತು Read More

ಸುಧಾ ಮೂರ್ತಿ, ಎಸ್ ಎಲ್ ಭೈರಪ್ಪ ಹುಟ್ಟುಹಬ್ಬ ;ಮಕ್ಕಳಿಗೆ ಪುಸ್ತಕ ವಿತರಣೆ

ಮೈಸೂರು: ರಾಜ್ಯಸಭಾ ಸದಸ್ಯರೂ ಹೆಮ್ಮೆಯ ಕನ್ನಡತಿ, ಪದ್ಮಭೂಷಣ ಪುರಸ್ಕೃತರಾದ ಸುಧಾಮೂರ್ತಿ ಮತ್ತು ಪದ್ಮಶ್ರೀ ಪುರಸ್ಕೃತ ಎಸ್ ಎಲ್ ಭೈರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ
ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.

ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ಹಾಗೂ ಲೇಖನಿ ನೀಡುವ ಮೂಲಕ ಈ ಇಬ್ಬರು ಸಾಧಕರ ಜನುಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕರ್ನಾಟಕದ ಇಬ್ಬರು ಮಹನೀಯರ ಕೊಡುಗೆ ಅಪಾರ.ಸಾಹಿತ್ಯ,ಹಾಗೂ ಅವರ ಸಮಾಜ ಸೇವೆಗಳು ಅನನ್ಯ, ಅವರ ಸೇವೆಗಳು ನಮ್ಮಂತ ನೂರಾರು ಸಂಘಟನೆಗಳಿಗೆ ಸ್ಪೂರ್ತಿದಾಯಕ,ಕನ್ನಡದ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಶ್ರೀಮಂತ ಗೊಳಿಸಿರುವ ಇಬ್ಬರು ಮಹನೀಯರು ಆದರ್ಶಪ್ರಾಯರು ಎಂದು ಹೇಳಿದರು.

ಈ ವೇಳೆ ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಚಕ್ರಪಾಣಿ, ಜತ್ತಿ ಪ್ರಸಾದ್, ಮಹಾನ್ ಶ್ರೇಯಸ್, ಶಾಲೆಯ ಮುಖ್ಯ ಶಿಕ್ಷಕರಾದ ರತ್ನಮಾಲ,ಶೃತಿ, ನರಸಿಂಹ,ಶಾಲೆಯ ಶಿಕ್ಷಕ ವೃಂದ ಮತ್ತಿತರರು ಹಾಜರಿದ್ದರು.

ಸುಧಾ ಮೂರ್ತಿ, ಎಸ್ ಎಲ್ ಭೈರಪ್ಪ ಹುಟ್ಟುಹಬ್ಬ ;ಮಕ್ಕಳಿಗೆ ಪುಸ್ತಕ ವಿತರಣೆ Read More

ಕೆ ಹರೀಶ್ ಗೌಡ ಅವರಿಗೆ ಶುಭ ಕೋರಿದಬಿ ಸುಬ್ರಹ್ಮಣ್ಯ

ಮೈಸೂರು: ಮೈಸೂರು ನಗರ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ ಅವರಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ ಸುಬ್ರಹ್ಮಣ್ಯ ಅವರು ಜನುಮದಿನದ ಶುಭ ಕೋರಿದರು.

ಭಾರೀ ಗಾತ್ರದ ಗುಲಾಬಿ ಹಾರ ಹಾಕಿ ಶಾಲು ಹೊದಿಸಿ ಹರೀಶ್ ಗೌಡರಿಗೆ ಜನುಮದಿನದ ಶುಭಕಾಮನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮಾದೇಗೌಡ, ಕೆಆರ್ ಮಾರ್ಕೆಟ್ ದಿನೇಶ್, ಎಚ್ ಡಿ ಕೋಟೆ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಆನಂದ್, ಪಿರಿಯಾಪಟ್ಟಣ ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಸುನಿಲ್, ಮುಖಂಡರುಗಳಾದ ಕಾಂಜೀಗೌಡ, ಮಂಜುನಾಥ್ ಮತ್ತಿತರರು ಹಾಜರಿದ್ದರು.

ಕೆ ಹರೀಶ್ ಗೌಡ ಅವರಿಗೆ ಶುಭ ಕೋರಿದಬಿ ಸುಬ್ರಹ್ಮಣ್ಯ Read More

ಬಡವರಿಗೆ ಸಹಾಯ ಮಾಡಿದರೆ ಧನ್ಯತೆ:ಹರೀಶ್ ಗೌಡ

ಮೈಸೂರು: ಬಡವರಿಗೆ ಸಹಾಯ ಮಾಡಿದರೆ ಮಾತ್ರ ನನಗೆ ತೃಪ್ತಿ,ಅದರಲ್ಲಿ ಧನ್ಯತೆ ಇರುವುದು ಎಂದು ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ತಿಳಿಸಿದರು.

ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರು ಯುವ ಬಳಗ ಹಾಗೂ ಅವರ ಅಭಿಮಾನಿಗಳು ದೇವರಾಜ ಅರಸು ರಸ್ತೆಯಲ್ಲಿ ಪಟಾಕಿ ಸಿಡಿಸಿ,ಕೇಕ್ ಕತ್ತರಿಸಿ ನಂತರ ಸಾರ್ವಜನಿಕರಿಗೆ ಚಿಕನ್
ಲೆಗ್ ಚಾಪ್ಸ್. ಗೀ ರೈಸ್ ಮೊಟ್ಟೆ ವಿತರಣಾ ಕಾರ್ಯ ಹಮ್ಮಿಕೊಂಡಿದ್ದ ಕಾರ್ಯಕ್ಕೆ‌ ಚಾಲನೆ ನೀಡಿ ಅವರು ಮಾತನಾಡಿದರು.

ಬಡಜನರಲ್ಲೇ ದೇವರನ್ನು ಕಾಣುವುದು, ಜನರ ಸಮಸ್ಯೆಗೆ‌ ಸ್ಪಂದಿಸುತ್ತಾ ಬಂದಿದ್ದೇನೆ, ಮುಂದಕ್ಕೂ ನಾನು ನಿಮ್ಮ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತೇನೆ, ಪ್ರೀತಿಯಿಂದ ಅಭಿಮಾನದಿಂದ
ವಿವಿಧ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ನನ್ನ ಜನುಮದಿನದ ಶುಭ ಕೋರಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಹರೀಶ್ ಗೌಡ ಹೇಳಿದರು.

ಮೈಸೂರು ಯುವ ಬಳಗದ ಅಧ್ಯಕ್ಷರ ನವೀನ್, ರಾಮರಾಜ್,ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಜಿ ರಾಘವೇಂದ್ರ, ಸಂದೀಪ್, ರಾಮಕೃಷ್ಣ ಗುರುರಾಜ್, ಸಂತೋಷ್, ಪ್ರಶಾಂತ್, ಪ್ರಮೋದ್ ,ನಿತಿನ್, ರವಿಚಂದ್ರ, ಎಸ್ ಎನ್ ರಾಜೇಶ್, ಕುಮಾರ್ ,ಲೋಕೇಶ್, ಹರ್ಷ ರಘು ಮುಂತಾದರು ಹಾಜರಿದ್ದರು.

ಬಡವರಿಗೆ ಸಹಾಯ ಮಾಡಿದರೆ ಧನ್ಯತೆ:ಹರೀಶ್ ಗೌಡ Read More