ಬಿಹಾರದಲ್ಲಿ ಎನ್ ಡಿಎಗೆ ಭಾರಿ ಬಹುಮತ:ಕೊಳ್ಳೇಗಾಲದಲ್ಲಿ ಬಿಜೆಪಿ ಸಂಭ್ರಮಾಚರಣೆ
(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಬಿಹಾರ ಚುನಾವಣೆಯಲ್ಲಿ ಎನ್ ಡಿ ಎ ಭರ್ಜರಿ ಬಹುಮತ ಪಡೆದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಸಿಹಿ ತಿನ್ನಿಸಿ ಮಾತನಾಡಿದ ಮಾಜಿ ನಗರ ಮಂಡಲ ಅಧ್ಯಕ್ಷ ರಮೇಶ್ ಮುರಾರಿ ಅವರು, ಉತ್ತಮ ಆಡಳಿತ ನೀಡಿ ಜನಮನ್ನಣೆ ಗಳಿಸಿರುವ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಸರ್ಕಾರದ ಮುಂದೆ ಆರ್ ಜೆ ಡಿ ಕಾಂಗ್ರೆಸ್ ಮಹಾಘಟ ಬಂಧನ್ ಗೆಲ್ಲಲು ಸಾಧ್ಯವೇ ಎಂದು ಲೇವಡಿ ಹಾಡಿದರು.
ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿ ಪ್ರಧಾನಿ ಮೋದಿ ಹಾಗೂ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿ ಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಸ್ಪಷ್ಟ ಜನಾದೇಶ ನೀಡಿದ್ದಾರೆ ಎಂದು ಹೇಳಿದರು.
ಈ ಮೂಲಕ ಬಿಹಾರದ ಜನತೆ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿದ್ದಾರೆ. ಅದೇ ರೀತಿ ಈಗಾಗಲೇ ಜನಮನ್ನಣೆ ಕಳೆದು ಕೊಂಡಿರುವ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲೂ ಧೂಳೀಪಟ ಆಗಲಿದೆ ಎಂದು ಭವಿಷ್ಯ ನುಡಿದರು.
ಬಿಹಾರದಲ್ಲಿ ಎನ್, ಡಿ, ಎ ಗೆ ಮತ ನೀಡಿದ ಪ್ರತಿಯೊಬ್ಬ ಮತದಾರರಿಗೂ ಹಾಗೂ ಗೆಲುವಿಗೆ ಕಾರಣೀಭೂತರಾದ ಜನತೆ ಹಾಗೂ ಮೈತ್ರಿಕೂಟದ ಎಲ್ಲ ನಾಯಕರು, ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ರಮೇಶ್ ಮುರಾರಿ
ತಿಳಿಸಿದರು.
ಈ ವೇಳೆ ಜಿಲ್ಲಾ ಕಾರ್ಯದರ್ಶಿ ಬೂದಿತಿಟ್ಟು ಶಿವಕುಮಾರ್, ಜಿಲ್ಲಾ ಎಸ್. ಸಿ. ಮೋರ್ಚಾ ಉಪಾಧ್ಯಕ್ಷ ರೇವಣ್ಣ, ಜಿಲ್ಲಾ ಕಾರ್ಯದರ್ಶಿ ರಾಜಶೇಖರ್, ಮೊಟ್ಟೆ ಶಂಕರ್, ಮಾಜಿ ಅಧ್ಯಕ್ಷ ಕೆ.ಕೆ.ಮೂರ್ತಿ, ಎಸ್ ಸಿ ಮೋರ್ಚಾ ಅಧ್ಯಕ್ಷ ಸಿದ್ದಪ್ಪ, ಲಿಂಗಣಾಪುರ ಬಸವರಾಜಪ್ಪ, ಕೆಂಪನಪಾಳ್ಯ ಮಂಜು, ಡೈರಿ ಗಿರಿಶ್, ಸೋಮಣ್ಣ, ನಟರಾಜು, ವರದರಾಜ್, ಮಧುಚಂದ್ರ, ಬಳೆ ರವಿ, ತೆರಂಬಳ್ಳಿ ರವಿ, ನಿರಂಜನ್ ರವಿ, ನಾರಾಯಣ, ಯುವ ಮೋರ್ಚಾ ಅಧ್ಯಕ್ಷ ಆನಂದ್ ರವಿ, ಬಸ್ತಿಪುರ ಮಮತಾ ಬದ್ರಿನಾಥ್, ಬಾರ್ ನಾಗಣ್ಣ, ಕಜ್ಜಿಹುಂಡಿ ಪ್ರಭು, ಜಯರಾಜ್, ಸುರೇಶ, ರಂಗಸ್ವಾಮಿ, ಹಾಗೂ ಕಾರ್ಯಕರ್ತರು ಹಾಜರಿದ್ದರು.
ಬಿಹಾರದಲ್ಲಿ ಎನ್ ಡಿಎಗೆ ಭಾರಿ ಬಹುಮತ:ಕೊಳ್ಳೇಗಾಲದಲ್ಲಿ ಬಿಜೆಪಿ ಸಂಭ್ರಮಾಚರಣೆ Read More