ಬಿಹಾರದಲ್ಲಿ ಬೀಭತ್ಸ ಘಟನೆ: ಕುಟುಂಬದ 5 ಮಂದಿಯನ್ನು ಕೊಂದ ಗುಂಪು

ಬಿಹಾರ: ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ
ಒಂದೇ ಕುಟುಂಬದ ಐವರನ್ನು ಬೀಭತ್ಸವಾಗಿ ಕೊಂದು ಸುಟ್ಟುಹಾಕಿರುವ ಪೈಶಾಚಿಕ ಘಟನೆ ನಡೆದಿದ್ದು ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಮೂವರು ಮಹಿಳೆಯರು ಸೇರಿದಂತೆ ಬುಡಕಟ್ಟು ಕುಟುಂಬದ ಐದು ಸದಸ್ಯರನ್ನು ಮಾಟಮಂತ್ರದ ಶಂಕೆಯ ಮೇಲೆ ಕಡಿದು ಕೊಂದು ಅವರ ದೇಹಗಳನ್ನು ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಬಾಬು ಲಾಲ್ ಒರಾನ್ (50), ಅವರ ತಾಯಿ ಕಾಂಟೋ ದೇವಿ (70), ಪತ್ನಿ ಸೀತಾ ದೇವಿ (45), ಮಗ ಮಂಜಿತ್ ಕುಮಾರ್ (25) ಮತ್ತು ಸೊಸೆ ರಾಣಿ ದೇವಿ (22) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಟೆಟ್ಮಾ ಗ್ರಾಮದಲ್ಲಿ ಸೋಮವಾರ ಮಂಜಾನೆ ಈ ಘಟನೆ ನಡೆದಿದ್ದು, ಪೊಲೀಸರು ಸುಟ್ಟ ಶವಗಳನ್ನು ಸೋಮವಾರ‌ ಸಂಜೆ
ವಶಪಡಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೀತಾ ದೇವಿಯ ಏಕೈಕ ಬದುಕುಳಿದ ಮಗ ಸೋನು ಪೊಲೀಸರಿಗೆ ಮಾಹಿತಿ ನೀಡಿದ್ದು,ಏಕಾಏಕಿ ಒಂದು ಗುಂಪು ತಮ್ಮ ಮನೆಗೆ ನುಗ್ಗಿ ತನ್ನ ತಾಯಿಯ ಮೇಲೆ ಹಲ್ಲೆ ಮಾಡಿತು,ಆಕೆಯನ್ನು ಮಾಟಗಾತಿ ಎಂದು ಜರಿದು ದೊಣ್ಣೆಯಿಂದ ಥಳಿಸಿತು ನಂತರ ತಾಯಿಯ ರಕ್ಷಣೆಗೆ ಬಂದವರ ಮೇಲೂ ಭೀಕರವಾಗಿ ಹಲ್ಲೆ ಮಾಡಿ ಕೊಚ್ಚಿಹಾಕಿದರು ಆಮೇಲೆ ಏನಾಯಿತು ಎಂದು ಗೊತ್ತಾಗಲಿಲ್ಲ ಎಂದು ಅಳುತ್ತಾ ಪೊಲೀಸರಿಗೆ ತಿಳಿಸಿದ್ದಾನೆ.

ಈ ಘಟನೆಯು ಸಮುದಾಯದಲ್ಲಿ ಇನ್ನೂ ವ್ಯಾಪಕವಾಗಿ ಹರಡಿರುವ ಮಾಟಮಂತ್ರದ ವಿವಾದದಲ್ಲಿ ನಡೆದಿರುವಂತೆ ತೋರುತ್ತದೆ ಎಂದು ಪುರ್ನಿಯಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಹಲ್ಲೆಕೋರರು ಬಲಿಪಶುಗಳ ಶವಗಳನ್ನು ಅವರ ಮನೆಯಿಂದ ಸುಮಾರು 100-150 ಮೀಟರ್ ದೂರಕ್ಕೆ ಸಾಗಿಸಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಸೋಮವಾರ ಸಂಜೆ ಬಲಿಪಶುಗಳ ಭಾಗಶಃ ಸುಟ್ಟ ಅವಶೇಷಗಳನ್ನು ಅವರು ವಶಪಡಿಸಿಕೊಂಡಿದ್ದಾರೆ.

ಬಿಹಾರದಲ್ಲಿ ಬೀಭತ್ಸ ಘಟನೆ: ಕುಟುಂಬದ 5 ಮಂದಿಯನ್ನು ಕೊಂದ ಗುಂಪು Read More

ಭದ್ರತಾ ಪಡೆಗಳ ಎನ್ಕೌಂಟರ್:ಮಾಂಝಿ ಸೇರಿ 8 ನಕ್ಸಲರು ಕತಮ್

ಬೊಕಾರೊ,(ಬಿಹಾರ): ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ ಅತಿ ಪ್ರಮುಖ ನಕ್ಸಲ್ ಮುಖಂಡ
ಪ್ರಯಾಗ್ ಮಾಂಝಿ ಅಲಿಯಾಸ್ ವಿವೇಕ್ ಸೇರಿದಂತೆ ಎಂಟು ನಕ್ಸಲರನ್ನು ಹೊಡೆದುರುಳಿಸಿದೆ.

ಭದ್ರತಾ ಪಡೆಗಳು ನಕ್ಸಲರ ವಿರುದ್ಧ ಪ್ರಮುಖ ಯಶಸ್ಸನ್ನು ಸಾಧಿಸಿದ್ದು, ಮೂರು ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಹತ್ಯೆಯಾದ ನಕ್ಸಲರ ಪೈಕಿ ತಲೆಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾದ ಪ್ರಯಾಗ್ ಮಾಂಝಿ ಅಲಿಯಾಸ್ ವಿವೇಕ್ ಕೂಡಾ ಒಬ್ಬ.

ಲುಗು ಪರ್ವತದ ತಪ್ಪಲು ಸೇರಿದಂತೆ ಇಡೀ ಪ್ರದೇಶದಲ್ಲಿ ಪೊಲೀಸ್ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ಅಡಿಯಲ್ಲಿ, ನಕ್ಸಲೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಶೋಧಿಸಲಾಗುತ್ತಿದೆ.

ಈ ಎನ್ಕೌಂಟರ್ ಝೋನಲ್ ಕಮಾಂಡರ್ ಬಿರ್ಸೆನ್ ಮತ್ತು ಏರಿಯಾ ಕಮಾಂಡರ್ ಕುನ್ವರ್ ಮಾಂಝಿ ತಂಡದೊಂದಿಗೆ ನಡೆಯಿತು. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಎಸ್ಪಿ ಮನೋಜ್ ಸ್ವರ್ಗಿಯಾರಿ ತಿಳಿಸಿದ್ದಾರೆ.

ಎನ್ಕೌಂಟರ್ ಮುಗಿದ ನಂತರವೇ ನಿಜವಾದ ಸಂಖ್ಯೆ ತಿಳಿಯಲಿದೆ ಎಂದು ಎಸ್ಪಿ ಹೇಳಿದ್ದಾರೆ.

ಭದ್ರತಾ ಪಡೆಗಳ ಎನ್ಕೌಂಟರ್:ಮಾಂಝಿ ಸೇರಿ 8 ನಕ್ಸಲರು ಕತಮ್ Read More

ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು

ಪಾಟ್ನಾ: ಬಿಹಾರದ ಹಲವ ಜಿಲ್ಲೆಗಳಲ್ಲಿ ಸಿಡಿಲು ಮತ್ತು ಆಲಿಕಲ್ಲು ಮಳೆಗೆ 25 ಮಂದಿ ಮೃತಪಟ್ಟಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ.

ಬಿಹಾರದ ನಳಂದದಲ್ಲಿ ಭಾರೀ ಮಳೆ ಸಿಡಿಲಿನಿಂದಾಗಿ 18 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಸಿವಾನ್‌ನಲ್ಲಿ ಇಬ್ಬರು, ಕಟಿಹಾರ್, ದರ್ಭಂಗಾ, ಬೇಗುಸರಾಯ್, ಭಾಗಲ್ಪುರ್ ಮತ್ತು ಜೆಹಾನಾಬಾದ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಸಂಬಂಧಿಕರಿಗೆ ತಲಾ 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು Read More