ಸೈನಿಕ ಅಕಾಡೆಮಿಯಲ್ಲಿಯೋಧರನ್ನು ಸ್ಮರಿಸಿ ಶ್ರದ್ದಾಂಜಲಿ

ಮೈಸೂರು: ಸೈನಿಕ ಅಕಾಡೆಮಿಯಲ್ಲಿ ಸಂವಿಧಾನ ದಿನದ ಆಚರಣೆ ಜೊತೆಗೆ ಮುಂಬೈ ಅಟ್ಯಾಕ್ ನಲ್ಲಿ ಮಡಿದ ಯೋಧರನ್ನು ಸ್ಮರಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಮೈಸೂರಿನ ಬೆಳವಾಡಿಯಲ್ಲಿ ರಕ್ಷಣಾ ಇಲಾಖೆಗೆ ಸೇರಲು ಬಯಸುವ ಯುವಜನತೆಗೆ ತರಬೇತಿ ನೀಡುತ್ತಿರುವ ಸೈನಿಕ ಅಕಾಡೆಮಿ, ತರಬೇತಿ ಕೇಂದ್ರದಿಂದ ಯೋದರನ್ನು ಸ್ಮರಿಸಲಾಯಿತು.

ಹಲವಾರು ಬಾಷೆ, ಸಂಸ್ಕೃತಿ, ಸಂಪ್ರದಾಯ, ಬಡವ ಶ್ರೀಮಂತರನ್ನೊಳಗೊಂಡಿರುವ ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನತೆಯಿಂದ ಜೀವಸಲು ಹಕ್ಕನ್ನು ನೀಡಿರುವ ಭಾರತ್ನ ರತ್ನ ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರವರನ್ನು ನೆನೆಸಿ ಸಂವಿಧಾನ ದಿನಾಚರಣೆನ್ನೂ ಆಚರಿಸಲಾಯಿತು.

ಜೊತೆಗೆ ಸಾವಿರಾರು ಜನರ ಪ್ರಾಣ ಕಾಪಾಡಲು ತಮ್ಮ ಜೀವ ಕಳೆದುಕೊಂಡ ಎನ್ ಎಸ್ ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಸಹಪಾಠಿ ಕಮಾಂಡೋ ಗಜೇಂದ್ರ ಸಿಂಗ್, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಜೀವ ಕಳೆದುಕೊಂಡ ಅಮಾಯಕರನ್ನು ನೆನೆಸಿ ಶ್ರದ್ದಾನಂಜಲಿ ಸಲ್ಲಿಸಲಾಯಿತು.

ಸೇನೆಗೆ ಸೇರಲು ತಯಾರಾಗುತ್ತಿರುವ ಯುವ ಸೈನಿಕರಿಗೆ ಸತ್ಯ ಘಟನೆಗಳನ್ನು ವಿವರಿಸಿದ
ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿಯ ಸಂಸ್ಥಾಪಕರು ಶ್ರೀಧರ ಸಿ ಎಂ ಅವರು,ನಾನು ಕೂಡ ಎನ್ ಎಸ್ ಜಿ ಕಮಾಂಡೋನಲ್ಲಿ ಇದ್ದು ಪುಣ್ಯವಂತ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಂದ ತರಬೇತಿ ಪಡೆದುಕೊಂಡಿದ್ದು ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಸಂತೋಷ ಮತ್ತು ಸೇನೆಗೆ ಸೇರಲು ತಯಾರಾಗುತಿರುವ ಯುವ ಸೈನಿಕರು ಉಪಸ್ಥಿತರಿದ್ದರು.

ಸೈನಿಕ ಅಕಾಡೆಮಿಯಲ್ಲಿಯೋಧರನ್ನು ಸ್ಮರಿಸಿ ಶ್ರದ್ದಾಂಜಲಿ Read More

ಬಿ ರವಿಕುಮಾರ್ ಬೆಳವಾಡಿ ಹುಟ್ಟುಹಬ್ಬ:ಆರೋಗ್ಯ,ನೇತ್ರ ತಪಾಸಣೆ

ಮೈಸೂರು, ಏ.3: ಮೈಸೂರಿನ ಶ್ರೀ ಚಾಮುಂಡೇಶ್ವರಿ ನಗರ ಅಭಿವೃದ್ಧಿ ಸಹಕಾರ ಸಂಘದ ಸಂಸ್ಥಾಪಕರಾದ ಬಿ ರವಿಕುಮಾರ್ ಬೆಳವಾಡಿ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಮೃದ್ಧಿ ಟ್ರಸ್ಟ್, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಕೆ ವಿ ಸಿ ಸೂಪರ್ ಸ್ಪೆಸಿಯಾಲಿಟಿ ಆಸ್ಪತ್ರೆ, ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಒಂದು ಹೆಜ್ಜೆ ರಕ್ತದಾನ ಬಳಗದ ಅಧ್ಯಕ್ಷ ರಕ್ತಧಾನಿ ಮಂಜು ಅವರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ,ನೇತ್ರ ತಪಾಸಣೆ, ರಕ್ತದಾನ ಶಿಬಿರ ಹಾಗೂ ಪೌರ ಕಾರ್ಮಿಕರಿಗೆ ಉಚಿತ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ
ಬಿ ರವಿಕುಮಾರ್ ಬೆಳವಾಡಿ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಯುವ ಮುಖಂಡರು ಮದನ್ ಮಾದೇಶ್, ಬೆಳವಾಡಿ ಮುಖಂಡರಾದ ಶಿವಣ್ಣ, ಮೊಬೈಲ್ ರಮೇಶ್, ಮಹದೇವು, ದೇವರಾಜು,ಮೈಸೂರು ಬೆಳವಾಡಿ ಸೈನಿಕ ಅಕಾಡೆಮಿ ಸಂಸ್ಥಾಪಕ ಶ್ರೀಧರ್ ಮತ್ತು ಬಡಾವಣೆಯ ಎಲ್ಲಾ ಹಿರಿಯ ಮುಖಂಡರು, ಮಹಿಳೆಯರು, ಸ್ನೇಹಿತರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ಸುತ್ತಮುತ್ತಲಿನ ಬಡಾವಣೆಯ ವಾಸಿಗಳು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ವಿಶೇಷವಾಗಿ 150 ಕ್ಕಿಂತ ಹೆಚ್ಚು ಯುವಕರು ಯುವತಿಯರು ರಕ್ತದಾನ ಮಾಡಿ ಮಾದರಿಯಾದರು.

ಖ್ಯಾತ ರಂಗ ಕಲಾವಿದರಾದ ವಿಶ್ವನಾಥ್ ಎಲ್ ಮತ್ತು ತಂಡದ ವತಿಯಿಂದ ಜಾನಪದ ಗಾಯನ ಹಮ್ಮಿಕೊಂಡಿದ್ದು ಎಲ್ಲರ ಮನಸೆಳೆಯಿತು.

ಬಿ ರವಿಕುಮಾರ್ ಬೆಳವಾಡಿ ಹುಟ್ಟುಹಬ್ಬ:ಆರೋಗ್ಯ,ನೇತ್ರ ತಪಾಸಣೆ Read More

ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವಸತಿ ತರಬೇತಿ ಕೇಂದ್ರ ಮೈಸೂರಿನಲ್ಲಿರುವುದು ಹೆಮ್ಮೆ-ಮಹೇಂದ್ರ.ಸಿ ಕೆ

ಮೈಸೂರು: ಮೈಸೂರಿನ ಬೆಳವಾಡಿಯಲ್ಲಿರುವ ಸೈನಿಕ ಅಕಾಡೆಮಿನಲ್ಲಿ ಸುಮಾರು ಮೂರು ತಿಂಗಳಿಂದ ತರಬೇತಿ ಪಡೆದು ಪರೀಕ್ಷೆ ಬರೆಯಲು ತೆರಳುತ್ತಿರುವ ಅಭ್ಯರ್ಥಿಗಳಿಗೆ ಶುಭ ಕೋರಲಾಯಿತು.

ಅಭ್ಯರ್ಥಿಗಳಿಗೆ ಶುಭವಾಗಲೆಂದು ಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆಯಲಾಯಿತು.

ಸಂಜೆ ಸೈನಿಕ ಅಕಾಡೆಮಿಯಲ್ಲಿ ಮೈಸೂರು ಪತ್ರಿಕಾ ಸಂಘದ ಮಾಜಿ ಅಧ್ಯಕ್ಷರಾದ ಮಹೇಂದ್ರ.ಸಿ ಕೆ ಅವರ ಉಪಸ್ಥಿತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಶುಭಕೋರುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಹೇಂದ್ರ.ಸಿ ಕೆ ಅವರು ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದರು.

ಧಕ್ಷಿಣ ಭಾರತದಲ್ಲಿ ಈ ತರಹ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವಸತಿ ತರಬೇತಿ ಕೇಂದ್ರ ಇರುವುದು ಹೆಮ್ಮೆಯ‌ ವಿಷಯವಾಗಿದೆ, ಈ ಸಂಸ್ಥೆಯಿಂದ 361 ಅಭ್ಯರ್ಥಿಗಳು ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಒಂದು ದೊಡ್ಡ ಸಾಧನೆ ಎಂದು ಶ್ಲಾಘಿಸಿದರು.

ಇಂತಹ ಸಂಸ್ಥೆಯಲ್ಲಿ ನೀವು ತರಬೇತಿ ಪಡೆದಿರುವುದು ನಿಜವಾಗಿಯೂ ಶ್ಲಾಘನೀಯ, ನೀವೆಲ್ಲರೂ ಪರೀಕ್ಷೆ ಬರೆದು ಆಯ್ಕೆ ಆದಮೇಲೆ ನಿಮ್ಮೆಲ್ಲರನ್ನೂ ನಾನೇ ಬಂದು ಸನ್ಮಾನಿಸುತ್ತೇನೆ ಎಂದು ವಿಶ್ವಾಸ ನೀಡಿದರು.

ಇದೇ‌ ವೇಳೆ ಸೈನಿಕ್ ಅಕಾಡೆಮಿಯ ಎಲ್ಲಾ ಅಧ್ಯಾಪಕರು ಸ್ಪರ್ಧಾರ್ಥಿಗಳಿಗೆ ಪರೀಕ್ಷೆಯ ಬಗ್ಗೆ ವಿಶ್ವಾಸ ತುಂಬಿದರು.

ಸೈನಿಕ್ ಅಕಾಡೆಮಿಯ ಸಂಸ್ಥಾಪಕರಾದ ಮಾಜಿ ಕಮಾಂಡೋ ಶ್ರೀಧರ್.ಸಿಎಂ ಅವರು ಕಳೆದ ಮೂರು ತಿಂಗಳಿನಿಂದ ನಮ್ಮಲ್ಲಿ ತರಬೇತಿ ಪಡೆದ ನಿಮ್ಮ ಪ್ರಯತ್ನ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಪರೀಕ್ಷೆ ಬರೆಯಲು ತಯಾರಾಗಿರುವ ನೀವು ಯುದ್ಧಕ್ಕೆ ಸಜ್ಜಾದ ಸೈನಿಕರಂತೆ,ನೀವೆಲ್ಲರೂ ಸೇನೆಗೆ ಆಯ್ಕೆಯಾಗಿ ಎಂದು ಶುಭ ಕೋರಿದರು,

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹೇಂದ್ರ.ಸಿ ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರಾದ ರವಿ, ವಿಜಯ್, ನಮ್ರತಾ, ಮಲ್ಲಿಕಾರ್ಜುನ, ಶ್ರೀಲಕ್ಷ್ಮಿ ಹಾಗೂ ಸಿಬ್ಬಂದಿ, ಸಹ ಸಿಬ್ಬಂದಿ ದಿಲೀಪ್, ಚೇತನ್, ಉಪಸ್ಥಿತರಿದ್ದರು.

ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವಸತಿ ತರಬೇತಿ ಕೇಂದ್ರ ಮೈಸೂರಿನಲ್ಲಿರುವುದು ಹೆಮ್ಮೆ-ಮಹೇಂದ್ರ.ಸಿ ಕೆ Read More

ಭವಿಷ್ಯದ ಸೈನಿಕರಿಂದ ನೇತಾಜಿ ಜನ್ಮ ದಿನಾಚರಣೆ

ಮೈಸೂರು: ಮೈಸೂರಿನ ಬೆಳವಾಡಿ
ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿ ಸೈನಿಕ ಅಕಾಡೆಮಿ ವತಿಯಿಂದ ಭವಿಷ್ಯದ ಸೈನಿಕರೊಂದಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ
ಜನ್ಮ ಜಯಂತಿಯನ್ನು ಆಚರಿಸಲಾಯಿತು.

ಈ ವೇಳೆ ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಶ್ರೀಧರ ಸಿ ಎಂ ರವರು ಮಾತನಾಡಿ, ಬೋಸ್ ಜಿ ಅವರು ಭಾರತದ ಮೊದಲ ಸೇನಾಧ್ಯಕ್ಷರು.ಇದನ್ನು ಹೇಳಲು ನನಗೆ ಖುಷಿ ಎಂದು ತಿಳಿಸಿದರು.

ನೇತಾಜಿ ಯಾವುದೇ ಸರ್ಕಾರದ ಸಹಾಯ ಪಡೆಯದೇ 25 ಸಾವಿರಕ್ಕೂ ಹೆಚ್ಚು ಸೈನಿಕರನ್ನು ತಯಾರಿಸಿ ಬ್ರಿಟಿಷರ ವಿರುದ್ದ ಯುದ್ಧ ಘೋಷಣೆ ಮಾಡಿ ಬ್ರಿಟಿಷರಿಗೆ ನಡುಕ ಉಂಟುಮಾಡಿದ್ದರು, ಇಂತಹ ಮಹಾ ಪರಾಕ್ರಮಿಯ ಬಗ್ಗೆ ಎಷ್ಟು ಹೇಳಿದರು ಸಾಲದು, ಒಟ್ಟಾರೆ ಬ್ರಿಟಿಷರು ಭಾರತ ಬಿಟ್ಟು ತೊಲುಗಲು ಮುಖ್ಯ ಕಾರಣ ಕ್ರಾಂತಿಕಾರಿ ಸುಭಾಷ್ ಚಂದ್ರ ಬೋಸ್ ಎಂದು ಶ್ರೀಧರ ಸಿ ಎಂ ತಿಳಿಸಿದರು.

ಭವಿಷ್ಯದ ಸೈನಿಕರಿಂದ ನೇತಾಜಿ ಜನ್ಮ ದಿನಾಚರಣೆ Read More

ಸೈನಿಕ ಅಕಾಡೆಮಿಯಲ್ಲಿ ಕನಕ ದಾಸರ ಜಯಂತಿ ಆಚರಣೆ

ಮೈಸೂರು: ಮೈಸೂರಿನ ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿರುವ ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ ಕನಕ ದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕನಕ ದಾಸರು ಕೀರ್ತನೆಗಳ ಮೂಲಕ, ಮಾನವ ಕುಲದ ಬೇಧ ಬಾವದ ಬಗ್ಗೆ ಕುರಿತು 15, 16 ನೇ ಶತಮಾನದಲ್ಲಿಯೇ ನುಡಿದ ಮಾತುಗಳು ಪ್ರಸ್ತುತ ದಿನಗಳಲ್ಲೂ ಎಷ್ಟು‌ಅವಶ್ಯಕ ಎಂಬುದನ್ನು ತಿಳಿಸಿಕೊಡಲಾಯಿತು.

ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ವ್ಯತಿರಿಕ್ತ ಪರಿಸ್ಥಿತಿಗಳನ್ನು ತಿಳಿಸುವ ಮೂಲಕ ಕನಕರ ದಾಸವಾಣಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಎಲ್ಕರಿಗೂ ಮನದಟ್ಟು ಮಾಡುವ ಮೂಲಕ ಕನಕ ದಾಸರ ಜಯಂತಿಯನ್ನು ಆಚರಿಸಲಾಯಿತು

ಈ ಕಾರ್ಯಕ್ರಮದಲ್ಲಿ ಸೈನಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ಮಾಜಿ ಕಮಾಂಡೋ ಶ್ರೀಧರ ಸಿ ಎಂ, ಅಧ್ಯಾಪಕರು ವಿಜಯ್ ಕುಮಾರ್, ರವಿ ಎಸ್ ಎಸ್ ಹಾಗೂ ಸಹ ಸಿಬ್ಬಂದಿಗಳು, ಸೈನಿಕ ಅಕಾಡೆಮಿಯ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಸೈನಿಕ ಅಕಾಡೆಮಿಯಲ್ಲಿ ಕನಕ ದಾಸರ ಜಯಂತಿ ಆಚರಣೆ Read More