ಸಿಲಿಂಡರ್ ಸ್ಪೋಟ:ಸುಟ್ಟುಹೋದ ಬೇಕರಿ

ಬೆಳಗಾವಿ: ಸಿಲಿಂಡರ್ ಸ್ಪೋಟಗೊಂಡು ಬೇಕರಿ ಅಂಗಡಿ ಸುಟ್ಟು ಕರಕಲಾದ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ನಡೆದಿದೆ.

ಮುನವಳ್ಳಿ ಪಟ್ಟಣದ ಕೆಇಬಿ ಸರ್ಕಲ್ ಬಳಿ ಇರುವ ಬೇಕರಿಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಬೇಕರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಸುಟ್ಟುಹೋಗಿವೆ.

ಹಾಸನ ಮೂಲದ ವಿರೂಪಾಕ್ಷ ಎಂಬುವವರಿಗೆ ಈ ಬೇಕರಿ ಸೇರಿತ್ತು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹಲವಾರು ವರ್ಷಗಳಿಂದ ಬೇಕರಿ ನಡೆಸುತ್ತಿದ್ದ ವಿರೂಪಾಕ್ಷ ಕೆಲಸ ಮಾಡುತ್ತಿದ್ದಾಗ ಬೆಳಗ್ಗೆ ಸಿಲಿಂಡರ್ ಸ್ಪೋಟಗೊಂಡಿದೆ‌.

ಕೆಲಸದಲ್ಲಿದ್ದ ಕಾರ್ಮಿಕರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸವದತ್ತಿ ಪೊಲೀಸರು ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ನಡೆಸಿದರು.

ಸಿಲಿಂಡರ್ ಸ್ಪೋಟ:ಸುಟ್ಟುಹೋದ ಬೇಕರಿ Read More

ಮರಾಠಿ ಪುಂಡರನ್ನು ಶಾಶ್ವತವಾಗಿ ಗಡಿಪಾರು ಮಾಡಿ:ಸಿಎಂಗೆ ಮು.ಮ ಚಂದ್ರು ಪತ್ರ

ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿ ಪುಂಡರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವುದು ಯಾವುದೇ ನಾಗರೀಕ ಸಮಾಜವು ಸಹಿಸಲು ಸಾಧ್ಯವಿಲ್ಲ‌ ಎಂದು ಆಮ್‌ ಆದ್ಮಿ ಪಕ್ಷದ ‌ರಾಜ್ಯಾಧ್ಯಕ್ಷ ಮುಖ್ಯ ಮಂತ್ರಿ‌ ಚಂದ್ರು ಕಿಡಿಕಾರಿದ್ದಾರೆ.

ಪದೇ ಪದೇ ಇಂತಹ ಘಟನೆಗಳನ್ನು ಮುಂದುವರಿಸುತ್ತಿರುವ ಈ ಮರಾಠಿ ಪುಂಡರುಗಳನ್ನು ಗುರುತಿಸಿ ರಾಜ್ಯದಿಂದ ಶಾಶ್ವತವಾಗಿ ಗಡಿಪಾರು ಮಾಡಲು ತಾವು ಈ ಕೂಡಲೇ ಆದೇಶ ಹೊರಡಿಸಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ‌ ಅವರಿಗೆ ಚಂದ್ರು ಮನವಿ ಮಾಡಿದ್ದಾರೆ.

ಈ‌ ಕುರಿತು ಸಿಎಂಗೆ ಪತ್ರ ಬರೆದಿರುವ ಅವರು,ಅನೇಕ ವರ್ಷಗಳಿಂದ ತಮ್ಮ ರಾಜಕೀಯ ಅಭಿಲಾಷೆಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಸಾಮರಸ್ಯ ಸಂಬಂಧಕ್ಕೆ ಧಕ್ಕೆ ತರುವ ಕೃತ್ಯಗಳನ್ನು ಎಸಗಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿರುವ ಈ ಸಮಾಜದ್ರೋಹಿಗಳ ಮೇಲೆ ಕೂಡಲೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಎರಡೂ ರಾಜ್ಯಗಳಲ್ಲಿ ಶಾಂತಿಭಂಗ ವಾಗುವ ಅಪಾಯ ಇದೆ ಎಂದು ಎಚ್ಚರಿಸಿದ್ದಾರೆ.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ತಾವು ಕೂಡಲೇ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕು. ಅಲ್ಲದೆ ಭಾಷಾ ಸಾಮರಸ್ಯವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಹಾಳು ಮಾಡುತ್ತಿರುವ ತಮ್ಮ ಪಕ್ಷವು ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರುಗಳಿಗೆ ಕಠಿಣ ಎಚ್ಚರಿಕೆ ನೀಡುವ ಮೂಲಕ ಕನ್ನಡಿಗರೊಂದಿಗೆ ಸರಕಾರ ಇದೆ ಎಂಬ ಎಚ್ಚರಿಕೆಯನ್ನು ರವಾನಿಸಬೇಕೆಂದು ಮುಖ್ಯ ಮಂತ್ರಿ‌ ಚಂದ್ರು ಒತ್ತಾಯಿಸಿದ್ದಾರೆ.

ಮರಾಠಿ ಪುಂಡರನ್ನು ಶಾಶ್ವತವಾಗಿ ಗಡಿಪಾರು ಮಾಡಿ:ಸಿಎಂಗೆ ಮು.ಮ ಚಂದ್ರು ಪತ್ರ Read More

ವಿದ್ಯಾರ್ಥಿಗಳ ಮೇಲೆ ಹರಿದ ಬಸ್

ಬೆಳಗಾವಿ: ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆಯೇ ಬಸ್ ಹರಿದು ಒಬ್ಬ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಗಲಗಲಿಯಲ್ಲಿ ನಡೆದಿದೆ.

ಸುನೀಲ್ (10) ಮೃತ ಬಾಲಕ.

ಆಗತಾನೇ ಟ್ಯೂಷನ್ ಮುಗಿಸಿಕೊಂಡು ಬಂದ ವಿದ್ಯಾರ್ಥಿಗಳು ರಸ್ತೆಬದಿ ನಿಂತಿದ್ದರು. ಈ ವೇಳೆ ಸರ್ಕಾರಿ ಬಸ್ ಮಕ್ಕಳ ಮೇಲೆಯೇ ಹರಿದಿದ್ದು ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇದರಿಂದ ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು,ಕೂಡಲೇ‌ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಹರಿದ ಬಸ್ Read More