ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರ

ಬೆಳಗಾವಿ ಸುವರ್ಣಸೌಧ : 2024ನೇ ಸಾಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ರಚನೆ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ.

ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಗುರುವಾರ ವಿಧಾನ ಸಭೆ ಕಲಾಪದಲ್ಲಿ, 2024ನೇ ಸಾಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ಮಂಡಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ರಚನೆಗಾಗಿ ವಿಧೇಯಕವನ್ನು ರಚನೆ ಮಾಡಲಾಗಿದೆ. ಪ್ರಾಧಿಕಾರಕ್ಕೆ ಹಿರಿಯ ಶ್ರೇಣಿ ಐಎಎಸ್ ಅಧಿಕಾರಿಯನ್ನು ಆಯಕ್ತರನ್ನಾಗಿ ನೇಮಿಸಲು ಅವಕಾಶ ನೀಡಲಾಗಿದೆ.

ಪ್ರಾಧಿಕಾರ ಸದಸ್ಯತ್ವದ ನೇಮಕಕ್ಕೂ ತಿದ್ದುಪಡಿ ತಂದು ಸರ್ಕಾರಕ್ಕೆ ಸದಸ್ಯರ ನೇಮಕ ಮಾಡಲು ಅಧಿಕಾರ ನೀಡಲಾಗಿದೆ.
ಮೈಸರೂ ಪರಾಂಪರಿಕ ಮಹತ್ವ ಕಾಪಾಡಲು ಪ್ರಾಧಿಕಾರದ ಅಡಿ ಪರಾಂಪರಿಕ ಕಟ್ಟಡಗಳ ರಕ್ಷಣಾ ಸಮಿತಿ ರಚನೆ ಮಾಡಲಾಗುವುದು ಎಂದು ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.

ಶಾಸಕರಾದ ತಮ್ಮಣ್ಣ, ಭೈರತಿ ಬಸವರಾಜ ಎಸ್.ಟಿ.ಸೋಮಶೇಖರ್,ಟಿ.ಎಸ್.ಶ್ರೀವತ್ಸ, ಜಿ.ಟಿ.ದೇವೇಗೌಡ, ವಿ.ಸುನಿಲ್ ಕುಮಾರ್, ಹೆಚ್.ಡಿ.ರೇವಣ್ಣ ವಿಧೇಯಕ ಕುರಿತು ಚರ್ಚಿಸಿದರು.

ನಂತರ ವಿಧಾನ ಸಭೆಯಲ್ಲಿ ಧ್ವನಿ ಮತದ ಮೂಲಕ ಕೆಲ ತಿದ್ದಪಡಿಯೊಂದಿಗೆ ವಿಧೇಯಕವನ್ನು ಅಂಗೀಕರಿಸಲಾಯಿತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರ Read More

ವಕ್ಫ್ ಮಂಡಳಿ ಕುರಿತು ಉತ್ತರ ನೀಡಲು ಸರ್ಕಾರ ರೆಡಿ: ಸಿಎಂ

ಬೆಳಗಾವಿ: ಸರ್ಕಾರ ಉತ್ತರ ಕರ್ನಾಟಕದ ಚರ್ಚೆಗೂ ಸಿದ್ಧವಿದೆ, ವಕ್ಫ್ ಮಂಡಳಿ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗಳಿಗೂ ಉತ್ತರ ನೀಡಲೂ ಸಿದ್ಧವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಕುರಿತಂತೆ ಮೌನ ವಹಿಸಲು ಶಾಸಕ ಬಿ.ವೈ. ವಿಜವೇಂದ್ರ ತಮಗೆ 150 ಕೋಟಿಗಳ ಆಮಿಷ ಒಡ್ಡಿದ್ದರು ಎಂಬ ಆರೋಪ ಸುಳ್ಳು ಎಂಬ ಮಾಣಿಪ್ಪಾಡಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರೇ ಸ್ವತಃ ಹಿಂದೆ ಆಮಿಷ ಒಡ್ಡಿದ್ದರು ಎಂದು ಹೇಳಿರುವುದರ ಮೇಲೆ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಅವರೇ ಪತ್ರಿಕಾಗೋಷ್ಠಿ ಕರೆದು ನೀಡಿರುವ ಹೇಳಿಕೆಗೆ ನನ್ನ ಪ್ರಕಾರ ಪ್ರತಿಕ್ರಿಯೆ ನೀಡಿರುವುದು ಸರಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಈಗ ಬಹಳ ವರ್ಷಗಳ ನಂತರ ಹೇಳಿಲ್ಲ ಎನ್ನುತ್ತಿದ್ದಾರೆ. ಏನು ಮಾಡಬೇಕು ಎಂದು ನೀವೇ ಹೇಳಿ ಎಂದು ಸಿದ್ದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಪ್ರಹ್ಲಾದ ಜೋಶಿ ಅವರು ಪಂಚಮಸಾಲಿ ಸಮುದಾಯ ವನ್ನು ಪ್ರವರ್ಗ 2ಎ ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟದಲ್ಲಿ ಆಗಿರುವ ಅವಘಡಕ್ಕಾಗಿ ಸಿಎಂ ಕ್ಷಮೆ ಕೇಳಬೇಕು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಯಾರು ಸಮಸ್ಯೆಯನ್ನು ಇತ್ಯರ್ಥ ಮಾಡಿಲ್ಲವೋ ಅವರೇ ಕ್ಷಮೆ ಕೇಳಲಿ ಎಂದು ಸಿದ್ದರಾಮಯ್ಯ ತಿಳಿಸಿದರು.

ವಕ್ಫ್ ಮಂಡಳಿ ಕುರಿತು ಉತ್ತರ ನೀಡಲು ಸರ್ಕಾರ ರೆಡಿ: ಸಿಎಂ Read More

ಲಾಠಿ ಚಾರ್ಜ್:ಪೊಲೀಸರ ನಡೆ ಸಮರ್ಥಿಸಿಕೊಂಡ ಪರಮೇಶ್ವರ್

ಬೆಂಗಳೂರು: ಪಂಚಮಸಾಲಿ ಪ್ರತಿಭಟನೆ ವೇಳೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ.
ಎಂದು ಗೃಹಸಚಿವ ಜಿ. ಪರಮೇಶ್ವರ್‌ ತಿಳಿಸಿದರು.

ಪ್ರತಿಭಟನೆ ವೇಳೆ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದ್ದರಿಂದ, ಲಾಠಿ ಚಾರ್ಜ್ ಮಾಡುವ ಅನಿವಾರ್ಯ ವಾಯಿತು ಎಂದು ಪರಮೇಶ್ವರ್‌ ಪೊಲೀಸರ ನಡೆಯನ್ನು ಸಮರ್ಥಿಸಿಕೊಂಡರು.

2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪಂಚಮಸಾಲಿಗಳ ಪ್ರತಿಭಟನೆ ವೇಳೆ ಲಾಠಿ ಚಾರ್ಜ್‌ ನಡೆದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್,ಪಂಚಮಸಾಲಿ ಪ್ರತಿಭಟನೆ ಅವರ ಹಕ್ಕು,ಆದರೆ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದರು.

5 ಸಾವಿರ ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಮುತ್ತಿಗೆ ಹಾಕಲು ಮುಂದಾಗಿದ್ದರು, ಸಿಎಂ ಜೊತೆ ಮಾತುಕತೆಗೆ ಸ್ವಾಮೀಜಿ ಬರಲಿಲ್ಲ, ಮುಖ್ಯರಸ್ತೆಗೆ ಪ್ರತಿಭಟನಾಕಾರರು ಬಂದರು. ಕಾನೂನು ಉಲ್ಲಂಘನೆ ಮಾಡಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೋದಾಗ ಲಘು ಲಾಠಿ ಪ್ರಹಾರ ನಡೆದಿದೆ. ಸ್ವಾಮೀಜಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ, ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ ಆದ್ದರಿಂದ, ಲಾಠಿ ಚಾರ್ಜ್ ಮಾಡುವ ಅನಿವಾರ್ಯ ಇತ್ತು ಎಂದು ಸ್ಪಷ್ಟಪಡಿಸಿದರು.

ಗೋಲಿಬಾರ್ ಮಾಡುವ ಪ್ಲ್ಯಾನ್‌ ಇತ್ತು ಎಂಬ ಸ್ವಾಮೀಜಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಆ ರೀತಿ ಏನೂ ಇಲ್ಲ, ಪೊಲೀಸರು ಯಾರ ಮೇಲೂ ದುರುದ್ದೇಶಪೂರಿತವಾಗಿ ಲಾಠಿ ಪ್ರಹಾರ ನಡೆಸಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

ಲಾಠಿ ಚಾರ್ಜ್:ಪೊಲೀಸರ ನಡೆ ಸಮರ್ಥಿಸಿಕೊಂಡ ಪರಮೇಶ್ವರ್ Read More

ಬೆಳಗಾವಿ ಪ್ರತ್ಯೇಕಿಸುವ ಬಾಲಿಶ ಹೇಳಿಕೆ ಕರ್ನಾಟಕ ಸಹಿಸಲ್ಲ: ಸಿಎಂ ಎಚ್ಚರಿಕೆ

ಬೆಳಗಾವಿ: ಬೆಳಗಾವಿ ಕುರಿತು ಮಹಾಜನ್ ಆಯೋಗದ ವರದಿಯೇ ಅಂತಿಮ, ಪದೇ ಪದೇ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವುದು ಅಲ್ಲಿನವರ ಮೂರ್ಖತನ ಎಂದು ಸಿಎಂ ಸಿದ್ದರಾಮಯ್ಯ ಕಟುವಾಗಿ ಹೇಳಿದರು.

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂಬ ಒತ್ತಾಯವನ್ನು ಮಹಾರಾಷ್ಟ್ರ ಶಾಸಕರು ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಹೀಗೆ ನೀಡಲಾಗುತ್ತಿರುವ ಬಾಲಿಶ ಹೇಳಿಕೆಗಳನ್ನು ಕರ್ನಾಟಕ ಸರ್ಕಾರ ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಕಡಕ್ ಎಚ್ಚರಿಕೆ ನೀಡಿದರು.

ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ಪಂಚಮಸಾಲಿ ಸಮುದಾಯದ ಮುಖಂಡರನ್ನು ಚರ್ಚೆಗೆ ಕರೆದಿದ್ದರೂ, ಅವರು ಆಗಮಿಸಿಲ್ಲ, ಪ್ರಜಾಪ್ರಭುತ್ವದಲ್ಲಿ ಹೋರಾಟ ಕೈಗೊಳ್ಳಲು ಅವಕಾಶವಿದ್ದು, ಹೋರಾಟಕ್ಕೆ ನಮ್ಮ ವಿರೋಧವಿಲ್ಲ ಎಂದು ಸಿಎಂ ಹೇಳಿದರು.

ಹಿರಿಯ ನಾಯಕ ಎಸ್ ಎಂ ಕೃಷ್ಣ ಅವರು ದಕ್ಷ ಆಡಳಿತಗಾರರಾಗಿದ್ದವರು.ವಿಧಾನ ಸಭೆ, ವಿಧಾನ ಪರಿಷತ್ತು, ಲೋಕಸಭೆ ಹಾಗೂ ರಾಜ್ಯಸಭೆಗಳ ಸದಸ್ಯರಾಗಿ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ವಿಧಾನಸಭೆ ಸ್ಪೀಕರ್ ಆಗಿ , ರಾಜ್ಯಪಾಲರಾಗಿ ಕೆಲಸ ಮಾಡಿರುವ ಸಜ್ಜನ ರಾಜಕಾರಣಿಯಾಗಿದ್ದರು ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಡಾ. ರಾಜ್ ಕುಮಾರ್ ಅವರ ಅಪಹರಣದ ಸವಾಲನ್ನು ಸಮರ್ಥವಾಗಿ ಎದುರಿಸಿದ್ದರು. 92 ವರ್ಷದ ಎಸ್ ಎಂ ಕೃಷ್ಣ ಅವರು ಕಳೆದ ಆರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನದಿಂದ ರಾಜ್ಯ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿ ದೊರೆಯಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಎರಡು ತಿಂಗಳ ಹಿಂದೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರನ್ನು ಭೇಟಿಯಾಗಿದ್ದೆ. ರಾಜ್ಯದಲ್ಲಿ ನಾಳೆ ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ, ಮೂರು ದಿನ ಶೋಕಾಚರಣೆ ಇರಲಿದೆ. ನಾಳೆ ಅಂತ್ಯಕ್ರಿಯೆಯಲ್ಲಿ ನಾನು ಭಾಗವಹಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಪ್ರತ್ಯೇಕಿಸುವ ಬಾಲಿಶ ಹೇಳಿಕೆ ಕರ್ನಾಟಕ ಸಹಿಸಲ್ಲ: ಸಿಎಂ ಎಚ್ಚರಿಕೆ Read More

ಸಿಎಂ ಸಿದ್ದರಾಮಯ್ಯ ನಿದ್ದೆರಾಮಯ್ಯ:ಅಶೋಕ್ ಲೇವಡಿ

ಬೆಳಗಾವಿ: ಸಿಎಂ ಸಿದ್ದರಾಮಯ್ಯ ನಿದ್ದೆರಾಮಯ್ಯ ಆಗಿದ್ದಾರೆ,12 ತಿಂಗಳ ಅವಧಿಯಲ್ಲಿ 17 ಅವಾಂತರಗಳನ್ನು ಸರ್ಕಾರ ತೋರಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 18 ತಿಂಗಳು ಕಳೆದಿವೆ.17 ತಿಂಗಳಾದರೂ ಸರ್ಕಾರ ಏನೂ ಅಭಿವೃದ್ಧಿ ಮಾಡಿಲ್ಲ. ಆದರೆ 17 ತಿಂಗಳಲ್ಲಿ 17 ಅವಾಂತರಗಳನ್ನು ಸರ್ಕಾರ ತೋರಿಸಿದೆ ಎಂದು‌ ವ್ಯಂಗ್ಯ ವಾಡಿದರು.

ಸಿದ್ದರಾಮಯ್ಯ ಕಳೆದ ಬಾರಿಯ ಆಡಳಿತವನ್ನು ಕೊಡುತ್ತಿಲ್ಲ.ಈ ಬಾರಿ ಸಿದ್ದರಾಮಯ್ಯ ಅವರೇ ಮುಡಾದಲ್ಲಿ ಸಿಲುಕಿ ನರಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಈಗ ನಿದ್ದೆರಾಮಯ್ಯ ಆಗಿದ್ದಾರೆ. ಜೊತೆಗೆ ಸರ್ಕಾರವು ಕೂಡ ನಿದ್ದೆಯಲ್ಲಿದೆ ಎಂದು ವ್ಯಂಗ್ಯವಾಡಿದರು.

ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಮುನ್ನೂರಕ್ಕೂ ಹೆಚ್ಚು ನವಜಾತ ಶಿಶುಗಳ ಸಾವಾಗಿದೆ. ಸಿದ್ದರಾಮಯ್ಯ ಹೊಸದಾಗಿ ಬಂದಾಗ ಪ್ರತಿ ತಿಂಗಳು ಜನತಾದರ್ಶನ ಮಾಡುತ್ತೇನೆ ಎಂದಿದ್ದರು. ಆದರೆ ಮಂತ್ರಿಗಳು ದುಡ್ಡು ಮಾಡುವುದರಲ್ಲಿ ಮುಳುಗಿದ್ದಾರೆ. ಜಿಲ್ಲೆಗಳಿಗೆ ಮಂತ್ರಿಗಳು ಭೇಟಿ ಕೊಡುತ್ತಿಲ್ಲ. ದುಡ್ಡು ಮಾಡಲು ಮಾತ್ರ ಜಿಲ್ಲೆಗಳಿಗೆ ಹೋಗುತ್ತಾರೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದರು.

ಇದು ಗುರುವಾರದ ಸರ್ಕಾರ, ಗುರುವಾರ ಮಾತ್ರ ಸಚಿವರು ವಿಧಾನಸೌಧಕ್ಕೆ ಬರುತ್ತಾರೆ. ಉತ್ತರ ಕರ್ನಾಟಕದ ಬಗ್ಗೆ ಸರ್ಕಾರ ಹೇಳಿದ್ದೇನು, ಮಾಡಿದ್ದೇನು, ಅತ್ಯಂತ ಕಳಪೆ ಸರ್ಕಾರ ಇದು,ಎಲ್ಲವನ್ಯ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದು ಅಶೋಕ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ನಿದ್ದೆರಾಮಯ್ಯ:ಅಶೋಕ್ ಲೇವಡಿ Read More

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗುವ ನಂಬಿಕೆ ಇಲ್ಲ:ಬಿವೈವಿ

ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಎಂಬ ನಂಬಿಕೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಕೇವಲ ಬೂಟಾಟಿಕೆ,ಇದರ ಬಗ್ಗೆ ಗಂಭೀರ ಚರ್ಚೆ ಆಗುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಸರ್ಕಾರ ನಿಷ್ಕ್ರಿಯವಾಗಿದೆ. ಶಿಶುಗಳ ಮರಣ, ಬಾಣಂತಿಯರ ಸಾವು, ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ವಕ್ಫ್ ಆಸ್ತಿ ವಿವಾದದ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಪಂಚಮಸಾಲಿ ಹೋರಾಟಗಾರರ ಅಹವಾಲನ್ನು ಸರ್ಕಾರ ಸ್ವೀಕರಿಬೇಕು ಎಂದು ಅವರು ಇದೇ ವೇಳೆ ವಿಜಯೇಂದ್ರ ಒತ್ತಾಯಿಸಿದರು.

ಗ್ಯಾರಂಟಿಗಳಿಂದ ರಾಜ್ಯದ ಜನ ಆನಂದಲ್ಲಿದ್ದಾರೆ ಎಂಬ ಭ್ರಮೆಯಲ್ಲಿದ್ದಾರೆ, ದುರ್ಘಟನೆಗಳು ನಡೆದಾಗ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು,ಆದರೆ ಈ ಸರ್ಕಾರ ಹಾಗೂ ಸಚಿವರದ್ದು ಉದ್ಧಟನದ ವರ್ತನೆ ಆಗಿಬಿಟ್ಟಿದೆ ಎಂದು ದೂರಿದರು.

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗುವ ನಂಬಿಕೆ ಇಲ್ಲ:ಬಿವೈವಿ Read More

ಬೆಳಗಾವಿಯಲ್ಲಿಕೆರೆಗೆ ಹಾರಿ ಯೋಧ ಆತ್ಮಹತ್ಯೆ

ಬೆಳಗಾವಿ: ರಜೆಗೆ ಊರಿಗೆ ಬಂದಿದ್ದ ಯೋಧರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕಿತ್ತೂರು ತಾಲೂಕಿನ ದೇವಗಾಂವ ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು,
ನರೇಶ್ ಅಗಸರ (28) ಆತ್ಮಹತ್ಯೆ ಮಾಡಿಕೊಂಡಿರುವ ಯೋಧ.

ಅವರು ಕಳೆದ 4 ವರ್ಷಗಳಿಂದ ಭಾರೀತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 20 ದಿನಗಳ ಹಿಂದೆ ನರೇಶ್ ರಜೆಯ ಮೇಲೆ ಊರಿಗೆ ಬಂದಿದ್ದರು.ಇವತ್ತು ಕರ್ತವ್ಯಕ್ಕೆ ಹೋಗಬೇಕಾಗಿತ್ತು.

ಆದರೆ ಅದೇನಾಯಿತೊ ಯೋಧ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿತ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಳಗಾವಿಯಲ್ಲಿಕೆರೆಗೆ ಹಾರಿ ಯೋಧ ಆತ್ಮಹತ್ಯೆ Read More

ಆರ್ಮಿ ನೇಮಕಾತಿಗೆ ರ್‍ಯಾಲಿ: ನೂಕುನುಗ್ಗಲು-ಲಾಠಿ ಪ್ರಹಾರ

ಬೆಳಗಾವಿ: ಆರ್ಮಿ ನೇಮಕಾತಿಗಾಗಿ ಬೆಳಗಾವಿಯ ಮರಾಠಾ ರೆಜಿಮೆಂಟ್ ನಲ್ಲಿ ಆಯೋಜಿಸಿದ್ದ ಓಪನ್ ರ್‍ಯಾಲಿ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ಒಂದಿಬ್ಬರು ಗಾಯಗೊಂಡಿದ್ದಾರೆ.

ಈ ಓಪನ್ ರ್‍ಯಾಲಿಯಲ್ಲಿ ಭಾಗವಹಿಸಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಾರೀ ಸಂಖ್ಯೆಯಲ್ಲಿ ಯುವಕರು ಬಂದಿದ್ದರು.

ಬೆಳಗಾವಿಯ ಮರಾಠಾ ರೆಜಿಮೆಂಟ್ ನಲ್ಲಿ ಅಂದಾಜು 28 ಸಾವಿರ ಯುವಕರು ಆಗಮಿಸಿ ಆರ್ಮಿ ಸೆಲೆಕ್ಷನ್ ಗಾಗಿ ಕಾದು ಕುಳಿತಿದ್ದರು.

ಇದ್ದಕ್ಕಿದ್ದಂತೆ ಅಭ್ಯರ್ಥಿಗಳು ಸಲಿನಿಂದ ನುಗ್ಗಿದ ಪರಿಣಾಮ ನೂಕಾಟ-ತಳ್ಳಾಟ ನಡೆದಿದೆ. ಈ ವೇಳೆ ಕಾಲ್ತುಳಿತ ಸಂಭವಿಸಿ ಕೆಲವರು ಯುವಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು, ಸೈನಿಕರು ಹರಸಾಹಸಪಟ್ಟರು ಅಲ್ಲದೆ ಒಂದು ಹಂತದಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು.

ಆರ್ಮಿ ನೇಮಕಾತಿಗೆ ರ್‍ಯಾಲಿ: ನೂಕುನುಗ್ಗಲು-ಲಾಠಿ ಪ್ರಹಾರ Read More

ತಾಕತ್ತಿದ್ದರೆ ನನ್ನ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿ:ಶೋಭಾ ಕರಂದ್ಲಾಜೆ

ಬೆಳಗಾವಿ: ತಾಕತ್ತಿದ್ದರೆ ನನ್ನ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಸವಾಲು ಹಾಕಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಬೈರತಿ ಸುರೇಶ್ ಮುಡಾದ ನೂರಾರು ದಾಖಲಾತಿಯನ್ನು ತಂದು ಸುಟ್ಟು ಹಾಕಿದ ಕುರಿತು ನಾನು ಧ್ವನಿ ಎತ್ತಿದೆ ಅದಕ್ಕಾಗಿ ಅವರು ನನ್ನ ಮೇಲೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಹಲವಾರು ಸಚಿವರು ಭ್ರಷ್ಟಾಚಾರದ‌ ತನಿಖೆ ಎದುರಿಸಿದ್ದಾರೆ,ಆದರೆ ಶೋಭಾ ಕರಂದ್ಲಾಜೆ ಯಾವತ್ತಿಗೂ ಭ್ರಷ್ಟಾಚಾರ ಮಾಡಿಲ್ಲ, ಮಾಡೋದೂ ಇಲ್ಲ, ಮತ್ತು ನಮ್ಮ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡುವವಳು ನಾನು ಎಂದು ಹೇಳಿದರು.

ಪೊನ್ನಣ್ಣನಿಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ, ಏನು ಮಾಡಲು ಹೊರಟ್ಟಿದ್ದೀರಿ ನಕಲಿ ದಾಖಲೆ ಸೃಷ್ಟಿಸಲು ಪೊನ್ನಣ್ಣನಿಗೆ ಜವಾಬ್ದಾರಿ ನೀಡಿದ್ದೀರಾ ಎಂದು ಕಾರವಾಗಿ ಪ್ರಶ್ನಿಸಿದರು.

ಪೊನ್ನಣ್ಣ ಇರುವುದು ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ, ಅವರಿಗೆ ನೀವು ವಿದ್ಯುತ್ ಇಲಾಖೆಯ ಜವಾಬ್ದಾರಿ ‌ನೋಡಿ ಎಂದರೆ ಅದರಲ್ಲಿಯೂ ಭ್ರಷ್ಟಾಚಾರ ಮಾಡಲು ಹೋರಟ್ಟಿದೀರಿ ಎನ್ನುವ ಸಂಶಯ ಕಾಡುತ್ತಿದೆ. ನಿಮ್ಮಲ್ಲಿ ಯಾವ ದಾಖಲಾತಿ ಇದೆ ತಕ್ಷಣ ಬಹಿರಂಗ ಪಡಿಸಿ ಎಂದು ಶೋಬಾಕರಂದ್ಲಾಜೆ ಸವಾಲು ಹಾಕಿದರು‌.

ಬೈರತಿ ಸುರೇಶ್ ಮುಡಾ ದಾಖಲೆ ಸುಟ್ಟು ಹಾಕಿದ್ದು ಸತ್ಯ. ಅದಕ್ಕಾಗಿ ಈಗ ಇಡಿ, ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಹಲವಾರು ಸಂಘ ಸಂಸ್ಥೆಗಳು ಸರಕಾರದ ಮೇಲೆ ಕಣ್ಣಿಟ್ಟಿದ್ದಾರೆ‌. ನಿಮಗೆ ತಾಖತ್ ಇದ್ದರೆ ನನ್ನ ಭ್ರಷ್ಟಾಚಾರ ಬಹಿರಂಗ ಮಾಡಿ ಎಂದು ಗುಡುಗಿದರು.

ನಮ್ಮ ರಾಜ್ಯದ ಮೂರು ಉಪ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಇದೇ ವೇಳೆ ಸಚಿವೆ ವಿಶ್ವಾಸ ವ್ಯಕ್ತಪಡಿಸಿದರು.

ತಾಕತ್ತಿದ್ದರೆ ನನ್ನ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿ:ಶೋಭಾ ಕರಂದ್ಲಾಜೆ Read More

ಸಿಸಿಬಿ ಪೊಲೀಸರ ಕಾರ್ಯಾಚರಣೆ:2.73 ಕೋಟಿ ಅಕ್ರಮ ಹಣ ವಶ

ಬೆಳಗಾವಿ: ಬೆಳಗಾವಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 2.73 ಕೋಟಿ ಹಣ ವಶಕ್ಕೆ ಪಡೆದಿದ್ದಾರೆ.

ಮಹಾರಷ್ಟ್ರದ ಸಾಂಗ್ಲಿಯಿಂದ ಹುಬ್ಬಳ್ಳಿಗೆ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಒಟ್ಟು 2.73 ಕೋಟಿ ಹಣ ಮತ್ತು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿಯ ಸಚಿನ್ ಮೇನಕುದಳೆ ಹಾಗೂ ಮಹಾರಾಷ್ಟ್ರದ ಮಾರುತಿ ಮಾರಗುಡೆ ಬಂಧಿತ ಆರೋಪಿಗಳು.

ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ನಂದೀಶ್ವರ್ ಕುಂಬಾರ ಹಾಗೂ ತಂಡ ಸಾಂಗ್ಲಿಯಿಂದ ಹುಬ್ಬಳ್ಳಿಕಡೆಗೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಿದರು,ಆಗ ದಾಖಲೆಗಳಿಲ್ಲದೇ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಸಾಗಿಸುತ್ತಿದ್ದುದು ಕಂಡುಬಂದಿದೆ.

ತಕ್ಷಣ ವಾಹನದಲ್ಲಿದ್ದ ಇಬ್ಬರನ್ನು ಬಂಧಿಸಿ 2.73 ಕೋಟಿ ರೂಪಾಯಿಗಳನ್ನು ವಾಹನ ಸಹಿತ ವಶಕ್ಕೆ ಪಡೆದರು.

ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.

ಸಿಸಿಬಿ ಪೊಲೀಸರ ಕಾರ್ಯಾಚರಣೆ:2.73 ಕೋಟಿ ಅಕ್ರಮ ಹಣ ವಶ Read More