ಬೆಳಗಾವಿ ಪಾಲಿಕೆ ಅಯುಕ್ತಎಂ. ಕಾರ್ತಿಕ್ ಅಧಿಕಾರ ಸ್ವೀಕಾರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ಎಂ. ಕಾರ್ತಿಕ್ ಅವರನ್ನು ಸರ್ಕಾರ ನೇಮಕ ಮಾಡಿದ್ದು,ಅವರು‌ ಅಧಿಕಾರ ಸ್ವೀಕರಿಸಿದ್ದಾರೆ.

ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಎಂ. ಕಾರ್ತಿಕ್ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದ್ದು ಅವರು ಅಧಿಕಾರ ವಹಿಸಿಕೊಂಡರು.

ಕಾರ್ತಿಕ್ ಅವರು ಇದುವರೆಗೆ ಬೆಂಗಳೂರಿನ ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸೆ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಬೆಳಗಾವಿ ಪಾಲಿಕೆ ಆಯುಕ್ತೆ ಶುಭಾ ಅವರನ್ನು‌ ಅವರ ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ಪಾಲಿಕೆ ಅಯುಕ್ತಎಂ. ಕಾರ್ತಿಕ್ ಅಧಿಕಾರ ಸ್ವೀಕಾರ Read More

ಬೆಳಗಾವಿ ಮಾರುಕಟ್ಟೆ ಠಾಣೆ ಪೊಲೀಸರಿಂದಎಂಇಎಸ್ ಪುಂಡರ ವಿರುದ್ಧ ಎಫ್ಐಆರ್

ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನ ಬೆಳಗಾವಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಎಂಇಎಸ್ ನಡೆಸಿದ ಕರಾಳ ದಿನಾಚರಣೆ ಹಿನ್ನೆಲೆ, ಬೆಳಗಾವಿ ಮಾರುಕಟ್ಟೆ ಠಾಣೆ ಪೊಲೀಸರು 150ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ‌ ಎಂಇಎಸ್ ಪುಂಡರು ಘೋಷಣೆ ಕೂಗಿ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿ, ಭಾಷಾ ಹಾಗೂ ಗಡಿತಂಟೆ ಕೆಣಕಿ ವಿಷಬೀಜ ಬಿತ್ತುವ ಕೆಲಸ ಮಾಡಿದ್ದಾರೆ.

ಸಾಮಾಜಿಕ ದೊಂಬಿ ಎಬ್ಬಿಸುವ ಹುನ್ನಾರ ನಡೆಸಿದ ಆರೋಪಗಳ ಮೇಲೆ ಪಿಎಸ್‌ಐ ವಿಠ್ಠಲ ಹಾವಣ್ಣವರ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಂಇಎಸ್ ಮಾಜಿ ಶಾಸಕ ಮನೋಹರ ಕಿಣೇಕರ, ಶುಭಂ ಸೆಳಕೆ ಸೇರಿ 150 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೇಸು ದಾಖಲಾಗುತ್ತಿದ್ದಂತೆ ಆರೋಪಿಗಳು ಬೆಳಗಾವಿ ನಗರದಿಂದ ಓಡಿಹೋಗಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆಯಲು ಬೆಳಗಾವಿ ನಗರ ಪೊಲೀಸರು ಬಲೆ ಬೀಸಿದ್ದಾರೆ.

ಬೆಳಗಾವಿಯಲ್ಲಿ ರಾಜಕೀಯ ಹೋರಾಟದ ಮುನ್ನೆಲೆ ಕಳೆದುಕೊಂಡಿರುವ ಎಂಇಎಸ್, ರಾಜಕೀಯ ಮಾಡಲು ಮರಾಠಿಗರನ್ನು ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ.

ಬೆಳಗಾವಿ ಮಾರುಕಟ್ಟೆ ಠಾಣೆ ಪೊಲೀಸರಿಂದಎಂಇಎಸ್ ಪುಂಡರ ವಿರುದ್ಧ ಎಫ್ಐಆರ್ Read More

ಕೋಟ್ಯಂತರ ಜಿ ಎಸ್ ಟಿ ವಂಚನೆ:ವ್ಯಕ್ತಿ ಬಂಧನ

ಬೆಳಗಾವಿ: ದಾವಣಗೆರೆ ಜಿಲ್ಲೆಯ ಹರಿಹರದ ಮರಿಯಮ್ ಸ್ಕ್ಯಾಪ್ ಡೀಲರ್ಸ್ ಮೇಲೆ ದಾಳಿ ನಡೆಸಿದ ಕೇಂದ್ರ ಜಿಎಸ್ ಟಿ ಬೆಳಗಾವಿ ಕಚೇರಿಯ ವಿಚಕ್ಷಣಾ ದಳದ ಅಧಿಕಾರಿಗಳು ಸುಮಾರು 21.64ಕೋಟಿ ತೆರಿಗೆ ವಂಚನೆ ಬಯಲಿಗೆ ಎಳೆದಿದ್ದಾರೆ.

ತೆರಿಗೆ ವಂಚನೆ ಸಂಬಂಧ ಮೆರಿಯಮ್ ಸ್ಕ್ರ್ಯಾಪ್ ನ ಮೊಹಮ್ಮದ್ ಸಾಕ್ಲಿಯಾನ್ ಎಂಬಾತನನ್ನು ವಶಕ್ಕೆ‌ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಸುಳ್ಳು ಬಿಲ್ಲುಗಳನ್ನು ಸಲ್ಲಿಸಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್(Input Tax Credit) ಮೋಸ ಮಾಡಿರುವುದು ಗೊತ್ತಾಗಿದೆ.

ನೊಂದಣಿಯಾಗದ ಪೂರೈಕೆದಾರರಿಂದ ಮೆಟಲ್ ಸ್ಕ್ರ್ಯಾಪ್ ಆಮದು ಮಾಡಿಕೊಂಡು ವ್ಯವಹಾರ ನಡೆಸುತ್ತಿರುವುದು ಜೊತೆಗೆ ನಕಲಿ ಜಿ ಎಸ್ ಟಿ ನೊಂದಣಿಗೆ, ನಕಲಿ ದಾಖಲೆಗಳನ್ನು ಬಳಕೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮೊಹಮ್ಮದ್ ಸಾಕ್ಲೆನ್ ಎಂಬಾತನನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಕೇಂದ್ರ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋಟ್ಯಂತರ ಜಿ ಎಸ್ ಟಿ ವಂಚನೆ:ವ್ಯಕ್ತಿ ಬಂಧನ Read More

ಮೀರಜ್ ಜಂಕ್ಷನ್-ಬೆಳಗಾವಿ ನಡುವೆಖಾಯಂ ರೈಲು:ಶೆಟ್ಟರ್

ಬೆಳಗಾವಿ: ಮಹಾರಾಷ್ಟ್ರದ ಮೀರಜ್ ಜಂಕ್ಷನ್ ಮತ್ತು ಬೆಳಗಾವಿ ನಡುವೆ ಸಂಚರಿಸುತ್ತಿದ್ದ ತಾತ್ಕಾಲಿಕ ರೈಲನ್ನು ಖಾಯಂಗೊಳಿಸಿದ್ದು ಜನತೆ ಇದರ ಉಪಯೋಗ ಪಡೆಯಬೇಕೆಂದು ಸಂಸದ ಜಗದೀಶ ಶೆಟ್ಟರ್ ಕರೆ ನೀಡಿದ್ದಾರೆ.

ಬೆಳಗಾವಿ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ – ಮಿರಜ್ ಬೆಳಗಾವಿ ನಡುವೆ ತಾತ್ಕಾಲಿಕವಾಗಿ ಸಂಚರಿಸುತ್ತಿದ್ದು ರೈಲು ಸೇವೆಯನ್ನು ಹುಬ್ಬಳ್ಳಿ ನೈರುತ್ಯ ರೇಲ್ವೆ ವಲಯವು ಇದೆ 15 ರಿಂದ ಖಾಯಂ ಆಗಿ ಸಂಚರಿಸುವಂತೆ ಸೇವೆಯನ್ನು ಒದಗಿಸಲಾಗಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಬೆಳಗಾವಿ – ಮಿರಜ್ – ಬೆಳಗಾವಿ ನಡುವೆ ಈ ರೈಲು ಬೆಳಗಾವಿ ( ರೈಲು ಸಂಖ್ಯೆ: 51461) ಯನ್ನು ಬೆಳಿಗ್ಗೆ 5.45ಕ್ಕೆ ಬಿಟ್ಟು ಮಿರಜನ್ನು ಬೆಳ್ಳಗ್ಗೆ 9 ಗಂಟೆಗೆ ತಲುಪಿ ಪುನಃ ಮಿರಜ್ ನಿಂದ ( ರೈಲು ಸಂಖ್ಯೆ: 51462 ) ಬೆಳಿಗ್ಗೆ 9.55ಕ್ಕೆ ಹೊರಟು ಮಧ್ಯಾಹ್ನ 1.10 ಕ್ಕೆ ಬೆಳಗಾವಿಯನ್ನು ತಲುಪಲಿದೆ.

ಅದರಂತೆ ಇದೆ ರೈಲು ಬೆಳಗಾವಿ ( ರೈಲು ಸಂಖ್ಯೆ: 51463) ಯನ್ನು ಮಧ್ಯಾಹ್ನ 13.30ಕ್ಕೆ ಬಿಟ್ಟು ಮಿರಜ ನ್ನು ಸಂಜೆ 16.30 ಕ್ಕೆ ತಲುಪಿ ಪುನಃ ಮಿರಜ್ ನಿಂದ ( ರೈಲು ಸಂಖ್ಯೆ: 51441) ಸಂಜೆ 19.10 ಕ್ಕೆ ಬಿಟ್ಟು ಬೆಳಗಾವಿಯನ್ನು ರಾತ್ರಿ 22.25 ಕ್ಕೆ ತಲುಪಲಿದೆ.

ಸಾರ್ವಜನಿಕರ ಬೇಡಿಕೆಯಂತೆ ಹಲವಾರು ಸಾರಿ ಕೇಂದ್ರ ರೇಲ್ವೆ ಸಚಿವರಲ್ಲಿಯೂ ಹಾಗೂ ನೈರುತ್ಯ ರೇಲ್ವೆ ವಲಯ ಅಧಿಕಾರಿಗಳಲ್ಲಿ ಪ್ರಸ್ತಾಪಿಸಿದ್ದರ ಹಿನ್ನಲೆಯಲ್ಲಿ ಈ ರೈಲು ಸೇವೆಯನ್ನು ಒದಗಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಮೀರಜ್ ಜಂಕ್ಷನ್-ಬೆಳಗಾವಿ ನಡುವೆಖಾಯಂ ರೈಲು:ಶೆಟ್ಟರ್ Read More

ಹರಹರ ಶ್ರೀ ಕಪಿಲೇಶ್ವರ ಮಂದಿರದಲ್ಲಿ ಡಿಕೆಶಿ ವಿಶೇಷ ಪೂಜೆ

ಬೆಳಗಾವಿ: ದಕ್ಷಿಣ ಕಾಶಿ ಖ್ಯಾತಿಯ ಬೆಳಗಾವಿಯ ಹರಿಹರ ಶ್ರೀ ಕಪಿಲೇಶ್ವರ ದೇಗುಲಕ್ಕೆ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.

ದೇಗುಲಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಶ್ರೀ ಕಪಿಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶಿಲಿಂಗದ ಮುಂದೆ ಕುಳಿತು ಅಭಿಷೇಕವನ್ನು ನೆರವೇರಿಸಿದರು.ನಂತರ ಮಂತ್ರ ಪಠಣ ಮಾಡಿ ದೇವರಿಗೆ ಮಂಗಳಾರತಿ ಮಾಡಿದರು.
ದೇವರಿಗೆ ಶಿರಬಾಗಿ ನಮಿಸಿದರು.

ನಂತರ ರುದ್ರಾಕ್ಷಿ ಮಾಲೆ ಹಿಡಿದು ಡಿಕೆಶಿ ಜಪ ಕೂಡಾ ಮಾಡಿದ್ದು ವಿಶೇಷವಾಗಿತ್ತು.

ಬೆಳಗಾವಿ ಅಧಿವೇಶನ ಯಶಸ್ವಿಯಾಗಲಿ,ನಾಡಿನಲ್ಲಿ ಕಾಡುತ್ತಿರುವ ತೊಂದರೆಗಳೆಲ್ಲ ದೂರವಾಗಿ ಶಾಂತಿ ನೆಲಸಲಿ ಎಂದು ಪ್ರಾರ್ಥಿಸಿದ್ದಾಗಿ ಈ ವೇಳೆ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಹರಹರ ಶ್ರೀ ಕಪಿಲೇಶ್ವರ ಮಂದಿರದಲ್ಲಿ ಡಿಕೆಶಿ ವಿಶೇಷ ಪೂಜೆ Read More