ಬೀರೂರು ಭಾವಾಸರ ಮಹಿಳಾ ಮಂಡಳಿಯಿಂದ ಗೌರಿ ಪೂಜೆ
ಬೀರೂರು: ಗೌರಿ,ಗಣೇಶ ಹಬ್ಬದ ಪ್ರಯುಕ್ತ ಬೀರೂರು ಭಾವಾಸರ ಮಹಿಳಾ ಮಂಡಳಿ ವತಿಯಿಂದ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಗೌರಿ ಪೂಜೆ ಹಾಗೂ ಕುಂಕುಮರ್ಚನೆ ಹಮ್ಮಿಕೊಳ್ಳಲಾಯಿತು.
ಬೀರೂರಿನ ಮಹಿಳೆಯರು ಮತ್ತು ಭಾವಾಸರ ಮಹಿಳಾ ಮಂಡಳಿ ಸದಸ್ಯೆಯರು ದೇವಿಗೆ ಕುಂಕುಮಾರ್ಚನೆ ನೆರವೇರಿಸಿದರು.

ಇದೇ ವೇಳೆ ಮಹಿಳೆ ಯರಿಗೆ ರಂಗೋಲಿ ಸ್ಪರ್ಧೆ ಕೂಡಾ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಎಂದು ಭಾವಾಸರ ಮಹಿಳಾ ಮಂಡಳಿ ಅಧ್ಯಕ್ಷೆ ಗೀತಾ ತಿಳಿಸಿದ್ದಾರೆ.