ಅಂಗಡಿಗಳ ರೋಲಿಂಗ್ ಶಟರ್ ಮೀಟಿ ಕಳ್ಳತನ

ಮೈಸೂರು: ಮೈಸೂರಿನ
ಬಂಡಿಪಾಳ್ಯದಲ್ಲಿ ಹಲವಾರು ಅಂಗಡಿಗಳ
ರೋಲಿಂಗ್ ಶಟರ್ ಮೀಟಿ ವಸ್ತುಗಳನ್ನು ‌ದೋಚಿರುವ ಘಟನೆ ನಡೆದಿದೆ.

ತಾಜ್ ಎಂಟರ್ ಪ್ರೈಸಸ್ ಮತ್ತು ರಾಘವೇಂದ್ರ ಟ್ರೇಡಿಂಗ್ ನಲ್ಲಿ
ಬೀಗ ಒಡೆದು ಕಬ್ಬಿಣದ ರಾಡ್ ಮತ್ತು ಮರದ ಕಂಬ ಬಳಸಿ ರೋಲಿಂಗ್ ಶಟರ್ ಎತ್ತಿ ಒಳನುಗ್ಗಿದ ಕಳ್ಳರು ಕಳವು ಮಾಡಿದ್ದಾರೆ ಸರಣಿ ಕಳ್ಳತನ ತಿಳಿದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ತಾಜ್ ಎಂಟರ್ ಪ್ರೈಸಸ್ ನಲ್ಲಿ ಕ್ಯಾಶ್ ಟೇಬಲ್ ಅನ್ನೆ ಹೊತ್ತೊಯ್ದರೆ ಮತ್ತೊಂದು ಅಂಗಡಿಯಲ್ಲಿ
ಸುಮಾರು 2 ಲಕ್ಷ ನಗದು ದೋಚಿದ್ದಾರೆ.

ಗುರುವಾರ ಮಧ್ಯರಾತ್ರಿ
ಅಂಗಡಿ ಮುಂದೆ ಗೂಡ್ಸ್ ವಾಹನ ನಿಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಮೂರು ಅಂಗಡಿಗಳಲ್ಲಿ ಕಳವು ಮಾಡಲಾಗಿದ್ದು ಈ ಭಾಗದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ.

ಅಂಗಡಿಗಳ ರೋಲಿಂಗ್ ಶಟರ್ ಮೀಟಿ ಕಳ್ಳತನ Read More

ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದರೆ ಕಠಿಣ ಕ್ರಮ:ಅರ್ಪಿತಾ

ಮೈಸೂರು, ಜು.1: ನಿಷೇಧಿತ ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕಾರಕ ಹಾಗಾಗಿ ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರ ಅಧಿಕಾರಿ ಅರ್ಪಿತಾ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.

ಕಡಕೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಂಡಿಪಾಳ್ಯ ಗ್ರಾಮದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ಇಂದು ನಿಷೇಧಿತ ಪ್ಲಾಸ್ಟಿಕ್ ರೈಡ್ ಹಮ್ಮಿಕೊಳ್ಳಲಾಯಿತು.

ಈ ಸಂಬಂಧ 1337 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಅರ್ಪಿತಾ ಅವರು‌ ಅಂಗಡಿ,ಮಳಿಗೆಗಳವರಿಗೆ ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಕಠಿಣ ಎಚ್ಚರಿಕೆ ನೀಡಿದರು.

ಈ ವೇಳೆ ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷಕರಾದ ಮಂಜುನಾಥ್,ಪವನ್, ರಾಜಶೇಖರ್, ಅಕ್ಷತಾ, ಸುನಿಲ್, ಆನಂದ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದರೆ ಕಠಿಣ ಕ್ರಮ:ಅರ್ಪಿತಾ Read More

ಬಂಡಿಪಾಳ್ಯ ಗ್ರಾಮದ ಎಪಿಎಂಸಿ ಆವರಣದಲ್ಲಿ ಪ್ಲಾಸ್ಟಿಕ್ ರೈಡ್

ಮೈಸೂರು: ಮೈಸೂರಿನ ಕಡಕೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಂಡಿಪಾಳ್ಯ ಗ್ರಾಮದ ಎಪಿಎಂಸಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ರೈಡ್ ಹಮ್ಮಿಕೊಳ್ಳಲಾಯಿತು.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ರೈಡ್ ಹಮ್ಮಿಕೊಂಡು 960 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡರು.

ಇದೇ ವೇಳೆ ನಿಷೇಧಿತ ಪ್ಲಾಸ್ಟಿಕ್ ಗಳನ್ನು ಇಟ್ಟುಕೊಂಡಿದ್ದ ಅಂಗಡಿಗಳಿಗೆ
ದಂಡ ವಿಧಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಂತ್ರಣ ಅಧಿಕಾರಿ ಹಾಗೂ ಪರಿಸರ ಅಧಿಕಾರಿ ಅರ್ಪಿತಾ, ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಲೆಕ್ಕಿಗರಾದ ಸತೀಶ್, ಸಮುದಾಯ ಸಂಘಟನೆ ಅಧಿಕಾರಿ ಶಂಕರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಬಂಡಿಪಾಳ್ಯ ಗ್ರಾಮದ ಎಪಿಎಂಸಿ ಆವರಣದಲ್ಲಿ ಪ್ಲಾಸ್ಟಿಕ್ ರೈಡ್ Read More