ಮಾ14ರಂದು ಶ್ರೀ ಯೋಗಿ ನಾರಾಯಣ ಕೈವಾರ ತಾತಯ್ಯ ಅವರ 299 ನೇ ಜಯಂತಿ
ಶ್ರೀ ಕೈವಾರ ತಾತಯ್ಯ ಬಣಜಿಗ (ಬಲಿಜ) ಸಂಘದ ವತಿಯಿಂದ ಕಾಲಜ್ಞಾನಿ ಶ್ರೀ ಯೋಗಿ ನಾರಾಯಣ ಕೈವಾರ ತಾತಯ್ಯ ಅವರ 299 ನೇ ಜಯಂತಿಯನ್ನು ಡಿ ದೇವರಾಜ ಅರಸು ರಸ್ತೆಯಲ್ಲಿ ಮಾರ್ಚ್ 14ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ವಿಧಾನ ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್, ಸಾಹಿತಿ ಗುಬ್ಬಿಗೂಡು ರಮೇಶ್, ಕಾಂಗ್ರೆಸ್ ಮುಖಂಡರಾದ ಎಚ್ ಎ ವೆಂಕಟೇಶ್, ಮೀನಾ ತೂಗುದೀಪ್,ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ,ಜಿ ಶ್ರೀನಾಥ್ ಬಾಬು, ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ ಕಾ ಪ್ರೇಮ್ ಕುಮಾರ್ ಆನಂದ್, ಹಿರಿಯ ಸಮಾಜ ಸೇವಕ ಕೆ ರಘುರಾಮ್ ವಾಜಪೇಯಿ, ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಮೋಹನ್, ಗುರುರಾಜ್ ಶೆಟ್ಟಿ
ಮತ್ತಿತರರು ಭಾಗವಹಿಸಲಿದ್ದಾರೆ ಎಂದು
ಶ್ರೀ ಕೈವಾರ ತಾತಯ್ಯ ಬಣಜಿಗ (ಬಲಿಜ) ಸಂಘದ ಸಂಚಾಲಕ ಎಸ್ ಎನ್ ರಾಜೇಶ್ ತಿಳಿಸಿದ್ದಾರೆ.