ಭಾರತದ ಸಂವಿಧಾನ ಪ್ರಪಂಚದಲ್ಲೇ ಬಲಿಷ್ಠ- ಸಿ.ಆರ್ ದಿನೇಶ್

ನಂಜನಗೂಡು: ಭಾರತದ ಸಂವಿಧಾನವು ಪ್ರಪಂಚದಲ್ಲಿಯೇ ಬಲಿಷ್ಠ ಸಂವಿದಾನ ಎಂದು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಆರ್ .ದಿನೇಶ್ ತಿಳಿಸಿದರು.

ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ‌ ಅವರು,
ಭಾರತದ ಶಕ್ತಿ ಅದರ ಸಂವಿಧಾನ. ಸಂವಿಧಾನವೇ ದೇಶದ ಆತ್ಮ ಮತ್ತು ಪ್ರಜಾಪ್ರಭುತ್ವದ ಮಾರ್ಗದರ್ಶಕ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ ದಿನೇಶ್, ಯುವ ಜನತೆ ಸಂವಿಧಾನ ಪಾಲನೆ ಹಾಗೂ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದರು.

ಆಂಗ್ಲ ಭಾಷೆ ಉಪನ್ಯಾಸಕ ರಂಗಸ್ವಾಮಿ ಅವರು ಮಾತನಾಡಿ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಹೇಳಿದರು.

ಸಂವಿದಾನದ ಪೀಠಿಕೆಯನ್ನು ವಿದ್ಯಾರ್ಥಿಗಳೊಂದಿಗೆ ಸಾಮೂಹಿಕವಾಗಿ ಓದಿಸಿ, ಸಂವಿಧಾನದ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಬಾಂಧವ್ಯಗಳ ಮಹತ್ವವನ್ನು ರಾಜ್ಯಶಾಸ್ತ್ರ ಉಪನ್ಯಾಸಕ ಹೆಚ್ ಕೆ. ಸ್ವಾಮಿಗೌಡರು ವಿವರಿಸಿದರು.

ಕಾರ್ಯಕ್ರಮವು ದೇಶಾಭಿಮಾನ, ಮಾನವೀಯತೆ ಮತ್ತು ಸಂವಿಧಾನ ಪ್ರಜ್ಞೆಯನ್ನು ಬಲಪಡಿಸುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ ,ನಾಗರಾಜ್, ಹೆಚ್ಚ್ .ಕೆ.ಪ್ರಕಾಶ್ ,ಡಾ.ಕೆ ಮಾಲತಿ,ಡಾ. ಸುಮಾ, ವತ್ಸಲ ,ಹರೀಶ್, ನಾಗರಾಜರೆಡ್ಡಿ , ದಿನೇಶ್ ,ಸುಮಿತ್ರ.ಅಂಬಿಕಾ,ಪದ್ಮಾವತಿ, ಭವ್ಯ , ಅದಿಲ್ ಹುಸೇನ್ ,ಮೀನಾ ಮತ್ತಿತರರು ಉಪಸ್ಥಿತರಿದ್ದರು.

ಭಾರತದ ಸಂವಿಧಾನ ಪ್ರಪಂಚದಲ್ಲೇ ಬಲಿಷ್ಠ- ಸಿ.ಆರ್ ದಿನೇಶ್ Read More

ಯುವ ಪೀಳಿಗೆಯ ಜೀವನ ನಾಶ‌ ಮಾಡುವ ಮಾದಕ ದ್ರವ್ಯ: ಸಿ.ಎಮ್ ರವೀಂದ್ರ

ನಂಜನಗೂಡು: ಇಂದಿನ ಯುವ ಪೀಳಿಗೆ ಹೆಚ್ಚಾಗಿ ಮಾದಕ ದ್ರವ್ಯಗಳ ಸೇವನೆಗೆ ದಾಸರಾಗುತ್ತಿದ್ದಾರೆ,ಇದು ಜೀವನವನ್ನೇ ನಾಶ ಮಾಡಿಬಿಡುತ್ತದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಸಿ.ಎಂ ರವೀಂದ್ರ ಅವರು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕೇವಲ ಗೆಳೆಯರಿಂದ ಅನುಭವ ಪಡೆಯಲಿಕ್ಕೆ ಮಾದಕ ದ್ರವ್ಯವನ್ನು ಸೇವಿಸಿ ನಂತರ ಅವುಗಳಿಗೆ ದಾಸರಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ರವೀಂದ್ರ ಅವರು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ನಗರ ಪ್ರದೇಶದಲ್ಲಿ ಇಂದು ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗಿದೆ,ಗ್ರಾಮೀಣ ಪ್ರದೇಶದಲ್ಲಿ ಅಷ್ಟು ಪ್ರಮಾಣದಲ್ಲಿ ಇಲ್ಲದಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಗ್ರಾಮೀಣದಲ್ಲಿಯೂ ಇದರ ಹಾವಳಿ ಹೆಚ್ಚಾಗಿದೆ. ಆದಕಾರಣ ಇದರ ಬಗ್ಗೆ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕೆಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ಅವರು ಅಧ್ಯಕ್ಷೀಯ ಭಾಷಣ ಮಾಡಿ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಮಾದಕ ದ್ರವ್ಯ ಸೇವನೆಯನ್ನು ಮಾಡುವುದಿಲ್ಲ ಎಂದು ತಮ್ಮ ಹೃದಯವನ್ನು ಮುಟ್ಟಿ ಕೊಂಡು ಪ್ರತಿಜ್ಞೆ ಮಾಡಿದರೆ ಮಾತ್ರ ಇವುಗಳ ದುಶ್ಚಟಗಳಿಗೆ ಬಲಿಯಾಗುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ವೇಳೆ ಸಂವಾದ ಹಮ್ಮಿಕೊಂಡು ವಿದ್ಯಾರ್ಥಿಗಳು ಈ ವಿಷಯದ ಬಗ್ಗೆ ಪ್ರಶ್ನೆ ಕೇಳುವ ಮೂಲಕ ಉತ್ತರವನ್ನು ಪಡೆದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗನಸ್ವಾಮಿ ಎನ್, ನಾಗರಾಜು, ಡಾ.ಕೆ. ಮಾಲತಿ ,ಭವ್ಯ ಸುಮಿತ್ರ ,ಸ್ವಾಮಿಗೌಡ, ಡಾ. ಟಿ.ಕೆ ರವಿ ,ಹೆಚ್.ಕೆ ಪ್ರಕಾಶ್ ,ಅದಿಲ್ ಹುಸೇನ್, ನಾಗರಾಜ ರೆಡ್ಡಿ, ರಾಮಾನುಜ,ಡಾ. ಸುಮಾ ,ಎನ್. ದಿನೇಶ್, ರೂಪ, ವತ್ಸಲ ,ಶೃತಿ ನಾಗರಾಜ್, ಬಿಂದು ,ಮಿಲ್ಟನ್ ,ಹರ್ಷಿತ್ ,ನಿಂಗಯ್ಯ ,ಮಾದೇವ ಸ್ವಾಮಿ ,ದಿವ್ಯ ಉಪಸ್ಥಿತರಿದ್ದರು.

ಯುವ ಪೀಳಿಗೆಯ ಜೀವನ ನಾಶ‌ ಮಾಡುವ ಮಾದಕ ದ್ರವ್ಯ: ಸಿ.ಎಮ್ ರವೀಂದ್ರ Read More

ಪ್ಲಾಸ್ಟಿಕ್ ಸೋಲಿಸಿ ಪರಿಸರ ಉಳಿಸಿ- ಸಿ.ಆರ್. ದಿನೇಶ್

ನಂಜನಗೂಡು: ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ ಪ್ಲಾಸ್ಟಿಕ್ ಅನ್ನು ಸೋಲಿಸಿ ಪರಿಸರ ಉಳಿಸಿ ಘೋಷಣೆಯು ಅರ್ಥಗರ್ಭಿತವಾಗಿದೆ ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಆರ್. ದಿನೇಶ್ ತಿಳಿಸಿದರು.

ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಹೆಚ್ಚುತ್ತಿರುವುದರಿಂದ ಪ್ಲಾಸ್ಟಿಕ್ ಸೋಲಿಸಿ ಪರಿಸರ ನಾಶವನ್ನು ತಡೆಗಟ್ಟಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಂಜನಗೂಡು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕರಳಪುರ ವಿಜಯಕುಮಾರ್, ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿದರೆ ಮುಂದಿನ ತಲೆಮಾರಿಗೆ ಸುಂದರ ಪರಿಸರವನ್ನು ನೀಡಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಹೇಶ್, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಕರಳಪುರ ನಾಗರಾಜು , ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್ ಲಿಂಗಣ್ಣ ಸ್ವಾಮಿ, ರಂಗಸ್ವಾಮಿ,ಎನ್. ನಾಗರಾಜು, ದಿನೇಶ್ ಎನ್, ನಾಗರಾಜ ರೆಡ್ಡಿ, ಹೆಚ್.ಕೆ. ಪ್ರಕಾಶ್, ಮಿಲ್ಟನ್ ಮನೋಗರನ್ ಹರ್ಷಿತ್ ,ನಿಂಗಯ್ಯ,ಮಹದೇವ ಸ್ವಾಮಿ ಮತ್ತಿತರರು ಹಾಜರಿದ್ದರು.

ಪ್ಲಾಸ್ಟಿಕ್ ಸೋಲಿಸಿ ಪರಿಸರ ಉಳಿಸಿ- ಸಿ.ಆರ್. ದಿನೇಶ್ Read More