ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಮಾನಿಗಳಿಂದ ಮಾವುತ ಮಡದಿಯರಿಗೆ ಬಾಗಿನ

ಮೈಸೂರು: ಅರಮನೆ ಆವರಣದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗ, ಕೆಂಪಿಸಿದ್ದನ ಹುಂಡಿ ರವಿಕುಮಾರ್ ನೇತೃತ್ವದಲ್ಲಿ ಮಾವುತರ ಮಡದಿಯರಿಗೆ‌ ಅರಿಶಿಣ ಕುಂಕುಮ ಬಳೆ ಸೀರೆ ನೀಡುವ ಮೂಲಕ ಬಾಗಿನ ಅರ್ಪಿಸಲಾಯಿತು.

ಆನೆ ಮಾವುತರ ಮಡದಿಯರಿಗೆ ಬಾಗಿನ ನೀಡುವ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯ‌ ನಿಕಟಪೂರ್ವ ಸಿಂಡಿಕೇಟ್ ಸದಸ್ಯರ ಜೆಟ್ಟಿಹುಂಡಿ ಡಾ.ಬಸವರಾಜು ಮಾತನಾಡಿ, ಮೈಸೂರು ದಸರಾ ವಿಶ್ವ ವಿಖ್ಯಾತ ಪರಂಪರೆಯನ್ನು ಹೊಂದಿರುವಂತದ್ದು. ಇದು ಮೈಸೂರಿಗೆ ಹಿರಿಮೆ ಜೊತೆಗೆ ಮೈಸೂರು ಶಾಂತಿಯ ಸಂಕೇತ ಇಂತಹ ಸುಂದರ ಅರಮನೆಯ ಒಳಗಡೆ ಆನೆ ಮಾವುತರ ಮಡದಿಯರಿಗೆ ಬಾಗಿನ ನೀಡುವ ಒಂದು ವಿಶಿಷ್ಟ ಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವಂಥದ್ದು ಮನಸ್ಸಿಗೆ ಬಹಳ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.

ಮಾನವೀಯ ಮೌಲ್ಯಗಳು ಮನುಷ್ಯನಿಗೆ ಎಷ್ಟು ಮುಖ್ಯ, ಮನುಷ್ಯ ಸಂಬಂಧಕ್ಕೆ ಅದರದೇ ಆದ ಗೌರವವಿದೆ ಅದಕ್ಕೆ ಪೂರಕವಾಗಿ ಬಾಗಿನವನ್ನು ನೀಡಿರುವುದು ಬಹಳ ವಿಶಿಷ್ಟ ಹಾಗೂ ಎಮ್ಮೆ ವಿಚಾರ ಎಂದು ತಿಳಿಸಿದರು.

ಈ ವೇಳೆ ಮೈಸೂರು ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ ಶಿವಪ್ಪ ಕೋಟೆ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ವೈ.ಕೆ, ಮೈಸೂರು ಕಾರಾಗೃಹ ಮಂಡಳಿ ಸದಸ್ಯರಾದ ಪವನ್ ಸಿದ್ದರಾಮ, ಕಾಂಗ್ರೆಸ್ ಮುಖಂಡರಾದ ಮಹೇಶ್, ಚೇತನ್ ಹರಪನಹಳ್ಳಿ ಹಾಗೂ ಮಾವುತರ ಕುಟುಂಬದವರು ಹಾಜರಿದ್ದರು.

ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಮಾನಿಗಳಿಂದ ಮಾವುತ ಮಡದಿಯರಿಗೆ ಬಾಗಿನ Read More

ಗುದ್ದಲಿ ಪೂಜೆ:ರಾಜಕೀಯ ಮಾಡಲು ಇಚ್ಛಿಸಲ್ಲ-ಹೆಚ್ ಡಿ ಕೆ

ಮಂಡ್ಯ: ನಾನು ಭೂಮಿಪೂಜೆ ಮಾಡಿದ ಮೇಲೆ ಉಸ್ತುವಾರಿ ಸಚಿವರು ಇನ್ನೊಮ್ಮೆ ಗುದ್ದಲಿ ಪೂಜೆ ಮಾಡಿದರೆ ನಾನೇನು ಮಾಡಲಿ, ಇದರಲ್ಲಿ ನಾನು ರಾಜಕೀಯ ಮಾಡಲು ಇಚ್ಛೆ ಪಡುವುದಿಲ್ಲ ಎಲ್ಲವನ್ನೂ ಜನರೇ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಕನಕೆರೆಗೆ ಶನಿವಾರ ಬಾಗಿನ ಅರ್ಪಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರು ಗುದ್ದಲಿ ಪೂಜೆ ಮಾಡಬೇಕು.ಆದರೆ, ಕೇಂದ್ರ ಸರಕಾರದ ಕಾರ್ಯಕ್ರಮಕ್ಕೆ ಮತ್ತೆ ಅವರೇ ಗುದ್ದಲಿ ಪೂಜೆ ಮಾಡಿದ್ದಾರೆ, ಇದರಲ್ಲಿ ನಾನು ರಾಜಕೀಯ ಮಾಡಲ್ಲ, ನಾನು ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮಗಳು ಅನೇಕ. ಕಲ್ಲಿನ ಮೇಲೆ ಹೆಸರು ಬರೆಸಿಕೊಂಡು ಶಂಕುಸ್ಥಾಪನೆ ಮಾಡುತ್ತಾ ಹೋಗಿದ್ದಿದ್ದರೆ ರಾಜ್ಯಾದ್ಯಂತ ನನ್ನ ಹೆಸರಿನ ಕಲ್ಲುಗಳೇ ಇರುತ್ತಿದ್ದವು ಎಂದು ಹೇಳಿದರು.

ನಾನು ಪ್ರಚಾರ ಪಡೆಯಬೇಕೆಂದು ಕೆಲಸ ಮಾಡಿಲ್ಲ. ಅದು ನನ್ನ ಕರ್ತವ್ಯ ಆಗಿತ್ತು. ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡುವುದು ನನ್ನ ನೀತಿ. ಕೇಂದ್ರದ ಅನುದಾನ ತರಲಿ, ನಾವು ಕುಮಾರಸ್ವಾಮಿ ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಚಲುವರಾಯಸ್ವಾಮಿ ನನಗೆ ಅಭಿನಂದಿಸೋದು ಬೇಡ. ಅವರಿಗೆ ಸಿಕ್ಕಿರುವ ಅವಕಾಶದಲ್ಲಿ ಇವರು ಏನು ಮಾಡಬೇಕೋ ಅದನ್ನು ಮಾಡಲಿ ಸಾಕು ಎಂದು ತಿಳಿಸಿದರು.

ಭತ್ತದ ಬೆಲೆ 1700ರಿಂದ 1800ಕ್ಕೆ ಬಂದಿದೆ.
ನಾನು ಕಳೆದ ವಾರವೇ ಭತ್ತ ಖರೀದಿ ಕೇಂದ್ರ ತೆರೆಯಿರಿ ಎಂದು ಡಿಸಿಗೆ ಹೇಳಿದ್ದೆ, 15ನೇ ತಾರೀಖಿನೊಳಗೆ ಮಾಡುವುದಾಗಿ ಹೇಳಿದ್ದರು, ಪಾಪ. ಇನ್ನೂ ಗೋಣಿ ಚೀಲ ಖರೀದಿ ಮಾಡ್ತಾ ಇದಾರೆ ಎಂದು ಕಾಣುತ್ತೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಕಾಂಗ್ರೆಸ್ ಬಣ ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ,ಅದು ಅವರ ಪಕ್ಷಕ್ಕೆ ಸೇರಿದ ವಿಚಾರ. ಡಿನ್ನರ್ ಮೀಟಿಂಗ್ ಸೇರ್ತಾರೋ, ಇನ್ಯಾವುದಕ್ಕೋ ಸೇರ್ತಾರೋ ಏನಾದರೂ ಮಾಡಿಕೊಳ್ಳಲಿ ಎಂದರು.

ಮಂಡ್ಯದಲ್ಲಿ ಮೈತ್ರಿಧರ್ಮ ಪಾಲನೆಯಾಗುತ್ತಿಲ್ಲ ಎಂಬ ಮಾಜಿ ಸಚಿವ ನಾರಾಯಣಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯುಸಿ
ನಾನು ಕೂಡ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಸಾರ್ವಜನಿಕವಾಗಿ ಈ ಬಗ್ಗೆ ಮಾತಾಡಿದ್ದಕ್ಕೆ ಉತ್ತರ ಕೊಡಲು ಆಗುತ್ತಾ, ನಾಲ್ಕು ಗೋಡೆ ನಡುವೆ ಮಾತನಾಡುತ್ತೇವೆ.
ಇವೆಲ್ಲ ಹೊರಗಡೆ ಚರ್ಚೆ ಮಾಡಲು ಆಗಲ್ಲ.
ನನ್ನ ಬಳಿ ಏನು ಸಮಸ್ಯೆ ಎಂದು‌ ಹೇಳಿದರೆ ಖಂಡಿತಾ ಸರಿಪಡಿಸಬಹುದು ಎಂದು ಹೆಚ್ ಡಿ ಕೆ ತಿಳಿಸಿದರು.

ಸುಮಲತಾ ಬಳಸಿದ್ದ ಕಾರು ಹತ್ತಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಸಚಿವ ಚಲುವರಾಯಸ್ವಾಮಿ ಆರೋಪಕ್ಕೆ ‌ಪ್ರತಿಕ್ರಿಯಿಸಿದ ಕೇಂದ್ರ ಸಚಿವರು,
ನಾನು ಅವರ ಕಾರು, ಇವರ ಕಾರು ಹತ್ತಲ್ಲ ಎಂದಿಲ್ಲ. ಹಾಗಂತ ಎಲ್ಲಾದರೂ ಹೇಳಿದ್ದೇನೆಯೇ,ಚಿಲ್ಲರೆ ರಾಜಕಾರಣ ಮಾಡುವುದು ಬೇಡ ಎಂದು ಕುಮಾರಸ್ವಾಮಿ ಹೇಳಿದರು.

ಮಾಜಿ ಸಚಿವ ಡಿ.ಸಿ ತಮ್ಮಣ್ಣ, ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮತ್ತಿತರರು ಉಪಸ್ಥಿತರಿದ್ದರು.

ಗುದ್ದಲಿ ಪೂಜೆ:ರಾಜಕೀಯ ಮಾಡಲು ಇಚ್ಛಿಸಲ್ಲ-ಹೆಚ್ ಡಿ ಕೆ Read More