ಕೆವಿಕೆ ಫೌಂಡೇಶನ್ ನಿಂದಬಿ ಸರೋಜಾದೇವಿ ಅವರಿಗೆ ಸಂತಾಪ
ಮೈಸೂರು: ಕೆವಿಕೆ ಫೌಂಡೇಶನ್ ವತಿಯಿಂದ ಮೈಸೂರಿನ ಆರ್ ಟಿ ಒ ವೃತ್ತದಲ್ಲಿ ಅಭಿನಯ ಶಾರದೆ, ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ ಸರೋಜಾದೇವಿ ಅವರಿಗೆ
ಸಂತಾಪ ಸಲ್ಲಿಸಲಾಯಿತು.
ಬಿ.ಸರೋಜಾದೇವಿ ಅವರ ಭಾವಚಿತ್ರ ಹಿಡಿದು,ಮೌನಾಚರಣೆ ಮಾಡುವ ಮೂಲಕ ಸಂತಾಪ ಸಲ್ಲಿಸಲಾಯಿತು
ಈ ವೇಳೆ ಮಾತನಾಡಿದ ಕೆ ವಿ ಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು
ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಕನ್ನಡ ಚಿತ್ರರಂಗ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು.
ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ ಎಂದು ಬಣ್ಣಿಸಿದರು.
ಸದಭಿರುಚಿ ಚಿತ್ರಗಳ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಖುಷಿವಿನು
ಪ್ರಾರ್ಥಿಸಿದರು.
ರೇಖಾ ಶ್ರೀನಿವಾಸ್,ಕೇಬಲ್ ಮಹೇಶ್, ಅಪೂರ್ವ ಸುರೇಶ್, ನೀಲಾ,ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ಜತ್ತಿ ಪ್ರಸಾದ್, ಪುರುಷೋತ್ತಮ್, ಸುಚೇಂದ್ರ, ಹರೀಶ್ ನಾಯ್ಡು ಕಿರಣ್ ಮತ್ತಿತರರು ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.
ಕೆವಿಕೆ ಫೌಂಡೇಶನ್ ನಿಂದಬಿ ಸರೋಜಾದೇವಿ ಅವರಿಗೆ ಸಂತಾಪ Read More