ಡಿ.ಕೆ.ಶಿ ಸಿಎಂ ಆಗಲೆಂದು ಅಯ್ಯಪ್ಪ ಸನ್ನಿಧಿಯಲ್ಲಿ ಅಭಿಮಾನಿಗಳ ಪ್ರಾರ್ಥನೆ

ಮೈಸೂರು: ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ, ಅಭಿಮಾನಿಗಳು ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆಗೆ ಸಿದ್ಧರಾಗಿರುವ ಭಕ್ತರು, ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಜಪ ಮಾಡಿ, ಭಜನೆ ಮತ್ತು ಶ್ಲೋಕ ಪಠಣ ನಡೆಸಿ, ಅವರ ರಾಜಕೀಯ ಜೀವನ ಸುಗಮವಾಗಲಿ, ಅಡೆತಡೆಗಳು ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಈ‌ ವೇಳೆ ಅಯ್ಯಪ್ಪ ಭಕ್ತರು ಮಾತನಾಡಿ,
ಮಂಡಲ ಪೂಜೆ ಪೂರ್ಣಗೊಂಡ ನಂತರ ಶಬರಿಮಲೆ ಯಾತ್ರೆಯಲ್ಲಿ ಕೂಡ ಡಿ.ಕೆ.ಶಿವಕುಮಾರ್ ಸಿಎಂ ಆಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಮಾತಿಗೆ ತಪ್ಪುವವರಲ್ಲ.ಅವರು ಮುಖ್ಯ ಮಂತ್ರಿ ಗಾದಿಯನ್ನ ಬಿಡುತ್ತಾರೆ,
ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ವಿಶ್ವಾಸದಿಂದ ನುಡಿದರು.

ಈ ವಿಶೇಷ ಪ್ರಾರ್ಥನೆಯಲ್ಲಿ
ಅಖಿಲ ಕರ್ನಾಟಕ ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಜಿ ರಾಘವೇಂದ್ರ, ಹರೀಶ್ ಗೌಡ, ಎಸ್. ಎನ್ ರಾಜೇಶ್,ಅಯ್ಯಪ್ಪ ಮಾಲಧಾರಿಗಳಾದ
ಯೋಗೇಶ್, ಮಂಜುನಾಥ್, ರಾಮಣ್ಣ, ಪುಟ್ಟಾಚಾರ್, ಪ್ರಮೋದ್, ರಾಹುಲ್, ವಿಜಯಕುಮಾರ್, ಪ್ರಶಾಂತ್, ಮಹದೇವಸ್ವಾಮಿ ಮತ್ತು
ಹಲವು ಮಾಲಾಧಾರಿಗಳು, ಅಭಿಮಾನಿಗಳು ಮತ್ತು ಭಕ್ತರು ಹಾಜರಿದ್ದರು.

ಡಿ.ಕೆ.ಶಿ ಸಿಎಂ ಆಗಲೆಂದು ಅಯ್ಯಪ್ಪ ಸನ್ನಿಧಿಯಲ್ಲಿ ಅಭಿಮಾನಿಗಳ ಪ್ರಾರ್ಥನೆ Read More

ಮೇಲ್ಛಾವಣಿಯಿಂದ ಬಿದ್ದು ಅಯ್ಯಪ್ಪ ಸ್ವಾಮಿ ಭಕ್ತರೊಬ್ಬರ ದುರಂತ ಸಾವು

(ವರದಿ:ಸುರೇಶ್,ಕನಕಪುರ)

ಕನಕಪುರ: ಶಬರಿಮಲೆಗೆ ತೆರಳಿದ್ದ ಅಯ್ಯಪ್ಪ ಸ್ವಾಮಿ ಭಕ್ತರೊಬ್ಬರು ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಕೇರಳದ ಭಸ್ಮಾಕುಲಂ ರಸ್ತೆ ಮಲ್ಲಿಕಾಪುರಂನಲ್ಲಿ ಈ ಘಟನೆ ಸಂಭವಿಸಿದ್ದು,ಕನಕಪುರ ನಗರದ ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ ಅಲಿಯಾಸ್ ಕುಂಬಿ (40) ಮೃತಪಟ್ಟ ಭಕ್ತ.

ಕನಕಪುರದಿಂದ ಶನಿವಾರ ಸಂಜೆ ಕುಮಾರ್ ಸೇರಿದಂತೆ 5 ಮಂದಿ ಇರುಮುಡಿ ಕಟ್ಟಿಕೊಂಡು ಸ್ಕಾರ್ಪಿಯೋ ಕಾರಿನಲ್ಲಿ ಶಬರಿಮಲೆಗೆ ತೆರಳಿದ್ದರು.

ಸೋಮವಾರ ಮಧ್ಯಾಹ್ನ ಪತ್ನಿ ಮಹಾಲಕ್ಷ್ಮಿಯೊಂದಿಗೆ ಶಬರಿಮಲೆ ಹತ್ತುತ್ತಿರುವ ಬಗ್ಗೆ ಕುಮಾರ್ ಮಾಹಿತಿ ನೀಡಿದ್ದರು,ಆದರೆ ಸಂಜೆ ವೇಳೆಗೆ ಕಟ್ಟಡದ ಮೇಲಿಂದ ಬಿದ್ದು ಪತಿ ಸಾವನ್ನಪ್ಪಿದ್ದಾರೆಂದು ಮಾಹಿತಿ ಬಂದಿತೆಂದು ಮೃತನ ಪತ್ನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬಿದ್ದ ಕೂಡಲೇ ಕೊಟ್ಟಾಯಂ ಆಸ್ಪತ್ರೆಗೆ ಕುಮಾರನನ್ನು ದಾಖಲಿಸಲಾಯಿತು,ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಸ್ನೇಹಿತ ಕೃಷ್ಣ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪತ್ನಿ ಮಹಾಲಕ್ಷ್ಮಿ ಮಾತನಾಡಿ ನಾಲ್ಕು ಮಂದಿ ಸ್ನೇಹಿತರು ಕರೆದುಕೊಂಡು ಹೋಗುವಾಗ ನನ್ನ ಪತಿ ಚೆನ್ನಾಗಿಯೇ ಇದ್ದರು.ಏಕಾಏಕಿ ಈ ರೀತಿ ಸಾವನ್ನಪ್ಪಿರುವ ಬಗ್ಗೆ ಅನುಮಾನ ಕಾಡುತ್ತಿದೆ‌.ಜತೆಗೆ ನನ್ನ ಪತಿ ಕಟ್ಟಡದ ಮೇಲಿಂದ ಜಿಗಿಯುತ್ತಿರುವ ಚಿತ್ರ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ,ಅದನ್ನು ನೋಡಿ ನಮಗೆ ಕುಮಾರ್ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದಿಲ್ಲ ಅನ್ನಿಸುತ್ತಿದೆ ಹಾಗಾಗಿ ಈ ಕುರಿತು‌ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಮೇಲ್ಛಾವಣಿಯಿಂದ ಬಿದ್ದು ಅಯ್ಯಪ್ಪ ಸ್ವಾಮಿ ಭಕ್ತರೊಬ್ಬರ ದುರಂತ ಸಾವು Read More