ಮೈಸೂರಿನಲ್ಲಿ ಆಟಿಸಂ ಜಾಗೃತಿಗಾಗಿ ವಾಕಥಾನ್

ಮೈಸೂರು: ವಿಶ್ವ ಆಟಿಸಂ ಜಾಗೃತಿ ದಿನದ ಅಂಗವಾಗಿ, ದೇವದಾನ್ ಫೌಂಡೇಶನ್ ಕಲಿಕಾ ಕೇಂದ್ರ ಹಾಗೂ ಪಾದ ಟ್ರಸ್ಟ ಸಹಯೋಗದೊಂದಿಗೆ ವಾಕಥಾನ್ ಹಮ್ಮಿಕೊಳ್ಳಲಾಯಿತು.

ನಗರದಲ್ಲಿ ಭರವಸೆಯ ನಡಿಗೆಯೊಂದಿಗೆ- ಆಟಿಸಂ ಸ್ವೀಕರಿಸೋಣ ಎಂಬ ಘೋಷ ವಾಕ್ಯದಡಿ ವಾಕಥಾನ್ ನಡೆಸಿ ಜಾಗೃತಿ ಮೂಡಿಸಲಾಯಿತು.

ನಗರದ ಅರಮನೆ ಮುಂಭಾಗ ಕೋಟೆ ಆಂಜನೇಯ ಸ್ವಾಾಮಿ ದೇವಸ್ಥಾಾನದ ಆವರಣದಿಂದ ಆಟಿಸಂ ಸ್ವೀಕಾರ ಜಾಗೃತಿ ವಾಕಥಾನ್ ಆರಂಭವಾಗಿ ಮೈಸೂರು ವಿಶ್ವವಿದ್ಯಾಾನಿಲಯದ ಓವೆಲ್‌ ಮೈದಾನದ ಬಳಿ ಮುಕ್ತಾಯಗೊಂಡಿತು.

ಇದೇ ಮೊದಲ ಬಾರಿಗೆ ನಗರದಲ್ಲಿ ಆಟಿಸಂ ವಾಕಥಾನ್ ಹಮ್ಮಿಕೊಳ್ಳಲಾಗಿದ್ದು,ಸುಮಾರು 3 ಕಿಲೋ ಮೀಟರ್ ದೂರ ವಾಕಥಾನ್ ನಡೆಯಿತು.

ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಶಂಕರ ಗೌಡ ಪಾಟೀಲ್ ಮಾತನಾಡಿ, ಆಟಿಸಂ ಗುರುತಿಸಲ್ಪಟ್ಟ ಅಂಗವೈಕಲ್ಯಗಳಲ್ಲಿ ಒಂದಾಗಿದೆ. ಇಂತಹ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಅತ್ಯಗತ್ಯ ಎಂದು ಹೇಳಿದರು.

ಆಟಿಸಂನ ಗುಣ ಲಕ್ಷಣಗಳನ್ನು ಮೊದಲೇ ಗುರುತಿಸಿದರೇ ವೈದ್ಯಕೀಯವಾಗಿ ಸಕಾಲಿಕ ಬೆಂಬಲ ಮತ್ತು ಚಿಕಿತ್ಸೆಯನ್ನು ಒದಗಿಸಬಹುದು. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಮೂರು ದಶಕಗಳಿಂದ ಆಟಿಸಂ ಜಾಗೃತಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಶಾಶ್ವತಿ ಸಿಂಗ್ ಮಾತನಾಡಿ, ಆಟಿಸಂ ಕಾಯಿಲೆಯ ಜಾಗೃತಿ ಮೂಡಿಸುವ ಸಲುವಾಗಿ ಹದಿನೆಂಟು ವರ್ಷಗಳ ಹಿಂದೆ ಡೆಹ್ರಾಡೂನ್ ನಲ್ಲಿ ಗ್ರೂಪ್ ಹೋಮ್ ಫಾರ್ ಆಟಿ ಸ್ಟಿಕ್ ಚಿಲ್ಡ್ರನ್ ಸಂಸ್ಥೆಯನ್ನು ಪ್ರಾಾರಂಭಿಸಿ, ಅದರಡಿಯಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಆಟಿಸಂನ ಹರಡುವಿಕೆ ತೀವ್ರವಾಗಿ ಹೆಚ್ಚಾಗಿದೆ, ಮೂವತ್ತರಿಂದ ಐವತ್ತು ಮಕ್ಕಳಲ್ಲಿ ಒಬ್ಬರಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಸರ್ಕಾರದ ಬೆಂಬಲವಿಲ್ಲದೆ ಇಂತಹ ಜಾಗೃತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾಾನಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಎಲ್ಲರ ಸಹಕಾರ ಅಗತ್ಯ ಎಂದು ಕೋರಿದರು.

ರಿವೈವ್ ಆಸ್ಪತ್ರೆಯ ಮನೋವೈದ್ಯ ಡಾ. ಕೃಷ್ಣ ಮಾತನಾಡಿ, ಆಟಿಸಂ ಗುಣ ಲಕ್ಷಣವನ್ನು ಮೊದಲೇ ಗುರುತಿಸಿ, ಅಂತಹವರ ಬಗ್ಗೆ ಕಾಳಜಿ ಮತ್ತು ಗಮನವನ್ನು ನೀಡುವುದು ಮುಖ್ಯ ಎಂದು ತಿಳಿಸಿದರು.

ದೇವದಾನ ಫೌಂಡೇಶನ್ ಕಲಿಕಾ ಕೇಂದ್ರದ ನಿರ್ದೇಶಕ ಕೋಟೆರ ದೇವಯ್ಯ, ಪಾದಾ ಟ್ರಸ್ಟಿನ ಸಂಗೀತ, ಫ್ಯಾಷನ್ ಡಿಸೈನರ್ ಜಯಂತಿ ಬಲ್ಲಾಳ್ ಮತ್ತಿರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೈಸೂರಿನಲ್ಲಿ ಆಟಿಸಂ ಜಾಗೃತಿಗಾಗಿ ವಾಕಥಾನ್ Read More