ಪ್ರೀತಿಯ ನಾಟಕವಾಡಿದ ವಿವಾಹಿತ; ಯುವತಿ ಕೊಲೆಗೆ ಯತ್ನ:ಪ್ರಕರಣ ದಾಖಲು

ಮೈಸೂರು: ವಿವಾಹವಾಗಿದ್ದರೂ ಯುವತಿಯೊಬ್ಬಳನ್ನ ಪ್ರೀತಿಸುವ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿ ಚಲ್ಲಾಟವಾಡಿ,ಕೊನೆಗೆ ಆಕೆಯನ್ನ ಮಹಡಿಯಿಂದ ತಳ್ಳಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ನಡೆದಿದೆ.

ಯುವತಿ ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಪ್ರಿಯಕರ ಆಲ್ಬರ್ಟ್, ಈತನ ತಮ್ಮ ಗೋಕುಲ್ ಹಾಗೂ ಪತ್ನಿ ಸುಭಿತ ಮೇಲೆ ಯುವತಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ಹಾಗೂ ಆಲ್ಬರ್ಟ್ ಬೆಂಗಳೂರಿನ ಕಾರ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಒಂದು ವರ್ಷದ ಹಿಂದೆ ಆಲ್ಬರ್ಟ್ ಮೈಸೂರಿನಲ್ಲಿ ನೆಲೆಸಿದ್ದು ಖಾಸಗಿ ಕಾರ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ. 4 ತಿಂಗಳ ಹಿಂದೆ ಪ್ರೇಯಸಿಯನ್ನೂ ಸಹ ಮೈಸೂರಿಗೆ ಕರೆಸಿಕೊಂಡು ವಿಜಯನಗರದಲ್ಲಿ ಮನೆ ಮಾಡಿ ಇರಿಸಿದ್ದ.

ವಿವಾಹಿತನಾಗಿದ್ದ ಆಲ್ಬರ್ಟ್ ನನ್ನ ಹಾಗೂ ಪತ್ನಿ ನಡುವೆ ವೈವಾಹಿಕ ಜೀವನ ಸರಿ ಇಲ್ಲ, ಡೈವೋರ್ಸ್ ಕೊಡುತ್ತಿದ್ದೇನೆ ನಂತರ ನಿನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿದ್ದ.

ಕಳೆದ ನಾಲ್ಕಾರು ದಿನಗಳಿಂದ ಆಲ್ಬರ್ಟ್ ಮನೆಗೆ ಬಂದಿರಲಿಲ್ಲ.ಮದುವೆ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿತ್ತು. ಆಲ್ಬರ್ಟ್ ಕೆಲಸ ಮಾಡುತ್ತಿದ್ದ ಕಾರ್ ಶೋರೂಂ ಗೆ ಹೋಗಿ ಪರಿಶೀಲಿಸಿದಾಗ ಅಲ್ಲೂ ಬಂದಿರಲಿಲ್ಲ.

ತಕ್ಷಣ ದಟ್ಟಗಳ್ಳಿಯಲ್ಲಿದ್ದ ಆಲ್ಬರ್ಟ್ ಮನೆಗೆ ಯುವತಿ ಹೋದಾಗ ಆತನ ಪತ್ನಿ ಸುಭಿತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ನಂತರ ಆಲ್ಬರ್ಟ್ ತಮ್ಮ ಗೋಕುಲ್ ಕೂಡಾ ಯುವತಿಯನ್ನ ನಿಂದಿಸಿದ್ದಾರೆ.ಈ‌ ವೇಳೆ ಆಲ್ಬರ್ಟ್ ಬಂದು ಮಹಡಿಯಿಂದ ಕೆಳಗೆ ತಳ್ಳುವಂತೆ ಗೋಕುಲ್ ಗೆ ಸೂಚಿಸಿದ್ದಾನೆ.ನಂತರ ಆತನೂ ಎರಡನೇ ಮಹಡಿಗೆ ಹೋಗಿ ತಮ್ಮನೊಂದಿಗೆ ಸೇರಿ ಯುವತಿಯನ್ನ ಕೆಳಗೆ ತಳ್ಳಿದ್ದಾರೆ.

ಇದರಿಂದಾಗಿ ಯುವತಿ ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ಮಾಡಲೆಂದೇ ಮಹಡಿಯಿಂದ ಕೆಳಗೆ ತಳ್ಳಿದ್ದಾರೆಂದು ಆರೋಪಿಸಿ ಯುವತಿ ಆಲ್ಬರ್ಟ್ ಸೇರಿದಂತೆ ಮೂವರ ವಿರುದ್ದ ದೂರು ದಾಖಲಿಸಿದ್ದಾರೆ.

ಪ್ರೀತಿಯ ನಾಟಕವಾಡಿದ ವಿವಾಹಿತ; ಯುವತಿ ಕೊಲೆಗೆ ಯತ್ನ:ಪ್ರಕರಣ ದಾಖಲು Read More

ದ್ವಿಚಕ್ರ ವಾಹನದಿಂದ ಡಿಕ್ಕಿ ಹೊಡೆದು ಪತ್ನಿಯ ಕೊಲ್ಲಲು ಯತ್ನಿಸಿದ ಪತಿ

ಮೈಸೂರು:‌ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಪತ್ನಿಯನ್ನು ಕೊಲ್ಲಲು ಪತಿ ಅಕ್ಸಿಡೆಂಟ್ ಮಾಡಿರುವ ಹೇಯ ಘಟನೆ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ ಪತ್ನಿ ಮಮತಾ ತೀವ್ರವಾಗಿ ಗಾಯಗೊಂಡಿದ್ದಾರೆ,ಪತಿ ಮಹದೇವಪ್ಪ ಅಲಿಯಾಸ್ ಪ್ರಸಾದ್ ಪುರೋಹಿತ್ ಕೊಲೆಗೆ ಯತ್ನಿಸಿದ ಪತಿ.

ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಮತಾರನ್ನು ಮತ್ತೊಂದು ವಾಹನದಲ್ಲಿ ಬಂದ ಪತಿ ಮಹದೇವಪ್ಪ ಢಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾನೆ.ಇದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪತಿ ಮಹದೇವಪ್ಪ @ ಪ್ರಸಾದ್ ಪುರೋಹಿತ್ ಮೇಲೆ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 ವರ್ಷಗಳ ಹಿಂದೆ ಮಮತಾ ಹಾಗೂ ಮಹದೇವಪ್ಪ ಅವರ ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಮಹದೇವಪ್ಪ @ಪ್ರಸಾದ್ ಪುರೋಹಿತ್ ಗೆ ಪರಸ್ತ್ರೀ ಸಹವಾಸ ಇದ್ದು, ಇದನ್ನ ಮಮತಾ ಪ್ರಶ್ನಿಸಿದ್ದಾರೆ,ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದೆ.

ಪತ್ನಿಗೆ ವಿಚ್ಛೇದನ ನೀಡಲು ಮಹದೇವಪ್ಪ ವಕೀಲರ ನೋಟೀಸ್ ಜಾರಿ ಮಾಡಿಸಿದ್ದಾನೆ.

ಆದರೂ ಕಿರುಕುಳ ನೀಡುವುದಿಲ್ಲವೆಂದು ಭರವಸೆ ನೀಡಿ ಮಹದೇವಪ್ಪ ಮತ್ತೆ ಪತ್ನಿ ಜೊತೆ ಸೇರಿದ್ದಾರೆ. ಒಂದು ವಾರದ ನಂತರ ಪತ್ನಿಯನ್ನ ಮಹದೇಶ್ವರ ಬೆಟ್ಟಕ್ಕೆ ಹೋಗುವಂತೆ ಮನ ಒಲಿಸಿ ಕಳಿಸಿದ್ದಾನೆ. ಪತ್ನಿ ಹಿಂದಿರುಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ಮತ್ತಿತರ ವಸ್ತುಗಳ ಜೊತೆ ಮಹದೇವಪ್ಪ ಪರಾರಿಯಾಗಿದ್ದಾನೆ.

ಕೆಲವು ದಿನಗಳ ಹಿಂದೆ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ಬನಶಂಕರಿ ದೇವಸ್ಥಾನದ ಮುಂಭಾಗ ಮಮತಾ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಎದುರಿ ನಿಂದ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಬಂದ ಮಹದೇವಪ್ಪ ಪತ್ನಿಗೆ ಢಿಕ್ಕಿ ಹೊಡೆದಿದ್ದಾರೆ.

ಅದೃಷ್ಟವಶಾತ್ ಮಮತಾ ಬಚಾವ್ ಆಗಿದ್ದಾರೆ.ಕೊಲೆ ಮಾಡುವ ಉದ್ದೇಶದಿಂದ ಢಿಕ್ಕಿ ಹೊಡೆದಿದ್ದಾರೆಂದು ಮಮತಾ ಪತಿ ವಿರುದ್ದ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದ್ವಿಚಕ್ರ ವಾಹನದಿಂದ ಡಿಕ್ಕಿ ಹೊಡೆದು ಪತ್ನಿಯ ಕೊಲ್ಲಲು ಯತ್ನಿಸಿದ ಪತಿ Read More