ಗೌರಿ ಗಣೇಶ ಹಬ್ಬಕ್ಕಾಗಿ ಪೌರಕಾರ್ಮಿಕರಿಗೆ ಬಾಗಿನ

ಮೈಸೂರು: ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಮತ್ತು ಕರುಣೆ ಸೇವಾ ಟ್ರಸ್ಟ್ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರಮನೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕ ಮಹಿಳೆಯರಿಗೆ ಅರಿಶಿಣ -ಕುಂಕುಮ, ಸೀರೆ, ಬಳೆ ಸಹಿತ ಮೊರದ ಬಾಗಿನ ನೀಡಲಾಯಿತು.

ಈ ಮಾತನಾಡಿದ ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷೆ ರುಕ್ಮಿಣಿ,ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನನ್ನ ಪೂಜಿಸುವುದು ಹಿಂದು ಧರ್ಮೀಯರ ಪದ್ಧತಿ ಎಂದು ಹೇಳಿದರು.

ಇಂತಹ ಪವಿತ್ರ ಪೂಜಾ ಸ್ಥಾನ ಪಡೆದುಕೊಂಡಿರುವ ಗಣಪತಿಯನ್ನು ಪ್ರತಿಷ್ಠಾಪಿಸಿ ದೇಶದ ಆಚಾರ-ವಿಚಾರ, ಸಂಸ್ಕೃತಿ ಮುಂದುವರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಮೈಸೂರಿನ ಅರಮನೆ ಆವರಣ ಸುಂದರವಾಗಿ ಹಾಗೂ ಸ್ವಚ್ಛವಾಗಿ ಕಾಣಲು ಪೌರಕಾರ್ಮಿಕರ ಶ್ರಮ ಹೆಚ್ಚು, ಅಂಥವರನ್ನು ಗುರುತಿಸಿ ಬಾಗಿನ ನೀಡಿರುವುದು ನಮಗೂ ಸಂತೋಷ ಉಂಟು ಮಾಡುತ್ತದೆ ಎಂದು ತಿಳಿಸಿದರು.

ಬಾಗಿನ ಪಡೆದ ಪೌರಕಾರ್ಮಿಕ ಮಹಿಳೆ ಜಯಲಕ್ಷ್ಮಿ ಮಾತನಾಡಿ ಪೌರಕಾರ್ಮಿಕರನ್ನು ಗುರುತಿಸಿ ಸಹೋದರಿಯಂತೆ
ಬಾಗಿನ ನೀಡಿರುವುದು ನಮ್ಮೆಲ್ಲರಿಗೂ ಸಂತಸ ಉಂಟು ಮಾಡಿದೆ ಇಂತಹ ಸಂಸ್ಥೆಗಳಿಗೆ ಧನ್ಯವಾದಗಳು
ಎಂದು ಹೇಳಿದರು.

ಅಥರ್ವ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪಲತಾ, ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ ಸಂಘದ ರಾಜ ಶಿವರಾಜ್, ಈ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,
ಮಂಜುಳಾ ಸೋಮಣ್ಣ, ಜ್ಯೋತಿ, ವರ್ಷಿಣಿ, ಹಾಗೂ ಪೌರಕಾರ್ಮಿಕ ಸಿಬ್ಬಂದಿ ಹಾಜರಿದ್ದರು.

ಗೌರಿ ಗಣೇಶ ಹಬ್ಬಕ್ಕಾಗಿ ಪೌರಕಾರ್ಮಿಕರಿಗೆ ಬಾಗಿನ Read More

ಆರ್ಥಿಕ ಸಮಾನತೆ ಸಾಧಿಸಲು ಗುರುಗಳಮಾರ್ಗ ದರ್ಶನ ಮುಖ್ಯ:ಪುಷ್ಪಲತಾ

ಮೈಸೂರು: ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಮಾನತೆ ಸಾಧಿಸಬೇಕಾದರೇ ಗುರಿ ಮತ್ತು ಗುರುಗಳ ಅಂತಃಕರಣದ ಮಾರ್ಗ ದರ್ಶನ ಮುಖ್ಯ ಎಂದು ಅಥರ್ವ ಲೈಫ್ ಸ್ಕಿಲ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪಲತಾ ಹೇಳಿದರು.

ಕುವೆಂಪು ನಗರದಲ್ಲಿರುವ ಅಥರ್ವ ಲೈಫ್ ಸ್ಕಿಲ್ ಫೌಂಡೇಶನ್ ಕಚೇರಿಯಲ್ಲಿ ಕರುಣೆ ಸೇವಾ ಟ್ರಸ್ಟ್ ಸಹಾಯಯೋಗದೊಂದಿಗೆ
79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ
ಮಕ್ಕಳಿಗೆ ಹಮ್ಮಿಕೊಂಡಿದ್ದ ಕೈ ಬರಹ, ಚಿತ್ರಕಲಾ ಹಾಗೂ ಏಕಪಾತ್ರ ಅಭಿನಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಜ್ಞಾನ ವಿಜ್ಞಾನ ಮತ್ತು ಆಧುನಿಕ ಡಿಜಿಟಲೀಕರಣ ಶಿಕ್ಷಣ ದೊರೆಯಬೇಕು ಎಂದು ಪುಷ್ಪಲತಾ ಹೇಳಿದರು

ಒಟ್ಟು 46 ಮಕ್ಕಳು ಬಹುಮಾನ ಪಡೆದಿದ್ದು, ಪ್ರಥಮ ಬಹುಮಾನ ರಾಘವ, ವಿಪ್ರತಾ, ಕೀರ್ತನ, ಅನನ್ಯ ಓಂಕಾರ್, ವೈಷ್ಣವಿ ಮತ್ತು ಅಮೂಲ್ಯ ಪಡೆದರು.

ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಶರತ್, ಚೇತನ್ ಗೌಡ, ಆದ್ಯ, ವಿರಾಜ್, ತನಿಷ್ಕ, ತಮ್ಮಿಕ ಮತ್ತು ಸ್ಕಂದ ತಮ್ಮದಾಗಿಸಿಕೊಂಡರು.

ಈ ಮೂಲಕ ಮಕ್ಕಳು ತಮ್ಮ ಪ್ರತಿಭೆಯನ್ನು ಮೆರೆದಿದ್ದು, ಅತಿಥಿಗಳು ಹಾಗೂ ಪೋಷಕರಿಂದ ಭಾರಿ ಮೆಚ್ಚುಗೆ ಪಡೆದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ
ರೇಖಾ ಶ್ರೀನಿವಾಸ್,ಡಾ. ಪುನೀತ್ ರಾಜಕುಮಾರ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ರಾಧಾ ರಾಜರತ್ನ, ಕೈಬರಹ ಶಿಕ್ಷಕಿ ಮೇನಕ, ಧ್ಯಾನ ಹಾಗೂ ಯೋಗ ಶಿಕ್ಷಕರಾದ ಕೃಷ್ಣ ಕುಮಾರ್ ಎಸ್,
ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ ಮತ್ತಿತರರು ಹಾಜರಿದ್ದರು.

ಆರ್ಥಿಕ ಸಮಾನತೆ ಸಾಧಿಸಲು ಗುರುಗಳಮಾರ್ಗ ದರ್ಶನ ಮುಖ್ಯ:ಪುಷ್ಪಲತಾ Read More

ಕೈಬರಹ, ಓದುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು

ಮೈಸೂರು: ಮೈಸೂರಿನ ‌ಕುವೆಂಪು‌‌ ನಗರದ
ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಮತ್ತು ಕರುಣೆ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೈಬರಹ ಮತ್ತು ಓದುವ ಸ್ಪರ್ಧೆಯಲ್ಲಿ ಬಹಳಷ್ಟು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.

ಮಕಳಿಗಾಗಿಯೇ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದರು, ಮತ್ತು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ತೊಡಗಿಸಿಕೊಂಡರು. ಸ್ಪರ್ಧೆಯನ್ನು ಮೂರು ವರ್ಗಗಳಲ್ಲಿ ಆಯೋಜಿಸಲಾಯಿತು:

ಎ ವರ್ಗ: 1ರಿಂದ 3ನೇ ತರಗತಿ
ಬಿ ವರ್ಗ: 4ರಿಂದ 7ನೇ ತರಗತಿ
ಸಿ ವರ್ಗ: 8ರಿಂದ 10ನೇ ತರಗತಿಯವರೆಗೆ

ಸ್ಪರ್ಧೆಯಲ್ಲಿ ಮಕ್ಕಳ ಕಲಿಕಾಶಕ್ತಿಗೆ ಉತ್ತೇಜನ ನೀಡುವ ಜತೆಗೆ ಅವರ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರುಣೆ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ರುಕ್ಮಿಣಿ ಅವರು ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣಪತ್ರಗಳನ್ನು ನೀಡಲಾಯಿತು, ಪ್ರತಿ ವರ್ಗದಿಂದ ಮೂರು ಶ್ರೇಷ್ಠ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.

ಈ ರೀತಿಯ ಕಾರ್ಯಕ್ರಮಗಳು ಮಕ್ಕಳಿಗೆ ಆತ್ಮವಿಶ್ವಾಸ ಹಾಗೂ ಭಾಷಾ ಕೌಶಲ್ಯಗಳ ಅಭಿವೃದ್ದಿಗೆ ಸಹಾಯಕವಾಗಿವೆ ಎಂದು ಆಯೋಜಕರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಅಥರ್ವ ಸ್ಕಿಲ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪ,
ಜೆಸಿಐ ಸದಸ್ಯರಾದ ಸುಮಿತ್ರ,
ಕೈ ಬರಹ ಶಿಕ್ಷಕಿ ಮೇನಕಾ,
ಸಮಾಜ ಸೇವಕಿ ರೇಖಾ ಮತ್ತಿತರರು ಹಾಜರಿದ್ದರು.

ಕೈಬರಹ, ಓದುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು Read More