ಆರ್ಟ್ ಆಫ್ ಲಿವಿಂಗ್ ನಲ್ಲಿ ಜ್ಯೋತಿರ್ಲಿಂಗ ದರ್ಶನ ಪಡೆದ ಸಾವಿರಾರು ಭಕ್ತರು

ಮೈಸೂರು: ಸಹಸ್ರಮಾನದಷ್ಟು ಪ್ರಾಚೀನವಾದ ಮೂಲ ಶ್ರೀಸೋಮನಾಥ ಜ್ಯೋತಿರ್ಲಿಂಗ ದಿವ್ಯ ದರ್ಶನನವನ್ನು ಸಾವಿರಾರು ಭಕ್ತರು ಪಡೆದುಕೊಂಡರು.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಆರ್ಟ್ ಆಫ್ ಲಿವಿಂಗ್‌ ಆಶ್ರಮದಲ್ಲಿ ಜ್ಯೋತಿರ್ಲಿಂಗ ಪ್ರತಿಷ್ಠಾಪಿಸಿ ದಿವ್ಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಮಹಮ್ಮದ್ ಘಜನಿ ದಾಳಿ ಬಳಿಕ ಕಾಲಘಟ್ಟದಲ್ಲಿ ಕಳೆದು ಹೋಯಿತೆಂದೇ ಭಾವಿಸಲಾಗಿದ್ದ ಸಾವಿರ ವರ್ಷಗಳ ನಂತರ ಮೂಲ ಶ್ರೀಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳು ಈಗ ಮತ್ತೆ ಪ್ರತ್ಯಕ್ಷವಾಗಿವೆ.

ತಂಜಾವೂರು ಕುಟುಂಬವೊಂದಕ್ಕೆ ಈ ಜ್ಯೋತಿರ್ಲಿಂಗ ದೊರೆತಿತ್ತು. ಅದನ್ನು ಕಂಚಿ ಪೆರಿಯಾರ್ ಗುರು, ನೂರು ವರ್ಷ ಅದನ್ನು ಕಾಪಾಡಿಕೊಂಡರೆ ಮುಂದೆ ಶಿವನ ಹೆಸರಿನಲ್ಲಿರುವ ಬೆಂಗಳೂರಿನ ಆಶ್ರಮದವರು ಅದನ್ನು ಮೂಲ ಸ್ಥಾನದಲ್ಲಿ ಪ್ರತಿಷ್ಠಾಪಿಸಲಿದ್ದಾರೆ ಎನ್ನುವ ಸಲಹೆ ನೀಡಿದ್ದರು.

ಅದರಂತೆ ಕಂಚಿ ಶ್ರೀಗಳ ಮಾರ್ಗದರ್ಶನದಲ್ಲಿ ಆ ಜ್ಯೋತಿರ್ಲಿಂಗ, ಅರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಅವರ ಕೈ ಸೇರಿದೆ.

ಅದನ್ನು ಜೋಪಾನ ಮಾಡಿರುವ ಶ್ರೀಗಳು, ದೇಶದ ಎಲ್ಲೆಡೆ ಜನರಿಗೆ ದರ್ಶನ ಮಾಡಿಸಿ ಮುಂದಿನ ಕಾರ್ತಿಕ ಮಾಸದಲ್ಲಿ ಗುಜರಾತ್‌ನ ಶ್ರೀಸೋಮೇಶ್ವರ ದೇವಸ್ಥಾನದಲ್ಲಿ ಮೂಲ ಪ್ರತಿಷ್ಠಾಪನೆ ಮಾಡುವ ಸಂಕಲ್ಪ ತೊಟ್ಟಿದ್ದಾರೆ.

ಅದರ ಭಾಗವಾಗಿ ಮಹಾರಾಷ್ಟ್ರ, ತಮಿಳುನಾಡು ಬಳಿಕ ಕರ್ನಾಟಕದಲ್ಲಿ ಜ್ಯೋತಿರ್ಲಿಂಗ ದರ್ಶನ ಮಾಡಿಸಲಾಗುತ್ತಿದೆ.

ಮಂಗಳವಾರ ಮೈಸೂರಿನ ಜನರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಐತಿಹಾಸಿಕವಾದ ಅವಿಸ್ಮರಣೀಯವಾದ ಈ ಕ್ಷಣದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಮೇಯರ್ ಶಿವಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮಪ್ರಸಾದ್, ಚಾಮುಂಡಿಬೆಟ್ಟದ ಕಾರ್ಯ ನಿರ್ವಹಣಾಧಿಕಾರಿ ರೂಪಾ ಇನ್ನಿತರ ಗಣ್ಯರು ದರ್ಶನ ಪಡೆದರು.

ಅವಶೇಷ ಪತ್ತೆ ಅಗಿದ್ದು ಹೇಗೆ:
1026ರಲ್ಲಿ ಸೋಮನಾಥ ದೇವಸ್ಥಾನವನ್ನು ಮಹಮ್ಮದ್ ಘಜನಿ ಘೋರವಾಗಿ ನಾಶ ಮಾಡಿದ ನಂತರ ಈ ಅವಶೇಷಗಳನ್ನು ಕೆಲವು ಅಗ್ನಿಹೋತ್ರಿ ಬ್ರಾಹ್ಮಣರು ಮೂಲ ಶ್ರೀಸೋಮನಾಥ ಲಿಂಗದ ಅವಶೇಷಗಳನ್ನು ತಮ್ಮೊಡನೆ ತಮಿಳುನಾಡಿಗೆ ಕೊಂಡೊಯ್ದರು.

ಅದನ್ನು ಸಾವಿರ ವರ್ಷಗಳವರೆಗೆ ಗೌಪ್ಯವಾಗಿ ರಕ್ಷಿಸಿದರು. ಪೀಳಿಗೆಯಿಂದ ಪೀಳಿಗೆಯವರೆಗೆ ಅತ್ಯಂತ ಭಕ್ತಿಯಿಂದ ಪಂಡಿತ ಸೀತಾರಾಮ ಶಾಸ್ತ್ರಿ ಕುಟುಂಬವು ರಕ್ಷಿಸುತ್ತಾ ಬಂದಿತ್ತು. ಕಂಚಿ ಶಂಕರಾಚಾರ್ಯರು ಶಾಸ್ತ್ರಿಗಳಿಗೆ, ಬೆಂಗಳೂರಿನಲ್ಲಿರುವ ಗುರುದೇವ್ ಶ್ರೀ ಶ್ರೀರವಿಶಂಕರರ ಬಳಿಗೆ ಅದನ್ನು ತೆಗೆದುಕೊಂಡು ಹೋಗು. ಅವರು ನಿನಗೆ ಸಹಾಯ ಮಾಡುತ್ತಾರೆ ಎಂದು ನಿರ್ದೇಶನವನ್ನು ನೀಡಿದ್ದರು.

ಅದರಂತೆ ಜ್ಯೋತಿರ್ಲಿಂಗ‌ ಈಗ ಶ್ರೀಗಳ ಕೈಸೇರಿದೆ.

ಈಗ ಅದನ್ನು ಈ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ ಎಂದು ಆರ್ಟ್ ಆಪ್ ಲಿವಿಂಗ್‌ನ ಸ್ವಾಮಿ ವಿಷ್ಣುಪಾದಜಿ ವಿವರಿಸಿದರು.

ಬ್ರಹ್ಮಚಾರಿ ಕಿಶೋರ್ ಪ್ರಸಾದ್, ಸಂಘಟಕರಾದ ರವಿಕುಮಾರ್, ಅಪೂರ್ವ ಸುರೇಶ್, ವಿಕ್ರಂ ಅಯ್ಯಂಗಾರ್, ರೂಪಾ, ಸುಬ್ರಹ್ಮಣ್ಯ, ಅವಿನಾಶ್, ದಿವ್ಯಾ, ಪ್ರತಿಭಾ ಮತ್ತಿತರರು ಕೂಡಾ‌ ಜ್ಯೋತಿರ್ಲಿಂಗ‌ ದರ್ಶನ ಪಡೆದು ಪುನೀತರಾದರು.

ಆರ್ಟ್ ಆಫ್ ಲಿವಿಂಗ್ ನಲ್ಲಿ ಜ್ಯೋತಿರ್ಲಿಂಗ ದರ್ಶನ ಪಡೆದ ಸಾವಿರಾರು ಭಕ್ತರು Read More

ಕ್ಯಾಲೆಂಡರ್ ನಲ್ಲಿ ಪೇಪರ್ ಬ್ಯಾಗ್ ತಯಾರಿಸಿ ಜಾಗೃತಿ ಮೂಡಿಸಿದಆರ್ಟ್ ಆಫ್ ಲಿವಿಂಗ್ ಮಕ್ಕಳು

ಮೈಸೂರು: ಆರ್ಟ್ ಆಫ್ ಲಿವಿಂಗ್ ಮಕ್ಕಳು
2024ರ ಕ್ಯಾಲೆಂಡರ್ ನಲ್ಲಿ ಪೇಪರ್ ಬ್ಯಾಗ್ ತಯಾರಿಸಿ ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿದರು.

ಆರ್ಟ್ ಆಫ್ ಲಿವಿಂಗ್ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ನಂಜು ಮಳಿಗೆ ಮಾರ್ಕೆಟ್ ಸುತ್ತಮುತ್ತ 2024ರ ಕ್ಯಾಲೆಂಡರ್ ನಲ್ಲಿ ಆರ್ಟ್ ಆಫ್ ಲಿವಿಂಗ್ ಮಕ್ಕಳೆ ಸಿದ್ದಪಡಿಸಿದ ಪೇಪರ್ ಬ್ಯಾಗನ್ನು ನೀಡಿ ಪ್ಲಾಸ್ಟಿಕ್ ನಿಂದ ಆಗುವ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿದರು.

ಪ್ಲಾಸ್ಟಿಕ್ ಬೇಡ ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್ ಬಳಸಿ ಎಂದು ಘೋಷಣೆ ಕೂಗಿ ಗ್ರಾಹಕರಿಗೆ ಪೇಪರ್ ಬ್ಯಾಗ್ ವಿತರಿಸಿ ಜಾಗೃತಿ ಮೂಡಿಸಲಾಯಿತು

ಈ ಸಂದರ್ಭದಲ್ಲಿ ನಗರಪಾಲಿಕ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ ಆರ್ಟ್ ಆಫ್ ಲಿವಿಂಗ್ ಮಕ್ಕಳು ಪೇಪರ್ ಬ್ಯಾಗನ್ನು ಸ್ವಯಂ ಪ್ರೇರಿತರಾಗಿ ತಯಾರಿಸಿ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಅತ್ಯುತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2024ರ ಹಳೆ ಕ್ಯಾಲೆಂಡರ್ ಹಾಗೂ ದಿನಪತ್ರಿಕೆಗಳನ್ನು ಬೀಸಾಡದೇ ಈ ರೀತಿ ಬಳಕೆ ಮಾಡುವ ಮೂಲಕ ಸುತ್ತಮುತ್ತಲ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಪ್ರತಿ ಮೊಹಲ್ಲಾ ದಲ್ಲೂ ನಗರ ಪಾಲಿಕೆ ವತಿಯಿಂದ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಲಿ ಎಂದು ಮ ವಿ ರಾಮಪ್ರಸಾದ್‌ ಸಲಹೆ ನೀಡಿದರು.

ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷೆ ಅಪೂರ್ವ ಸುರೇಶ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಹಿರಿಯ ಪತ್ರಕರ್ತ ಅನಿಲ್ ಕುಮಾರ್, ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ಶಂಕರ್, ಶಿವಲಿಂಗ ಸ್ವಾಮಿ ಮತ್ತು
ಆರ್ಟ್ ಆಫ್ ಲಿವಿಂಗ್ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರಾದ ನಂದಿನಿ, ವಿವೇಕ್ ಹಾಜರಿದ್ದರು.

ಕ್ಯಾಲೆಂಡರ್ ನಲ್ಲಿ ಪೇಪರ್ ಬ್ಯಾಗ್ ತಯಾರಿಸಿ ಜಾಗೃತಿ ಮೂಡಿಸಿದಆರ್ಟ್ ಆಫ್ ಲಿವಿಂಗ್ ಮಕ್ಕಳು Read More