ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಜಯ: ಮೈಸೂರು ಪಾಕ್ ವಿತರಿಸಿದ ಅಪೂರ್ವ ಸ್ನೇಹ ಬಳಗ

ಮೈಸೂರು: ಮೈಸೂರಿನ ಚಾಮುಂಡಿಪುರಂ ನಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸಿ ಸಂಭ್ರಮಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ , ನಿತೀಶ್ ಕುಮಾರ್ ಅವರಿಗೆ ಜೈಕಾರ ಕೂಗಿ ಸಂಭ್ರಮಿಸಿದರು.

ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಗಿರೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಮೈಸೂರು ನಗರ ಎಸ್ ಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮರಿಯಪ್ಪ, ಉದ್ಯಮಿ ಜಯರಾಮ್, ಆನಂದ್, ಸುಚೇಂದ್ರ, ಜತ್ತಿ ಪ್ರಸಾದ್, ಪುರುಷೋತ್ತಮ್, ಶಿವಲಿಂಗ ಸ್ವಾಮಿ, ಜಗದೀಶ್ ಮತ್ತಿತರರು ಹಾಜರಿದ್ದರು.

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಜಯ: ಮೈಸೂರು ಪಾಕ್ ವಿತರಿಸಿದ ಅಪೂರ್ವ ಸ್ನೇಹ ಬಳಗ Read More

ಆರೋಗ್ಯಯುತ ಜೀವನಕ್ಕೆ ಆಯುರ್ವೇದ ಅಗತ್ಯ: ಡಾ. ಚಂದ್ರಶೇಖರ್

ಮೈಸೂರು: ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ಧ್ಯಾನ, ಆಯುರ್ವೇದ ಆಹಾರ ಕ್ರಮಗಳು ಪ್ರಸ್ತುತ ದಿನಗಳಲ್ಲಿ ಅಗತ್ಯವಾಗಿವೆ ಎಂದು
ಆಯುರ್ವೇದ ಹಿರಿಯ ವೈದ್ಯರಾದ ಡಾ. ಚಂದ್ರಶೇಖರ್ ಹೇಳಿದರು.

ನಗರದ ಚಾಮುಂಡಿಪುರಂನಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಆಯುರ್ವೇದ ಗಿಡಗಳನ್ನು ವಿತರಿಸಿ, ಆಯುರ್ವೇದದಿಂದ ಆಗುವ ಉಪಯೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಯುರ್ವೇದ ವೈದ್ಯ ಪದ್ಧತಿ ಕಾಯಿಲೆ ಗುಣಪಡಿಸುವ ಜತೆಗೆ ಆರೋಗ್ಯಯುತ ಜೀವನ ನಡೆಸುವ ಕ್ರಮವನ್ನು ಕಲಿಸುತ್ತದೆ,ಆಯುರ್ವೇದದ ಬಗ್ಗೆ ಜನರಿಗೆ ತಿಳುವಳಿಕೆ ಬರಲು ಹೆಚ್ಚಿನ ಪ್ರಚಾರದ ಅಗತ್ಯ ಇದೆ ಎಂದು ಡಾ.ಚಂದ್ರಶೇಖರ ತಿಳಿಸಿದರು.

ಮಾಜಿ ಮಹಾಪೌರರಾದ ಸಂದೇಶ ಸ್ವಾಮಿ ಅವರು ಮಾತನಾಡಿ, ಆರೋಗ್ಯಕ್ಕಾಗಿ ಆಸ್ಪತ್ರೆಗಳನ್ನು ಅವಲಂಬಿಸಬಾರದು. ಅಡುಗೆ ಮನೆಯ ಸಾಂಬಾರ ಬಟ್ಟಲಿನಲ್ಲಿ ಆರೋಗ್ಯ ಕಾಯುವ ಪದಾರ್ಥಗಳಿರುತ್ತವೆ. ಅವುಗಳ ಸರಿಯಾದ ಸೇವನೆಯ ಮಹತ್ವ ಅರಿಯಬೇಕು ಎಂದು ಸಲಹೆ ನೀಡಿದರು.

ಆಯುರ್ವೇದ ಸಸ್ಯಗಳ ಬಳಕೆಯಿಂದ ದೀರ್ಘಾವಧಿ ಕಾಯಿಲೆಗಳಿಗೆ ತುತ್ತಾಗುವುದನ್ನು ತಡೆಯ ಬಹುದು. ಹೀಗಾಗಿ ಜನಸಾಮಾನ್ಯರಿಗೆ ದಿನ ನಿತ್ಯ ಉಪಯೋಗಕ್ಕೆ ಬರುವ ಗಿಡಮೂಲಿಕೆ ಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ
ಆಯುರ್ವೇದ ಸಸ್ಯಗಳಾದ ಅಮೃತ ಬಳ್ಳಿ, ಕೃಷ್ಣ ತುಳಸಿ, ರಾಮ ತುಳಸಿ, ಬೆಟ್ಟದ ನೆಲ್ಲಿಕಾಯಿ, ದೊಡ್ಡಿಪತ್ರೆ, ಅಗಸೆ ಗಿಡ, ನೇರಳೆ ಗಿಡ, ಬೇವಿನ ಗಿಡ, ಅರಿಶಿನ ಗಿಡ ಸೇರಿದಂತೆ ಇನ್ನಿತರ ಗಿಡ ಗಳನ್ನು ವಿತರಣೆ ಮಾಡಲಾಯಿತು

ಕಾರ್ಯಕ್ರಮದಲ್ಲಿ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಖಜಾಂಚಿ ನಾಗರಾಜ್, ಉದ್ಯಮಿ ಜಯರಾಮ್,ಕೆ ಎಸ್ ವಿಶ್ವನಾಥ್,ದೂರ ರಾಜಣ್ಣ, ಸುಚಿಂದ್ರ ಆನಂದ, ಪುರುಷೋತ್ತಮ್, ಜತ್ತಿ ಪ್ರಸಾದ್, ಆದರ್ಶ್, ಮತ್ತಿತರರು ಹಾಜರಿದ್ದರು.

ಆರೋಗ್ಯಯುತ ಜೀವನಕ್ಕೆ ಆಯುರ್ವೇದ ಅಗತ್ಯ: ಡಾ. ಚಂದ್ರಶೇಖರ್ Read More

ದಸರಾ ಉಡುಗೊರೆ ನೀಡಿದ ಮೋದಿ: ಮಾ ವಿ ರಾಮಪ್ರಸಾದ್

ಮೈಸೂರು: ಜಿ ಎಸ್ ಟಿ ಕಡಿತ ಸ್ವಾಗತಿಸಿ ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗದವರು ಸಿಹಿ ಅಂಚಿ ಖುಷಿ ಪಟ್ಟರು.

ಈ ವೇಳೆ ಮಾತನಾಡಿದ ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್,
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಜಿ ಎಸ್‌ ಟಿ ಯಲ್ಲಿ ಸುಧಾರಣೆಗಳನ್ನು ತರುವ ಬಗ್ಗೆ ದೇಶಕ್ಕೆ ವಾಗ್ದಾನ ನೀಡಿದಂತೆ ಜಿಎಸ್‌ಟಿ ಕಡಿತ ಮಾಡುವ ಮೂಲಕ ದೇಶದ ಜನರಿಗೆ ದಸರಾ ಉಡುಗೊರೆ ನೀಡಿದ್ದಾರೆ ಎಂದು ಹೇಳಿದರು.

ಸರಕು ಮತ್ತು ಸೇವಾ ತೆರಿಗೆಯ ವ್ಯವಸ್ಥೆಯಲ್ಲಿನ ಜಿಎಸ್‌ಟಿ ಹಂತಗಳನ್ನು ಕಡಿಮೆ ಮಾಡಿ ಮಹತ್ವದ ಬದಲಾವಣೆಗಳನ್ನು ಕೇಂದ್ರ ಸರ್ಕಾರದ ಮಹತ್ವದ ನಿರ್ಣಯವನ್ನು ಸ್ವಾಗತಿಸುತ್ತೇವೆ ಎಂದು ನುಡಿದರು.

ಹೇರ್ ಆಯಿಲ್ ನಿಂದ ಕಾರ್ನ್ ಪ್ಲೇಕ್ಸ್, ಟಿ.ವಿ ಸೆಟ್, ಆರೋಗ್ಯ ಮತ್ತು ಜೀವ ವಿಮೆ ಪಾಲಿಸಿ ವರೆಗೆ ಜನಸಾಮಾನ್ಯರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಕಡಿಮೆ ಆಗಲಿವೆ ಎಂದು ಪ್ರಧಾನಿ ತಿಳಿಸಿದ್ದಾರೆ. ದೇಶದ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮೂಲಕ ಜನಸಾಮಾನ್ಯರ ಸೇವಕ ಎಂಬುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದು ಮಾ ವಿ ರಾಮ್ ಪ್ರಸಾದ್ ಹೇಳಿದರು ನಂತರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ದೂರ ರಾಜಣ್ಣ, ಪುರುಷೋತ್ತಮ್, ಆನಂದ್,ನಿವೃತ್ತ ಶಿಕ್ಷಕ ಮಹದೇವಸ್ವಾಮಿ, ಜತ್ತಿ ಪ್ರಸಾದ್, ಸುಚೇಂದ್ರ, ಜೈರಾಮ್, ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

ದಸರಾ ಉಡುಗೊರೆ ನೀಡಿದ ಮೋದಿ: ಮಾ ವಿ ರಾಮಪ್ರಸಾದ್ Read More

ಸುಧಾ ಮೂರ್ತಿ, ಎಸ್ ಎಲ್ ಭೈರಪ್ಪ ಹುಟ್ಟುಹಬ್ಬ ;ಮಕ್ಕಳಿಗೆ ಪುಸ್ತಕ ವಿತರಣೆ

ಮೈಸೂರು: ರಾಜ್ಯಸಭಾ ಸದಸ್ಯರೂ ಹೆಮ್ಮೆಯ ಕನ್ನಡತಿ, ಪದ್ಮಭೂಷಣ ಪುರಸ್ಕೃತರಾದ ಸುಧಾಮೂರ್ತಿ ಮತ್ತು ಪದ್ಮಶ್ರೀ ಪುರಸ್ಕೃತ ಎಸ್ ಎಲ್ ಭೈರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ
ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.

ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ಹಾಗೂ ಲೇಖನಿ ನೀಡುವ ಮೂಲಕ ಈ ಇಬ್ಬರು ಸಾಧಕರ ಜನುಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕರ್ನಾಟಕದ ಇಬ್ಬರು ಮಹನೀಯರ ಕೊಡುಗೆ ಅಪಾರ.ಸಾಹಿತ್ಯ,ಹಾಗೂ ಅವರ ಸಮಾಜ ಸೇವೆಗಳು ಅನನ್ಯ, ಅವರ ಸೇವೆಗಳು ನಮ್ಮಂತ ನೂರಾರು ಸಂಘಟನೆಗಳಿಗೆ ಸ್ಪೂರ್ತಿದಾಯಕ,ಕನ್ನಡದ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಶ್ರೀಮಂತ ಗೊಳಿಸಿರುವ ಇಬ್ಬರು ಮಹನೀಯರು ಆದರ್ಶಪ್ರಾಯರು ಎಂದು ಹೇಳಿದರು.

ಈ ವೇಳೆ ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಚಕ್ರಪಾಣಿ, ಜತ್ತಿ ಪ್ರಸಾದ್, ಮಹಾನ್ ಶ್ರೇಯಸ್, ಶಾಲೆಯ ಮುಖ್ಯ ಶಿಕ್ಷಕರಾದ ರತ್ನಮಾಲ,ಶೃತಿ, ನರಸಿಂಹ,ಶಾಲೆಯ ಶಿಕ್ಷಕ ವೃಂದ ಮತ್ತಿತರರು ಹಾಜರಿದ್ದರು.

ಸುಧಾ ಮೂರ್ತಿ, ಎಸ್ ಎಲ್ ಭೈರಪ್ಪ ಹುಟ್ಟುಹಬ್ಬ ;ಮಕ್ಕಳಿಗೆ ಪುಸ್ತಕ ವಿತರಣೆ Read More

ಅಪೂರ್ವ ಸ್ನೇಹ ಬಳಗದಿಂದತುಳಸಿಗಿಡ ವಿತರಣೆ

ಮೈಸೂರು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಕೃಷ್ಣಮೂರ್ತಿಪುರಂ ನಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಭಕ್ತರಿಗೆ ತುಳಸಿ ಗಿಡ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಮುರಳಿ, ಜತ್ತಿ ಪ್ರಸಾದ್,ಸುಚೀಂದ್ರ, ನಾಗಶ್ರೀ,ಚಕ್ರಪಾಣಿ,ಶ್ರೀಕಾಂತ್ ಕಶ್ಯಪ್, ದೂರ ರಾಜಣ್ಣ, ಜಗದೀಶ್, ಮಹದೇವ ಸ್ವಾಮಿ, ಶಿವಲಿಂಗ ಸ್ವಾಮಿ ಮತ್ತಿತರರು ಹಾಜರಿದ್ದರು.

ಅಪೂರ್ವ ಸ್ನೇಹ ಬಳಗದಿಂದತುಳಸಿಗಿಡ ವಿತರಣೆ Read More

ಧರ್ಮ ಸಂಸ್ಕೃತಿ ನಾಣ್ಯದ ಎರಡು ಮುಖಗಳು:ಅಪೂರ್ವ ಸುರೇಶ್

ಮೈಸೂರು: ಚಾಮರಾಜ ಜೋಡಿ ರಸ್ತೆಯಲ್ಲಿರುವ ಸಂಸ್ಕೃತ ಪಾಠ ಶಾಲೆಯಲ್ಲಿ
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ಶೃಂಗೇರಿ ಶಾರದಾ ಪೀಠದ
ಪೀಠಾಧಿಪತಿ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ 33ನೇ ವರ್ಧಂತಿ ಮಹೋತ್ಸವ
ಹಮ್ಮಿಕೊಳ್ಳಲಾಯಿತು.

ವರ್ಧಂತಿ ಮಹೋತ್ಸವ ಅಂಗವಾಗಿ
ವೇದ ಮಕ್ಕಳಿಗೆ ಪುಸ್ತಕ ಪೆನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಧರ್ಮ ಮತ್ತು ಸಂಸ್ಕೃತಿ ನಾಣ್ಯದ ಎರಡು
ಮುಖಗಳಿದ್ದಂತೆ ಎಂದು ಹೇಳಿ ಅವುಗಳ ಮಹತ್ವ ತಿಳಿಸಿದರು.

ಗುರುಗಳನ್ನು, ತಂದೆ-ತಾಯಿಯನ್ನು ಪ್ರೀತಿಸಿ ಗೌರವಿಸಿ ಒಳ್ಳೆಯ ವ್ಯಕ್ತಿತ್ವ ರೂಪಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು
ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರು ಮಾಡಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸುಚೇಂದ್ರ,ಜತ್ತಿ ಪ್ರಸಾದ್, ಅಜಯ್ ಶಾಸ್ತ್ರಿ, ಶ್ರೀಕಾಂತ್ ಕಶ್ಯಪ್,ಪ್ರಶಾಂತ್ ಮತ್ತಿತರರು ಹಾಜರಿದ್ದರು.

ಧರ್ಮ ಸಂಸ್ಕೃತಿ ನಾಣ್ಯದ ಎರಡು ಮುಖಗಳು:ಅಪೂರ್ವ ಸುರೇಶ್ Read More

ಚಾಮುಂಡಿ ಬೆಟ್ಟದಲ್ಲಿ ಅಪೂರ್ವ ಸ್ನೇಹ ಬಳಗದಿಂದ ಮೈಸೂರು ಪಾಕ್ ವಿತರಣೆ

ಮೈಸೂರು: ಅಪೂರ್ವ ಸ್ನೇಹ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಆಷಾಡ ಮಾಸದ ಪ್ರಯುಕ್ತ ಭಕ್ತರಿಗೆ
ಮೈಸೂರು ಪಾಕ್ ವಿತರಿಸಲಾಯಿತು.

ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಭಕ್ತಾದಿಗಳಿಗೆ ಮೈಸೂರು ಪಾಕ್ ವಿತರಣೆ
ಕಾರ್ಯಕ್ಕೆ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದಿಕ್ಷಿತ್ ಅವರು ಚಾಲನೆ ನೀಡಿದರು.

ಪರಾಂಪರಿಕ ಖಾದ್ಯವಾದ ಮೈಸೂರು ಪಾಕ್ ವೈಜ್ಞಾನಿಕವಾಗಿಯ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ, ಕಡಲೆಹಿಟ್ಟು ಚರ್ಮದ ಆರೋಗ್ಯ ಕಾಪಾಡುತ್ತದೆ,ನೈಸರ್ಗಿಕ ತುಪ್ಪ ಮನುಷ್ಯನ ಮೂಳೆಗಳಿಗೆ ಶಕ್ತಿ ನೀಡುತ್ತದೆ. ಮೈಸೂರು ಪಾಕ್ ದೇಶವಿದೇಶದಲ್ಲಿ ಜನಪ್ರಿಯ ಸಿಹಿಯಾಗಿದ್ದು, ಮೈಸೂರಿಗರು ಅಷ್ಟೇ ಅಲ್ಲದೆ ಪ್ರತಿಯೊಬ್ಬರು ಕೂಡಲ ಹಬ್ಬಗಳಲ್ಲಿ ಹೆಚ್ಚಾಗಿ ಮೈಸೂರು ಪಾಕ್ ಬಳಸಲು ಇಚ್ಛಿಸುತ್ತಾರೆ ಎಂದು ಶಶಿಶೇಖರ್ ದೀಕ್ಷಿತ್ ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಸೋಮಣ್ಣ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ಜಿ ರಾಘವೇಂದ್ರ, ಸವಿತಾ ಘಾಟ್ಕೆ, ಜಯಶ್ರೀ ಶಿವರಾಮ್ ಮತ್ತಿತರರು ಹಾಜರಿದ್ದರು.

ಚಾಮುಂಡಿ ಬೆಟ್ಟದಲ್ಲಿ ಅಪೂರ್ವ ಸ್ನೇಹ ಬಳಗದಿಂದ ಮೈಸೂರು ಪಾಕ್ ವಿತರಣೆ Read More

ಜಾತ್ಯತೀತ ತತ್ವದಲ್ಲಿ ಬಸವಣ್ಣ­ನವರು ಸಾಮಾಜಿಕ ಕ್ರಾಂತಿ ಮಾಡಿದ್ದರು‌-ಬಸವರಾಜ್ ಬಸಪ್ಪ

ಮೈಸೂರು: ಜಾತ್ಯತೀತ ಸಮಾಜ ನಿರ್ಮಾಣದ ತತ್ವದಲ್ಲಿ ಬಸವಣ್ಣ­ನವರು ಸಾಮಾಜಿಕ ಕ್ರಾಂತಿ ಮಾಡಿದ್ದರು‌ ಎಂದು
ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ತಿಳಿಸಿದರು.

ಅಪೂರ್ವ ಸ್ನೇಹ ಬಳಗ ಹಾಗೂ ಕೃಷ್ಣರಾಜ ಯುವ ಬಳಗ ವತಿಯಿಂದ ನಂಜುಮಳಿಗೆಯಲ್ಲಿ ಹಮ್ಮಿಕೊಂಡಿದ್ದ ಅಕ್ಷಯ ತೃತೀಯ ಹಾಗೂ ಬಸವೇಶ್ವರ ಜಯಂತಿ ಅಂಗವಾಗಿ ಗೋಪೂಜೆ ಹಾಗೂ ಗೋವುಗಳಿಗೆ ಮೇವು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನವರು ಸಮಾಜದ ಅಭಿ­ವೃದ್ಧಿಗಾಗಿ ಹೋರಾಡಿದ್ದರು, ಸಮಾಜ ಹಾಗೂ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದು ಹೇಳಿದರು.

ನಾವೆಲ್ಲರೂ ಬಸವಣ್ಣನವರು ಹಾಕಿಕೊಟ್ಟ ದಾರಿ­ಯಲ್ಲಿ ಮುನ್ನಡೆ­ಯಬೇಕು, ಅವರ ಜೀವ­ನವು ಸಮಾಜಕ್ಕೆ ಆದರ್ಶಪ್ರಾಯ ಎಂದು ಬಸವರಾಜ್ ಬಸಪ್ಪ ತಿಳಿಸಿದರು.

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ಮಾತನಾಡಿ,ಅಕ್ಷಯ ತೃತೀಯದ ಈ ಶುಭ ದಿವಸ ನೀವು ದಾನ ಧರ್ಮ ಮಾಡಿ, ಇಷ್ಟಪಟ್ಟು ಶುಭ ಕೆಲಸ ಮಾಡಿದರೆ ಅದೆಲ್ಲಾ ಒಳ್ಳೆಯದಾಗುತ್ತದೆ ಒಳ್ಳೆಯದೇ ಮಾಡಿ ಅದರ ಪುಣ್ಯ ಅಕ್ಷಯವಾಗುತ್ತದೆ ಎಂದು ಸಲಹೆ ನೀಡಿದರು.

ಪರಮಾತ್ಮನು ನಿಮ್ಮ ಮನದ ಇಚ್ಛೆಗಳನ್ನು ಈಡೇರಿಸಲಿ ನಿಮ್ಮ ಕಷ್ಟ ಚಿಂತೆ ನೋವು ಕ್ಷಯವಾಗಲಿ ಸದಾ ಆನಂದ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಬದಲ್ಲಿ ದೂರ ರಾಜಣ್ಣ, ಜೆತ್ತಿಪ್ರಸಾದ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ದೇವರಾಜ್,ಜಗದೀಶ್, ಶಿವಲಿಂಗಸ್ವಾಮಿ,ಆನಂದ್ ಮತ್ತಿತರರು ಹಾಜರಿದ್ದರು.

ಜಾತ್ಯತೀತ ತತ್ವದಲ್ಲಿ ಬಸವಣ್ಣ­ನವರು ಸಾಮಾಜಿಕ ಕ್ರಾಂತಿ ಮಾಡಿದ್ದರು‌-ಬಸವರಾಜ್ ಬಸಪ್ಪ Read More

ಕೃಷ್ಣರಾಜ ಯುವ ಬಳಗ, ಅಪೂರ್ವಕ ಸ್ನೇಹ ಬಳಗದಿಂದ ಅಂಬೇಡ್ಕರ್ ಜಯಂತಿ

ಮೈಸೂರು: ಕೃಷ್ಣರಾಜ ಯುವ ಬಳಗ ಹಾಗೂ ಅಪೂರ್ವಕ ಸ್ನೇಹ ಬಳಗದ ವತಿಯಿಂದ
ಡಾ ಬಿ ಆರ್ ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಯಿತು.

ಮೈಸೂರಿನ ಆದಿಚುಂಚನಗಿರಿ ಮುಖ್ಯರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಕೃಷ್ಣರಾಜ ಯುವ ಬಳಗ ಹಾಗೂ ಅಪೂರ್ವಕ ಸ್ನೇಹ ಬಳಗದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ,ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ,ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಜಿ ರಾಘವೇಂದ್ರ,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್,ಎಸ್ ಎನ್ ರಾಜೇಶ್,ಮಂಜು, ಪಾಂಡು,ಶಂಭು ಹೊಸಮಠ ಮತ್ತಿತರರು ಹಾಜರಿದ್ದರು.

ಕೃಷ್ಣರಾಜ ಯುವ ಬಳಗ, ಅಪೂರ್ವಕ ಸ್ನೇಹ ಬಳಗದಿಂದ ಅಂಬೇಡ್ಕರ್ ಜಯಂತಿ Read More

ಅಪೂರ್ವ ಸ್ನೇಹ ಬಳಗದಿಂದಪಾನಕ‌ ಕೋಸಂಬರಿ‌ ವಿತರಣೆ

ಮೈಸೂರು, ಏ.6: ಶ್ರೀ ರಾಮನವಮಿ ಅಂಗವಾಗಿ‌ ಮೈಸೂರಿನ‌ ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂನಲ್ಲಿ ಶ್ರೀರಾಮಚಂದ್ರಪ್ರಭುವಿನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಆನಂತರ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉದ್ಯಮಿ ಜಯರಾಮ್, ಅಪೂರ್ವ ಸುರೇಶ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ,ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ಪಾಂಡು,ಜತ್ತಿ ಪ್ರಸಾದ್, ಗಜೇಂದ್ರ, ಅಭಿಲಾಶ್ ಮತ್ತಿತರರು ಪಾಲ್ಗೊಂಡಿದ್ದರು.

ಅಪೂರ್ವ ಸ್ನೇಹ ಬಳಗದಿಂದಪಾನಕ‌ ಕೋಸಂಬರಿ‌ ವಿತರಣೆ Read More