ವಿಪಕ್ಷ ಅಷ್ಟೇ ಅಲ್ಲ; ಆಡಳಿತ ಪಕ್ಷದವರ ಫೋನ್ ಕೂಡ ಟ್ಯಾಪ್ ಮಾಡಲಾಗುತ್ತಿದೆ-ಶ್ರೀರಾಮುಲು

ಬೆಂಗಳೂರು: ವಿಪಕ್ಷನಾಯಕರ ಫೋನ್ ಅಷ್ಟೆ ಅಲ್ಲ, ಆಡಳಿತ ಪಕ್ಷದವರ ಫೋನನ್ನು ಕೂಡ ಟ್ಯಾಪ್ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಶ್ರೀರಾಮುಲು ದೂರಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಕೇವಲ ವಿಪಕ್ಷ ನಾಯಕರ ಫೋನ್ ಅಷ್ಟೆ ಕದ್ದಾಲಿಕೆ ಮಾಡುತ್ತಿಲ್ಲ. ಆಡಳಿತ ಪಕ್ಷದವರ ಫೋನ್ ಕೂಡ ಕದ್ದಾಲಿಕೆ ಆಗುತ್ತಿದೆ ಕುರ್ಚಿ ಉಳಿಸಿಕೊಳ್ಳಲು ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂದು ಕಿಡಿಕಾರಿದರು.

ಸಿಟಿ ಫ್ಯಾಕ್ಟರಿ ಕುರಿತು ಸಮಗ್ರ ತನಿಖೆಯಾಗಕು,ಹನಿಟ್ರ್ಯಾಪ್ ಕೇಸ್ ಅನ್ನ ಸಿಬಿಐ ತನಿಖೆ ಆಗಬೇಕು ಹನಿಟ್ರ್ಯಾಪ್ ಮಾಡಿದ ಆರೋಪಿಗಳನ್ನ ಪತ್ತೆ ಹಚ್ಚಬೇಕು ಎಂದು ಶ್ರೀರಾಮುಲು ಒತ್ತಾಯಿಸಿದರು.

ವಿಪಕ್ಷ ಅಷ್ಟೇ ಅಲ್ಲ; ಆಡಳಿತ ಪಕ್ಷದವರ ಫೋನ್ ಕೂಡ ಟ್ಯಾಪ್ ಮಾಡಲಾಗುತ್ತಿದೆ-ಶ್ರೀರಾಮುಲು Read More

ಹನಿಟ್ರ್ಯಾಪ್ ದೂರು ದಾಖಲಿಸಲಿಲ್ಲವೇಕೆ ಸಿಎಂ ಕುರ್ಚಿ ಭದ್ರಪಡಿಸುವ ತಂತ್ರವೇ:ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹನಿಟ್ರ್ಯಾಪ್‌ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಶ್ರೀವತ್ಸ ಅವರು, ಹನಿಟ್ರ್ಯಾಪ್ ಸಂಬಂಧ ರಾಜಣ್ಣ ಏಕೆ ದೂರು ನೀಡಿರಲಿಲ್ಲ ಹೇಳಲಿ ಎಂದು ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಹನಿಟ್ರ್ಯಾಪ್ ಸಂಬಂಧ ಈವರಗೆ ಯಾಕೆ ದೂರು ದಾಖಲಿಸಲಿಲ್ಲ ಇದು‌ ಸಿಎಂ ಕುರ್ಚಿ ಭದ್ರಪಡಿಸುವ ತಂತ್ರವೇ ಎಂದು ಪ್ರಶ್ನಿಸಿದರು.

ರಾಜಣ್ಣ ಹಾಗೂ ರಾಜಣ್ಣ ಪುತ್ರ ಸದನದಲ್ಲೇ 48 ಮಂದಿ ಕೇಂದ್ರ ನಾಯಕರು ಇದರಲ್ಲಿ ಇದ್ದಾರೆ ಎಂದಿದ್ದಾರೆ. ಅದರಲ್ಲಿ ಇರುವ ನಾಯಕರು ಯಾರು, ಇದರ‌ ಹಿಂದೆ ಯಾರಿದ್ದಾರೆ ಎಂಬುದರ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಸಿಡಿ ಫ್ಯಾಕ್ಟರಿಯ ಮಾಲೀಕ ಯಾರು ಪತ್ತೆ ಆಗಬೇಕು, ಹರೀಶ್ ಗೌಡ ಅವರ ವಿರುದ್ಧವೂ ಹನಿಟ್ರ್ಯಾಪ್ ಆಗಿತ್ತು, ಈ ಹಿಂದೆ ಕಬ್ಬನ್ ಪೇಟೆ ಠಾಣೆಯಲ್ಲಿ ದೂರು ನೀಡಿದ್ದರು ಎಂದು ನೆನಪಿಸಿದರು.

ವಿಧಾನಸಭೆ, ವಿಧಾನಪರಿಷತ್ ನಲ್ಲಿ ಈ‌ ಹಿಂದೆಯೂ ಹಲವು ಘಟನೆ ನಡೆದಿವೆ. ಈ ಹಿಂದೆ ಕೂಡ ಹಲವರನ್ನ ಸಸ್ಪೆಂಡ್ ಮಾಡಿದ್ದಾರೆ, ಕಾಂಗ್ರೆಸ್ ಪಕ್ಷವನ್ನ ಬೆಳೆಸುವ ಹುನ್ನಾರ ಇದು, ಬಿಜೆಪಿ ಬಗ್ಗು ಬಡಿಯುವ ಪ್ಲಾನ್ ಇದು ಎಂದು ಹೇಳಿದರು.

ಹನಿಟ್ರ್ಯಾಪ್ ನಿಜಕ್ಕೂ ಮಾಡಿದ್ದಾರಾ,ಎಲ್ಲಿದೆ ಸಿಡಿ, ತಪ್ಪು ಮಾಡಿದವರನ್ನ ಹೊರ ತನ್ನಿ ಜನಬಯಸುವ ಜನಪ್ರತಿನಿಧಿ ಯಾರೂ ಇಲ್ಲ, ಶುದ್ಧ ರಾಜಕಾರಣಿಗಳು ಯಾರು ಗೊತ್ತಾಗಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಆಗಲಿ ಎಂದು ಶಾಸಕ ಶ್ರೀವತ್ಸ ಕಡಕ್ ಆಗಿ ತಿಳಿಸಿದರು.

ಹನಿಟ್ರ್ಯಾಪ್ ದೂರು ದಾಖಲಿಸಲಿಲ್ಲವೇಕೆ ಸಿಎಂ ಕುರ್ಚಿ ಭದ್ರಪಡಿಸುವ ತಂತ್ರವೇ:ಶ್ರೀವತ್ಸ Read More

ರಾಜಕೀಯ ಸೇಡಿನಿಂದ ನನ್ನ ಜಮೀನಿನ ಸರ್ವೇ ಮಾಡಿಸಿದ್ದಾರೆ: ಹೆಚ್.ಡಿ.ಕೆ ಆರೋಪ

ಬೆಂಗಳೂರು: ಬಿಡದಿ ಬಳಿಯ ಕೇತಿಗಾನಹಳ್ಳಿಯಲ್ಲಿ ತಮ್ಮ ಜಮೀನು ಸರ್ವೆ ರಾಜಕೀಯದ ಸೇಡಿನ ಭಾಗ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದರು ಸಚಿವರು; ಆ ಭೂಮಿಯನ್ನು ನಾನು ಖರೀದಿಸಿ 40 ವರ್ಷವಾಗಿದೆ. ಅಷ್ಟೂ ವರ್ಷಗಳಿಂದ ಈ ವಿಷಯವನ್ನು ಜೀವಂತವಾಗಿಟ್ಟು ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿದರು.

1984ರಲ್ಲಿ ನಾನು ಈ ಭೂಮಿಯನ್ನು ಖರೀದಿ ಮಾಡಿದ್ದು. ಸಿನಿಮಾ ಹಂಚಿಕೆದಾರನಾಗಿ ದುಡಿದ ಹಣದಲ್ಲಿ ನಾನು ಈ ಭೂಮಿಯನ್ನು ಖರೀದಿ ಮಾಡಿದ್ದೇನೆ. ಅಂದಿನಿಂದಲೂ ಈ ಭೂಮಿಯ ಮೇಲೆ ಕೆಲವರ ಕಣ್ಣು ಬಿದ್ದಿದೆ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದ ಅಸಹಾಯಕತೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವೇ ಮೂಲಕ ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಹೆಚ್ ಡಿ ಕೆ ಆರೋಪಿಸಿದರು.

2012ರಿಂದಲೂ ನನ್ನ ವಿರುದ್ದ ತನಿಖೆ ಮಾಡುತ್ತಿದ್ದಾರೆ, ಏನು ಸಿಗಲಿಲ್ಲ, ನಾನು ಸಿದ್ದರಾಮಯ್ಯನವರ ರೀತಿ ಸರಕಾರಿ ಜಮೀನು ಲೂಟಿ ಮಾಡಿಲ್ಲ. ಈಗ ಆಗಿರುವ ಎಲ್ಲಾ ತನಿಖೆಗಳು ಸಾಕಾಗುವುದಿಲ್ಲ ಎಂದು ಈಗ IAS ಅಧಿಕಾರಿಗಳ ನೇತೃತ್ವದಲ್ಲಿ SIT ತನಿಖೆ ಮಾಡಿಸುತ್ತಿದ್ದಾರೆ. ಯಾವುದೇ ತನಿಖೆ ಮಾಡಲಿ, ನಾನು ಮುಕ್ತವಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

1986ರಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರ ಅವರುಗಳು ಇದೇ ಜಮೀನು ವಿಷಯದಲ್ಲಿ ಆಗಿನ ಪ್ರಧಾನಮಂತ್ರಿ, ಗೃಹ ಮಂತ್ರಿಯವರಿಗೆ ಪತ್ರ ಬರೆದಿದ್ದರು. ತಮ್ಮ ದೂರಿನಲ್ಲಿ ಅವರು ಕುಮಾರಸ್ವಾಮಿ ಅವರು ಜಮೀನು ಖರೀದಿಸಿದ್ದಾರೆ ಎಂದು ಹೇಳಿದ್ದರೇ ಹೊರತು ಕಬಳಿಸಿದ್ದಾರೆ ಎಂದು ಆರೋಪ ಮಾಡಿರಲಿಲ್ಲ. ನಾನು ಖರೀದಿ ಮಾಡಿರುವ ಆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆಯೇ ಹೊರತು ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಸಿಲ್ಲ,ನನ್ನ ಬಳಿ ಎಲ್ಲಾ ದಾಖಲೆಗಳಿವೆ ಎಂದು ತಿಳಿಸಿದರು.

ರಾಜ್ಯದ ಸಂಪತ್ತನ್ನು ರಕ್ಷಿಸುವವನ ರೀತಿ ವರ್ತಿಸುವ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಎನ್ನುವ ವ್ಯಕ್ತಿ ನನ್ನ ಜಮೀನು ವಿಷಯದ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ, ರಾಜ್ಯ ಹೈಕೋರ್ಟ್ ನಿಂದ ನನಗೆ ಯಾವುದೇ ನೋಟೀಲ್ ಬಂದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ದೇವೇಗೌಡರನ್ನು ಮೋದಿ ಅವರ ಚಿಯರ್ ಲೀಡರ್ ಎಂದು ಆಗೌರವದ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ದೇವೆಗೌಡರ ಬಗ್ಗೆ ಮಾತನಾಡುವ ಮುನ್ನ ತಮ್ಮ ಯೋಗ್ಯತೆ ಅರಿತುಕೊಂಡರೆ ಉತ್ತಮ ಎಂದು ತಿಳಿಸಿದರು.

ರಾಜ್ಯದ ನೀರಾವರಿಗೆ ದೇವೇಗೌಡರು ಏನು ಮಾಡಿದ್ದಾರೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂಬುದೂ ಜನರಿಗೆ ಗೊತ್ತಿದೆ. ದೇವೇಗೌಡರು ನೀರಾವರಿ ಬಗ್ಗೆ, ರಾಜ್ಯದ ಜನತೆಯ ರಕ್ಷಣೆ ಮಾಡುವುದಕ್ಕೆ ಇವರಿಂದ ಹೇಳಿಸಿಕೊಳ್ಳಬೇಕಿಲ್ಲ. ಸಿದ್ದರಾಮಯ್ಯ ಅವರೇ.. ಈ ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ನಿಮ್ಮ ಕೊಡುಗೆ ಏನು? ನೀರಾವರಿಗೆ ನಿಮ್ಮ ಕೊಡುಗೆ ಏನು? ಎಂದು ಕುಮಾರಸ್ವಾಮಿ ಕಾರವಾಗಿ ಪ್ರಶ್ನಿಸಿದರು.

ರಾಜಕೀಯ ಸೇಡಿನಿಂದ ನನ್ನ ಜಮೀನಿನ ಸರ್ವೇ ಮಾಡಿಸಿದ್ದಾರೆ: ಹೆಚ್.ಡಿ.ಕೆ ಆರೋಪ Read More

ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ದರು: ಸಿ.ಟಿ ರವಿ ಗಂಭೀರ ಆರೊಪ

ಬೆಂಗಳೂರು: ಯಾರದ್ದೋ ಸೂಚನೆ ಮೇರೆಗೆ ನನ್ನ ಹತ್ಯೆ ಮಾಡಲು ಗದ್ದೆ, ಕಲ್ಲಿನ ಕ್ವಾರಿ, ಗಲ್ಲಿ ರಸ್ತೆಗಳಲ್ಲಿ ಪೊಲೀಸರು ಸುತ್ತಾಡಿಸಿದ್ದರು ಎಂದು ಬಿಜೆಪಿ ಎಂ ಎಲ್ ಸಿ ಸಿ.ಟಿ ರವಿ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣ ಸೌಧದ ಒಳಗಡೆಯೇ ನಿನ್ನ ಹೆಣ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಅಷ್ಟೊಂದು ಭದ್ರತೆ ಇರುವ ಜಾಗದಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು, ಗುಂಪಿನಿನಿಂದ ಹತ್ಯೆ ಮಾಡಿಸಲೆಂದೇ ನನ್ನನ್ನು ಗಲ್ಲಿ, ಗದ್ದೆಯಲ್ಲಿ ಸುತ್ತಾಡಿಸಿದ್ದಾರೆ ಎಂದು ಸಿ.ಟಿ ರವಿ ಹೇಳಿದರು.

ಪರಿಷತ್‌ನಲ್ಲಿ ಅಂಬೇಡ್ಕರ್ ವಿಚಾರದ ಬಗ್ಗೆ ಚರ್ಚೆ ಜೋರಾದ ಕಾರಣ ಕಲಾಪ ಮುಂದೂಡಿಕೆ ಆಯ್ತು. ನಂತರ ನಾನು ಪಶ್ಚಿಮ ದ್ವಾರಕ್ಕೆ ಬಂದು ಕಾಂಗ್ರೆಸ್‌ ಯಾವ ರೀತಿ ಅಂಬೇಡ್ಕರ್‌ಗೆ ಅವಮಾನ ಮಾಡಿದೆ ಎಂದು ಹೇಳಿಕೆ ನೀಡಲು ಮುಂದಾಗಿದ್ದೆ. ಈ ವೇಳೆ ಮಾಧ್ಯಮಗಳು ನಿಮ್ಮ ಮೇಲೆ ಈ ರೀತಿಯ ಆರೋಪ ಬಂದಿದೆ ಎಂದು ಹೇಳಿದರು.

ನಾನು ಲಕ್ಷ್ಮಿ ಅವರು ಎದುರಿಗೆ ಸಿಕ್ಕಾಗ ಏನ್ ಲಕ್ಷ್ಮಕ್ಕ ಎಂದು ಮಾತನಾಡುತ್ತೇನೆ. ಅವರು ಏನಂದರು, ನಾನು ಏನಂದೆ ಎಂದು ಮಾತನಾಡುವುದಿಲ್ಲ. ಎಲ್ಲವೂ ಅಂತರಾತ್ಮ ಪರಮಾತ್ಮನಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ಮಧ್ಯಾಹ್ನ ಊಟ ಮುಗಿಸಿ ಬರುವಾಗ ಪಶ್ಚಿಮ ದ್ವಾರದಲ್ಲಿ ನನ್ನ ಮೇಲೆ ದಾಳಿ ನಡೆಯಿತು. ಆಗ ಮಾರ್ಷಲ್ ಗಳು ಪೊಲೀಸರು ಅವರನ್ನು ದೂರ ತಳ್ಳಿ ನಮ್ಮನ್ನು ಒಳಗಡೆ ಕರೆದುಕೊಂಡು ಹೋದರು. ನಂತರ ನನ್ನ ಮೇಲೆ ಏನೇನು ಮಾತನಾಡಿದ್ದಾರೆಂದು ವಿಚಾರ ಗೊತ್ತಾಯಿತು.

ಅಶೋಕ್ ಅವರನ್ನು ಭೇಟಿ ಮಾಡಿ ವಾಪಸ್ ಬರುವಾಗ ಮೂರ್ನಾಲ್ಕು ಜನ ಹಲ್ಲೆ ಮಾಡಲು ಬಂದರು. ನಿನ್ನ ಕೊಲೆ ಮಾಡುತ್ತೇವೆ, ನಿನ್ನ ಹೆಣ ಚಿಕ್ಕಮಗಳೂರಿಗೆ ಕಳುಹಿಸುತ್ತೇವೆ ಎಂದು ಕೂಗಾಡಿದರು. ಮಾರ್ಷಲ್ ಗಳು ಅವರನ್ನು ಗೇಟಿನ ಆಚೆ ಹಾಕಿದರು. ಆಗಲೂ ಗೇಟ್‌ಗೆ ಒದೆಯುತ್ತಿದ್ದರು. ನಾನು ಅಲ್ಲೇ ಧರಣಿ ಕೂತೆ, ನಂತರ ಸಭಾಪತಿ ಭೇಟಿಗೆ ಕರೆ ಬಂತು ಹೋದೆ ಎಂದು ಹೇಳಿದರು.

ಸಭಾಪತಿಗೂ ಪಶ್ಚಿಮ ದ್ವಾರದ ಹಲ್ಲೆ, ಮೊಗಸಾಲೆಯಲ್ಲಿ ಹಲ್ಲೆ ನಡೆದ ದೂರು ಕೊಡಲಾಗಿದೆ, ಆಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ದೂರು ಕೊಟ್ಟಿದ್ದಾರೆಂದು ಸಭಾಪತಿ ಹೇಳಿದರು. ನಾನೂ ಏನಾಯಿತೆಂದು ಲಿಖಿತ ಸಮಜಾಯಿಷಿ ಕೊಟ್ಟೆ. ಕಲಾಪ ಆರಂಭವಾಗಿ ಸ್ಪೀಕರ್‌ ರೂಲಿಂಗ್‌ ಹೇಳಿ ಅನಿರ್ದಿಷ್ಟಾವಧಿಗೆ ಮುಂದೂಡಿದರು.

ನಂತರ ಲಕ್ಷ್ಮಿ ಹೆಬ್ಬಾಳ್ಕರ್, ಚನ್ನರಾಜ್, ನಜೀರ್ ಅಹಮದ್ ಅವರೆಲ್ಲ ನನ್ನ ಏಕವಚನದಲ್ಲಿ ನಿಂದಿಸಿದರು. ಕತೆ ಮುಗಿಸುವುದಾಗಿ ಬೆದರಿಕೆ ಹಾಕಿದರು. ನಂತರ ನಾನು ಸಭಾಪತಿ ಕೊಠಡಿಗೆ ಹೋಗಿ ಅಲ್ಲಿ ಏನಾಯ್ತು ಅಂತ ಹೇಳಿ ಲಿಖಿತ ದೂರು ನೀಡಿದೆವು ಎಂದು ಸಿ.ಟಿ.ರವಿ ವಿವರಿಸಿದರು.

ಸಭಾಪತಿಯವರು ಎಡಿಜಿಪಿಯವರನ್ನು ಕರೆದು ಸಿ.ಟಿ ರವಿ ಅವರನ್ನು ಯಾವುದೇ ತೊಂದರೆ ಆಗದೇ ಮನೆಗೆ ತಲುಪಿಸಬೇಕು ಮತ್ತು ಹಲ್ಲೆಗೆ ಮುಂದಾಗಿದ್ದವರ ವಿರುದ್ಧವೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಇದಕ್ಕೆ ಎಡಿಜಿಪಿ ಕೆಲವರನ್ನು ವಶಕ್ಕೆ ಪಡೆದಿದ್ದೇವೆ ಅವರ ಮೇಲೆ ಕ್ರಮ ಆಗುತ್ತದೆ ಎಂದು ಹೇಳಿದ್ದಾರೆ ಎಂದು ರವಿ ಮಾಹಿತಿ ನೀಡಿದರು.

ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ದರು: ಸಿ.ಟಿ ರವಿ ಗಂಭೀರ ಆರೊಪ Read More