ಬೀಗ ಮುರಿಯದೆ,ಬಾಗಿಲು ಒಡೆಯದೆ ನಗದು,ಚಿನ್ನಾಭರಣ ಕಳವು
ಮೈಸೂರು, ಮಾ.7: ಮನೆ ಬೀಗ ಮುರಿಯದೆ,ಬಾಗಿಲು ಒಡೆಯದೆ ಮನೆಯಲ್ಲಿದ್ದ 3.5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನಾಭರಣ ಕಳುವಾಗಿರುವ ವಿಚಿತ್ರ ಘಟನೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿನಿ ಲೇ ಔಟ್ ನಲ್ಲಿ ನಡೆದಿದೆ.
ಸಿದ್ದರಾಮನಹುಂಡಿಯ ಸರ್ಕಾರಿ ಕಾಲೇಜ್ ರಿಟೈರ್ಡ್ ವೈಸ್ ಪ್ರಿನ್ಸಿಪಲ್ ಮಾಯಾಂಗ ಎಂಬುವರ ಮನೆಯಲ್ಲಿ ಈ ರೀತಿ ಕಳ್ಳತನವಾಗಿದೆ.
ಕಾರ್ಯಕ್ರಮವೊಂದಕ್ಕೆ ಕುಟುಂಬ ಸಮೇತ ತೆರಳಿ ಮಾಯಾಂಗ ಅವರು ಮನೆಗೆ ಹಿಂದಿರುಗಿದಾಗ ವಾರ್ಡ್ ರೋಬ್ ನಲ್ಲಿದ್ದ ಹಣ, 25 ಗ್ರಾಂ ಚಿನ್ನಾಭರಣ ಹಾಗೂ 3.5 ಲಕ್ಷ ನಗದು ಇಲ್ಲದಿರುವುದು ಕಂಡು ಶಾಕ್ ಆಗಿದ್ದಾರೆ.
ಮನೆಯ ಮುಂದಿನ ಅಥವಾ ಹಿಂದಿನ ಬಾಗಿಲು ಯಥಾ ಪ್ರಕಾರ ಬೀಗ ಹಾಕಿದಂತೆಯೇ ಇದೆ.ಆದರೂ ಕಳ್ಳತನ ಆಗಿರುವುದು ಅಚ್ಚರಿಗೆ ಕಾರಣವಾಗಿದೆ.ಯಾರೋ ಪರಿಚಯಸ್ಥರೇ ನಕಲಿ ಕೀ ಬಳಸಿ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ಆಲನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೀಗ ಮುರಿಯದೆ,ಬಾಗಿಲು ಒಡೆಯದೆ ನಗದು,ಚಿನ್ನಾಭರಣ ಕಳವು Read More