ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯ : ರಘುನಾಥ್

ಮೈಸೂರು, ಆ.2: ಸಮಾಜದ ಅಭಿವೃದ್ಧಿಯಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ, ಕಟ್ಟಕಡೆಯ ವ್ಯಕ್ತಿಗೂ ಸಹಾಯ ನೀಡಿದಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ರಘುನಾಥ್ ತಿಳಿಸಿದರು.

ಈ ನಿಟ್ಟಿನಲ್ಲಿ ಸಂಘಟನೆ ಅವಶ್ಯಕವಾಗಿದೆ, ಪ್ರಸ್ತುತ ದಿನಗಳಲ್ಲಿ ಬ್ರಾಹ್ಮಣ ಸಮಾಜ ಜಾಗೃತಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಪ್ರಥಮ ಬಾರಿಗೆ ಮೈಸೂರಿಗೆ ಆಗಮಿಸಿ ಅಗ್ರಹಾರದಲ್ಲಿರುವ ಶಾಸಕ ಟಿ.ಎಸ್ ಶೀವತ್ಸ ಅವರ ಕಚೇರಿಗೆ ಭೇಟಿ ನೀಡಿ ಜಿಲ್ಲೆಯ ಪ್ರಮುಖ ವಿಪ್ರ ಮುಖಂಡರೊಂದಿಗೆ ಉಪಹಾರ ಸೇವಿಸಿ ರಘುನಾಥ್ ಮಾತನಾಡಿದರು.

ಸರ್ವೇ ಜನಃ ಸುಖಿನೋ ಭವಂತು ಎಂಬ ವಾಣಿಯಂತೆ ಬ್ರಾಹ್ಮಣರು ಸಮಸ್ತ ಜನರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಂಘಟನೆಯಿಂದ ಯಾವುದೇ ಸಮಾಜದ ಅಭಿವೃದ್ಧಿ ಸಾಧ್ಯ, ಪ್ರಾಮಾಣಿಕವಾಗಿ ಸಂಘಟನೆಯಲ್ಲಿ ಕೆಲಸ ಮಾಡಿದರೆ ಜನ ಎತ್ತರದ ಸ್ಥಾನದಲ್ಲಿ ಕೂರಿಸುತ್ತಾರೆ ಎಂಬುದಕ್ಕೆ ನಾನು ಮತ್ತು ಶ್ರೀವತ್ಸ ಅವರೇ ಉದಾಹರಣೆ. ಇಬ್ಬರೂ ಸಹ ಬಿಜೆಪಿಯಲ್ಲಿ ಸಂಘಟನ ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ್ದೆವು ಎಂದು ಹೇಳಿದರು.

ಶಾಸಕ ಟಿ.ಎಸ್. ಶ್ರೀವತ್ಸ ಅವರು ಮಾತನಾಡಿ, ರಘುನಾಥ್ ಅವರ ಬಹು ವರ್ಷಗಳ ಒಡನಾಟದ ಬಗ್ಗೆ ತಿಳಿಸಿ, ಬ್ರಾಹ್ಮಣ ಸಮುದಾಯ ಸರ್ವರಿಗೂ ಶುಭವನ್ನು ಬಯಸುವ ಸಮುದಾಯವಾಗಿದ್ದು ಸಮಾಜದ ಸರ್ವತೋಮಖ ಅಭಿವೃದ್ಧಿಗೆ ಎಲ್ಲರೂ ಒಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸರವರು ರಘುನಾಥ್ ಅವರನ್ನು ಅಭಿನಂದಿಸಿದರು.

ಬಿಜೆಪಿ ಮುಖಂಡರಾದ ಮೈ.ವಿ ರವಿಶಂಕರ್, ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ ಪಾರ್ಥಸಾರಥಿ, ಮಾ.ವಿ ರಾಮಪ್ರಸಾದ್,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರುಗಳಾದ ದಿಲೀಪ್ ರಾಜಶೇಖರ್, ರಥಯಾತ್ರೆ ಸುರೇಶ್, ಜಂಟಿ ಕಾರ್ಯದರ್ಶಿಗಳಾದ ಬಾಲಕೃಷ್ಣ, ಕಲ್ಕೆರೆ ನಾಗರಾಜ್, ಟಿ.ಎಸ್ ಅರುಣ್, ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಸಿಇಒ ಮುರುಳಿ, ವೀರರಾಘವಾಚಾರ್, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ಎಂ.ಎ ಮೋಹನ್, ಕೆ.ಎಂ. ನಿಶಾಂತ್, ಅಜಯ್ ಶಾಸ್ತ್ರಿ, ಮಂಜುನಾಥ್, ಟಿ.ಪಿ ಮಧುಸೂಧನ್, ಎಲ್ ಎಲ್ ಹೆಗಡೆ, ಸತೀಶ್ ಹಾಗೂ ವಿವಿಧ ಮೈಸೂರು ಜಿಲ್ಲೆಯ ಬ್ರಾಹ್ಮಣ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯ : ರಘುನಾಥ್ Read More

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ನೊಂದಣಿಯಾ ದವರಿಗೆ ಗುರುತಿನ ಚೀಟಿಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹೆಚ್ ವಿ ರಾಜೀವ್ ವಿತರಿಸಿದರು

ನೋಂದಣಿ ಕಾರ್ಯವು ಕಳೆದ ಒಂದು ತಿಂಗಳ ಹಿಂದೆ ಚಾಮರಾಜನಗರ ಮೈಸೂರು ಮತ್ತಿತರ ಕಡೆ ನಡೆದು 200 ಸದಸ್ಯರನ್ನು ನೋಂದಾಯಿಸಲಾಗಿತ್ತು.

ಆ ಸದಸ್ಯರ ಗುರುತಿನ ಚೀಟಿಗಳನ್ನು ಹೆಚ್. ವಿ ರಾಜೀವ್ ಅವರು ವಿತರಿಸಿ ಮಾತನಾಡಿದರು.

ಈಗಾಗಲೇ ರಾಜ್ಯದಲ್ಲಿ ನೊಂದಣಿ ಕಾರ್ಯವು ಭರದಿಂದ ಸಾಗುತ್ತಿದ್ದು ಅದರಲ್ಲೂ ವಿಶೇಷವಾಗಿ ಚಾಮರಾಜನಗರ ಮತ್ತು ಮೈಸೂರಿನಲ್ಲಿ ವಿಪ್ರರು ಹೆಚ್ಚು ಸದಸ್ಯರಾಗಬೇಕೆಂದು ಕರೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್ ರಂಗನಾಥ ಅವರು ಮಾತನಾಡಿ ಮೈಸೂರಿನಲ್ಲಿ ಸದಸ್ಯರಾಗ ಬಯಸುವ ವಿಪ್ರರು ದೂರವಾಣಿ 9964524275 ಕರೆ ಮಾಡಿದರೆ ಐದರಿಂದ ಹತ್ತು ಜನ ಇದ್ದಲ್ಲಿ ನಿಮ್ಮಲ್ಲಿಗೇ ಬಂದು ನೊಂದಾಯಿಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಪ್ರಮುಖಂಡರಾದ ಶೇಷಪ್ರಸಾದ್, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾದ ಪ್ರಶಾಂತ್ ಭರದ್ವಾಜ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ Read More

ಬ್ರಾಹ್ಮಣ ಒಳಪಂಗಡಗಳು ಒಗ್ಗೂಡಲಿ-ನವೀನ್ ಕುಮಾರ್

ಮೈಸೂರು: ಸಮಾಜದಲ್ಲಿ ಬ್ರಾಹ್ಮಣ ಒಳಪಂಗಡಗಳು ಒಗ್ಗೂಡಬೇಕು,ತ್ರಿಮತಸ್ಥ ಬ್ರಾಹ್ಮಣರು‌‌ ಒಟ್ಟಾಗಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾದ ಎನ್.ಎಂ ನವೀನ್ ಕುಮಾರ್ ಕರೆ ನೀಡಿದರು

ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಒಂಟಿಕೊಪ್ಪಲು ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಮತ್ತು ವಿಪ್ರರ ಸಂಘಟನಾ ಸಭೆಯನ್ನು ಉದ್ಘಾಟಿಸಿ,ನಂತರ ನೂತನ ಸದ್ಯಸ್ವತ ಗುರುತಿನ ಚೀಟಿಯನ್ನು ವಿತರಿಸಿ ಅವರು ಮಾತನಾಡಿದರು.

ವಿಪ್ರರು ಸಂಘಟನಾತ್ಮಕವಾಗಿ ಮುಂದಾದರೆ ಬ್ರಾಹ್ಮಣ ಸಮುದಾಯ ಬೇರು ಮಟ್ಟದಲ್ಲಿ ಬಲಿಷ್ಠಗೊಳಿಸಬಹುದು, ದೇಶದ ಉಳಿದೆಲ್ಲ
ಸಮುದಾಯಗಳಿಗೆ ಮಾದರಿಯಾಗಿ ನಮ್ಮ ಮೂಲ ಸಂಸ್ಕಾರ, ಸಂಸ್ಕೃತಿಯನ್ನು ಉಜ್ವಲಗೊಳಿಸುವಲ್ಲಿ ಮುಂದಾಗಬೇಕು ಎಂದು ಸಲಹೆ‌ ನೀಡಿದರು.

ನಗರ ಪಾಲಿಕೆ ಮಾಜಿ ಸದಸ್ಯ ಮಾ.ವಿ. ರಾಂಪ್ರಸಾದ್ ಅವರು ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರು ಸರ್ಕಾರದ ಸವಲತ್ತುಗಳನ್ನ ಬಳಸಿಕೊಳ್ಳಬೇಕಾದರೆ ಸಂಘಟನಾತ್ಮಕವಾಗಿ ಸಂಘ ಸಂಸ್ಥೆಗಳ ಸಂಪರ್ಕದಲ್ಲಿರಬೇಕು, ಶಿಕ್ಷಣ ಉದ್ಯೋಗ ವೈದ್ಯಕೀಯ ಸಾಂಸ್ಕೃತಿಕ ಸೇರಿದಂತೆ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಸಭಾದ ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮೀದೇವಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ, ಸೌಭಾಗ್ಯ ಮೂರ್ತಿ,ಪುಷ್ಪ ಅಯ್ಯಂಗಾರ್,ಯೋಗ ನರಸಿಂಹ (ಮುರಳಿ), ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ‌ ಕಾರ್ಯದರ್ಶಿ‌ ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್,ಸುಚೇಂದ್ರ, ಶಾಂತಮ್ಮ,ವನಜ, ಮಹೇಶ್ ಕಾಮತ್ ಮತ್ತಿತರರು ಭಾಗವಹಿಸಿದ್ದರು.

ಬ್ರಾಹ್ಮಣ ಒಳಪಂಗಡಗಳು ಒಗ್ಗೂಡಲಿ-ನವೀನ್ ಕುಮಾರ್ Read More

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿಗಳಿಂದ ಬಿರುಸಿನ ಪ್ರಚಾರ

ಮೈಸೂರು, ಏ.4: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಏಪ್ರಿಲ್ 13ರಂದು ಏಕಕಾಲಕ್ಕೆ ರಾಜ್ಯಾದ್ಯಂತ ನಡೆಯಲಿದ್ದು,ಮೈಸೂರು ಜಿಲ್ಲಾ ಪ್ರತಿನಿಧಿಗಳು ಬಿರುಸಿನ ಮತಯಾಚನೆ ಮಾಡಿದರು.

ಈ ಚುನಾವಣೆಯಲ್ಲಿ
ಹಾಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ್ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ
ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡಾ. ಭಾನುಪ್ರಕಾಶ್ ಶರ್ಮ
ಹಾಗೂ ಮೈಸೂರಿನ 2 ಜಿಲ್ಲಾಪ್ರತಿನಿಧಿ ಸ್ಥಾನಕ್ಕೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಕಡಕೋಳ ಜಗದೀಶ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅಗ್ರಹಾರದ ಶಂಕರ ಮಠದಲ್ಲಿ ಶಾರದಾಂಬೆಗೆ ಪೂಜೆ ಸಲ್ಲಿಸಿ ನಂತರ ಬಿರುಸಿನ ಪ್ರಚಾರ ಪ್ರಾರಂಭಿಸಲಾಯಿತು.

ಈ ವೇಳೆ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಅವರು,
ಡಾ. ಭಾನುಪ್ರಕಾಶ್ ಶರ್ಮಾ ಅವರು ಕಳೆದ 30 ವರ್ಷಗಳಿಂದ ವಿವಿಧ ಸಂಸ್ಥೆಗಳ ಪದಾಧಿಕಾರಿಗಳಿಗಾಗಿ, ಎಕೆಬಿಎಂಎಸ್‌ನಲ್ಲಿ 3 ಬಾರಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.

ವಿಶ್ವಹಿಂದು ಪರಿಷತ್‌ನೊಂದಿಗೆ ಗುರುತಿಸಿ ಕೊಂಡಿದ್ದಾರೆ. ವಿಪ್ರರ ಸೇವೆಯನ್ನೇ ಪ್ರಮುಖ ಎಂದು ತಿಳಿದುಕೊಂಡಿದ್ದಾರೆ. ಧರ್ಮಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಹೀಗೆ ಹಲವು ಸಮಾಜಮುಖಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಧರ್ಮ, ಗೋಸಂರಕ್ಷಣೆ ವಿಚಾರದಲ್ಲಿ ಅನೇಕ ಗೋಷ್ಠಿಗಳನ್ನು ಮಾಡಿದ್ದಾರೆ. ಮೈಸೂರು ರಾಜ ಮನೆತನದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳನ್ನು ಮಾಡಿದ್ದಾರೆ.1995 ರಲ್ಲಿ ಶ್ರೀ ರಂಗಪಟ್ಟಣದಲ್ಲಿ ಅತಿರುದ್ರ ಮಹಾಯಾಗ ಮಾಡಿ ಯಶಸ್ವಿಯಾಗಿದ್ದಾರೆ, ಕೈಲಾಸ ಮಾನಸ ಸರೋವರದಲ್ಲಿ ಅತಿರುದ್ರ ಮಹಾಯಾಗ ಯಶಸ್ವಿಯಾಗಿ ಮಾಡಿ ದ್ದಾರೆ. ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ವಿಪ್ರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ನಾಗರಾಜು, ಮುಳ್ಳೂರು ಸುರೇಶ್,
ಅಜಯ್ ಶಾಸ್ತ್ರಿ, ಜಯಸಿಂಹ, ವಿಜಯ್ ಕುಮಾರ್, ಸುಚೇಂದ್ರ, ನಾಗೇಂದ್ರ ಬಾಬು, ಚಕ್ರಪಾಣಿ, ಮಹೇಶ್ ಕುಮಾರ್, ಜ್ಯೋತಿ,ರಶ್ಮಿ, ಶ್ರೀನಾಥ್, ಲತಾ ಬಾಲಕೃಷ್ಣ, ನಾಗಶ್ರೀ, ಮಂಜುನಾಥ್ ಮತ್ತಿತರರು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿಗಳಿಂದ ಬಿರುಸಿನ ಪ್ರಚಾರ Read More

ಅ.ಕ. ಬ್ರಾ. ಮಹಾಸಭಾ ಚುನಾವಣೆ: ಡಾ.ಲಕ್ಷ್ಮೀದೇವಿ, ಕಲ್ಕೆರೆ ನಾಗರಾಜ್ ನಾಮಪತ್ರ ಸಲ್ಲಿಕೆ

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2025-2030 ನೇ ಸಾಲಿನ ಚುನಾವಣೆಗೆ ಮೈಸೂರು ಜಿಲ್ಲೆಯ ಎರಡು ಪ್ರತಿನಿಧಿ ಸ್ಥಾನಕ್ಕೆ ಡಾ.ಲಕ್ಷ್ಮೀದೇವಿ ಮತ್ತು ಕಲ್ಕೆರೆ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ.

ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಎಸ್ ರಘುನಾಥ್ ಸ್ಪರ್ಧಿಸಿದ್ದು, ಮೈಸೂರು ಜಿಲ್ಲೆಯ ಎರಡು ಪ್ರತಿನಿಧಿ ಸ್ಥಾನಕ್ಕೆ ಎಸ್ ರಘುನಾಥ್ ಅವರ ತಂಡದಿಂದ ಗ್ರಾಜುಯೇಟ್ ಕೋ ಆಪರೇಟಿವ್ ಬ್ಯಾಂಕ್
ನಿರ್ದೇಶಕರು ಹಾಗೂ ವಿಪ್ರ ಮಹಿಳಾಸಂಗಮದ ಅಧ್ಯಕ್ಷರಾದ ಡಾ ಲಕ್ಷ್ಮೀದೇವಿ ಹಾಗೂ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಖಜಾಂಚಿ ಕೆ ನಾಗರಾಜ್ ಇಂದು ಬೆಂಗಳೂರಿನ
ಬನಶಂಕರಿಯಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಚೇರಿಯ ಗಾಯತ್ರಿ ಭವನದಲ್ಲಿ ಚುನಾವಣೆ ಅಧಿಕಾರಿ ಎನ್ ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು,

ಈ ಸಂದರ್ಭದಲ್ಲಿ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ನo ಶ್ರೀಕಂಠ ಕುಮಾರ್, ರಥಯಾತ್ರೆ ಸುರೇಶ್, ನಿವೃತ್ತ ಮುಜರಾಯಿ ತಹಶೀಲ್ದಾರರಾದ ಎಸ್ ಎನ್ ಯತಿರಾಜ್ ಸಂಪತ್ ಕುಮಾರ್, ಶಂಕರ್ ನಾರಾಯಣ್, ಬಿ ಎಸ್ ವನಜ ಮತ್ತಿತರರು ಹಾಜರಿದ್ದರು.

ಅ.ಕ. ಬ್ರಾ. ಮಹಾಸಭಾ ಚುನಾವಣೆ: ಡಾ.ಲಕ್ಷ್ಮೀದೇವಿ, ಕಲ್ಕೆರೆ ನಾಗರಾಜ್ ನಾಮಪತ್ರ ಸಲ್ಲಿಕೆ Read More