ಸೈಬರ್ ಅಪರಾಧ ತಡೆಗೆ ಜಾಗೃತಿ ಅಗತ್ಯ-ಮಹೇಶ್ ಸಿ ಎನ್

ಮೈಸೂರು: ಸಾಮಾಜಿಕ ಜಾಲತಾಣ ಬಳಸುವ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿರಬೇಕು ಎಂದು
ಮೈಸೂರು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆ ಮುಖ್ಯಪೇದೆ ಮಹೇಶ್ ಸಿ ಎನ್ ತಿಳಿಹೇಳಿದರು.

ವಿದ್ಯಾರಣ್ಯಪುರಂ ನಲ್ಲಿರುವ ವಿದ್ಯಾರಣ್ಯ ಕೋಚಿಂಗ್ ಸೆಂಟರ್ ನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಮೈಸೂರು ಘಟಕದ ವತಿಯಿಂದ
ಶುಕ್ರವಾರ ಆಯೋಜಿಸಿದ್ದ ಸೈಬರ್ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ. ಸೈಬರ್ ಅಪರಾಧಿಗಳು ಅಮಾಯಕ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಹೊಂಚುಹಾಕಿ ಕುಳಿತಿರುತ್ತಾರೆ. ಅಪರಾಧಗಳ ಕುರಿತು ಆತಂಕಗೊಳ್ಳುವ ಬದಲು ಪಾಸ್‍ವರ್ಡ್ ಭದ್ರತೆ ಕುರಿತು ಸದಾ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ಬ್ಯಾಂಕ್‍ಗಳ ಹೆಸರಿನಲ್ಲಿ ಒಟಿಪಿ ಮಾಹಿತಿ ಪಡೆದುಕೊಳ್ಳುವ ಮೂಲಕ ಬ್ಯಾಂಕ್ ಖಾತೆಗಳಲ್ಲಿನ ಸೈಬರ್ ಅಪರಾಧಿಗಳು ಹಣ ದೋಚುತ್ತಾರೆ. ಅಪರಿಚಿತ ವ್ಯಕ್ತಿಗಳು ಕರೆಮಾಡಿದರೆ ಮಾಹಿತಿ ಹಂಚಿಕೊಳ್ಳಬೇಡಿ. ಬ್ಯಾಂಕ್ ಸಿಬ್ಬಂದಿ ಯಾವುದೇ ಕಾರಣಕ್ಕೂ ಮೊಬೈಲ್ ಕರೆಮಾಡಿ ಮಾಹಿತಿ ಕೇಳುವುದಿಲ್ಲ, ಇದು ಅಪರಾಧಿಗಳ ಕೃತ್ಯವಾಗಿರುತ್ತದೆ ಎಂದು ಮಹೇಶ್ ಸಿ ಎನ್ ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್ ಮಾತನಾಡಿ, ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ವಿದ್ಯಾರ್ಥಿ, ಯುವ ಸಮೂಕ ಮುಂಚೂಣಿಯಲ್ಲಿದೆ. ಬಳಕೆಯ ಸುರಕ್ಷತೆಯ ಬಗ್ಗೆ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್,ರಾಜ್ಯ ವಿದ್ಯಾ ವರ್ಗದ ಸಂಚಲಕರದ ಡಾ. ಜಿ ವಿ ರವಿಶಂಕರ್,
ಶಿಕ್ಷಕರಾದ ಧನುಷ್, ಶ್ವೇತ ಮತ್ತಿತರರು ಹಾಜರಿದ್ದರು.

ಸೈಬರ್ ಅಪರಾಧ ತಡೆಗೆ ಜಾಗೃತಿ ಅಗತ್ಯ-ಮಹೇಶ್ ಸಿ ಎನ್ Read More

ಆನ್ಲೈನ್ ಗೇಮಿಂಗ್ ಬ್ಯಾನ್; ಕೇಂದ್ರದ ನಿರ್ಧಾರ ಶ್ಲಾಘನೀಯ-ಚಂದ್ರಶೇಖರ್

ಮೈಸೂರು: ಆನ್ಲೈನ್ ಗೇಮಿಂಗ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರದ ಕಾರ್ಯ ಶ್ಲಾಘನೀಯ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಜಿಲ್ಲಾ ಅಧ್ಯಕ್ಷ ಸಿ ಎಸ್ ಚಂದ್ರಶೇಖರ್ ಹೇಳಿದ್ದಾರೆ.

ಆನ್ಲೈನ್ ಗೇಮ್ಸ್ ಗಳಿಂದ ಅದೆಷ್ಟೋ ಕುಟುಂಬಗಳು ಸರ್ವನಾಶವಾಗಿವೆ.ಎಷ್ಟೋ ವಿದ್ಯಾರ್ಥಿಗಳು ಆನ್ಲೈನ್ ಗೀಳಿಗೆ ಬಿದ್ದು ಆರ್ಥಿಕವಾಗಿ ಮಾತ್ರವಲ್ಲ ವಿದ್ಯಾಭ್ಯಾಸದಲ್ಲೂ ತೀವ್ರ ಹಾನಿಗೊಳಗಾಗಿದ್ದಾರೆ.

ಈ ದಿಸೆಯಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಆನ್ಲೈನ್ ಗೇಮಿಂಗ್ ಬ್ಯಾನ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತಾ ಬಂದಿತ್ತು.

ಅಲ್ಲದೆ ಗ್ರಾಹಕ ಪಂಚಾಯತ್ ಕರ್ನಾಟಕದಲ್ಲೂ ಶಾಲಾ ಕಾಲೇಜುಗಳಲ್ಲಿ ಆನ್ಲೈನ್ ಗೇಮಿಂಗನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಗಳನ್ನು ಕೂಡ ಹಮ್ಮಿಕೊಂಡಿದ್ದಿತು ಎಂದು ಚಂದ್ರಶೇಖರ್
ತಿಳಿಸಿದ್ದಾರೆ.

ಈಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆನ್ಲೈನ್ ಗೇಮಿಂಗ್ ಬ್ಯಾನ ಮಾಡಿದ್ದು ದಿಟ್ಟ ನಿರ್ಧಾರ ಎಂದು ಹೇಳಿದ್ದಾರೆ

ಈ ರೀತಿಯ ನಿರ್ಧಾರಗಳಿಂದ ಸಮಾಜದಲ್ಲಿ ಬದಲಾವಣೆಗಳನ್ನು ತರಲು ಸಾಧ್ಯ. ಇದು ನಿರಂತರವಾಗಿ ಸಾಗಲು ಜನತೆ ಗ್ರಾಹಕ ಪಂಚಾಯತಿಯೊಂದಿಗೆ ಜೋಡಿಸುವುದು ಅವಶ್ಯಕ ಎಂದು ಸಿ ಎಸ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಗ್ರಾಹಕ ಪಂಚಾಯತ್ ಸದಸ್ಯರಾಗಿ ಸಮಾಜದಲ್ಲಿ ಸೂಕ್ತ ಗ್ರಾಹಕ ಹಿತ ನಿರ್ಣಯಗಳಲ್ಲಿ ಸಹಭಾಗಿಗಳಾಗಬೇಕೆಂದು ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.

ಆನ್ಲೈನ್ ಗೇಮಿಂಗ್ ಬ್ಯಾನ್; ಕೇಂದ್ರದ ನಿರ್ಧಾರ ಶ್ಲಾಘನೀಯ-ಚಂದ್ರಶೇಖರ್ Read More

ಸ್ಮಶಾನದಲ್ಲಿ ಮೂಲ ಸೌಕರ್ಯಕ್ಕೆ ಆಗ್ರಹಿಸಿಪಾಲಿಕೆಗೆ ಮನವಿ ಸಲ್ಲಿಸಿದ ಎಬಿಜಿಪಿ

ಮೈಸೂರು: ಸ್ಮಶಾನದಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ
ಅಖಿಲ ಭಾರತೀಯ ಗ್ರಾಹಕ ಪಂಚಾಯತ್
ಸದಸ್ಯರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಮೈಸೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿ
ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಯಿತು.

ಮೈಸೂರು ಬಡಾವಣೆಯ ನಾಗರೀಕರಿಗೆ ಮೂಲಭೂತ ಸೌಲಭ್ಯ ಜೊತೆಯಲ್ಲೆ ಜನನ ಮತ್ತು ಮರಣ ಸಂಧರ್ಭದಲ್ಲಿ ಅವಶ್ಯಕ ವ್ಯವಸ್ಥೆಯನ್ನ ಒದಗಿಸುವುದು ತೆರಿಗೆ ಸಂಗ್ರಹಿಸಿಸುವ ಮೈಸೂರು ಮಹಾನಗರಪಾಲಿಕೆ ಕರ್ತವ್ಯವಾಗಿದೆ.

ಈಗಾಗಲೇ ಪ್ರತಿ ಮನೆಯಿಂದ ವಾರ್ಷಿಕ ತೆರಿಗೆಯಲ್ಲಿ 150ರೂ ಸೆಸ್ ಸ್ಮಶಾನ ನಿರ್ವಹಣೆಗೆಂದು ಸಂದಾಯ ಮಾಡಿಕೊಳ್ಳಲಾಗುತ್ತಿದೆ,ಆದರೆ ಸ್ಮಶಾನದಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್ ದೀಪ ಮತ್ತು ಸ್ವಚ್ಛತೆ ಇಲ್ಲ ಎಂದು ಮನವಿಪತ್ರದಲ್ಲಿ ಗಮನ ಸೆಳೆಯಲಾಗಿದೆ.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಪಡೆದು ಅಭಿವೃದ್ಧಿ ಕೆಲಸಗಳು ಮಾಡುತ್ತಿಲ್ಲ ಎಂದು ಜನಸಾಮನ್ಯರು ಶಾಪ ಹಾಕುತ್ತಿದ್ದಾರೆ.

ಸ್ಮಶಾನ ಅಭಿವೃದ್ಧಿ ಬಗ್ಗೆ ಚಿಂತಿಸದ ನಗರಪಾಲಿಕೆ ಜನನ ಮರಣ ವಿಭಾಗ ಚಿತೆಯಲ್ಲಿ ಕಂತೆ ಕಂತೆ ಹಣ ಹೇಗೆ ಕಿತ್ತುಕೊಳ್ಳಬಹುದು ಎಂದು ಪ್ರಶ್ನಿಸಿದ್ದಾರೆ.

ಸುಡುವ ಸ್ಮಶಾನಗಳಲ್ಲಿ ಮಾತ್ರವೇ ಅಂತ್ಯ ಸಂಸ್ಕಾರ ಮಾಡಲು 500 ರೂಗಳನ್ನ ನಿಗಧಿಪಡಿಸಿರುವುದು ಮೈಸೂರಿಗರಿಗೆ ಆಗುತ್ತಿರುವ ಅನ್ಯಾಯ, ಜನಪ್ರತಿನಿಧಿಗಳು ಇಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರು ಹೆಚ್ಚಾಗಿದೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸದಸ್ಯರು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

500 ರೂ ವಿಧಿಸಿರುವುದು ಬಡ ಸಾಮಾನ್ಯ ಕುಟುಂಬದ ಮೇಲೆ ಬರೆ ಹಾಕುವಂತಾಗಿದೆ, ಸಾವಿನಲ್ಲೂ ಸಂಪನ್ಮೂಲ ತೆಗೆದುಕೊಳ್ಳುತ್ತಿರುವುದು ನಗರಪಾಲಿಕೆಯ ಹೀನ ಮತ್ತು ದುರಾಡಳಿತ ಭ್ರಷ್ಟಾಚಾರಕ್ಕೆ ಕೈಗನ್ನಡಿಯಾಗಿದೆ.

ಕೂಡಲೇ ಮೈಸೂರು ಮಹಾನಗರಪಾಲಿಕೆಯ ಆಯುಕ್ತರು, ಜನನ ಮರಣ ವಿಭಾಗದ ಅಧಿಕಾರಿಗಳು ಇದರ ಬಗ್ಗೆ ಪರಿಶೀಲಿಸಿ ಜನರ ಹಿತಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ಪಂಚಾಯತ್ ಮೈಸೂರು ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ್,ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ನಿರೂಪಕ ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ರವಿಚಂದ್ರ, ಶ್ರೀಧರ್ ಮತ್ತಿತರರು ಹಾಜರಿದ್ದರು.

ಸ್ಮಶಾನದಲ್ಲಿ ಮೂಲ ಸೌಕರ್ಯಕ್ಕೆ ಆಗ್ರಹಿಸಿಪಾಲಿಕೆಗೆ ಮನವಿ ಸಲ್ಲಿಸಿದ ಎಬಿಜಿಪಿ Read More