ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದವರು ಬಾಲಗಂಗಾಧರನಾಥ ಶ್ರೀಗಳು:ಸಿ. ಎನ್ ಮಂಜೇಗೌಡ

ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಭೈರವೈಕ್ಯ ಪೂಜ್ಯ ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ರವರ 80ನೇ ಜಯಂತೋತ್ಸವ ಆಚರಿಸಲಾಯಿತು ‌

ಅಗ್ರಹಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡ ಅವರು ಪುಷ್ಪ ನಮನ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಎಲ್ಲಾ ವರ್ಗದ, ಸಮುದಾಯದ, ಬಡ ಜನರ ಸೇವೆಯನ್ನು ಮಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದವರು ಶ್ರೀ ಬಾಲಗಂಗಾಧರನಾಥ ಗುರುಗಳು ಎಂದು ಸ್ಮರಿಸಿದರು.

ದೇಶಾದ್ಯಂತ ಸುಮಾರು 545 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕೋಟ್ಯಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಜಗತ್ತು ಕಂಡ ಮಹಾನ್ ಪುರುಷರಲ್ಲಿ‌ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಒಬ್ಬರು,ಸ್ವಾಮೀಜಿಯವರ ಕೊಡುಗೆ ನಾಡಿಗೆ ಅಪಾರ ಎಂದು ಬಣ್ಣಿಸಿದರು.

ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್ ಮಾತನಾಡಿ, ಸ್ವಾಮೀಜಿಯವರು ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಬಹಳ ಬೃಹತ್ ರೀತಿಯಲ್ಲಿ ಕಟ್ಟಿ, ಚಿನ್ನದ ಗರಿಯನ್ನಾಗಿ ಮಾಡಿ, ಪ್ರತಿ ನಿತ್ಯ ಅಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ಕಾಲಭೈರವೇಶ್ವರ ದರ್ಶನದ ಜೊತೆಗೆ ನಿತ್ಯ ದಾಸೋಹವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಹಿಂದುಳಿದ ವರ್ಗ, ದಲಿತರು ಸೇರಿದಂತೆ
ಪ್ರತಿಯೊಂದು ಸಮುದಾಯದವರಿಗೂ, ದೀಕ್ಷೆಕೊಟ್ಟು ಮಠಗಳನ್ನು ಸ್ಥಾಪಿಸಲು ಸಹಾಯ ಮಾಡಿದವರು, ರಾಮಜನ್ಮಭೂಮಿಗಾಗಿ ಹೋರಾಟ ಮಾಡಿದ ಮಹಾನ್ ಗುರುಗಳು ಎಂದು ಬಣ್ಣಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಯಶಸ್ವಿ ಎಸ್ ಸೋಮಶೇಖರ್ ಅವರು ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೆ.ವಿ ಶ್ರೀಧರ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಉಪಾಧ್ಯಕ್ಷ ಶಿವಲಿಂಗಯ್ಯ, ಮಹಿಳಾ ಅಧ್ಯಕ್ಷೆ ಲತಾ ರಂಗನಾಥ್, ಯಶ್ವಂತ್, ಸಂಜಯ್ ಕೆ, ಸುಬ್ಬೆಗೌಡ, ಕೃಷ್ಣಪ್ಪ, ನೇಹಾ, ಪದ್ಮ, ಲಕ್ಷ್ಮೀ ಶಿವರಾಜ್, ಭಾಗ್ಯಮ್ಮ, ದರ್ಶನ್ ಗೌಡ, ರವಿವಲಂಪಿಯ, ರಾಮಕೃಷ್ಣೇಗೌಡ, ಪ್ರಭಾಕರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದವರು ಬಾಲಗಂಗಾಧರನಾಥ ಶ್ರೀಗಳು:ಸಿ. ಎನ್ ಮಂಜೇಗೌಡ Read More

ಮ್ಯಾಕ್ಸ್ ಚಿತ್ರ ಯಶಸ್ವಿಯಾಗಲೆಂದು ಕಿಚ್ಚ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ

ಮೈಸೂರು: ಮೈಸೂರು 101 ಗಣಪತಿ ದೇವಸ್ಥಾನದಲ್ಲಿ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಬಳಗದವರು ವಿಶೇಷ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.

ಕಲೈ ಪುಲಿ ಎಸ್ ತನು ವಿ ಕ್ರಿಯೇಶನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ , ವಿಜಯ್ ಕಾರ್ತಿಕೇಯ ಅವರ ನಿರ್ದೇಶನದ,
ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಮ್ಯಾಕ್ಸ್ ಡಿ 25ರಂದು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಮ್ಯಾಕ್ಸ್ ಚಿತ್ರ ಯಶಸ್ವಿಯಾಗಲಿ ಎಂದು ಅಭಿಮಾನಿಗಳು ಚಿತ್ರ ತಂಡದವರ ಹೆಸರಿನಲ್ಲಿ ಹಾಗೂ ವಿಶೇಷವಾಗಿ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅಭಿಮಾನಿ ಬಳಗದ ಅಧ್ಯಕ್ಷ ಆಲನಹಳ್ಳಿ ಎಂ ಎನ್ ಚೇತನ್ ಗೌಡ,ನಂದೀಶ್ ನಾಯಕ್, ಮೈಸೂರು ನಾರಾಯಣ ಜಿ, ಮದಕರಿ ಮಹದೇವ್, ಮಹಾನ್ ಶ್ರೇಯಸ್, ಲೋಕೇಶ್ ಮತ್ತಿತರರು ಹಾಜರಿದ್ದರು.

ಮ್ಯಾಕ್ಸ್ ಚಿತ್ರ ಯಶಸ್ವಿಯಾಗಲೆಂದು ಕಿಚ್ಚ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ Read More

ಅದ್ದೂರಿಯಾಗಿ ನೆರವೇರಿದ ಶ್ರೀ ಪಾರ್ವತಿ ದೇವಿಯ 9ನೆ ವಾರ್ಷಿಕೋತ್ಸವ

 

ಮೈಸೂರು: ಮೈಸೂರಿನ ಅಗ್ರಹಾರದಲ್ಲಿರುವ ಡಾ. ಅಣ್ಣಾಜಪ್ಪನವರ ನವಗ್ರಹ ಶ್ರೀ ಮೃತ್ಯುಂಜಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪಾರ್ವತಿ ದೇವಿಯ 9 ನೆ ವರ್ಷದ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಅದ್ದೂರಿಯಾಗಿ ನೆರವೇರಿತು.

ಮುಂಜಾನೆ 6.30ಕ್ಕೆ ಉದಯ ಲಗ್ನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ನಂತರ ಗಣಪತಿ ಹೋಮ, ನವಗ್ರಹ ಹೋಮ ಮೃತ್ಯುಂಜಯ ಹೋಮ, ಪಾರ್ವತಿ ದೇವಿ ದುರ್ಗಾ ಹೋಮ ಹಮ್ಮಿಕೊಳ್ಳಲಾಯಿತು.

ತದನಂತರ ಪೂರ್ಣಾವತಿ ಮಾಡಲಾಯಿತು, ಕುಂಭಾಭಿಷೇಕದ ನಂತರ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಯಿತು.

ನೂರಾರು ಭಕ್ತಾದಿಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು. ದೇವಾಲಯದ ವ್ಯವಸ್ಥಾಪಕರಾದ ಶಿವಾರ್ಚಕ ಎಸ್. ಯೋಗಾನಂದ ಮತ್ತು ಅವರ ಪುತ್ರ ಅಭಿನಂದನ್ ಮತ್ತಿತರರ ನೇತೃತ್ವದಲ್ಲಿ ಪುಜಾ ಕಾರ್ಯಗಳು ನೆರವೇರಿತು.

ಪಾರ್ವತಿ ತಾಯಿಗೆ ನೀಲಿ ಬಣ್ಣದ ಸೀರೆ ಉಡಿಸಿ ಭವ್ಯವಾಗಿ ಅಲಂಕಾರ ಮಾಡಲಾಗಿತ್ತು.ಇಡೀ ದೇಸ್ಥನ ವನ್ನು ತಳಿರು ತೋರಣ,ಹೂವಿನ ಹಾರದಿಂದ ಅಲಂಕರಿಸಿದ್ದು‌ ವಿಶೇಷವಾಗಿತ್ತು.

ಅದ್ದೂರಿಯಾಗಿ ನೆರವೇರಿದ ಶ್ರೀ ಪಾರ್ವತಿ ದೇವಿಯ 9ನೆ ವಾರ್ಷಿಕೋತ್ಸವ Read More

ಕೆಂಬಣ್ಣದ ಸೀರೆಯಲ್ಲಿ ಕಂಗೊಳಿಸಿದ ತಾಯಿ ಪಾರ್ವತಿ

ಮೈಸೂರು: ನವರಾತ್ರಿ ಹಬ್ಬದ‌ ಏಳನೆ ದಿನವಾದ ಬುಧವಾರ ಪಾರ್ವತಿ ಅಮ್ಮನವರು ಕೆಂಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಳು.

ಮೈಸೂರಿನ ಅಗ್ರಹಾರ ರಸ್ತೆಯಲ್ಲಿರುವ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ಇಂದು ವಿಶೇಷವಾಗಿ ಸೀರೆ ಉಡಿಸಿ ಅಲಂಕಾರ ಮಾಡಲಾಗಿತ್ತು.

ದೇವಿಗೆ‌ ಸೀರೆ ಉಡಿಸಿ ಬಳೆಗಳನ್ನು ಇಟ್ಟು ಬೆಳ್ಳಿಯ ಕೈಗಳು ಕವಚಗಳನ್ನು ಜೋಡಿಸಲಾಗಿತ್ತು,ಆಭರಣ ತೊಡಿಸಿ ಬಗೆ,ಬಗೆಯ ಹೂಗಳು ಮತ್ತು ಹಣ್ಣುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ವಿಶೇಷ ಅಲಂಕಾರ‌ ಮಾಡಿದ್ದು,ಯೋಗಾನಂದ ಅವರು ಪೂಜಾ ಕಾರ್ಯ ನೆರವೇರಿಸಿದರು.

ಕೆಂಬಣ್ಣದ ಸೀರೆಯಲ್ಲಿ ಕಂಗೊಳಿಸಿದ ತಾಯಿ ಪಾರ್ವತಿ Read More

ರೇಷ್ಮೆ‌ ಸೀರೆಯಲ್ಲಿ ಕಂಗೊಳಿಸಿದ ಪಾರ್ವತಿದೇವಿ

ಮೈಸೂರು: ನವರಾತ್ರಿ ಹಬ್ಬದ ಆರನೆ ದಿನವಾದ ಮಂಗಳವಾರ ಪಾರ್ವತಿ ಅಮ್ಮನವರ ಅರಿಶಿಣ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಳು.

ಮೈಸೂರಿನ ಅಗ್ರಹಾರ ರಸ್ತೆಯಲ್ಲಿರುವ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ಇಂದು ವಿಶೇಷವಾಗಿ ಸೀರೆ ಉಡಿಸಿ ಅಲಂಕಾರ ಮಾಡಲಾಗಿತ್ತು.

ದೇವಿಗೆ‌ ಸೀರೆ ಉಡಿಸಿ ಬಳೆಗಳನ್ನು ಇಟ್ಟು ಬೆಳ್ಳಿಯ ಕೈಗಳು ಕವಚಗಳನ್ನು ಜೋಡಿಸಲಾಗಿತ್ತು ಹೂಗಳು ಮತ್ತು ಹಣ್ಣುಗಳು‌ ಇಟ್ಟು ಪೂಜೆ ಸಲ್ಲಿಸಲಾಯಿತು.

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ವಿಶೇಷ ಅಲಂಕಾರ‌ ಮಾಡಿದ್ದು,ಯೋಗಾನಂದ ಅವರು ಪೂಜಾ ಕಾರ್ಯ ನೆರವೇರಿಸಿದರು.

ರೇಷ್ಮೆ‌ ಸೀರೆಯಲ್ಲಿ ಕಂಗೊಳಿಸಿದ ಪಾರ್ವತಿದೇವಿ Read More

ಶ್ರೀಗಂಧ ಲೇಪಿತ ಶೋಭಿತಳಾದ ಪಾರ್ವತಿದೇವಿ

ಮೈಸೂರು: ನವರಾತ್ರಿ ಹಬ್ಬದ ಐದನೆ ದಿನ ಸೋಮವಾರ ಪಾರ್ವತಿ ಅಮ್ಮನವರು ಶ್ರೀಗಂಧ ಲೇಪಿತಳಾಗಿ ಭವ್ಯವಾಗಿ ಕಾಣಿಸುತ್ತಿದ್ದಳು.

ಮೈಸೂರಿನ ಅಗ್ರಹಾರ ರಸ್ತೆಯಲ್ಲಿರುವ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ಇಂದು ವಿಶೇಷವಾಗಿ ಸಂಪೂರ್ಣ ಗಂಧ ಲೇಪಿಸಿ ಅಲಂಕಾರ ಮಾಡಲಾಗಿತ್ತು.

ದೇವಿಗೆ‌ ಶ್ರೀಗಂಧದಿಂದ ಅಲಂಕರಿಸಿ ಬೆಳ್ಳಿಯ ಕೈಗಳನ್ನು ಜೋಡಿಸಲಾಗಿತ್ತು ಹೂಗಳು ಮತ್ತು ಹಣ್ಣುಗಳು‌ ಅದರಲ್ಲೂ ಬೂದುಗುಂಬಳಕಾಯಿ ಹಾಗೂ ಬಳೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ತಾಯಿ ಪಾರ್ವತಿಯು ತ್ರಿಶೂಲ ಧಾರಿಯಾಗಿ ಅಭಯಹಸ್ತ ನೀಡುತ್ತಾ ಶಾಂತ ಮುದ್ರೆಯಲ್ಲಿ ಕುಳಿತಿರುವುದನ್ನು ನೋಡುವುದೇ ಆನಂದ

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ವಿಶೇಷ ಅಲಂಕಾರ‌ ಮಾಡಿದ್ದು,ಯೋಗಾನಂದ ಅವರು ಪೂಜಾ ಕಾರ್ಯ ನೆರವೇರಿಸಿದರು.

ಶ್ರೀಗಂಧ ಲೇಪಿತ ಶೋಭಿತಳಾದ ಪಾರ್ವತಿದೇವಿ Read More

ಚಿನ್ನದ ಬಣ್ಣದ ಅಲಂಕಾರದಲ್ಲಿ ಕಂಗೊಳಿಸಿದ ಪಾರ್ವತಿದೇವಿ

ಮೈಸೂರು: ನವರಾತ್ರಿ ಹಬ್ಬದ ನಾಲ್ಕನೆ ದಿನ ಭಾನುವಾರ ಪಾರ್ವತಿ ಅಮ್ಮನವರು ಚಿನ್ನದ ಬಣ್ಣದ ಅಲಂಕಾರದಲ್ಲಿ ಕಂಗಳಿಸುತ್ತಿದ್ದಳು.

ಮೈಸೂರಿನ ಅಗ್ರಹಾರ ರಸ್ತೆಯಲ್ಲಿರುವ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ದೇವಿಗೆ‌ ಸಂಪೂರ್ಣ ಚಿನ್ನದ ಬಣ್ಣ ಮತ್ತು ನೆಕ್ಕಿಗಳಿಂದ ಅಲಂಕರಿಸಿ ವಿವಿಧ ಹೂಗಳು ಮತ್ತು ಹಣ್ಣುಗಳಿಂದ ಶೃಂಗಾರ ಮಾಡಲಾಗಿತ್ತು.

ತಾಯಿ ಪಾರ್ವತಿಯು ತ್ರಿಶೂಲ ಧಾರಿಯಾಗಿ ಬೆಳ್ಳಿ ವಸ್ತುಗಳನ್ನು ಧರಿಸಿ ಜನರಿಗೆ ಅಭಯಹಸ್ತ ನೀಡುತ್ತಾ ಶಾಂತ ಮುದ್ರೆಯಲ್ಲಿ ಕುಳಿತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ವಿಶೇಷ ಅಲಂಕಾರ‌ ಮಾಡಿದ್ದು,ಯೋಗಾನಂದ ಅವರು ಪೂಜಾ ಕಾರ್ಯ ನೆರವೇರಿಸಿದರು.

ಚಿನ್ನದ ಬಣ್ಣದ ಅಲಂಕಾರದಲ್ಲಿ ಕಂಗೊಳಿಸಿದ ಪಾರ್ವತಿದೇವಿ Read More

ಭಸ್ಮಲೇಪಿತ ಅಲಂಕಾರದಲ್ಲಿ ಪಾರ್ವತಿದೇವಿ

ಮೈಸೂರು: ನವರಾತ್ರಿ ಹಬ್ಬದ ಮೂರನೇ ದಿನವಾದ ಇಂದು ಪಾರ್ವತಿ ಅಮ್ಮನವರು ಭಸ್ಮಲೇಪಿತ ಅಲಂಕಾರದಲ್ಲಿ ಕಂಗಳಿಸುತ್ತಿದ್ದಳು.

ಮೈಸೂರಿನ ಅಗ್ರಹಾರ ರಕ್ತದಲ್ಲಿರುವ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ದೇವಿಗೆ‌ ಭಸ್ಮದಿಂದ ಅಲಂಕರಿಸಿ ವಿವಿಧ ಹೂಗಳು ಮತ್ತು ಹಣ್ಣುಗಳಿಂದ ಶೃಂಗಾರ ಮಾಡಲಾಗಿತ್ತು.

ತಾಯಿ ಪಾರ್ವತಿಯು ತ್ರಿಶೂಲ ಧಾರಿಯಾಗಿ ಜನರಿಗೆ ಅಭಯಹಸ್ತ ನೀಡುತ್ತಿರುವಂತೆ ಕಾಣುತ್ತಾಳೆ ಅವಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ನೇತೃತ್ವದಲ್ಲಿ ವಿಶೇಷ ಅಲಂಕಾರ‌,ಪೂಜೆ ನೆರವೇರಿತು.

ಭಸ್ಮಲೇಪಿತ ಅಲಂಕಾರದಲ್ಲಿ ಪಾರ್ವತಿದೇವಿ Read More

ತಾಯಿ ಪಾರ್ವತಿ ದೇವಿಗೆ ಭವ್ಯ ಅಲಂಕಾರ

ಮೈಸೂರು: ಇಂದಿನಿಂದ ನವರಾತ್ರಿ ಹಬ್ಬ ಪ್ರಾರಂಭವಾಗಿದ್ದು ದೇವಿಗೆ ವಿಶೇಷ ಪೂಜೆ,ಅಲಂಕಾರ ಮಾಡಲಾಗಿತ್ತು.

ಮೈಸೂರಿನ ಅಗ್ರಹಾರ ಕೆಆರ್ ಪೊಲೀಸ್ ಠಾಣೆ ಪಕ್ಕದಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಶ್ರೀ ಪಾರ್ವತಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ನೇತೃತ್ವದಲ್ಲಿ ತಾಯಿ ಪಾರ್ವತಿಗೆ ಭವ್ಯವಾಗಿ ಅಲಂಕಾರ ಮಾಡಲಾಗಿತ್ತು.

ದೇವಿಗೆ ಹಸಿರು ಬಣ್ಣದ ಸೀರೆ ಉಡಿಸಿ,ಹಸಿರು‌ ಗಾಜಿನ ಬಳೆಗಳು,ಬಗೆ,ಬಗೆಯ ಹೂಗಳು,ಬೆಳ್ಳಿಯ ಆಭರಣದಿಂದ ಅಲಂಕರಿಸಲಾಗಿದ್ದು ತಾಯಿ ಭವ್ಯವಾಗಿ ಕಂಗೊಳಿಸುತ್ತಿದ್ದಳು.

ತಾಯಿ ಪಾರ್ವತಿ ದೇವಿಗೆ ಭವ್ಯ ಅಲಂಕಾರ Read More

ಮಹಾತ್ಮ ಗಾಂಧೀಜಿ ಯವರ ಜೀವನ ಒಂದು ಸಂದೇಶ:ಸಿ. ಎನ್ ಮಂಜೇಗೌಡ

ಮೈಸೂರು: ಮಹಾತ್ಮ ಗಾಂಧೀಜಿ ಯವರ ಜೀವನವೇ ಒಂದು ಸಂದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡ ತಿಳಿಸಿದರು.

ಕರ್ನಾಟಕ ಸೇನಾ ಪಡೆ ವತಿಯಿಂದ ಮಂಗಳವಾರ ಮೈಸೂರಿನ ಅಗ್ರಹಾರ ವೃತ್ತದಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ದೇಶ ಕಂಡ ಅತೀ ಸರಳ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ 1857 ನೇ ಇಸವಿಯಿಂದ ಹೋರಾಟಗಳು ನಡೆದರೂ, ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಬಂದ ಮೇಲೆ ಹೆಚ್ಚಿನ ಹೇಗ ಪಡೆಯಿತು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಉಪ್ಪಿನ ಸತ್ಯಾಗ್ರಹ ಚಳುವಳಿ ಹಾಗೂ ಅಹಿಂಸಾ ಚಳುವಳಿ ಗಳನ್ನು ನಡೆಸಿ ಇಡೀ ದೇಶದಲ್ಲೇ ಸಂಚಲನ ಮೂಡಿಸಿದರು ಎಂದು ಸ್ಮರಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶ ಕಂಡ ಸರಳ ಪ್ರಧಾನಿ ಹಾಗೂ ಬಡವರಿಗೆ ಹಲವಾರು ಯೋಜನೆಗಳನ್ನು ಹಾಕಿಕೊಟ್ಟ ಮೊದಲ ಪ್ರಧಾನಿ. ಇಂತಹ ಮಹನೀಯರುಗಳ ತತ್ವ, ಆದರ್ಶಗಳನ್ನು ಈಗಿನ ರಾಜಕೀಯ ಮುಖಂಡರುಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ಇಂತಹ ಮಹನೀಯರುಗಳ ಜೀವನಚರಿತ್ರೆಯನ್ನು ಪ್ರಾಥಮಿಕ ಶಾಲೆಗಳ
ಪಠ್ಯ ಪುಸ್ತಕಗಳಲ್ಲಿ ಕಡ್ಡಾಯವಾಗಿ ಅಳವಡಿಸಿ, ಮಕ್ಕಳು ದೊಡ್ಡವರಾದ ಮೇಲೆ ಸರಳವಾಗಿ, ಆದರ್ಶವಾಗಿ ಬದುಕಲು ಪ್ರೇರೇಪಿತರಾಗಬೇಕೆಂದು ಸರ್ಕಾರ ವನ್ನು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ಕೆ ದೀಪಕ್ ಪ್ರಭುಶಂಕರ್, ಕೃಷ್ಣಪ್ಪ,ಸುರೇಶ್ ಗೋಲ್ಡ್, ಮೊಗಣ್ಣಾಚಾರ್, ಪ್ರಭಾಕರ್, ಹನುಮಂತಯ್ಯ, ಶಿವಲಿಂಗಯ್ಯ, ಲಕ್ಷ್ಮೀದೇವಿ, ಸುಶೀಲಾ ನಂಜಪ್ಪ ನೇಹಾ, ಲಕ್ಷ್ಮೀ,ಬಾಗ್ಯಮ್ಮ , ಇಂದಿರಾ, ಬಸವರಾಜು, ರಘುರಾಜ್, ಮಹಾದೇವ ಸ್ವಾಮಿ ಗೌಡ, ಸುಬ್ಬೇಗೌಡ, ಗಣೇಶ್ ಪ್ರಸಾದ್, ರವಿನಾಯಕ್, ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.

ಮಹಾತ್ಮ ಗಾಂಧೀಜಿ ಯವರ ಜೀವನ ಒಂದು ಸಂದೇಶ:ಸಿ. ಎನ್ ಮಂಜೇಗೌಡ Read More