ಮೂರನೆ ಕಾರ್ತೀಕ ಸೋಮವಾರ: ಮೃತ್ಯುಂಜಯೇಶ್ವರನಿಗೆ ವಿಶೇಷ ಪೂಜೆ

ಮೈಸೂರು: ಮೂರನೇ ಕಾರ್ತೀಕ ಸೋಮವಾರದ ಪ್ರಯುಕ್ತ ಮೈಸೂರಿನ ಅಗ್ರಹಾರ ಕೆ.ಆರ್ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಮೃತ್ಯುಂಜಯೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.

ಇಂದು ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಲಾಯಿತು.

ಮೃತ್ಯುಂಜಯೇಶ್ವರನಿಗೆ ಬೆಳ್ಳಿ ಮುಖವಾಡ ಧರಿಸಿ ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಕಾಕಡ, ತುಳಸಿ ಸೇರಿದಂತೆ ಅನೇಕ ಹೂಗಳಿಂದ ಅದ್ಬುತವಾಗಿ ಅಲಂಕಾರ ಮಾಡಿ ಪೂಜಿಸಲಾಯಿತು.

ದೇವಾಲಯದ ಶಿವಾರ್ಚಕರಾದ ಎಸ್. ಯೋಗಾನಂದ ಹಾಗೂ ಅವರ ಪುತ್ರ ಅಭಿನಂದನ್ ಅವರು ಮೃತ್ಯುಂಜಯೇಶ್ವರನಿಗೆ ವಿಶೇಷ ಪೂಜೆ ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಿದರು.

ದೇವರಿಗೆ ಅಭಿನಂದನ್ ಅವರು ಅಲಂಕಾರ ಮಾಡಿದ್ದು ನೂರಾರು ಮಂದಿ ಭಕ್ತರು ಕಣ್ತುಂಬಿ ಕೊಂಡರು.

ಮೂರನೆ ಕಾರ್ತೀಕ ಸೋಮವಾರ: ಮೃತ್ಯುಂಜಯೇಶ್ವರನಿಗೆ ವಿಶೇಷ ಪೂಜೆ Read More

ಅ.24 ರಂದು ಶ್ರೀ ಪಾರ್ವತಿದೇವಿಯ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಮೈಸೂರು: ಮೈಸೂರಿನ ಅಗ್ರಹಾರ,
ಡಾ ಅಣ್ಣಾಜಪ್ಪನವರ ನವಗ್ರಹ ಶ್ರೀ ಮೃತ್ಯುಂಜಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪಾರ್ವತಿದೇವಿಯ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ‌

ಅಕ್ಟೋಬರ್‌ 24 ರಂದು ಶುಕ್ರವಾರ ಶ್ರೀ ಪಾರ್ವತಿದೇವಿಯ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಪ್ರಯುಕ್ತ, ಪ್ರಾತಃಕಾಲ 6.30 ಕ್ಕೆ ಉದಯ ಲಗ್ನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಗುವುದು.

ಬೆಳಿಗ್ಗೆ 8-30 ಕ್ಕೆ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪಾರ್ವತಿದೇವಿ ದುರ್ಗಾ ಹೋಮ, ಬೆಳಿಗ್ಗೆ 10-30 ಗಂಟೆಗೆ ಪೂರ್ಣಾಹುತಿ, ಕುಂಭಾಭಿಷೇಕ ಹಾಗೂ ಮಧ್ಯಾಹ್ನ 12-30 ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರಲಿದೆ‌.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಶಿವಾರ್ಚಕರಾದ ಎಸ್.ಯೋಗಾನಂದ ಅವರು ಮನವಿ ಮಾಡಿದ್ದಾರೆ.

ಅ.24 ರಂದು ಶ್ರೀ ಪಾರ್ವತಿದೇವಿಯ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ Read More

ಸಿದ್ಧಿದಾತ್ರಿ ಸೌಮ್ಯಸ್ವರೂಪಿಣಿ ತಾಯಿ ಪಾರ್ವತಿ

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಾರಂಭವಾದಾಗಿನಿಂದ ಮೈಸೂರಿನ ಅಗ್ರಹಾರ‌ದ ನವಗ್ರಹ ದೇವಸ್ಥಾನದಲ್ಲಿ ತಾಯಿ ಪಾರ್ವತಿಗೆ ವಿಶಿಷ್ಟ ಅಲಂಕಾರ ಮತ್ತು ವಿಶೇಷ ಪೂಜೆ ನೆರವೇರಿಸುತ್ತಾ ಬರಲಾಗಿದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ‌‌ ನವರಾತ್ರಿಯ ವಿಶೇಷ ಪೂಜಾಕಾರ್ಯಗಳು ಅದ್ದೂರಿಯಾಗಿ ನೆರವೇರಿದವು.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ಪ್ರತಿದಿನ ತಾಯಿ ಪಾರ್ವತಿಗೆ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಗಳನ್ನು ವಿಶೇಷವಾಗಿ ನೆರವೇರಿಸಿದರು.

ನವರಾತ್ರಿ ಹತ್ತನೇ ದಿನವಾದ ಬುಧವಾರ ರಾತ್ರಿ ತಾಯಿ ಸೌಮ್ಯಮೂರ್ತಿಯಾಗಿ ಸಿದ್ಧಿದಾತ್ರಿ ರೂಪದಲ್ಲಿ ಪ್ರಶಾಂತವಾಗಿ ಕಾಣುತ್ತಿದ್ದಾಳೆ.

ತಾಯಿ ಮಂಗಳವಾರ‌ ರಾತ್ರಿ ಮಹಾ ಗೌರಿಯಾಗಿ ಎಲ್ಲರನ್ನೂ‌ ಆಶೀರ್ವದಿಸುತ್ತಿದ್ದಳು.ಹತ್ತನೇ ದಿನ ಸಿದ್ಧಿದಾತ್ರಿ ರೂಪಧರಿಸಿ ಭಕ್ತರಿಗೆ ಸಕಲ ಸಿದ್ಧಿಗಳನ್ನು ದಯಪಾಲಿಸುತ್ತಾಳೆ ಎಂಬ ನಂಬಿಕೆ ಇದೆ.

ನವರಾತ್ರಿಯಲ್ಲಿ ದುಷ್ಟ ಶಕ್ತಿಯನ್ನು ಸಂಹಾರ ಮಾಡಲೆಂದೇ ಆದಿಶಕ್ತಿಯು ಒಂಬತ್ತು ಅವತಾರಗಳನ್ನು ಎತ್ತುತ್ತಾಳೆ.ಇದೀಗ‌ ವಿಜಯ ಮಾತೆ ಪಾರ್ವತಿ ಸೌಮ್ಯ ಸ್ವರೂಪಿಣಿಯಾಗಿ ಸಿದ್ಧಿದಾತ್ರಿಯಾಗಿ ಕಂಗೊಳಿಸುತ್ತಿದ್ದಾಳೆ.

ಬೆಳ್ಳಿಯ ಕಿರೀಟ,ಬೆಳ್ಳಿಯ ಕೈಗಳನ್ನಧರಿಸಿ ತ್ರಿಶೂಲ ಧಾರಿಯಾಗಿದ್ದಾಳೆ. ವಿವಿಧ ಬಗೆಯ ಹೂಗಳು,ಚಂಡು ಹೂವಿನ ಹಾರಗಳು,ಸೇವಂತಿಗೆ ಹಾರಗಳನ್ನು ಧರಿಸಿ ಗುಲಾಬಿ ಬಣ್ಣದ ರೇಷ್ಮೆ ಸೀರೆ ಉಟ್ಟು ಸರ್ವಾಲಂಕಾರ ಭೂಶಿತಳಾಗಿ ಕಂಗೊಳಿಸುತ್ತಿದ್ದಾಳೆ ತಾಯಿ ಪಾರ್ವತಿ.ಅಷ್ಟು‌ಚಂದದ ಅಲಂಕಾರ‌ ಮಾಡಿದ್ದಾರೆ ಅಭಿನಂದನ್.

ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು, ಪೂಜಿಸಿ ಪುನೀತರಾಗುತ್ತಿದ್ದಾರೆ.

ಸಿದ್ಧಿದಾತ್ರಿ ಸೌಮ್ಯಸ್ವರೂಪಿಣಿ ತಾಯಿ ಪಾರ್ವತಿ Read More

ತಾಯಿ ಪಾರ್ವತಿಗೆ ಚಂದ್ರಘಂಟಾ ಅಲಂಕಾರ

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಯುಕ್ತ ಮೈಸೂರಿನ ದೇವಾಲಯಗಳಲ್ಲಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲೂ ವಿಶೇಷ ಪೂಜಾಕಾರ್ಯ ನೆರವೇರಿಸಲಾಗುತ್ತಿದೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿಶೇಷ ಅಲಂಕಾರ ಮಾಡಿದ್ದು ಭಕ್ತರ ಮನ ಸೂರೆಗೊಳ್ಳುತ್ತಿದೆ.

ನವರಾತ್ರಿ ಮೂರನೆ ದಿನವಾದ ಬುಧವಾರ ತಾಯಿ ಚಂದ್ರಘಂಟಾ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.

ಕಡಗೆಂಪು ಬಣ್ಣ‌ ಮತ್ತು ಚಿನ್ನದ ಬಾರ್ಡರಿನ ರೇಷ್ಮೆ ಸೀರೆ ತೊಟ್ಟಿರುವ ತಾಯಿ ಪಾರ್ವತಿಗೆ‌ ವಿವಿಧ ಹೂಗಳಿಂದ ಅಲಂಕರಿಸಲಾಗಿದೆ,
ಜತೆಗೆ ಬೆಳ್ಳಿಯ ಕೈಗಳು ಹಾಗೂ ತ್ರಿಶೂಲಧಾರಿಯಾಗಿ ಭವ್ಯವಾಗಿ ಕಾಣುತ್ತಾಳೆ.ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದರು.

ತಾಯಿ ಪಾರ್ವತಿಗೆ ಚಂದ್ರಘಂಟಾ ಅಲಂಕಾರ Read More