ಕೆ ಆರ್ ಬ್ಯಾಂಕಿನ ನೂತನ ದಿನದರ್ಶಿಕೆ ಬಿಡುಗಡೆ

ಮೈಸೂರು: ಮೈಸೂರಿನ ಅಗ್ರಹಾರದ ಕೃಷ್ಣರಾಜೇಂದ್ರ ಬ್ಯಾಂಕಿನ 2026ರ ದಿನದರ್ಶಿಕೆಯನ್ನು ಹೊರತರಲಾಗಿದ್ದು,
ಭಾನುವಾರ ಬಿಡುಗಡೆ ಮಾಡಲಾಯಿತು.

ಕೆ.ಆರ್. ಬ್ಯಾಂಕಿನ ಅಧ್ಯಕ್ಷ ಬಸವರಾಜು ಬಸಪ್ಪ ಹಾಗೂ ಸಹಕಾರ ಇಲಾಖೆಯ ಉಪ ನಿಬಂಧಕ ವೀರೇಂದ್ರ ಅವರು ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಉಪ ನಿಬಂಧಕ ವೀರೇಂದ್ರ ಅವರು ಮಾತನಾಡಿ, ಗ್ರಾಹಕರಿಗೆ ಸೇವಾ ಸೌಲಭ್ಯ ಬ್ಯಾಂಕಿನ ವತಿಯಿಂದ ನಿರಂತರವಾಗಿ ತಲುಪಲಿ. ಬ್ಯಾಂಕ್ ಯಶಸ್ವಿಯಾಗಿ ಮುಂದುವರಿಯಲಿ, ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಇಲಾಖೆ ಕೊಡಲಿದೆ ಎಂದು ತಿಳಿಸಿದರು.

ಬ್ಯಾಂಕಿನ ಅಧ್ಯಕ್ಷ ಬಸವಾರಾಜು ಬಸಪ್ಪ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೀಕೃತ ಕಟ್ಟಡವನ್ನು ಉದ್ಘಾಟಿಸಿದರು ಎಂದು ಹೇಳಿದರು.

ಬ್ಯಾಂಕಿನ ಅಭಿವೃದ್ಧಿಗೆ ನಮ್ಮ ಆಡಳಿತ ಮಂಡಳಿಯ ಎಲ್ಲರ ಸಹಕಾರವಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಶಾಖೆಗಳನ್ನು ತೆರೆಯುವ ಆಲೋಚನೆ ಇದೆ. ಬ್ಯಾಂಕಿನ ಎಲ್ಲ ಸದಸ್ಯರಿಗೆ ಕ್ಯಾಲೆಂಡರ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ನಂ.ಸಿದ್ದಪ್ಪ, ಹೆಚ್. ವಾಸು, ಪ್ರತಿದ್ವನಿ ಪ್ರಸಾದ್, ನಾಗಜ್ಯೋತಿ, ಪಂಚಾಕ್ಷರಿ, ಗಣೇಶ ಮೂರ್ತಿ, ಶಿವಪ್ರಕಾಶ್, ಅಧಿಕಾರಿಗಳಾದ ಸಹಾಯಕ ನಿರೀಕ್ಷಕ ಕೆ.ರಾಜು, ಕೆಆರ್ ಬ್ಯಾಂಕಿನ ಮ್ಯಾನೇಜರ್ ಅನಂತ ವೀರಪ್ಪ ಮತ್ತಿತರರು ಹಾಜರಿದ್ದರು.

ಕೆ ಆರ್ ಬ್ಯಾಂಕಿನ ನೂತನ ದಿನದರ್ಶಿಕೆ ಬಿಡುಗಡೆ Read More

ಕಡೇ ಕಾರ್ತೀಕ ಸೋಮವಾರ: ಮೃತ್ಯುಂಜಯೇಶ್ವರ ಸ್ವಾಮಿಗೆ‌ ವಿಶೇಷ ಪೂಜೆ

ಮೈಸೂರು: ಕಡೇ ಕಾರ್ತೀಕ ಸೋಮವಾರದ ಪ್ರಯುಕ್ತ ಮೈಸೂರಿನ ಅಗ್ರಹಾರ ಕೆ.ಆರ್ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಮೃತ್ಯುಂಜಯೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.

ಮುಂಜಾನೆಯೇ ಸ್ವಾಮಿಗೆ ಪಂಚಾಮೃತ ಹಾಗೂ ಕ್ಷೀರಾಭಿಷೇಕ ಮಾಡಿ‌ ಭಸ್ಮಲೇಪನ ಮಾಡಿ ಪೂಜೆ ಸಲ್ಲಿಸಲಾಯಿತು.

ಮೃತ್ಯುಂಜಯೇಶ್ವರನಿಗೆ ಬೆಳ್ಳಿ ಮುಖವಾಡ ಧರಿಸಿ ಬಣ್ಣ,ಬಣ್ಣದ ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಕಾಕಡ, ತುಳಸಿ,ಗುಲಾಬಿ ಸೇರಿದಂತೆ ಅನೇಕ ಹೂಗಳಿಂದ ಅದ್ಬುತವಾಗಿ ಅಲಂಕಾರ ಮಾಡಿ ಪೂಜಿಸಲಾಯಿತು.

ಇದೇ‌ ವೇಳೆ‌ ಶಿವಲಿಂಗುವಿಗೆ ಆಭರಣ ತೊಡಿಸಿ ಪೂಜಿಸಿದ್ದು ನೋಡಲು ಎರಡು ಕಣ್ಣುಗಳು ಸಾಲದು.

ಕೊನೆಯ ಕಾರ್ತೀಕ ಸೋಮವಾರ ಪ್ರಯುಕ್ತ ನವಗ್ರಹ ಮಂದಿರದ ಮುಂಭಾಗ ಶ್ರೀ ಮಹದೇಶ್ವರನ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿಟ್ಟು ಬಗೆ,ಬಗೆಯ ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಯಿತು.

ಇದೇ‌ ವೇಳೆ ತಾಯಿ ಪಾರ್ವತಿಗೂ ವಿಶೇಷ ಪೂಜೆ ಮಾಜಿ ಮಾಡಿ ಭವ್ಯವಾದ ಅಲಂಕಾರ ಮಾಡಲಾಯಿತು.ಬೆಳಗಿನಿಂದಲೇ ನೂರಾರು ಭಕ್ತರು ಆಗಮಿಸಿ,ದೇವರುಗಳ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ದೇವಾಲಯದ ಶಿವಾರ್ಚಕರಾದ ಎಸ್. ಯೋಗಾನಂದ ಹಾಗೂ ಅವರ ಪುತ್ರ ಅಭಿನಂದನ್ ಅವರು ಮೃತ್ಯುಂಜಯೇಶ್ವರ,ಪಾರ್ವತಿ ದೇವಿ,ಮಹದೇಶ್ವರನಿಗೆ ವಿಶೇಷ ಪೂಜೆ ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಿದರು.

ದೇವರುಗಳಿಗೆ ಅಭಿನಂದನ್ ಅವರು ಅಲಂಕಾರ ಮಾಡಿದ್ದು ನೂರಾರು ಮಂದಿ ಭಕ್ತರು ಕಣ್ತುಂಬಿ ಕೊಂಡರು.

ಕಡೇ ಕಾರ್ತೀಕ ಸೋಮವಾರ: ಮೃತ್ಯುಂಜಯೇಶ್ವರ ಸ್ವಾಮಿಗೆ‌ ವಿಶೇಷ ಪೂಜೆ Read More

ವೈಭವದ ಶ್ರೀ ಪಾರ್ವತಿದೇವಿಯ 10ನೇ ವಾರ್ಷಿಕೋತ್ಸವ ಸಮಾರಂಭ

ಮೈಸೂರು: ಮೈಸೂರಿನ ಅಗ್ರಹಾರ,
ಡಾ ಅಣ್ಣಾಜಪ್ಪನವರ ನವಗ್ರಹ, ಶ್ರೀ ಮೃತ್ಯುಂಜಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪಾರ್ವತಿದೇವಿಯ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶುಕ್ರವಾರ ಶ್ರೀ ಪಾರ್ವತಿದೇವಿಗೆ ಪ್ರಾತಃಕಾಲ 6.30 ಕ್ಕೆ ಉದಯ ಲಗ್ನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.

ನಂತರ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪಾರ್ವತಿದೇವಿ ದುರ್ಗಾ ಹೋಮಗಳನ್ನು ಹಮ್ಮಿಕೊಳ್ಳಲಾಯಿತು.

ಹೋಮಗಳನ್ನು ನೆರವೇರಿಸಿದ ನಂತರ ಪೂರ್ಣಾಹುತಿ, ಕುಂಭಾಭಿಷೇಕ ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು.
ತದನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪಾರ್ವತಿ,ಮೃತ್ಯುಂಜಯೇಶ್ವರ ಹಾಗೂ ನವಗ್ರಹಗಳ ದರ್ಶನ ಪಡೆದು ಪುನೀತರಾದರು.

ಶಿವಾರ್ಚಕರಾದ ಎಸ್.ಯೋಗಾನಂದ ಮತ್ತು ಅವರ ಪುತ್ರ ಅಭಿನಂದನ್ ಹಾಗೂ ಇತರೆ ಶಿವಾರ್ಚಕರ ಸಮ್ಮುಖದಲ್ಲಿ ಎಲ್ಲಾ ಪೂಜಾ ಕಾರ್ಯಗಳು ನೆರವೇರಿದವು.

ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿವಿಧ ಹೂಗಳು,ಬೆಳ್ಳಿಯ ಕೈ,ಕಾಲುಗಳು ಹಣ್ಣುಗಳಿಂದ ಭವ್ಯವಾಗಿ ಅಲಂಕರಿಸಿದ್ದು ನೋಡಲು ಎರಡು ‌ಕಣ್ಣುಗಳು ಸಾಲದೆಂಬಂತಿತ್ತು.

ವೈಭವದ ಶ್ರೀ ಪಾರ್ವತಿದೇವಿಯ 10ನೇ ವಾರ್ಷಿಕೋತ್ಸವ ಸಮಾರಂಭ Read More

ಸರಸ್ವತಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಾರಂಭವಾದಾಗಿನಿಂದ ಮೈಸೂರಿನ ಅಗ್ರಹಾರ‌ದ ನವಗ್ರಹ ದೇವಸ್ಥಾನದಲ್ಲಿ ತಾಯಿ ಪಾರ್ವತಿಗೆ ವಿಶಿಷ್ಟ ಅಲಂಕಾರ ಮತ್ತು ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ‌‌ ನವರಾತ್ರಿಯ ವಿಶೇಷ ಪೂಜಾಕಾರ್ಯಗಳು ನೆರವೇರುತ್ತಿದೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ಪ್ರತಿದಿನ ತಾಯಿ ಪಾರ್ವತಿಗೆ ವಿಶೇಷ ಅಲಂಕಾರಗಳನ್ನು ಮಾಡುತ್ತಿದ್ದಾರೆ.

ನವರಾತ್ರಿ ಏಳನೆ ದಿನವಾದ ಭಾನುವಾರ ರಾತ್ರಿ ತಾಯಿ ಸರಸ್ವತಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.ಅಷ್ಟು ವಿಶೇಷವಾಗಿ ಅಲಂಕಾರ ಮಾಡಿದ್ದಾರೆ ಅಭಿನಂದನ್.

ದೇವಿಯು ಅಪ್ಪಟ ಬಿಳಿ ಬಣ್ಣ‌ದ ಮೈದಾನ ಕೆಂಪು ಬಾರ್ಡರ್ ಉಳ್ಳ ಸೀರೆ ಉಟ್ಟದ್ದಾಳೆ. ಕನಕಾಂಬರ,ಸೇವಂತಿಗೆ, ಮಲ್ಲಿಗೆ,ಗುಲಾಬಿ ಕಮಲದ ಹೂಗಳಿಂದ ಅಲಂಕೃತಗೊಂಡಿದ್ದಾಳೆ.

ವಿದ್ಯಾದಾತೆ,ವೀಣಾಪಾಣಿ ಶಾರದೆಗೆ ನಿಜವಾದ‌ ವೀಣೆಯನ್ನೇ ಇಟ್ಟು ಅಲಂಕರಿಸಿರುವುದು ನಿಜಕ್ಕೂ ವಿಶೇಷ.

ಜತೆಗೆ ಬೆಳ್ಳಿಯ ಕೈಗಳನ್ನು ಅಳವಡಿಸಿದ್ದು,ತಾಯಿ ಶಾಂತ ಮುದ್ರೆಯಲ್ಲಿ ಆಶೀರ್ವದಿಸುತ್ತಿರುವಂತೆ ಗೋಚರಿಸುತ್ತಿದ್ದಾಳೆ.ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.

ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಮಂಗಳಾರತಿ ತೆಗೆದುಕೊಂಡು ಪ್ರಸಾದ ಸ್ವೀಕರಿಸಿದರು.

ಸರಸ್ವತಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read More

ಕೂಷ್ಮಾಂಡದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ‌ದ ನವಗ್ರಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಿಕೊಂಡು ಬರಲಾಗುತ್ತಿದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ‌‌ ನವರಾತ್ರಿಯ ವಿಶೇಷ ಪೂಜಾಕಾರ್ಯಗಳನ್ನು ನೆರವೇರಿಸಲಾಗುತ್ತಿದೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿಶೇಷ ಅಲಂಕಾರಗಳನ್ನು ಮಾಡುತ್ತಿದ್ದಾರೆ.

ನವರಾತ್ರಿ ನಾಲ್ಕನೆ ದಿನವಾದ ಗುರುವಾರ ತಾಯಿ ಕೂಷ್ಮಾಂಡ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದೆಂಬಂತಿದೆ.ಅಷ್ಟು ಚೆಂದದ ಅಲಂಕಾರ ಮಾಡಿದ್ದಾರೆ ಅಭಿನಂದನ್.

ದೇವಿಯು ಅರಿಶಿಣ ಬಣ್ಣ‌ದಲ್ಲಿ‌ ಸಿರಿಗೌರಿಯಂತೆ ಕಾಣುತ್ತಿದ್ದಾಳೆ. ತಾಯಿ ಪಾರ್ವತಿಗೆ‌ ವಿವಿಧ ಹೂಗಳು ಅದರಲ್ಲೂ ವಿಶೇಷವಾಗಿ ವೀಳ್ಯದೆಲೆ ‌ಹಾರದಿಂದ ಅಲಂಕರಿಸಲಾಗಿದೆ.

ಜತೆಗೆ ಬೆಳ್ಳಿಯ ಕೈಗಳು ಹಾಗೂ ಕಿರೀಟಧಾರಿ ಮತ್ತು ತ್ರಿಶೂಲಧಾರಿಯಾಗಿ ಭವ್ಯವಾಗಿ ಕಾಣುತ್ತಾಳೆ.ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಮಂಗಳಾರತಿ ತೆಗೆದುಕೊಂಡು ಪ್ರಸಾದ ಸ್ವೀಕರಿಸಿದರು.

ಕೂಷ್ಮಾಂಡದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read More

ಗೊಂಬೆ‌ ಜೋಡಣೆ ವೀಕ್ಷಿಸಿ ಖುಷಿ ಪಟ್ಟ ನಾಗಲಕ್ಷ್ಮಿ ಚೌದರಿ

ಮೈಸೂರು: ಕರ್ನಾಟಕ ಸರ್ಕಾರದ ಮಹಿಳಾ ಆಯೋಗದ ರಾಜ್ಯಾಧ್ಯಕ್ಷರಾದ
ನಾಗಲಕ್ಷ್ಮಿ ಚೌದರಿ ಅವರು ಮೈಸೂರಿನ ಅಗ್ರಹಾರದ ನಿವಾಸಿ ಹೇಮಲತಾ ಕುಮಾರಸ್ವಾಮಿ ಅವರ ನಿವಾಸಕ್ಕೆ‌ ಭೇಟಿ ನೀಡಿ ಅಲ್ಲಿನ ಗೊಂಬೆ ಜೋಡಣೆ ವೀಕ್ಷಿಸಿ ಖುಷಿ ಪಟ್ಟರು.

ಈ ವೇಳೆ ನಾಗಲಕ್ಷ್ಮಿ ಚೌದರಿ ಅವರು ಮಾತನಾಡಿ ನನ್ನನ್ನು ಉದ್ದೇಶಪೂರ್ವಕವಾಗಿ ಒತ್ತಾಯದಿಂದ ರೇಖಾ ಅವರು ಇಲ್ಲಿಗೆ ಕರೆತಂದಿದ್ದಾರೆ ಈ ಗೊಂಬೆ ಜೋಡಣೆ ಕಂಡುತುಂಬಾ ಸಂತಸವಾಯಿತು, ಗೊಂಬೆಗಳು ಬಹಳ ಚೆನ್ನಾಗಿದೆ,ನನ್ನನ್ನು ಕರೆ ತಂದಿದ್ದಕ್ಕೆ ಅವರಿಗೂ ಧನ್ಯವಾದ ಎಂದು ಹೇಳಿದರು.

ಗೊಂಬೆ ಜೋಡಣೆ ಮಾಡಿರುವ ಹೇಮಲತಾ ಅವರಿಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಈ ಗೊಂಬೆ ಜೋಡಣೆ ನಾನು ಇದುವರೆಗೂ ನೋಡಿಯೇ ಇರಲಿಲ್ಲ ಇದು ವಿಚಿತ್ರ,ಅಷ್ಟೇ ಅದ್ಭುತವಾಗಿದೆ. ಇದೇ ಮೊದಲ ಬಾರಿ ನೋಡಿದ್ದೇನೆ ಬಹಳ ಸಂತೋಷವಾಯಿತು ಎಂದು ಖುಷಿ ಪಟ್ಟರು.

ಹೇಮಲತಾ ಅವರು ಕಳೆದ 35 ವರ್ಷಗಳಿಂದ ಗೊಂಬೆ ಜೋಡಣೆ‌ ಮಾಡುತ್ತಿದ್ದಾರೆ‌ ಅವರು ಮತ್ತು ಅವರ ಪತಿ ನಿವೃತ್ತ ಸರ್ಕಾರಿ ನೌಕರರು‌
ಹಾಗೂ ಅವರ ಕುಟುಂಬದ ಕೆಲಸ ಸ್ವಾಗತಾರ್ಹವಾಗಿದೆ ಎಂದು ಹೇಳಿದರು

ಕಳೆದ 35 ವರ್ಷಗಳಿಂದ ಹೇಮಲತಾ ಅವರು 3000ಕ್ಕೂ ಹೆಚ್ಚು ಹೆಚ್ಚುಗಂಬೆ ಜೋಡಣೆ ಮಾಡುತ್ತಿದ್ದಾರೆ ನಮ್ಮ ಪೂರ್ಣ ಸಂಸ್ಕೃತಿಯನ್ನ ಸಾವಿರಾರು ಗೊಂಬೆಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ನಾಗಲಕ್ಷ್ಮಿ ಚೌದರಿ ಹೃದಯತುಂಬಿ ನುಡಿದರು.

ಇತಿಹಾಸ,ರಾಮಾಯಣ ಎಲ್ಲವನ್ನೂ ಗೊಂಬೆ ಜೋಡಣೆ ಮೂಲಕ ತೋರಿಸಿದ್ದಾರೆ ನನಗೆ ಬಹಳ ಖುಷಿಯಾಯಿತು ಮೈಸೂರಿಗೆ ಯಾರೇ ಬಂದರೂ ಇಲ್ಲಿಗೆ ಬಂದು ಈ ಗೊಂಬೆ ಜೋಡಣೆಯನ್ನು ನೋಡಬೇಕೆಂದು ನಾಗಲಕ್ಷ್ಮಿ ಚೌದುರಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಪೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ರಮೇಶ್ ರಾಮಪ್ಪ,ಕಾವ್ಯ,ಪ್ರೇಮ, ಲೀಲಾ, ವಾಣಿ ಸುಬ್ಬಯ್ಯ, ಸುಬ್ಬಲಕ್ಷ್ಮಿ, ನಾರಾಯಣ್,
ಮತ್ತಿತರರು ಹಾಜರಿದ್ದರು.

ಗೊಂಬೆ‌ ಜೋಡಣೆ ವೀಕ್ಷಿಸಿ ಖುಷಿ ಪಟ್ಟ ನಾಗಲಕ್ಷ್ಮಿ ಚೌದರಿ Read More

ತಾಯಿ ಪಾರ್ವತಿಗೆ ಭಸ್ಮಾಲಂಕಾರ

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಯುಕ್ತ ಮೈಸೂರಿನ ಬಹುತೇಕ ಎಲ್ಲಾ‌‌ ದೇವಾಲಯಗಳಲ್ಲೂ ವಿಶೇಷ ಪೂಜೆ ಅಲಂಕಾರ ಮಾಡಲಾಗುತ್ತದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲೂ ವಿಶೇಷ ಪೂಜಾಕಾರ್ಯ ನೆರವೇರಿಸಲಾಗುತ್ತಿದೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿಶೇಷ ಅಲಂಕಾರ ಮಾಡಿದ್ದು ಭಕ್ತರ ಮನ ಸೂರೆಗೊಂಡಿದೆ.

ನವರಾತ್ರಿ ಮೊದಲ ದಿನ ಕುಂಕುಮ ಅಲಂಕಾರ ಮಾಡಲಾಗಿತ್ತು,ಎರಡನೆ ದಿನ ಭಸ್ಮಾಲಂಕಾರ ಮಾಡಲಾಗಿದ್ದು ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ.

ತಾಯಿ ಪಾರ್ವತಿಗೆ ಭಸ್ಮಾಲಂಕಾರ Read More

ಕಾಂಗ್ರೆಸ್ ಸರ್ಕಾರದಿಂದ ಜನಪರ ಆಡಳಿತ-ನಜರ್ಬಾದ್ ನಟರಾಜ್

ಮೈಸೂರು: ರಾಜ್ಯ‌ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುತ್ತಿದ್ದು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಕೆಪಿಸಿಸಿ
ಸದಸ್ಯ ನಜರ್ಬಾದ್ ನಟರಾಜ್ ತಿಳಿಸಿದರು.

ಕಾಂಗ್ರೆಸ್ ಆಡಳಿತಕ್ಕೆ ಇದೀಗ ಎರಡು ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ‌
ನಗರದ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು‌
ವಿಶೇಷ ಪೂಜೆ ಸಲ್ಲಿಸಿದ ವೇಳೆ ನಜರ್ಬಾದ್ ನಟರಾಜ್ ಮಾತನಾಡಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಸಾಮಾನ್ಯ ಜನರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬಿಜೆಪಿ ಮುಖಂಡರು ಬೊಬ್ಬೆ ಹೊಡೆದಿದ್ದರು ಅವರ ಆರೋಪಗಳಿಗೆ ನಮ್ಮ ಸರ್ಕಾರ ಕೆಲಸಗಳ ಮೂಲಕ ತಕ್ಕ ಉತ್ತರ ನೀಡಿದೆ ಎಂದು ತಿಳಿಸಿದರು.

ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಐದು ವರ್ಷ ಯಶಸ್ವಿಯಾಗಿ ಸರ್ಕಾರ ಆಡಳಿತ ನೀಡಲಿ ಎಂದು ವಿಶೇಷ ಪೂಜೆ ಸಲ್ಲಿಸಿ,
ಸಿಹಿ ವಿತರಿಸಿ ರಾಜ್ಯ ಸರ್ಕಾರಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿ ಬಳಗದ ಮೈಸೂರು ಜಿಲ್ಲಾಧ್ಯಕ್ಷ ಜಿ ರಾಘವೇಂದ್ರ, ರಾಜೇಶ್, ಪಳನಿ, ಎಸ್ ಎನ್ ರಾಜೇಶ್, ರವಿಚಂದ್ರ,ಲೋಕೇಶ್, ಕೃಷ್ಣಪ್ಪ(ಗಂಡಯ್ಯ), ಮೋಹನ್ ಕುಮಾರ್,ಪಾಂಡ,ಫ್ರಾನ್ಸಿಸ್, ನಿತಿನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಕಾಂಗ್ರೆಸ್ ಸರ್ಕಾರದಿಂದ ಜನಪರ ಆಡಳಿತ-ನಜರ್ಬಾದ್ ನಟರಾಜ್ Read More

ಸುರಕ್ಷಿತವಾಗಿ ಭೂಮಿಗೆ ಬಂದ ಸುನೀತಾ,ಬುಚ್:ಮೈಸೂರಿನಲ್ಲಿ ಸಂಭ್ರಮಾಚರಣೆ

ಮೈಸೂರು: ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು ಸುರಕ್ಷಿತವಾಗಿ ಭೂಮಿಗೆ ಬಂದುದಕ್ಕೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಸಂಭ್ರಮಾಚರಣೆ ಮಾಡಲಾಯಿತು.

ಮೈಸೂರಿನ ಅಗ್ರಹಾರದಲ್ಲಿ ಶ್ರೀ ದುರ್ಗಾ ಫೌಂಡೇಶನ್ ನವರು‌ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರ
ಭಾವಚಿತ್ರ ಹಿಡಿದು ಭಾರತ್ ಮಾತಾ ಕಿ ಜೈ ಹಾಗೂ ಸುನಿತಾ ವಿಲಿಯಮ್ಸ್ ಹಾಗೂ ತಂಡಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ
ವೈದ್ಯರಾದ ಡಾ.ಶ್ರೀ ನಿವಾಸ್ ಆಚಾರ್ಯ ಅವರು,ಸಂಶೋಧನೆಯ ನಿಮಿತ್ತ ಒಂದು ವಾರದ ಮಟ್ಟಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಬೆಳೆಸಿದ್ದ ಸುನಿತಾ ವಿಲಿಯಮ್ಸ್ ಅವರು ತಾಂತ್ರಿಕ ವೈಫಲ್ಯದಿಂದ ಭೂಮಿಗೆ ಮರಳಲಾಗದೆ 9 ತಿಂಗಳಿಂದ ಬಾಹ್ಯಾಕಾಶದಲ್ಲೆ ಉಳಿಯುವಂತಾಗಿತ್ತು ಎಂದು ಸ್ಮರಿಸಿದರು.

ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ದಿಟ್ಟತನದಿಂದ‌‌ ಎದುರಿಸಿ ಭೂಮಿಗೆ ವಾಪಸ್ ಆಗಿರುವ ಸುನೀತಾ ಅವರ ಸಾಹಸ ಮತ್ತು ಸಾಧನೆ ಅಸಂಖ್ಯಾತ ಯುವ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಹಾಗೂ ಮಹಿಳೆಯರಿಗೆ ಸ್ಪೂರ್ತಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲ ಸಚಿವರಾದ ಬಾಬುರಾವ್, ಸಾಯಿಬಾಬಾ ದೇವಸ್ಥಾನದ ಅರ್ಚಕರಾದ ಮಹೇಶ್ ಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಕಾಂಗ್ರೆಸ್ ಯುವ ಮುಖಂಡ ಸಂತೋಷ್ ಕಿರಾಲು, ಹೇಮಾ ಮತ್ತಿತರರು ಹಾಜರಿದ್ದರು.

ಸುರಕ್ಷಿತವಾಗಿ ಭೂಮಿಗೆ ಬಂದ ಸುನೀತಾ,ಬುಚ್:ಮೈಸೂರಿನಲ್ಲಿ ಸಂಭ್ರಮಾಚರಣೆ Read More

ಸಮಾಜದಲ್ಲಿ ಆಶಾಂತಿ ತಂದ ಸತೀಶ್ ಗಡಿಪಾರಿಗೆ ಆಗ್ರಹಿಸಿ ಧರಣಿ

ಮೈಸೂರು: ಮೈಸೂರು ನಗರದಲ್ಲಿ ಪ್ರಚೋದನೆ ನೀಡಿ ಗಲಭೆ ಉಂಟು ಮಾಡಿ‌ ಸಮಾಜದಲ್ಲಿ ಆಶಾಂತಿ ಉಂಟು ಮಾಡಿದ ಸತೀಶ್ ಅಲಿಯಾಸ್ ಪಾಂಡುರಂಗ ಅವರನ್ನು ಗಡಿಪಾರು ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯುಸಿದ್ದಾರೆ.

ಎರಡು ಧರ್ಮಗಳ ನಡುವೆ ಘರ್ಷಣೆಗೆ ಕಾರಣವಾಗಿ,ಸಮಾಜದ ಸ್ವಾಸ್ಥ್ಯ ಕದಡಿದ ಸತೀಶ್ ಅಲಿಯಾಸ್ ಪಾಂಡುರಂಗ ಮೇಲೆ ರೌಡಿ ಪಟ್ಟಿ ತೆರೆದು ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆಯನ್ನು ಅವರು ಆಗ್ರಹಿಸಿದರು.

ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮತ್ತು ಕರ್ನಾಟಕ ಯುವ ಘರ್ಜನೆ ಅಧ್ಯಕ್ಷ ಉಮೇಶ್ ಇಂದು ಅಗ್ರಹಾರ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಧರಣಿ ನಂತರ ಮಾತನಾಡಿದ ತೇಜಸ್ವಿ,ನಮ್ಮ ಮೈಸೂರು ಶಾಂತಿ,ನೆಮ್ಮದಿಗೆ ಹೆಸರಾಗಿದೆ.ಆದರೆ ಸತೀಶ್ ಅಲಿಯಾಸ್ ಪಾಂಡುರಂಗ ನಂತವರಿಂದಾಗಿ ನಗರದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ,ಪೊಲೀಸರು ಕೂಡಲೇ ಆತನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಮಾಜದಲ್ಲಿ ಆಶಾಂತಿ ತಂದ ಸತೀಶ್ ಗಡಿಪಾರಿಗೆ ಆಗ್ರಹಿಸಿ ಧರಣಿ Read More