ಮಂಡ್ಯ: 14 ವರ್ಷದೊಳಗಿನ ತಾಲೋಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಂಡ್ಯ ಜಿಲ್ಲೆ,ನಾಗಮಂಗಲ ತಾಲೋಕು ಆದಿಚುಂಚನಗಿರಿ ಬಿಜಿಎಸ್ ಆದಿಶಕ್ತಿ ಶಾಲೆ ಮಕ್ಕಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಬಿಜಿಎಸ್ ಶಾಲೆ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆದ ಆದಿಶಕ್ತಿ ಶಾಲೆ, ಆದಿಚುಂಚನಗಿರಿ ಮಕ್ಕಳಿಗೆ, ಮುಖ್ಯಶಿಕ್ಷಕರು ಮತ್ತು ಶಾಲೆಯ ಎಲ್ಲ ಶಿಕ್ಷಕರು ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲೂ ಗೆಲುವು ಸಾಧಿಸಿ ಶಾಲೆಗೆ ಕೀರ್ತಿ ತರುವಂತೆ ಶುಭ ಕೋರಿದರು.
ಮೈಸೂರು: ಕರ್ನಾಟಕ ರಾಜ್ಯ ಸರ್ಕಾರದಿಂದ ಸೆ.22ರಿಂದ 15 ದಿನಗಳ ಕಾಲ ನಡೆಯುವ ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ, ಸಾಮಾಜಿಕ, ಹಾಗೂ ಆರ್ಥಿಕ ಸಮೀಕ್ಷೆ ವೇಳೆ ಒಕ್ಕಲಿಗ ಜನಾಂಗದವರು ಒಕ್ಕಲಿಗ ಎಂದೇ ನಮೂದಿಸುವಂತೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಮೈಸೂರಿನ ಹೆಬ್ಬಾಳದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಜಾತಿಗಣತಿ ಸಂಬಂಧ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲೆಯ ಒಕ್ಕಲಿಗ ಜನಾಂಗದ ಮುಖಂಡರ ಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಮುಂಬರುವ ಸಮೀಕ್ಷೆಯಲ್ಲಿ ಜಾತಿ ಕಲಂ ನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು. ಉಪ ಜಾತಿ ಕಲಂನಲ್ಲಿ ಉಪಪಂಗಡ ಬಗ್ಗೆ ಮಾಹಿತಿ ಇದ್ದರೆ ನಮೂದಿಸಬೇಕು ಇಲ್ಲದಿದ್ದರೆ ಒಕ್ಕಲಿಗ ಎಂದೇ ನಮೂದಿಸಬೇಕು ಎಂದು ಸಲಹೆ ನೀಡಿದರು.
ತಮ್ಮ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು. ಪ್ರತಿ ಗ್ರಾಮಕ್ಕೂ ಈ ಮಾಹಿತಿಯನ್ನು ನೀಡುವ ಜವಾಬ್ದಾರಿಯನ್ನು ಮುಖಂಡರುಗಳು ಸ್ವಯಂ ಪ್ರೇರಿತವಾಗಿ ಮಾಡಬೇಕು ಎಂದು ಸೂಚಿಸಿದರು.
ಈ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಈ ಜವಾಬ್ದಾರಿಯನ್ನು ಆಯಾ ಗ್ರಾಮ, ತಾಲ್ಲೂಕು, ಜಿಲ್ಲಾ ಮುಖಂಡರುಗಳು ವಹಿಸಿಕೊಂಡು ಸಮೀಕ್ಷೆಗೆ ಸಹಕರಿಸುವಂತೆ ಕೋರಿದರು.
ಸಭೆಯಲ್ಲಿ ಮೈಸೂರು ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಾಸಕ ಜಿ.ಡಿ.ಹರೀಶ್ ಗೌಡ, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಆಡಿಟರ್ ನಾಗರಾಜ್, ಮೈಸೂರು ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ, ಗೌರವಾಧ್ಯಕ್ಷ ಅಲತೂರು ಜಯರಾಮ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೆ.ವಿ.ಶ್ರೀಧರ್, ಸಿ.ಜಿ.ಗಂಗಾಧರ್, ಎಂ.ಬಿ.ಮಂಜೇಗೌಡ, ಮೈಸೂರು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಅರುಣ್‌ಕುಮಾರ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಮೈಸೂರು: ಮೈಸೂರಿನ ಕುವೆಂಪು ನಗರದಲ್ಲಿ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಅಧ್ಯಕ್ಷೆ ಸವಿತ ಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಮೈಸೂರು ದಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಪ್ರಮೀಳಾ, ಮೈಸೂರು ಸಹಕಾರ ನಿಯಮಿತ ಮಹಿಳಾ ಬ್ಯಾಂಕ್ ನಿರ್ದೇಶಕರಾದ ಸುಶೀಲ ನಂಜಪ್ಪ, ರಾಜೇಶ್ವರಿ ನಾಗರಾಜ ಅವರು ಸಂಘದ ಎಲ್ಲ ಸದಸ್ಯರಿಗೆ ಪರಿಸರದ ಸಂರಕ್ಷಣೆಯ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಜಾತಿಯ ಗಿಡಗಳನ್ನು ನೀಡಿದರು.
ಮನೆಗೂಂದು ಮರ ನೆಟ್ಟು ದೇಶಕ್ಕೆ ವರವಾಗುವಂತೆ ಗಿಡ ಬೆಳೆಸಿ ಧರೆಯನ್ನು ಗಟ್ಟಿಗೂಳಿಸೋಣ ಎಂದು ಅಧ್ಯಕ್ಷರಾದ ಸವಿತ ಗೌಡ ಸಲಹೆ ನೀಡಿದರು.