ಮೈಸೂರು: ಮೈಸೂರಿನ ಅಧ್ಯಯನ ಶಾಲೆಯಲ್ಲಿ ಮಕ್ಕಳ ವಾಕ್ ಭಾಷಾ ಮತ್ತು ಬುದ್ಧಿಶಕ್ತಿ ಕುರಿತು ಸಮಾಲೋಚನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಒಂದರಿಂದ ಹತ್ತನೇ ತರಗತಿ ಮಕ್ಕಳು ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆ ಕುರಿತು ಡಾ. ಅರ್ಪಿತ (ವಾಕ್ ಭಾಷಾ ತಜ್ಞರು )ಅವರು ಒಂದೊಂದು ಮಗುವಿನ ಜೊತೆ ಸಮಾಲೋಚನೆ ಮಾಡಿ ಮಕ್ಕಳ ವಾಕ್ ಭಾಷಾ ಮತ್ತು ಬುದ್ಧಿಶಕ್ತಿ ಮಟ್ಟವನ್ನು ಅರಿತು ಕಲಿಕೆಗೆ ಸಹಾಯ ಆಗುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಎಂ ಪಾರ್ವತಿ ದೇವಿ, ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ,ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.
ಮೈಸೂರು: ಮೈಸೂರಿನ ಅಧ್ಯಯನ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಬಸವರಾಜು ಮತ್ತಿತರ ಗಣ್ಯರು ರಾಷ್ಟ್ರಧ್ವಜಾರೋಹಣ, ನಾಡದ್ವಜಾರೋಹಣ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಕರ ಗಮನ ಸೆಳೆಯಿತು.
ಬಸವರಾಜು ಅವರು, ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿ ಮಕ್ಕಳಿಗೆ ಶುಭ ಕೋರಿದರು.
ಮಿಸ್ಸೆಸ್ ಇಂಡಿಯಾ ರನ್ನರ್ ಅಪ್ ಖುಷಿ ವಿನು ಅವರು ಕನ್ನಡ ಎಲ್ಲಾ ಕಡೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯಲಿ ,ಕನ್ನಡ ಇತಿಹಾಸ ಪುಟಗಳಲ್ಲಿ ಸೇರುವಂತೆ ಮಾಡಬೇಕು ಎಂದು ಕರೆ ನೀಡಿದರು.
ಶಾಲೆಯ ಕಾರ್ಯದರ್ಶಿ ಎಂ ಪಾರ್ವತಿ ದೇವಿ ಅವರು ಕನ್ನಡ ಕಲಿಸಿ ,ಕನ್ನಡ ಮಾತನಾಡೋಣ ಕನ್ನಡವನ್ನು ಬೆಳೆಸೋಣ ಕನ್ನಡ ನಾಡಿನಲ್ಲಿ ಹುಟ್ಟಿರುವುದು ಹೆಮ್ಮೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಎಂ. ಪುಟ್ಟಸ್ವಾಮಿಗೌಡರು ಕನ್ನಡವನ್ನು ಕಡ್ಡಾಯವಾಗಿ ಮಾತನಾಡೋಣ ಎಂದು ಹೇಳಿ,ಕನ್ನಡ ನಾಡಿನ ಮಹತ್ವ ಮತ್ತು ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿಕೊಟ್ಟರು.
ಆನಂದ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಶುಭ ಕೋರಿದರು .
ಈ ಸಂದರ್ಭದಲ್ಲಿ ಮಕ್ಕಳಿಗೆ ವೇಷಭೂಷಣ, ಚಿತ್ರಕಲಾ, ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಲಾಯಿತು.
ಕಾರ್ಯಕ್ರಮದಲ್ಲಿ ಮಲೆ ಮಹದೇಶ್ವರ ಸೇವಾ ಸಂಸ್ಥೆಯ ಅಧ್ಯಕ್ಷರಾದ ಮಹಾನ್, ಶಾಲೆಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು,ಶಿಕ್ಷಕ ವೃಂದ ಮತ್ತು ಮಕ್ಕಳು ಭಾಗವಹಿಸಿದ್ದರು.
ಮೈಸೂರು: ಡಾ. ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಮೈಸೂರಿನ ಅಧ್ಯಯನ ಶಾಲೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಶಾಲೆಯ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿದರು.
ಪುನೀತ್ ಅವರ ಜೀವನ ಮತ್ತು ಸಾಧನೆ ಕುರಿತು ಶಾಲೆಯ ಕಾರ್ಯದರ್ಶಿ ಯವರು ಮಕ್ಕಳಿಗೆ ತಿಳಿಸಿಕೊಟ್ಟರು.
ನಂತರ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ,ನಮನ ಸಲ್ಲಿಸಲಾಯಿತು.ವಿದ್ಯಾರ್ಥಿಗಳು ಕೆಂಪು ಗುಲಾಬಿ ಹಿಡಿದು ಅಪ್ಪುವಿನ ಭಾವಚಿತ್ರ ಪ್ರದರ್ಶಿಸಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಯನ ಶಾಲೆಯ ಮುಖ್ಯಸ್ಥರಾದ ಎಂ ಪಾರ್ವತಿ ದೇವಿ, ಮುಖ್ಯೋಪಾಧ್ಯಾಯರಾದ ಪುಟ್ಟಸ್ವಾಮಿಗೌಡರು ಸೇರಿದಂತೆ ಪ್ರಾಂಶುಪಾಲರು ,ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಪುನೀತ್ ಅವರಿಗೆ ನಮನ ಸಲ್ಲಿಸಿದರು.