ಹ್ಯಾಟ್ರಿಕ್ ಹೀರೊ ತವರಿಗೆ‌ ವಾಪಸ್: ಅಭಿಮಾನಿಗಳ ಸಂಭ್ರಮ

ಬೆಂಗಳೂರು:ಅನಾರೋಗ್ಯ ಹಿನ್ನೆಲೆ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ತವರಿಗೆ ವಾಪಸಾಗಿದ್ದು,ಅಭಿಮಾನಿಗಳು ಫುಲ್ ಖುಷಿಯಾಗಿ ಕುಣಿದು ಕುಪ್ಪಳಿಸಿದರು.

ಶಿವರಾಜ್​ ಕುಮಾರ್ ಪತ್ನಿ ಗೀತಾ, ಪುತ್ರಿ ನಿವೇದಿತಾ ಜೊತೆ ಬೆಳಗ್ಗೆ 8.50ಕ್ಕೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಶಿವಣ್ಣನ ಅಭಿಮಾನಿಗಳು ದೊಡ್ಡ ಕಟೌಟ್ ಗಳನ್ನು ಹಾಕಿ ವಾದ್ಯ ಮೇಳದೊಂದಿಗೆ ಬರಮಾಡಿಕೊಂಡರು.

ಗಣರಾಜ್ಯೋತ್ಸವ ಹಿನ್ನೆಲೆ ಹೈಅಲರ್ಟ್​ ಘೋಷಣೆ ಮಾಡಿದ್ದರಿಂದ ಏರ್​ಪೋರ್ಟ್​ನಲ್ಲಿ ಅದ್ಧೂರಿ ಸ್ವಾಗತಕ್ಕೆ ಅವಕಾಶ ಇರಲಿಲ್ಲ,ಹಾಗಾಗಿ ಸಾದಹಳ್ಳಿ ಗೇಟ್​ ಬಳಿ ಶಿವರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.

ಸಾದಹಳ್ಳಿ ಗೇಟ್​ನಿಂದಲೂ ನೆಚ್ಚಿನ ನಟನಿಗೆ ಅಭಿಮಾನಿಗಳು ಹೂವಿನ ಮಳೆಯನ್ನೇ ಸುರಿಸಿದರು.

ದಾರಿಯುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದು ಜಯಕಾರ ಕೂಗುತ್ತಿದ್ದರು.ಇನ್ನು ಮನೆ ಬಳಿ ಜನಸಾಗರವೇ ಸೇರಿತ್ತು ಸೇಬಿನ ಹಾರ,ಹೂವಿನ ಮಾಲೆ ಬೊಕೆಗಳನ್ನು ಫ್ಯಾನ್ಸ್ ನೀಡಿ ಸಂಭ್ರಮಿಸಿದರು.ಪಟಾಕಿ ಸಿಡಿಸಿ ಖುಷಿ ಪಟ್ಟರು.

ಶಿವಣ್ಣ ಮನೆಗೆ ಬಂದ ಕೂಡಲೇ ರಾಘವೇಂದ್ರ ರಾಜಕುಮಾರ್,ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಸಂಬಂಧಿಗಳು ಆಗಮಿಸಿ ಶುಭ ಕೋರಿದರು.

ಹ್ಯಾಟ್ರಿಕ್ ಹೀರೊ ತವರಿಗೆ‌ ವಾಪಸ್: ಅಭಿಮಾನಿಗಳ ಸಂಭ್ರಮ Read More

ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಶಿವಣ್ಣ

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಅವರು ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿದ್ದು,ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಕ್ಯಾನ್ಸರ್ ಗೆದ್ದಿರುವ ಶಿವಣ್ಣ ಅಭಿಮಾನಿಗಳಿಗೆ ಹೊಸ ವರ್ಷದಂದೆ ದರ್ಶನ ಕೊಟ್ಟು,ತಾವು ಕ್ಯಾನ್ಸರ್‌ನಿಂದ ಮುಕ್ತರಾಗಿರುವುದಾಗಿ ಸಂತಸ ಹಂಚಿಕೊಂಡಿದ್ದಾರೆ.

ಅಮೆರಿಕದಿಂದಲೇ ಅಭಿಮಾನಿಗಳಿಗೆ ಸಂದೇಶವನ್ನು ಶಿವಣ್ಣ ರವಾನಿಸಿದ್ದಾರೆ.ಈ ಬಗ್ಗೆ ಗೀತಾ ಶಿವರಾಜ್‌ಕುಮಾರ್‌ ಮಾತನಾಡಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನೀವೆಲ್ಲರೂ ಮಾಡಿದ ಪ್ರಾರ್ಥನೆಯಿಂದ ಶಿವರಾಜ್‌ಕುಮಾರ್‌ ಅವರ ಎಲ್ಲಾ ರಿಪೋರ್ಟ್‌ ನೆಗೆಟಿವ್‌ ಬಂದಿದೆ ಎಂದು ಸಂತಸದಿಂದ ಹೇಳಿದ್ದಾರೆ.

ಶಿವರಾಜ್ಕುಮಾರ್ ಈವಾಗ ಕ್ಯಾನ್ಸರ್‌ ಫ್ರೀ ಅಂತ ವೈದ್ಯರು ಅಧಿಕೃತವಾಗಿ ಹೇಳಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ಅವರು ಗುಣಮುಖರಾಗಿದ್ದಾರೆ. ನಾನು ಎಂದಿಗೂ ಮರೆಯುವುದಿಲ್ಲ,ನಿಮಗೆಲ್ಲ ಧನ್ಯವಾದ ಎಂದು ತಿಳಿಸಿದ್ದಾರೆ.

ನಂತರ ಶಿವರಾಜಕುಮಾರ್ ಕೂಡಾ ಮಾತನಾಡಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಭಯ ಆಗುತ್ತೆ ಮಾತನಾಡಬೇಕಾದರೆ, ಎಲ್ಲಿ ಎಮೋಷನಲ್‌ ಆಗಿ ಬಿಡುವೆನೊ ಅಂತ ಎಮೋಶನಲ್ ಅಗಿಯೇ ಹೇಳಿದರು.

ನಮ್ಮ ನಾಡಿಂದ ಬರುವಾಗ ಎಮೋಷನಲ್‌ ಆಗಿದ್ದೆ, ಭಯ ಇದ್ದೇ ಇರುತ್ತದೆ. ಆ ಭಯ ಕಮ್ಮಿ ಮಾಡಲೆಂದೇ ಅಭಿಮಾನಿ ದೇವರುಗಳಿದ್ದಾರೆ. ವೈದ್ಯರು ನನ್ನ ನೋಡಿಕೊಂಡ ರೀತಿಯಿಂದ ಇನ್ನಷ್ಟು ಧೈರ್ಯ ಬಂತು. ’45’ ಚಿತ್ರದ ಶೂಟಿಂಗ್‌ ಮಾಡುವಾಗ ಕಿಮೋ ಥೆರಫಿಯಲ್ಲಿ ಕೆಲಸ ಮಾಡಿದ್ದೀನಿ. ಕ್ಲೈಮ್ಯಾಕ್ಸ್‌ ಫೈಟ್‌ ಎಲ್ಲಾ ಮಾಡಿದ್ದೇನೆ ಎಂದು ಶಿವಣ್ಣ ಹೇಳಿದ್ದಾರೆ.

ಅಮೆರಿಕಗೆ ಚಿಕಿತ್ಸೆಗೆ ಹೊರಡುವ ಡೇಟ್‌ ಹತ್ತಿರ ಬಂದಾಗ ಟೆನ್ಷನ್‌ ಹೆಚ್ಚಾಗಿತ್ತು, ಆದರೆ ಸದಾ ಪತ್ನಿ ಗೀತಾ ಮತ್ತು ಮಗಳು ನಿವಿ ನನ್ನ ಜೊತೆ ಬೆಂಬಲವಾಗಿ ನಿಂತಿದ್ದಾರೆ ಎಂದು ಮನದ ಮಾತುಗಳನ್ನು ಹಂಚಿಕೊಂಡರು.

ನನ್ನ ಚಿಕಿತ್ಸೆ ಮಾಡಿದ ವೈದ್ಯ ಮನೋಹರ್‌ ಅವರು ಮಗುವಿನಂತೆ ನನ್ನ ನೋಡಿಕೊಂಡರು. ಯೂರಿನರಿ ಬ್ಲಾಡ್‌ ತೆಗೆದು ಹೊಸದು ಬ್ಲಾಡ್‌ ಹಾಕಿದ್ದಾರೆ. ಯಾರು ಗಾಬರಿ ಆಗಬೇಡಿ ನಾನು ಆರಾಮವಾಗಿದ್ದೇನೆ. ಐ ವಿಲ್‌ ಬಿ ಬ್ಯಾಕ್‌, ಡಬಲ್‌ ಪವರ್‌ನೊಂದಿಗೆ ಬರುತ್ತೇನೆ. ಎಲ್ಲಾ ನನ್ನ ಅಭಿಮಾನಿ ದೇವರುಗಳಿಗೆ ಧನ್ಯವಾದಗಳು ಎಂದು ಶಿವಣ್ಣ ತಿಳಿಸಿದ್ದಾರೆ.

ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಶಿವಣ್ಣ Read More