ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿವಾಹನ ಡಿಕ್ಕಿ: ಮಹಿಳೆ‌ ಸಾ*ವು

ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾತ್ರಿ ರಸ್ತೆ ದಾಟುವಾಗ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ‌ ಮೃತಪಟ್ಟ ಘಟನೆ ಮಂಡ್ಯ ಸಮೀಪ ನಡೆದಿದೆ.

ಬೆಂಗಳೂರು ಮೈಸೂರು ಹೆದಾರಿಯಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಮಹಿಳೆಗೆ ವಾಹನ ಡಿಕ್ಕಿ ಹೊಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಹೆದ್ದಾರಿ ಗಸ್ತು ವಾಹನ ಮತ್ತು ಆಂಬುಲೆನ್ಸ್ ಧಾವಿಸಿ ಮೃತ ದೇಹವನ್ನ ಮಂಡ್ಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಮಹಿಳೆ‌ ಯಾರು,ವಿಳಾಸ‌ ಇನ್ನೂ ತಿಳಿದು ಬಂದಿಲ್ಲ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿವಾಹನ ಡಿಕ್ಕಿ: ಮಹಿಳೆ‌ ಸಾ*ವು Read More

ಆಟೋರಿಕ್ಷಾಗಳಿಗೆ ಬಸ್ ಡಿಕ್ಕಿ:6 ಮಂದಿ ಸಾವು

ಮಂಗಳೂರು: ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಕೇರಳದ ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಕ್ರಾಸ್ ಬಳಿ ಎರಡು ಆಟೋರಿಕ್ಷಾಗಳು ಮತ್ತು ರಸ್ತೆಬದಿ ನಿಂತಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನ ಮೃತಪಟ್ಟಿದ್ದಾರೆ.

ಗುರುವಾರ ಮಧ್ಯಾಹ್ನ‌ 1 ಗಂಟೆ ಸಮಯದಲ್ಲಿ ಕಾಸರಗೋಡು ಜಿಲ್ಲೆ, ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಆಟೋರಿಕ್ಷಾ ಚಾಲಕ ಹೈದರ್ ಅಲಿ (47); ಖದೀಜಾ, 60; ಹಸ್ನಾ, 11; ನಫೀಸಾ, 52; ಆಯಿಷಾ ಫಿದಾ, 19; ಎಲ್ಲರೂ ದಕ್ಷಿಣ ಕನ್ನಡದ ಕೋಟೆಕಾರ್‌ನ ಅಜ್ಜಿನಡ್ಕದವರು; ಮತ್ತು ದಕ್ಷಿಣ ಕನ್ನಡದ ಫರಂಗಿಪೇಟೆಯ 72 ವರ್ಷದ ಅವಮ್ಮ ಎಂದು ಹೆಸರಿಸಿದ್ದಾರೆ. ಕಾಸರಗೋಡಿನ ಪೆರುಂಬಳದ ಲಕ್ಷ್ಮಿ (61) ಮತ್ತು ಸುರೇಂದ್ರ (39) ಗಾಯಗೊಂಡಿದ್ದಾರೆ.

ಬಸ್‌ ಚಾಲಕ ಸರ್ವಿಸ್ ರಸ್ತೆಯನ್ನು ತೆಗೆದುಕೊಳ್ಳುವ ಬದಲು ಫ್ಲೈಓವರ್‌ನಲ್ಲಿ ಚಾಲನೆ ಮಾಡಿ ಬ್ಲೈಂಡ್ ಸ್ಪಾಟ್ ಅನ್ನು ಎದುರಿಸಿ ನಾಲ್ಕು ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ.

ಹೆದ್ದಾರಿಯಲ್ಲಿ ಅತಿ ವೇಗ ಮತ್ತು ಜಾರುವ ಸ್ಥಿತಿಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ನಾಲ್ವರು ಮಂಗಳೂರಿನ ಹೊರವಲಯದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಆಟೋರಿಕ್ಷಾಗಳಿಗೆ ಬಸ್ ಡಿಕ್ಕಿ:6 ಮಂದಿ ಸಾವು Read More

ಐಷಾರಾಮಿ ಬಸ್ ಉರುಳಿ ಇಬ್ಬರ ದುರ್ಮರಣ

ಬೆಳಗಾವಿ: ಚಾಲಕನ ಅಜಾಗರೂಕತೆಯಿಂದ ಬೆಳಗಾವಿ ಸಮೀಪದ ಹಿರೇಬಾಗೇವಾಡಿ ಘಾಟ್ ನಲ್ಲಿ ಖಾಸಗಿ ಐಷಾರಾಮಿ ‌ಬಸ್ ಉರುಳಿ ಬಿದ್ದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಬುಧವಾರ ತಡ ರಾತ್ರಿ ಹುಬ್ಬಳ್ಳಿಯಿಂದ ಪುಣೆಗೆ ಹೊರಟಿದ್ದ ಗೋಗಟೆ ಸಂಸ್ಥೆಗೆ ಸೇರಿದ ಬಸ್ ಘಾಟಿಯಲ್ಲಿ ಉರುಳಿದೆ ಬಸ್ ನಲ್ಲಿ ಒಟ್ಟು 12 ಜನ ಪ್ರಯಾಣಿಕರಿದ್ದರು.
ಅಪಘಾತದಲ್ಲಿ ಒಬ್ಬರು ಮಹಿಳೆ ಹಾಗೂ ಪುರುಷ ಮೃತಪಟ್ಟಿದ್ದಾರೆ.‌

ಸ್ಥಳಕ್ಕೆ ಪೊಲೀಸ್ ಆಯುಕ್ತ ಭೂ಼ಷಣ ಬೊರಸೆ ಭೇಟಿ ನೀಡಿ ಮಾಹಿತಿ ಪಡೆದರು.

ಹಿರೇಬಾಗೇವಾಡಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ಸ್ಥಳೀಯರ ನೆರವಿನಲ್ಲಿ ಗಾಯಾಳುಗಳನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಐಷಾರಾಮಿ ಬಸ್ ಉರುಳಿ ಇಬ್ಬರ ದುರ್ಮರಣ Read More

ಭಾರೀ ಲಾರಿ ಬೈಕ್ ಗೆ ಡಿಕ್ಕಿ:ನವವಿವಾಹಿತೆ ಸಾ*ವು:ವಿಷಯ ತಿಳಿದು ಅಜ್ಜಿಯೂ ಸಾವು

ಬೆಂಗಳೂರು: ಭಾರೀ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅರಿಶಿನ ಕುಂಕುಮಕ್ಕೆ ಹೋಗುತ್ತಿದ್ದ ನವವಿವಾಹಿತೆ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನ ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ.

ಈ ಆಘಾತದ ಸುದ್ದಿ ತಿಳಿದು ನವವಿವಾಹಿತೆಯ ಅಜ್ಜಿ ಶಾಕ್ ನಿಂದ ಸಾವನ್ನಪ್ಪಿದ್ದಾರೆ.

ಮಲ್ಲೇಶ್ವರಂ ನಿವಾಸಿ ಗೀತಾ (23) ಮೃತಪಟ್ಟ ನವವಿವಾಹಿತೆ.ಆಕೆಯ ಪತಿ ಸುನಿಲ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಮೂರು ತಿಂಗಳ ಹಿಂದೆಯಸ್ಟೇ ಈ ದಂಪತಿ ಮದುವೆಯಾಗಿದ್ದರು. ಸುನಿಲ್ ಅವರ ಅಕ್ಕನ ಮನೆಗೆ ಅರಿಶಿನ,ಕುಂಕುಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು.

ಲಗ್ಗೆರೆ ಬ್ರಿಡ್ಜ್ ಬಳಿ ಬೈಕ್‌ಗೆ ಭಾರೀ ಲಾರಿ ಡಿಕ್ಕಿ ಹೊಡೆದಿದೆ.ಈ ವೇಳೆ ಗೀತಾ ಬೈಕ್‌ನಿಂದ ಕೆಳಗೆ ಬಿದ್ದಿದ್ದು, ಅವರ ಮೇಲೆ ಲಾರಿ ಹರಿದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಚನ್ನಪಟ್ಟಣದಲ್ಲಿ ವಾಸವಿದ್ದ ಗೀತಾ ಅವರ ಅಜ್ಜಿ ತೀವ್ರ ಆಘಾತದಿಂದ ಮೃತಪಟ್ಟಿದ್ದಾರೆ. ಈ ಘಟನೆ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಸಂಬಂಧ ಪ್ರಕರಣ ದಾಖಲಾಗಿದೆ.

ಭಾರೀ ಲಾರಿ ಬೈಕ್ ಗೆ ಡಿಕ್ಕಿ:ನವವಿವಾಹಿತೆ ಸಾ*ವು:ವಿಷಯ ತಿಳಿದು ಅಜ್ಜಿಯೂ ಸಾವು Read More

ಬೈಕ್ ನಿಂದ ಬಿದ್ದು ವ್ಯಕ್ತಿ ಸಾ*ವು:ಮತ್ತೊಬ್ಬ ಗಂಭೀರ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಆಯತಪ್ಪಿ ಬೈಕ್ ನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ
ತಾಲೂಕಿನ ಸತ್ತೇಗಾಲ ಗ್ರಾಮದ ಬೈಪಾಸ್ ನಲ್ಲಿ ನಡೆದಿದೆ.

ಹನೂರು ತಾಲ್ಲೂಕು ಮಲೆ ಮಾದೇಶ್ವರ ಬೆಟ್ಟದ ಆನೆಹೊಲ ಗ್ರಾಮದ ನಿವಾಸಿ ಶಿವರಾಜು (30) ಮೃತಪಟ್ಟ ದುರ್ದೈವಿ. ಹಿಂಬದಿ ಸವಾರ ರವಿಚಂದ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಿಬ್ಬರು ನೆನ್ನೆ ರಾತ್ರಿ ಮಳವಳ್ಳಿ ಕಡೆಯಿಂದ ಸತ್ತೇಗಾಲ ಮಾರ್ಗವಾಗಿ ಸ್ವ ಗ್ರಾಮಕ್ಕೆ ತೆರಳುತ್ತಿದ್ದಾಗ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬೈಪಾಸ್ ನಲ್ಲಿ ರಸ್ತೆ ಹಂಪ್ಸ್ ನಲ್ಲಿ ಬೈಕ್ ಆಯತಪ್ಪಿ ಪೊಲೀಸ್ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಉರುಳಿದೆ.

ಶಿವರಾಜು ಸ್ಥಳದಲ್ಲಿ ಮೃತಪಟ್ಟಿದ್ದು, ರವಿಚಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನು ನೋಡಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ

ತಕ್ಷಣ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ,ಶಿವರಾಜು ಮೃತದೇಹವನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ, ರವಿಚಂದ್ರನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂಬಂಧ ಮೃತ ಶಿವರಾಜುವಿನ ಪತ್ನಿ ನೀಡಿರುವ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೈಕ್ ನಿಂದ ಬಿದ್ದು ವ್ಯಕ್ತಿ ಸಾ*ವು:ಮತ್ತೊಬ್ಬ ಗಂಭೀರ Read More

ಬಸ್‌ ಹರಿದು‌ ಹಿರಿಯ ನಾಗರೀಕ ದು*ರ್ಮರಣ

ಮೈಸೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಹಿರಿಯ ನಾಗರೀಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಶ್ರೀರಾಂಪುರದಲ್ಲಿ ಈ ಅವಘಡ ನಡೆದಿದ್ದು,ಶ್ರೀರಾಂಪುರದ ಪುರುಷೋತ್ತಮಯ್ಯ (71) ಮೃತಪಟ್ಟ ದುರ್ದೈವಿ.

ಪುರುಷೋತ್ತಮಯ್ಯ ಅವರು‌ ಮನೆಯಿಂದ ಸ್ಕೂಟರ್ ನಲ್ಲಿ ಹೊರಟು ಸ್ವಲ್ಪ ದೂರ ಬಂದಿದ್ದರಷ್ಟೆ.ಅಷ್ಟರಲ್ಲಿ ಹಿಂದಿನಿಂದ ಬಂದ ಕೆಎಸ್ಆರ್‌ ಟಿಸಿ ಬಸ್
ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

ಆಗ ಸ್ಕೂಟರ್ ಸಹಿತ ಅವರು ಕೆಳಗೆ ಬಿದ್ದಿದ್ದಾರೆ,ಆಗ ಅವರ ತಲೆಯ ಮೇಲೆ ಬಸ್ ಹರಿದಿದೆ,ಇದರಿಂದ ಪುರುಷೋತ್ತಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪುರುಷೋತ್ತಮ್ಮಯ್ಯ ಅವರು ಹಾಲಿನ ಬೂತ್ ನಿಂದ ಹಾಲು ತೆಗೆದುಕೊಂಡು ಮನೆಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.

ಬಸ್‌ ಹರಿದು‌ ಹಿರಿಯ ನಾಗರೀಕ ದು*ರ್ಮರಣ Read More

ಬೈಕ್ ಗೆ ಬಸ್ ಡಿಕ್ಕಿ ವ್ಯಕ್ತಿ ಸಾವು

ಬೆಳಗಾವಿ: ರಾಜ್ಯ ಸಾರಿಗೆ ಬಸ್‌ ಹಾಗೂ ಬೈಕ್ ಮುಖಾ-ಮುಖಿ ಡಿಕ್ಕಿಯಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಅಥಣಿ ತಾಲೋಕಿನಲ್ಲಿ ನಡೆದಿದೆ‌

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಬಳ್ಳಿಗೇರಿ ಮಲಾಬಾದ ಸಮೀಪ ಬೆವಣೂರು ಕ್ರಾಸ್ ಬಳಿ ಈ ಘಟಬೆ ನಡೆದಿದೆ. ಮಲಬಾದ್ ಮೂಲದ ನೂ‌ರ್ ಸಿರಾಜ್ ಮುಲ್ಲಾ (45) ಮೃತಪಟ್ಟ‌ ವ್ಯಕ್ತಿ.

ಅಥಣಿ ಮಾರ್ಗವಾಗಿ ಬರುತ್ತಿದ್ದ ಸಾರಿಗೆ ಬಸ್‌ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಗೆ ಬಸ್ ಡಿಕ್ಕಿ ವ್ಯಕ್ತಿ ಸಾವು Read More

ಲಾರಿ-ಬೈಕ್ ಮುಖಾಮುಖಿ ಡಿಕ್ಕಿ:ಸವಾರ‌ ಸಾ*ವು

ಮೈಸೂರು: ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮಡಿಕೇರಿ ತಾಲ್ಲೂಕಿನ ಕಡಗನಹಳ್ಳಿ ಗ್ರಾಮದ ನಿವಾಸಿ ಶ್ಯಾಮಿಯೋಲ್ (22) ಮೃತಪಟ್ಟ ಯುವಕ.

ಮತ್ತೊಬ್ಬ ಸವಾರ ನವೀನ್ (26)ಗೆ ಗಂಭೀರ ಗಾಯಗಳಾಗಿದ್ದು, ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಪ್ಪ ಮಾರ್ಗವಾಗಿ ಕುಶಾಲನಗರಕ್ಕೆ ಹೀರೋ ಹೋಂಡಾ ಬೈಕ್ ನಲ್ಲಿ ಈ ಇಬರೂ ಬರುತ್ತಿದ್ದರು.

ಈ ವೇಳೆ ಕುಶಾಲನಗರದಿಂದ ಪಿರಿಯಾಪಟ್ಟಣ ಕಡೆಗೆ ಬರುತ್ತಿದ್ದ ಲಾರಿ ಬೈಕ್ ಡಿಕ್ಕಿಯಾಗಿವೆ, ಬೈಲುಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಲಾರಿ-ಬೈಕ್ ಮುಖಾಮುಖಿ ಡಿಕ್ಕಿ:ಸವಾರ‌ ಸಾ*ವು Read More

ಕಾರು-ಬೈಕ್ ಅಪಘಾತ:ಮಗ ಸಾವು; ನದಿಗೆ ಬಿದ್ದಿದ್ದ ಮಹಿಳೆ ದೇಹ ಪತ್ತೆ

ಮೈಸೂರು: ಜಿಲ್ಲೆಯ ಬನ್ನೂರು ಮುಖ್ಯ ರಸ್ತೆಯಲ್ಲಿರುವ ಕಾವೇರಿ ನದಿ ಸೇತುವೆ ಬಳಿ ಕಾರು-ಬೈಕ್ ಅಪಘಾತದಲ್ಲಿ ಕಾವೇರಿ ನದಿಗೆ ಹಾರಿ ಬಿದ್ದಿದ್ದ ಮಹಿಳೆಯ ದೇಹ ಪತ್ತೆಯಾಗಿದೆ.

ನಿನ್ನೆ ಸಂಭವಿಸಿದ ಈ ಅಪಘಾತದಲ್ಲಿ ಬೈಕ್ ಸವಾರ ಶಂಕರ್(21) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದರು. ಆತನ ತಾಯಿ ಪಾರ್ವತಿ ಅವರ ದೇಹ ಹಾರಿ ಕಾವೇರಿ ನದಿಗೆ ಬಿದ್ದಿತ್ತು.

ಮೃತ ದೇಹ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೊನೆಗೂ ಶವ ಹೊರ ತೆಗೆಯುವಲ್ಲಿ ಯಶಸ್ವಿಯಾದರು.

ಮೃತರು ಮೈಸೂರಿನ ಮೇಟಗಳ್ಳಿ ಕರಕುಶಲ ನಗರದ ನಿವಾಸಿಗಳು.

ತಾಯಿ ಮಗ ಒಂದೇ ಬೈಕಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಅಪಘಾತ ಸಂಭಸಿತ್ತು.

ಅಪಘಾತದ ರಭಸಕ್ಕೆ ಬೈಕ್ ಸವಾರ ಶಂಕರ್(21) ಸ್ಥಳದಲ್ಲೇ ಮೃತಪಟ್ಟಿದ್ದರು ಆತನ ತಾಯಿ ಪಾರ್ವತಿ ದೇಹ ನದಿಗೆ ಹಾರಿ ಬಿದ್ದಿತ್ತು.

ನಿನ್ನೆ ಕತ್ತಲಾದ ಕಾರಣ ಶವ ಹೊರ ತೆಗೆಯಲಾಗಿರಲಿಲ್ಲ.ಇಂದು ಶೋಧ ಕಾರ್ಯ ನಡೆಸಿ ಮೃತ ದೇಹ ಹೊರ ತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ

ಕಾರು-ಬೈಕ್ ಅಪಘಾತ:ಮಗ ಸಾವು; ನದಿಗೆ ಬಿದ್ದಿದ್ದ ಮಹಿಳೆ ದೇಹ ಪತ್ತೆ Read More

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿ:ನಾಲ್ಕು ಮಂದಿ ದುರ್ಮರಣ

ಮಂಡ್ಯ,ಏ.3: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿ ಹೊಡೆದು ಅರಸು ಮನೆತನದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲ್ಲೂಕು ತೂಬಿನಕೆರೆ ಎಕ್ಸಿಟ್ ಬಳಿ ನಡೆದಿದೆ.

ಕಾರು ಬೆಂಗಳೂರಿಂದ ಮೈಸೂರು ಕಡೆಗೆ ಹೊರಟಿತ್ತು. ಈ ವೇಳೆ ಎಕ್ಸ್ ಪ್ರೆಸ್ ವೇ ಎಕ್ಸಿಟ್ ಆಗುವಾಗ ಕಾರು ಚಾಲಕನಿಗೆ ಗೊಂದಲ ಉಂಟಾಗಿದ್ದು, ಮತ್ತೆ ಕಾರನ್ನು ಎಕ್ಸ್ಪ್ರೆಸ್ ವೇಗೆ ತಿರುಗಿಸಿದ್ದಾನೆ. ಇದೇ ವೇಳೆ ಹಿಂದಿನಿಂದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಬಂದಿದ್ದು, ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೃತರು ಬೆಂಗಳೂರಿನ ಜೆಪಿ ನಗರದಲ್ಲಿ ವಾಸಿಸುತ್ತಿದ್ದರು.

ಮೂಲತಃ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ತುಂಗ ನಿವಾಸಿ ಸುವೇದಿನಿ ರಾಣಿ(50), ಅವರ ಪತಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಮರೂರು ಗ್ರಾಮದ ಚಂದ್ರು(62),ಪಿರಿಯಾಪಟ್ಟಣ ತಾಲೂಕು ಬೇಲಾಳು ಗ್ರಾಮದ ಸತ್ಯಾನಂದ ರಾಜೇ ಅರಸ್ ಮತ್ತು ಅವರ ಪತ್ನಿ ನಿಶ್ಚಿತಾ ಮೃತಪಟ್ಟ‌ ದುರ್ದೈವಿಗಳು.

ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಪೊಲೀಸ್ ಅಧಿಕಾತಿಗಳು ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಟ್ರಾಫೀಕ್ ಜಾಮ್ ಸರಿಪಡಿಸಿ ಮೃತ ದೇಹಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿ:ನಾಲ್ಕು ಮಂದಿ ದುರ್ಮರಣ Read More