ಹೆಚ್ ಪಿ ಐ‌ಎನ್,ಐಪಿಒ ಆಪ್ ನಲ್ಲಿ ಆನ್ ಲೈನ್ ವಂಚನೆ- ಲಕ್ಷಾಂತರ ಹಣಕ್ಕೆ ನಾಮ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ನಗರದ ವ್ಯಕ್ತಿಯೊಬ್ಬರು HPIN , IPO ಆ್ಯಪ್ ನಲ್ಲಿ ಹಣಕಾಸು ಚೈನ್ ಲಿಂಕ್ ನ ಆನ್ ಲೈನ್ ವಂಚನೆಗೆ ಒಳಗಾಗಿದ್ದಾರೆ.

ಈ ಸಂಬಂದ ಸೆನ್ ಪೊಲಿಸ್ ಠಾಣೆಗೆ ದೂರು ದಾಖಲಿಸಿರುವ ವ್ಯಕ್ತಿ, 3,20,920 ಹಣ ಕಳೆದುಕೊಂಡಿದ್ದು ತಾವು ಕಳೆದುಕೊಂಡ ಹಣವನ್ನ ದೊರಕಿಸಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಆ್ಯಪ್ ಇನ್ಸ್ ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡಿ,ವಿವಿದ ಖಾತೆಗಳಲ್ಲಿ 88,925,76 ಹಾಗು ಮತ್ತೊಂದು ಖಾತೆಯಲ್ಲಿ 5,39,150,78 ಎಂದು ವ್ಯಾಲೆಟ್ ನಲ್ಲಿ ತೋರಿಸುತ್ತಿದ್ದು,ಹಣ ಡ್ರಾ ಮಾಡಲು ಹೋದಾಗ ವೈಫಲ್ಯ ಕಂಡು ಬಂದಿದೆ.

ಅಡ್ಮಿನ್ ಜೊತೆ ಚರ್ಚಿಸಲಾಗಿ ವರ್ಷದವರೆಗೆ ಹಣ ತೆಗೆಯಲಾಗುವುದಿಲ್ಲ ಎಂಬ ಸಂದೇಶದ ಜೊತೆಗೆ ಮತ್ತೆ 5 ಲಕ್ಷ ಪಾವತಿಸುವಂತೆ ಸೂಚಿಸಿದ್ದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ವಂಚನೆಗೊಳ ಗಾಗಿರುವುದು ಗೊತ್ತಾಗಿದೆ.

ಈ ಸಂಬಂದ ತಕ್ಷಣ ದೂರು ದಾಖಲಿಸಿ ಕಳೆದುಕೊಂಡ ಹಣ ಭರಿಸಿಕೊಡುವಂತೆ ವ್ಯಕ್ತಿ ದೂರು ಸಲ್ಲಿಸಿದ್ದಾರೆ.

ಈ ರೀತಿಯ ಹೂಡಿಕೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡವರಿದ್ದು, ಈ ರೀತಿಯ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಸೆನ್ ಪೊಲಿಸ್ ಇನ್ಸ್ ಪೆಕ್ಟರ್ ಸಾಗರ್ ಮನವಿ ಮಾಡಿದ್ದಾರೆ.

ಹಣ ಕಳೆದುಕೊಂಡವರ ಪೈಕಿ
ಸರ್ಕಾರಿ ನೌಕರರು.ಇಂಜಿನಿಯರಿಂಗ್ ಪದವೀಧರರು ,ವಕೀಲರು ಉದ್ಯಮಿ ಗಳೇ ಹೆಚ್ಚಾಗಿದ್ದಾರೆಂದು ತಿಳಿದುಬಂದಿದೆ.

ಹೆಚ್ ಪಿ ಐ‌ಎನ್,ಐಪಿಒ ಆಪ್ ನಲ್ಲಿ ಆನ್ ಲೈನ್ ವಂಚನೆ- ಲಕ್ಷಾಂತರ ಹಣಕ್ಕೆ ನಾಮ Read More

ಅನಧಿಕೃತ ಕಟೌಟ್: ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಎಎಪಿ ಆಗ್ರಹ

ಬೆಂಗಳೂರು: ಬೆಂಗಳೂರಿನ ಗೋವಿಂದರಾಜನಗರ, ವಿಜಯನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಎಲ್ಲೆಂದರಲ್ಲಿ ಫ್ಲೆಕ್ಸ್, ಕಟೌಟ್ ಹಾಕಿದ್ದು ದಂಡ ವಿಧಿಸುವಂತೆ ಆಪ್ ಆಗ್ರಹಿಸಿದೆ.

ಸ್ಥಳೀಯ ಕಾಂಗ್ರೆಸ್ ಶಾಸಕರಾದ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ , ಪ್ರದೀಪ್ ಕೃಷ್ಣ, ಬಿಜೆಪಿಯ ಉಮೇಶ್ ಶೆಟ್ಟಿ ಕ್ಷೇತ್ರದಾದ್ಯಂತ ಎಲ್ಲೆಂದರಲ್ಲಿ ಫ್ಲೆಕ್ಸ್ ಗಳನ್ನು ಹಾಕಿರುವುದರಿಂದ ಎಲ್ಲ ಕಡೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆರೋಪಿಸಿದ್ದಾರೆ.

ಸಾವಿರಾರು ಕೆಜಿ ತೂಕದ ಸರ್ವೆ ಮರಗಳನ್ನು ಬಳಸಿ ವೃತ್ತಾಕಾರದ ಕಟ್ ಔಟ್ ಗಳನ್ನು ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವುದು ಅತ್ಯಂತ ಅಪಾಯಕಾರಿ, ನಿನ್ನೆ ನಾಗರಬಾವಿ ವೃತ್ತದಲ್ಲಿ ಈ ಸರ್ವೆ ಮರಗಳು ಬಿದ್ದು ಅನೇಕರಿಗೆ ಹಾನಿ ಸಹ ಆಗಿದೆ.

ಮುಖ್ಯ ರಸ್ತೆಗಳಲ್ಲಿ ಹಾಕಿರುವ ಬ್ಯಾನರ್ ಗಳು ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ, ಕೂಡಲೇ ಇವರುಗಳ ವಿರುದ್ಧ ಹೆಚ್ಚಿನ ಮೊತ್ತದ ದಂಡವನ್ನು ಹಾಕಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಜಗದೀಶ್ ವಿ. ಸದಂ ಒತ್ತಾಯಿಸಿದ್ದಾರೆ.

ಬ್ರಾಂಡ್ ಬೆಂಗಳೂರು ಎಂಬ ಪರಿಕಲ್ಪನೆಯ ಕನಸನ್ನು ಹೊತ್ತಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ರವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಇದೆಲ್ಲ ನೋಡಿಯೂ ಮೂಕ ಪ್ರೇಕ್ಷಕರಾಗಿ ಕುಳಿತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದ್ದಾರೆ.

ಈಗಾಗಲೇ ನೂತನ ಜಾಹೀರಾತು ನೀತಿ ಜಾರಿಗೆ ಬಂದಿರುವುದು ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ಅರಿವಿಲ್ಲವೇ, ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುತ್ತಿರುವ ಈ ನಾಯಕರುಗಳ ಚೆಲ್ಲಾಟಗಳನ್ನು ಕೂಡಲೇ ತಪ್ಪಿಸಬೇಕು ಹಾಗೂ ಮುಂಬರುವ ಹಾನಿಗಳನ್ನು ತಪ್ಪಿಸಲು ಕೂಡಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಗದೀಶ್ ವಿ ಸದಂ ಆಗ್ರಹಿಸಿದ್ದಾರೆ.

ಅನಧಿಕೃತ ಕಟೌಟ್: ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಎಎಪಿ ಆಗ್ರಹ Read More

ಬೆಂಗಳೂರು ಕಸದ ಮಾಫಿಯಾ ಹಿಂದಿರುವ ಡಾನ್ ಯಾರು:ಡಿಕೆಶಿ ಉತ್ತರಿಸಲಿ ಎಎಪಿ

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ಮಾಫಿಯಾ ಇದೆ ಎಂಬುದನ್ನು ಒಪ್ಪಿಕೊಂಡಿದ್ದು ಇದರ ಹಿಂದಿನ ಡಾನ್ ಯಾರೆಂಬುದನ್ನು ತಿಳಿಸಲಿ ಎಂದು ಎಎಪಿ ಸವಾಲು ಹಾಕಿದೆ.

ಬೆಂಗಳೂರಿನ ಕಸದ ವಿಲೇವಾರಿ
ಬಿಗಡಾಯಿಸಿರುವ ಬಗ್ಗೆ ನಿನ್ನೆ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಬೆಂಗಳೂರು
ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಸ ವಿಲೇವಾರಿ ದೊಡ್ಡ ಮಾಫಿಯಾ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.ಹಾಗಾದರೆ ಅನೇಕ ವರ್ಷಗಳಿಂದ ನಗರದಲ್ಲಿ ಬೀಡು ಬಿಟ್ಟಿರುವ ಈ ಕಸದ ಮಾಫಿಯಾ ಹಿಂದಿರುವ ಡಾನ್ ಯಾರೆಂಬುದನ್ನು ಶಿವಕುಮಾರ್ ಕೂಡಲೇ ಬಹಿರಂಗಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ವಿಭಾಗದ ಮುಖ್ಯಸ್ಥ ಜಗದೀಶ್ ವಿ. ಸದಂ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕಸದ ಸಮಸ್ಯೆಯು ಅನೇಕ ವರ್ಷಗಳಿಂದ ಬಿಗಡಾಯಿಸುತ್ತಲೆ ಬರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಯಾವ ಸರ್ಕಾರಗಳಿಗೂ ಇಚ್ಛಾಶಕ್ತಿ ಇಲ್ಲ ಎಂದು ಟೀಕಿಸಿದರು.

ಕಸದ ಮಾಫಿಯಾ ಹಿಂದಿನ ಕೋಟ್ಯಾಂತರ ರೂಪಾಯಿಗಳ ಆಮದನಿಗಳ ಹಿಂದೆಯೇ ಬೆಂಗಳೂರು ನಗರ ಶಾಸಕರ ಕಣ್ಣು ನಿರಂತರವಾಗಿದೆ. ಬಿಬಿಎಂಪಿ ಚುನಾವಣೆ ನಡೆಸದೆ ಸ್ಥಳೀಯ ಜನಪ್ರತಿನಿಧಿಗಳು ಇಲ್ಲ. ಯಾರಿಗೂ ಸಹ ಬೆಂಗಳೂರನ್ನು ಗಾರ್ಬೇಜ್ ಮುಕ್ತ ನಗರವನ್ನಾಗಿಸುವ ಇಚ್ಛಾಶಕ್ತಿಯೂ ಇಲ್ಲವೆಂಬುದು ಇದರಿಂದ ಬಹಿರಂಗವಾಗುತ್ತಿದೆ ಎಂದು ಹೇಳಿದರು.

ಕಸ ವಿಲೇ ವಾರಿಗಾಗಿಯೇ ಪ್ರತ್ಯೇಕ ಕಂಪನಿಯನ್ನು ಮಾಡಿ ಪ್ರತಿ ವರ್ಷ 3000 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದರೂ ಸಹ ಬೆಂಗಳೂರು ಕಸದ ಬ್ಲಾಕ್ ಸ್ಪಾಟ್ ಗಳಾಗಿ ಪರಿವರ್ತಿತವಾಗಿದೆ. ಬೆಂಗಳೂರಿಗರು ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಕಟ್ಟುವಲ್ಲಿ ಎರಡನೇ ಸ್ಥಾನ ಹೊಂದಿದ್ದರೂ ಸಹ ಬೆಂಗಳೂರಿಗರು ತೃತೀಯ ದರ್ಜೆಯ ನಾಗರೀಕರ ರೀತಿಯಲ್ಲಿ ವಾಸಿಸುತ್ತಿರುವುದು ನಿಜಕ್ಕೂ ದುರಂತವೇ ಸರಿ ಎಂದು ಜಗದೀಶ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಂಗಳೂರಿನ ಪ್ರತಿ ದಿವಸದ ಸಾವಿರಾರು ಟನ್ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ , ಬೆಂಗಳೂರು ಸುತ್ತಮುತ್ತ ಡಂಪಿಂಗ್ ಯಾರ್ಡ್ ಗಳಲ್ಲಿ ಸುರಿದು ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಹಗಲು ದರೋಡೆ ಮಾಡುತ್ತಿರುವ ಮಾಫಿಯಗಳ ಹೆಡೆಮುರಿ ಕಟ್ಟಿ ಶಾಶ್ವತ ಪರಿಹಾರವನ್ನು ನೀಡುವ ಇಚ್ಛಾಶಕ್ತಿ ತೋರಿಸದ ಡಿ.ಕೆ. ಶಿವಕುಮಾರ್,ಈ ನಗರವನ್ನು ದೇವರೇ ಕಾಪಾಡಬೇಕೆಂದು ನಿಸ್ಸಹಾಯಕರಾಗಿ ಕೈ ಚೆಲ್ಲಿ ಕೂರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.

ಕೂಡಲೇ ಬಿಗಡಾಯಿಸಿರುವ ಬೆಂಗಳೂರಿನ
ಕಸದ ಸಮಸ್ಯೆಯನ್ನು ಪರಿಹರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಗದೀಶ್ ವಿ. ಸದಂ ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರು ಕಸದ ಮಾಫಿಯಾ ಹಿಂದಿರುವ ಡಾನ್ ಯಾರು:ಡಿಕೆಶಿ ಉತ್ತರಿಸಲಿ ಎಎಪಿ Read More

ವಿವಿಗಳಲ್ಲಿ ಸೂಕ್ತ ನೇಮಕಾತಿ ಮಾಡಿಕೊಳ್ಳದೆ ಉನ್ನತ ಶಿಕ್ಷಣ ಸಂಪೂರ್ಣ ನಿರ್ಲಕ್ಷ್ಯ:ಮು ಮ ಚಂದ್ರು ಆರೋಪ

ಬೆಂಗಳೂರು: ರಾಜ್ಯದ ವಿವಿಗಳಲ್ಲಿ ಸೂಕ್ತ ನೇಮಕಾತಿ ಮಾಡಿಕೊಳ್ಳದೆ ಉನ್ನತ ಶಿಕ್ಷಣ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.

ರಾಜ್ಯದಲ್ಲಿ 32 ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಈಗಾಗಲೇ ಸ್ಥಾಪಿತವಾಗಿದೆ. ಉನ್ನತ ಶಿಕ್ಷಣಕ್ಕಾಗಿ ಈ ವಿವಿಗಳಲ್ಲಿ ವ್ಯಾಸಂಗಕ್ಕಾಗಿ ಪ್ರವೇಶ ಪಡೆದುಕೊಂಡ ನಮ್ಮ ರಾಜ್ಯದ ಮಕ್ಕಳು ಈಗ ಪರದಾಡುವಂತಹ ಸ್ಥಿತಿಗೆ ತಲುಪಿರುವುದು ನಿಜಕ್ಕೂ ಕಳವಳಕಾರಿಯಾದಂತಹ ಸಂಗತಿ ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಈಗಾಗಲೇ ಮಂಜೂರಾಗಿರುವ 4,709 ಬೋಧಕ ಹುದ್ದೆಗಳು, 9317 ಬೋದಕೇತರ ಹುದ್ದೆಗಳು ಇವೆ. ಆದರೆ ಇದುವರೆಗೆ ಕೇವಲ 1986 ಬೋಧಕ ಹಾಗೂ 2989 ಬೋಧಕೇತರ ಹುದ್ದೆಗಳು ಮಾತ್ರ ಭರ್ತಿಯಾಗಿದೆ. 9051 ಹುದ್ದೆಗಳನ್ನು ಅನೇಕ ವರ್ಷಗಳಿಂದ ನೇಮಕಾತಿ ಮಾಡಿಕೊಳ್ಳದೆ ಇರುವುದು ಸರ್ಕಾರದ ಅಂಕಿ ಅಂಶಗಳೆ ತೋರಿಸುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿನ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಣಾರ್ಥಿಗಳ ಪರಿಸ್ಥಿತಿ ತೀರ ಹದೆಗೆಟ್ಟು , ಸರ್ಕಾರಕ್ಕೆ ಹಿಡಿಶಾಪ ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಬಿಜೆಪಿ ಸರ್ಕಾರದಲ್ಲಿ ಘೋಷಿಸಲ್ಪಟ್ಟ 7 ನೂತನ ವಿಶ್ವವಿದ್ಯಾನಿಲಯಗಳಲ್ಲಿಯೂ ಸಹ 467 ಬೋಧಕ ಹುದ್ದೆಗಳು ಹಾಗೂ 1787 ಬೋಧಕೇತರ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದ್ದರೂ ಸಹ ಇದುವರೆವಿಗೂ ಸರ್ಕಾರ ಒಂದೂ ಹುದ್ದೆಯನ್ನು ಭರ್ತಿ ಮಾಡಿಕೊಂಡಿಲ್ಲ, ಇದು ಸರ್ಕಾರದ ನಿರ್ಲಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ.

ರಾಜ್ಯದ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆದುಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡುವ ತನ್ನ ಬೌದ್ಧಿಕ ಸಾಮರ್ಥ್ಯದಿಂದ ದೇಶದ ಆಸ್ತಿಯಾಗುವ ಎಲ್ಲ ಅವಕಾಶಗಳನ್ನು ಸರ್ಕಾರವು ಬುಡಮಟ್ಟದಲ್ಲಿಯೇ ಹಿಚುಕಿ ಹಾಕುತ್ತಿರುವುದುಲ ಮುಂದಿನ ಪೀಳಿಗೆಗಳಿಗೆ ಮಾಡುವ ಮಹಾ ದ್ರೋಹ, ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಬಾಕಿ ಇರುವ ನೇಮಕಾತಿಗಳನ್ನು ಮಾಡಬೇಕು ಎಂದು ತಮ್ಮ ಪತ್ರದಲ್ಲಿ ಮುಖ್ಯ ಮಂತ್ರಿ‌ ಚಂದ್ರು ಆಗ್ರಹಿಸಿದ್ದಾರೆ.

ವಿವಿಗಳಲ್ಲಿ ಸೂಕ್ತ ನೇಮಕಾತಿ ಮಾಡಿಕೊಳ್ಳದೆ ಉನ್ನತ ಶಿಕ್ಷಣ ಸಂಪೂರ್ಣ ನಿರ್ಲಕ್ಷ್ಯ:ಮು ಮ ಚಂದ್ರು ಆರೋಪ Read More

ಅಕ್ರಮ ಹಣ ವರ್ಗಾವಣೆ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮತ್ತಿತರರನ್ನು ಜಾರಿ ನಿರ್ದೇಶನಾಲಯ ಸೋಮವಾರ ಬಂಧಿಸಿದೆ.

ರಾಷ್ಟ್ರೀಯ ರಾಜಧಾನಿಯ ಓಖ್ಲಾ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಬೆಳಗ್ಗೆ ಶೋಧ ನಡೆಸಿದ ನಂತರ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ವಕ್ಫ್ ಬೋರ್ಡ್ ನಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಎಫ್ ಐಆರ್ ಹಾಗೂ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ದೆಹಲಿ ಎಸಿಬಿ ದಾಖಲಿಸಿರುವ ಮತ್ತೊಂದು ಎಫ್ ಐಆರ್ ನಿಂದ ಅಮಾನತುಲ್ಲಾ ಖಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಕೊನೆಯದಾಗಿ ಪ್ರಶ್ನಿಸಿದಾಗಿನಿಂದ ಖಾನ್ ಕನಿಷ್ಠ ಹತ್ತು ಇಡಿ ಸಮನ್ಸ್‌ಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನ Read More