ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಆಸ್ಪತ್ರೆಗೆ ದಾಖಲು

ಚೆನ್ನೈ: ಖ್ಯಾತ ಸಂಗೀತ ಸಂಯೋಜಕರೂ ನಿರ್ದೇಶಕರೂ ಆದ ಎ.ಆರ್.ರೆಹಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಮುಂಜಾನೆ ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

ವೈದ್ಯರು ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್ ಸೇರಿದಂತೆ ಕೆಲ ಪರೀಕ್ಷೆಗಳನ್ನು ನಡೆಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅವರು ಆಂಜಿಯೋಗ್ರಾಮ್ ಪರೀಕ್ಷೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸದ್ಯ ಅವರಿಗೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.

ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಆಸ್ಪತ್ರೆಗೆ ದಾಖಲು Read More

ಯುವ ದಸರಾದಲ್ಲಿ ಮೋಡಿ ಮಾಡಿದ ರೆಹಮಾನ್, ವಿಜಯ್ ಪ್ರಕಾಶ್

ಮೈಸೂರು: ದಸರಾ ಅಂಗವಾಗಿ ಉತ್ತನಹಳ್ಳಿ ಯಲ್ಲಿ ಆಯೋಜಿಸಿರುವ ಯುವ ದಸರಾದಲ್ಲಿ ಸುಪ್ರಸಿದ್ಧ ಸಂಗೀತ ನಿರ್ದೇಶಕರು ಮತ್ತು ಸಂಯೋಜಕರಾದ ಎ ಆರ್ ರೆಹಮಾನ್ ಕಂಠ ಸಿರಿಗೆ ಜನತೆ ಮಾರು ಹೋದರು

ಜೈ ಹೊ ಗೀತೆಯ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದ ರೆಹಮಾನ್ ಎಲ್ಲರನ್ನೂ ರೋಮಾಂಚನಗೊಳಿಸಿದರು.
ಫನ ಫಾನ ಗೀತೆ, ಬೀಟ್ಸ್ ಗಳಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು.

ಧಮ್ ದರಾ ಧಮ್ ದರಾ ಮಸ್ತು ಧಮ್ ದರಾ ಗೀತೆಗೆ ಪ್ರೇಕ್ಷಕರು ಹೆಜ್ಜೆ ಹಾಕಿದರು.

ಡ್ಯಾನ್ಸಿಂಗ್ ಸ್ಟಾರ್ ಪ್ರಭು ದೇವ ಅವರ ಚಿತ್ರದ ಮುಕಲ ಮುಕಾ ಬುಲ ಗೀತೆ, ವಿರಪಂಡಿಯನ್ ಚಿತ್ರದ ಗೀತೆಗೆ ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಧ್ವನಿ ಗೂಡಿಸಿ ಕೇಳುಗರ ಮನಗಳಿಗೆ ಮುದ ನೀಡಿದರು.

ಕನ್ನಡದವರೇ ಆದ ನಮ್ಮ ಮೈಸೂರಿನ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಪಲ್ ಪಲ್ ಹೆ ಬಾರಿ ಗೀತೆ ಹಾಡಿ ನಂತರ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ರಾಮ ನಿನ್ನ ಮನದಲ್ಲಿ ರಾಮ ನನ್ನ ಮನದಲ್ಲಿ ಹಾಡುವ ಮೂಲಕ ಮೆಚ್ಚುಗೆ ಪಡೆದರು.

ರೋಜಾ ಜಾನೆ ಮನ್ ಗೀತೆಯ ಆಲಾಪದೊಂದಿಗೆ ಕನ್ನಡ ಹಿಂದಿ ತಮಿಳು ಮೂರು ಭಾಷೆಯಲ್ಲೂ ಕೂಡ ಗಾಯಕಿ ಶ್ವೇತಾ ಮೋಹನ್ ಅವರ ಧ್ವನಿ ಗುಡಿಸಿ ಹಾಡಿ ಪ್ರೇಕ್ಷಕರ ಮನ ಸೆಳೆದರು.

ಪ್ರಖ್ಯಾತ ಡ್ರಂ ಬೀಟರ್ ಶಿವಮಣಿ ಅವರು ತಮ್ಮ ಬ್ಯಾಂಡ್ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.

ಯುವ ದಸರಾದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಜನಸ್ಥೋಮವು ಹರಿದು ಬಂದಿತ್ತು.

ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಗೆ ಕಷ್ಟವಾಯಿತು ಸಂಜೆ 5 ಗಂಟೆಯಿಂದಲ್ಲೇ ಹೊರವಲಯದ ರಸ್ತೆಯ ತುಂಬಾ ಜನ ಸಾಗರ ತುಂಬಿ ತುಳುಕುತ್ತಿತ್ತು.

ಯುವ ದಸರಾದಲ್ಲಿ ಮೋಡಿ ಮಾಡಿದ ರೆಹಮಾನ್, ವಿಜಯ್ ಪ್ರಕಾಶ್ Read More