ಅ ಕ ಬ್ರಾ ಮಹಾಸಭಾ ಅಧ್ಯಕ್ಷೀಯ ಚುನಾವಣೆ: ಎಸ್.ರಘುನಾಥ್ ಗೆ ಭರ್ಜರಿ ಗೆಲುವು
ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆಯಲ್ಲಿ ಎಸ್. ರಘುನಾಥ್ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷೀಯ ಅಭ್ಯರ್ಥಿ ಎಸ್.ರಘುನಾಥ್ ರವರು 13399 ಮತಗಳನ್ನು ಪಡೆದು ಅಭೂತಪೂರ್ವ ಗೆಲುವು ಸಾಧಿಸಿದರು.
ಎಸ್.ರಘುನಾಥ್ ರವರು 2164ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಭಾನುಪ್ರಕಾಶ್ ಶರ್ಮರವರು 11235ಮತಗಳು ಪಡೆದು ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಗೆಲುವು ಸಾಧಿಸಿದ ನಂತರ ಮಾತನಾಡಿದ
ಎಸ್.ರಘುನಾಥ್ ಅವರು ತಮ್ಮ ಗೆಲಯವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ರಾಜ್ಯದಲ್ಲಿ 45ಲಕ್ಷ ಬ್ರಾಹ್ಮಣರ ಜನಸಂಖ್ಯೆ ಇದೆ ನಮ್ಮಲ್ಲಿ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಜನಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಿದರು.
ನಮ್ಮಲ್ಲಿ ಪೌರೋಹಿತ್ಯ, ಅಡುಗೆ ಕೆಲಸ ಮಾಡುವವರು ಹಾಗೂ ಅರ್ಚಕ ವೃತ್ತಿ ಮಾಡುವವರು ಇನ್ನಿತರೆ ವೃತ್ತಿ ಮಾಡುವವರು ಇದ್ದು,ಅವರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು ಮತ್ತು ವೃತ್ತಿ ಭಾಂದವರಿಗೆ ಆರ್ಥಿಕವಾಗಿ ಶಕ್ತಿ ತುಂಬಬೇಕು ಅವರು ಸಹ ಎಲ್ಲರಂತೆ ಸಮಾಜದ ಮುಖ್ಯವಾಹಿನಿ ತರಬೇಕು ಎಂದು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ವಿಪ್ರ ಹಿರಿಯ ಸಾಧಕರುಗಳಾದ ಸಿ.ವಿ.ಎಲ್.ಶಾಸ್ತ್ರಿ, ಬಿ.ಎನ್.ಸುಬ್ರಮಣ್ಯರವರ ಅಭಿಮಾನಿಗಳು ಸ್ನೇಹಿತರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಮತ್ತು ಮಾಜಿ ಅಧ್ಯಕ್ಷರಾದ ಎಂ.ಆರ್.ವಿ.ಪ್ರಸಾದರವರು, ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಆರ್.ಲಕ್ಷ್ಮಿಕಾಂತ್ ಅವರು ಸಹ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ವಿಪ್ರ ಸಮುದಾಯದ ಏಳಿಗೆಗಾಗಿ 100ಕೋಟಿ ದೇಣಿಗೆ ಸಂಗ್ರಹ ಮಾಡಿ ದತ್ತಿ ನಿಧಿ ಸ್ಥಾಪನೆ ಮಾಡಿ ಅದರಿಂದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಿ ವಿಪ್ರ ಸಮುದಾಯದ ಮಕ್ಕಳಿಗೆ ಅವಕಾಶ ನೀಡುವುದು ಹಾಗೂ ವಿಶ್ರಾಂತಿ ಭವನ ನಿರ್ಮಾಣ ಮಾಡಲು ಶ್ರಮಿಸುತ್ತೇವೆ ಎಂದು ರಘುನಾಥ್ ಭರವಸೆ ನೀಡಿದರು.
ಉದ್ಯೋಗ ಮೇಳ , ಸಾಮೂಹಿಕ ಉಪನಯನ ಮತ್ತು ವಧು-ವರ ಆನ್ವೇಷಣೆ ಕೇಂದ್ರ, ವಿಕಲಚೇತನರಿಗೆ ಸಹಾಯಧನ ಮತ್ತು ಸದಸ್ಯತ್ವ ಅಭಿಯಾನ ರಾಜ್ಯಾದ್ಯಂತ ಚುರುಕುಗೊಳಿಸುವುದು ವಿಪ್ರ ಸಮುದಾಯದ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.
ನಮ್ಮ ಜೊತೆಯಲ್ಲಿ ಉತ್ತಮ ತಂಡವಿದೆ ಸಾಧನೆ ಮತ್ತು ಯೋಜನೆಗಳನ್ನು ವಿಪ್ರರಿಗೆ ತಿಳಿಸಿ ಮತಯಾಚನೆ ಮಾಡಲಾಗುತ್ತಿದೆ.
ಸರ್ಕಾರದಲ್ಲಿ ಮೇಲ್ವರ್ಗದವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕಡ್ಡಾಯಗೊಳಿಸಲು ಹೋರಾಟ ಮಾಡಲಾಗುವುದು ಎಂದು ನೂತನ ಅಧ್ಯಕ್ಷ ಎಸ್.ರಘುನಾಥ್ ಹೇಳಿದರು.