ಡಿಕೆಶಿ ಮು ಮ ಆಗಲೆಂದು 101 ಈಡುಗಾಯಿ ಒಡೆದು ಪ್ರಾರ್ಥಿಸಿದ ಅ ಕ ಒ ಸಂಘ

ಮೈಸೂರು: ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ 101 ತೆಂಗಿನ ಕಾಯಿ ಈಡುಗಾಯಿ ಒಡೆಯಲಾಯಿತು.

ಸೋಮವಾರ ಬೆಳಿಗ್ಗೆ ಮೈಸೂರಿನ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ 101 ತೆಂಗಿನ ಕಾಯಿ ಈಡುಗಾಯಿ ಒಡೆದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ತೇಜೇಶ್ ಲೋಕೇಶ್ ಗೌಡ ಅವರು, ಡಿ ಕೆ ಶಿವಕುಮಾರ್ ಅವರು ಪಕ್ಷಕ್ಕಾಗಿ ತಮ್ಮ ತನು ಮನ ಧನವನ್ನು ಅರ್ಪಿಸಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವುದರಲ್ಲಿ ಬಹಳ ಶ್ರಮ ವಹಿಸಿದ್ದಾರೆ. ಆದ್ದರಿಂದ ಕಾಂಗ್ರಸ್ ಹೈ ಕಮಾಂಡ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಈ ಕೂಡಲೇ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರು ವಲಸಿಗರಾಗಿ ಕಾಂಗ್ರೆಸ್ ಗೆ ಬಂದು ಡಿ ಕೆ ಶಿವಕುಮಾರ್ ಅವರ ಬೆಂಬಲದಿಂದಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಈಗ ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟು ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ ವೇಳೆ ಬೋಗಾದಿ ಸಿದ್ದೇಗೌಡ, ಸಿಂದುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ, ಪ್ರಭಾಕರ್ , ಗಿರೀಶ್ , ಹನುಮಂತಯ್ಯ, ನೇಹಾ, ಎಳನೀರು ರಾಮಣ್ಣ, ಹೊನ್ನೇಗೌಡ , ಜೋತಿ, ಮಂಜುಳಾ, ಸುಜಾತಾ, ಶಿವರಾಂ , ಕೃಷ್ಣಪ್ಪ , ಸುಬ್ಬೇಗೌಡ , ದರ್ಶನ್ ಗೌಡ, ಶಿವರಾಜ್, ಕುಮಾರ್, ರವೀಶ್, ಗಣೇಶ್ ಪ್ರಸಾದ್, ನಾಗರಾಜ್ ಸೇರಿದಂತೆ ಅನೇಕ ಡಿಕೆಶಿ ಅಭಿಮಾನಿಗಳು ಹಾಜರಿದ್ದರು.

ಡಿಕೆಶಿ ಮು ಮ ಆಗಲೆಂದು 101 ಈಡುಗಾಯಿ ಒಡೆದು ಪ್ರಾರ್ಥಿಸಿದ ಅ ಕ ಒ ಸಂಘ Read More

ಟಿ ಎಸ್ ಶ್ರೀವತ್ಸ ಹುಟ್ಟು ಹಬ್ಬ: 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೈಸೂರು: ಕೆ ಆರ್ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಹೆಸರಿನಲ್ಲಿ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲು ಶಾಸಕರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂಧರ್ಭದಲ್ಲಿ ಕೆ ಆರ್ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ್ ರಾಜ ಅರಸು ಅವರು ಮಾತನಾಡಿ, ಶ್ರೀವತ್ಸ ಅವರು ಭಾರತೀಯ ಜನತಾ ಪಕ್ಷದ ತಳಮಟ್ಟದ ಬೂತ್ ಸಂಘಟನೆಯ ಕಾರ್ಯಕರ್ತರಾಗಿ ಯುವ ಮೋರ್ಚಾ ವಿಭಾಗದಿಂದ ಸಂಘಟಿಸಿ ಶಾಸಕರಾಗಿ ತಮ್ಮ ನಾಯಕತ್ವದಲ್ಲಿ ಸಾವಿರಾರು ಮಂದಿ ಮುಖಂಡರನ್ನ ಬೆಳೆಸಿದ್ದಾರೆ , ಮೂಡ ಭ್ರಷ್ಟಚಾರ ಪ್ರಕರಣ ಬಯಲಿಗೆ ತಂದು ಸರ್ಕಾರದ ಕೋಟ್ಯಾಂತರ ಆಸ್ಥಿಯನ್ನ ಮತ್ತು ಜನಸಾಮಾನ್ಯರ ತೆರಿಗೆ ಹಣವನ್ನ ಕಾಪಾಡಿದ್ದಾರೆ ಎಂದು ಬಣ್ಣಿಸಿದರು.

ನಂತರ ಬಿಜೆಪಿ ಮುಖಂಡ ಪ್ರದೀಪ್ ಕುಮಾರ್ ಅವರು ಮಾತನಾಡಿ ಸಾಂಸ್ಕೃತಿಕ ನಗರಿಗೆ ಸಂಸ್ಕಾರಯುತ ಮತ್ತು ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿಯಾಗಿ, ಮಾದರಿ ಜನಪ್ರತಿನಿಧಿಯಾಗಿ ಟಿ.ಎಸ್. ಶ್ರೀವತ್ಸ ಅವರು ಕಾರ್ಯಕರ್ತರ ಶಕ್ತಿಯಾಗಿದ್ದಾರೆ, ಮುಂದಿನ ದಿನದಲ್ಲಿ ಬಿಜೆಪಿ ಸರ್ಕಾರದಲ್ಲಿ ಟಿ.ಎಸ್. ಶ್ರೀವತ್ಸ ಅವರು ಸಚಿವರಾಗಬೇಕು ಮೈಸೂರಿನ ಅಭಿವೃದ್ಧಿಗಾಗಿ ಶಾಶ್ವತ ಯೋಜನೆಗಳನ್ನು ಜಾರಿಗೆ ತರಲು ಸಮರ್ಥರಾಗಿದ್ದಾರೆ ಎಂದು ತಿಳಿಸಿದರು.

ಜಯಶಂಕರ್, ಜಯರಾಮ್, ವಿಶ್ವೇಶ್ವರಯ್ಯ, ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಮ್ಯ ಉಮೇಶ್, ಬಿ ವಿ ಮಂಜುನಾಥ್. ಗೋಕುಲ್ ಗೋವರ್ಧನ್, ಕಿಶೋರ್, ಕೀರ್ತಿ, ಕೃಷ್ಣರಾಜ ಯುವ ಮೋರ್ಚಾ ಅಧ್ಯಕ್ಷ ಕೆ ಎಂ ನಿಶಾಂತ್, ರಾಜೇಶ್, ವಿನಯ್, ಪಂಚ್ಯಾಜನ್ಯ ಟಿ.ಪಿ. ಮಧುಸೂಧನ್, ಅಜಯ್ ಶಾಸ್ತ್ರಿ,ಡಿ.ಪಿ ಸುರೇಶ್, ಹರೀಶ್, ಉಪೇಂದ್ರ, ಜಗದೀಶ್, ಧನುಷ್, ಕನಕಗಿರಿ ಹರೀಶ್, ಅಂಕಿತ್, ಬೇಕರಿ ಚಂದ್ರು, ಚಂದ್ರಕಲಾ, ಲತಾ ಬಾಲಕೃಷ್ಣ, ಮಧುಶ್ರೀ, ಕವಿತಾ, ಲತಾ ಮುಂತಾದವರು ಹಾಜರಿದ್ದರು.

ಟಿ ಎಸ್ ಶ್ರೀವತ್ಸ ಹುಟ್ಟು ಹಬ್ಬ: 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ Read More

ಸುನಿಲ್ ಬೋಸ್ ಹೆಸರಿನಲ್ಲಿ ವಿಶೇಷ ಪೂಜೆ

ಮೈಸೂರು: ಚಾಮುಂಡೇಶ್ವರಿ ಯುವ ಬಳಗ ಹಾಗೂ ಕಾಂಗ್ರೆಸ್ ಮುಖಂಡರು ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಸಂಸದ ಸುನಿಲ್ ಬೋಸ್ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಸುನಿಲ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಿಹಿ ವಿತರಿಸಿ ಜನುಮದಿನದ ಶುಭಕೋರಿದರು

ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಇಂದಿರಾ ಗಾಂಧಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲು ರವಿ, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಲೋಕೇಶ್ ಕುಮಾರ್ ಮಾದಾಪುರ, ಜಿ. ರಾಘವೇಂದ್ರ, ರಾಜಶೇಖರ್, ಸೇವಾದಳ ಮೋಹನ್ ಕುಮಾರ್, ರವಿಚಂದ್ರ, ಲೋಕೇಶ್,ದಿನೇಶ್, ಡೈರಿ ವೆಂಕಟೇಶ್, ಗಂಟಯ್ಯ ಕೃಷ್ಣಪ್ಪ, ಎಸ್ ಎನ್ ರಾಜೇಶ್, ಮಲ್ಲೇಶ್, ಜಯರಾಮ,ಪುನೀತ್ ರಾಜ್, ಗೌರಿಶಂಕರ್ ನಗರ ಶಿವು, ಮೈಸೂರು ಬಸವಣ್ಣ,
ಮತ್ತಿತರರು ಸುನಿಲ್ ಬೋಸ್ ಹೆಸರಿನಲ್ಲಿ ಸಿಹಿ ವಿತರಿಸಿದರು.

ಸುನಿಲ್ ಬೋಸ್ ಹೆಸರಿನಲ್ಲಿ ವಿಶೇಷ ಪೂಜೆ Read More

ಕಾಂಗ್ರೆಸ್ ಸರ್ಕಾರದಿಂದ ಜನಪರ ಆಡಳಿತ-ನಜರ್ಬಾದ್ ನಟರಾಜ್

ಮೈಸೂರು: ರಾಜ್ಯ‌ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುತ್ತಿದ್ದು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಕೆಪಿಸಿಸಿ
ಸದಸ್ಯ ನಜರ್ಬಾದ್ ನಟರಾಜ್ ತಿಳಿಸಿದರು.

ಕಾಂಗ್ರೆಸ್ ಆಡಳಿತಕ್ಕೆ ಇದೀಗ ಎರಡು ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ‌
ನಗರದ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು‌
ವಿಶೇಷ ಪೂಜೆ ಸಲ್ಲಿಸಿದ ವೇಳೆ ನಜರ್ಬಾದ್ ನಟರಾಜ್ ಮಾತನಾಡಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಸಾಮಾನ್ಯ ಜನರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬಿಜೆಪಿ ಮುಖಂಡರು ಬೊಬ್ಬೆ ಹೊಡೆದಿದ್ದರು ಅವರ ಆರೋಪಗಳಿಗೆ ನಮ್ಮ ಸರ್ಕಾರ ಕೆಲಸಗಳ ಮೂಲಕ ತಕ್ಕ ಉತ್ತರ ನೀಡಿದೆ ಎಂದು ತಿಳಿಸಿದರು.

ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಐದು ವರ್ಷ ಯಶಸ್ವಿಯಾಗಿ ಸರ್ಕಾರ ಆಡಳಿತ ನೀಡಲಿ ಎಂದು ವಿಶೇಷ ಪೂಜೆ ಸಲ್ಲಿಸಿ,
ಸಿಹಿ ವಿತರಿಸಿ ರಾಜ್ಯ ಸರ್ಕಾರಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿ ಬಳಗದ ಮೈಸೂರು ಜಿಲ್ಲಾಧ್ಯಕ್ಷ ಜಿ ರಾಘವೇಂದ್ರ, ರಾಜೇಶ್, ಪಳನಿ, ಎಸ್ ಎನ್ ರಾಜೇಶ್, ರವಿಚಂದ್ರ,ಲೋಕೇಶ್, ಕೃಷ್ಣಪ್ಪ(ಗಂಡಯ್ಯ), ಮೋಹನ್ ಕುಮಾರ್,ಪಾಂಡ,ಫ್ರಾನ್ಸಿಸ್, ನಿತಿನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಕಾಂಗ್ರೆಸ್ ಸರ್ಕಾರದಿಂದ ಜನಪರ ಆಡಳಿತ-ನಜರ್ಬಾದ್ ನಟರಾಜ್ Read More

ಮ್ಯಾಕ್ಸ್ ಚಿತ್ರ ಯಶಸ್ವಿಯಾಗಲೆಂದು ಕಿಚ್ಚ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ

ಮೈಸೂರು: ಮೈಸೂರು 101 ಗಣಪತಿ ದೇವಸ್ಥಾನದಲ್ಲಿ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಬಳಗದವರು ವಿಶೇಷ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.

ಕಲೈ ಪುಲಿ ಎಸ್ ತನು ವಿ ಕ್ರಿಯೇಶನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ , ವಿಜಯ್ ಕಾರ್ತಿಕೇಯ ಅವರ ನಿರ್ದೇಶನದ,
ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಮ್ಯಾಕ್ಸ್ ಡಿ 25ರಂದು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಮ್ಯಾಕ್ಸ್ ಚಿತ್ರ ಯಶಸ್ವಿಯಾಗಲಿ ಎಂದು ಅಭಿಮಾನಿಗಳು ಚಿತ್ರ ತಂಡದವರ ಹೆಸರಿನಲ್ಲಿ ಹಾಗೂ ವಿಶೇಷವಾಗಿ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅಭಿಮಾನಿ ಬಳಗದ ಅಧ್ಯಕ್ಷ ಆಲನಹಳ್ಳಿ ಎಂ ಎನ್ ಚೇತನ್ ಗೌಡ,ನಂದೀಶ್ ನಾಯಕ್, ಮೈಸೂರು ನಾರಾಯಣ ಜಿ, ಮದಕರಿ ಮಹದೇವ್, ಮಹಾನ್ ಶ್ರೇಯಸ್, ಲೋಕೇಶ್ ಮತ್ತಿತರರು ಹಾಜರಿದ್ದರು.

ಮ್ಯಾಕ್ಸ್ ಚಿತ್ರ ಯಶಸ್ವಿಯಾಗಲೆಂದು ಕಿಚ್ಚ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ Read More