7ನೇ ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆ-ಮೈಸೂರು ಮಕ್ಕಳ ಸಾಧನೆ

Spread the love

ಮೈಸೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 2024ನೇ ಸಾಲಿನ 7ನೇ ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಮೈಸೂರು ವಿಭಾಗದ ಏಳು ಮಂದಿ ಚಿನ್ನ, ಬೆಳ್ಳಿ ಮತ್ತಿತರ ಪದಕಗಳನ್ನು ಪಡೆದು ಸಾಂಸ್ಕೃತಿಕ ನಗರಿಗೆ ಕೀರ್ತಿ ತಂದಿದ್ದಾರೆ.

10 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಯಾದವಿ ಹೆಚ್- ಚಿನ್ನ,ಬಾಲಕರ‌ ವಿಭಾಗದಲ್ಲಿ ಶ್ರೀ ಎಸ್ -ಚಿನ್ನ, 12 ವರ್ಷದ ಬಾಲಕರ ವಿಭಾಗದಲ್ಲಿ ಹರ್ಶನ್ ವಿ- ಕಂಚು, 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಶ್ರದ್ಧಾ ಜೆ.ಬಿ- ಬೆಳ್ಳಿ,18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಮರ್ಥ್ ಹೆಚ್- ಚಿನ್ನ, ಬಾಲಕಿಯರ ವಿಭಾಗದಲ್ಲಿ ಭಾರತಿ ಬಿ ಎಂ- ಕಂಚು ಬಾಲಕರ ವಿಭಾಗದಲ್ಲಿ ಮೌರ್ಯ ಕೆ ಗೌಡ ಕಂಚು ಪದಕಗಳನ್ನು ಪಡೆದಿದ್ದು ಮೈಸೂರಿನ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರಿಗೆ ಕೀರ್ತಿ ತಂದಿರುವ ಈ ಎಲ್ಲಾ ಸ್ಪರ್ಧಿಗಳಿಗೆ ತರಬೇತುದಾರರು,ಮೈಸೂರು ಜಿಲ್ಲಾ ಟೇಕ್ವಾಂಡೊ ಸಂಸ್ಥೆ ಅಧ್ಯಕ್ಷರೂ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ನವೀನ ಎಸ್ ಮತ್ತು ವಿಜಯ್, ಸುರೇಶ್, ಹೇಮಂತ್ ಕುಮಾರ್ ಹಾಗೂ ಬಿ ಎಸ್ ಪಿ ಪಕ್ಷದ ಜೈ ಶಂಕರ್ ಶಾಂ ಅವರು ಶುಭ ಹಾರೈಸಿದ್ದಾರೆ