ಬಿಜೆಪಿ ಸದಸ್ಯತ್ವ ಅಭಿಯನಾನ ಯಶಸ್ವಿಗೊಳಿಸಿ- ಶ್ರೀವತ್ಸ ಕರೆ

Spread the love

ಮೈಸೂರು: ದೇಶದಲ್ಲಿ ಬಿಜೆಪಿಯನ್ನು ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನವನ್ನು ಎಲ್ಲಾ ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ಯಶಸ್ವಿಗೊಳಿಸಬೇಕು ಎಂದು ಶಾಸಕ ಟಿ ಎಸ್ ಶ್ರೀವತ್ಸ ಕರೆ ನೀಡಿದರು.

ನಗರದ ಚಾಮುಂಡಿ ಬೆಟ್ಟದ ಪಾದದ ಬಳಿ ಶಾಸಕರಾದ ಟಿ ಎಸ್ ಶ್ರೀವತ್ಸ ರವರು ಬಿಜೆಪಿ
ಸದಸ್ಯತ್ವ ಅಭಿಯಾನದ ಮಹಾಸಂಪರ್ಕ ಅಭಿಯಾನದಲ್ಲಿ ಸದಸ್ಯತ್ವ ನೊಂದಣಿ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರತೀ ಬೂತ್ ನಲ್ಲಿ ಕನಿಷ್ಠ 300 ಸದಸ್ಯರಂತೆ ಕ್ಷೇತ್ರದಲ್ಲಿ 80000ಸಾವಿರಕ್ಕೂ ಅಧಿಕ ಸದಸ್ಯರನ್ನು ನೋಂದಣಿ ಮಾಡಬೇಕಿದೆ, ಮಾಹಾಸಂಪರ್ಕ ಅಭಿಯಾನದಲ್ಲಿ ಕ್ಷೇತ್ರಾದ್ಯಂತ ಎಲ್ಲ 265 ಬೂತ್ ಗಳಲ್ಲೂ ಏಕಕಾಲಕ್ಕೆ ಕಾರ್ಯಕರ್ತರು ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಪ್ರತಿ ಬೂತಿನಲ್ಲಿ ಗರಿಷ್ಠ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಗುರಿ ಹೊಂದಬೇಕು ಎಂದು ಶ್ರೀವತ್ಸ ಸಲಹೆ ನೀಡಿದರು

ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಉಪಾಧ್ಯಕ್ಷ ಜೋಗಿಮಂಜು, ಯುವಮೋರ್ಚಾ ಅಧ್ಯಕ್ಷ ಕೆ.ಎಂ. ನಿಶಾಂತ್, ಕೆ.ಆರ್. ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜಯಶಂಕರ್, ರಮೇಶ್, ಡಿ.ಪಿ. ಸುರೇಶ್, ಅಶೋಕ್, ಪ್ರದೀಪ್, ಮಧುಸೂಧನ್, ಕಿಶೋರ್, ವರುಣ್, ಹರ್ಷ, ಚರಣ್, ಪ್ರಶೀಕ್, ಶಿವಪ್ರೇರಣ್, ರವಿಕುಮಾರ್, ಶಾರದ, ಮಂಜುನಾಥ್ ಮತ್ತಿತರ ಮುಖಂಡರು ಹಾಜರಿದ್ದರು.