ಸ್ವರ ಸಂಭ್ರಮ ಕರೋಕೆ ಗಾಯನ

ಮೈಸೂರು: ಕರ್ನಾಟಕ ಸಾಂಸ್ಕೃತಿಕ ಸಾಹಿತ್ಯ ಪರಿಷತ್ ವತಿಯಿಂದ ಸ್ವರ ಸಂಭ್ರಮ ಕರೋಕೆ ಗಾಯನ ಸಮಾರಂಭವನ್ನು ಮೈಸೂರು ರೋಟರಿ ಆಡಿಟೋರಿಯಂ ನಲ್ಲಿ ಹಮ್ಮಿಕೊಳ್ಳಲಾಯಿತು.

ಕೊರೋಕೆ ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಮನೋವೈದ್ಯೆ ಮೈಸೂರಿನ ಡಾ. ರೇಖಾ ಮನ:ಶಾಂತಿ ಅವರು,ನೋವನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ ಎಂದು ಹೇಳಿದರು.

ಈ ವೇಳೆ ವಿಶೇಷವಾಗಿ ಯುವ ಗಾಯಕ (ಜೀ ಕನ್ನಡ )ಬಳ್ಳಾರಿ ಮಯೂರ್ ಕಂಚಿ ಗಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಚಲನಚಿತ್ರ ನಿರ್ಮಾಪಕ ಎಸ್ ವೆಂಕಟೇಶ್, ಸಮಾಜ ಸೇವಕ ಕೊಡಗು ನಯನ ಹರಿಶ್ಚಂದ್ರ, ಶಿಕ್ಷಕರು ಭದ್ರಾವತಿ ಮೈಸೂರು ಅನುಸೂಯಮ್ಮ, ರಂಗಭೂಮಿ ಕಲಾವಿದರು ಕೋಮಲ. ಎಚ್, ಯುವ ಗಾಯಕ (ಜೀ ಕನ್ನಡ )ಬಳ್ಳಾರಿ ಮಯೂರ್ ಕಂಚಿಗಾರ್, ರಂಗಭೂಮಿ ಕಲಾವಿದ ಮಾದೇಶ್, ಉದ್ಯಮಿ ಉಮೇಶ್ ಸಿ, ಸಮಾಜ ಸೇವಕರಾದ ಸೈಯದ್ ಗೌಸ್, ಗುರುಸ್ವಾಮಿ ಗುರುಪ್ರಸಾದ್ ದೇಸಾಯಿ,
ಉದ್ಯಮಿ ರಾಕೇಶ, ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ರಕ್ತದಾನಿ ಮಂಜು ಉಪಸ್ಥಿತರಿದ್ದರು.