ಸುವಿದ್ಯ ಅವರ ಶಿಷ್ಯರ ಭರತನಾಟ್ಯ ಪ್ರದರ್ಶನ
ಮೈಸೂರು: ವಿವೇಕಾನಂದ ಬ್ರಾಹ್ಮಣ ಮಹಾ ಸಭಾ ಹಾಗೂ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಶ್ರೀರಾಂಪುರ ವತಿಯಿಂದ
ಶರನ್ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆ ಸಂದರ್ಭದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತ ನೃತ್ಯ ಕಲಾ ಕೇಂದ್ರದ ಸಂಸ್ಥಾಪಕ ಕಲಾ ನಿರ್ದೇಶಕಿ ಸುವಿದ್ಯ ಜೆ ಕೆ, ಅವರ ಶಿಷ್ಯರೊಂದಿಗೆ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಜಯರಾಮ್ ಮತ್ತು ನಿರ್ದೇಶಕ ಮಂಡಳಿಯವರು ಉಪಸ್ಥಿತರಿದ್ದರು.