ಮೈಸೂರು: ಮೈಸೂರು – ಬೆಂಗಳೂರು ಮಣಿಪಾಲ ಆಸ್ಪತ್ರೆ ಸಮೀಪದ ಉದ್ಯಾನವನದಲ್ಲಿ ಅನುಮಾನಾಸ್ಪದ ವಾಗಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿದ್ದವರು ಮೃತ ದೇಹಗಳನ್ನು ಕಂಡು ಕೆಲ ಸಮಯ ಆತಂಕಕ್ಕೆ ಒಳಗಾದರು.
ಇಬ್ಬರು ಮಹಿಳೆಯರು,ಆದರೆ ಒಂದೇ ಪಾರ್ಕ್ ನಲ್ಲಿ ಬೇರೆ,ಬೇರೆ ಕಡೆ ಮೃತಪಟ್ಟಿದ್ದಾರೆ.

ಮೇಲ್ನೋಟಕ್ಕೆ ದೇಹಗಳು ಅನುಮಾನ ಬರುವಂತಿವೆ.ಇಬ್ಬರೂ ಬಿಕ್ಷುಕರಂತೆ ಕಾಣುತ್ತಾರೆ. ತಂದಿದ್ದ ಪದಾರ್ಥಗಳು ಅಲ್ಲೇ ಬಿದ್ದಿವೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.